ರಕ್ಷಣಾ ಸಚಿವಾಲಯ
ಕೋವಿಡ್ -19ರಿಂದ ರಕ್ಷಣಾ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಎಸ್.ಐಡಿಎಂನ ಎಂಎಸ್.ಎಂಇ.ಗಳ ಇ-ಕಾನ್ ಕ್ಲೇವ್ ನಲ್ಲಿ ಹೇಳಿದ್ದಾರೆ
Posted On:
21 MAY 2020 2:23PM by PIB Bengaluru
ಕೋವಿಡ್ -19ರಿಂದ ರಕ್ಷಣಾ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಎಸ್.ಐಡಿಎಂನ ಎಂಎಸ್.ಎಂಇ.ಗಳ ಇ-ಕಾನ್ ಕ್ಲೇವ್ ನಲ್ಲಿ ಹೇಳಿದ್ದಾರೆ
ರಕ್ಷಣಾ ತಂತ್ರಜ್ಞಾನ ಮತ್ತು ಉತ್ಪನ್ನಗಳಲ್ಲಿ ಭಾರತವನ್ನು ‘ಸ್ವಾವಲಂಬಿ’ಯನ್ನಾಗಿ ಮಾಡಲು ಎಂಎಸ್.ಎಂಇ.ಗಳಿಗೆ ಸೂಚಿಸಿದ್ದಾರೆ
ಇತ್ತೀಚೆಗೆ ಘೋಷಿಸಲಾದ ಸುಧಾರಣೆಗಳು ಮತ್ತು ಹಣಕಾಸು ಪ್ಯಾಕೇಜ್ ಎಂಎಸ್.ಎಂಇಗಳನ್ನು ಬಲಪಡಿಸುತ್ತದೆ ಮತ್ತು ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ರಕ್ಷಣಾ ಸಚಿವರು ಪ್ರತಿಪಾದಿಸಿದ್ದಾರೆ
ಸ್ವಾವಲಂಬನೆ ಸಾಧಿಸಲು ದೈನಂದಿನ ಜೀವನದಲ್ಲಿ ‘ಸ್ಥಳೀಯ’ ವಸ್ತು ಬಳಕೆಗೆ ಕರೆ
ಜಾಗತಿಕ ಮಹಾಮಾರಿ ಕೊರೊನಾ ವೈರಾಣು (ಕೋವಿಡ್ 19) ವಿರುದ್ಧ ದೇಶದ ಹೋರಾಟದಲ್ಲಿ ಭಾರತೀಯ ರಕ್ಷಣಾ ಉತ್ಪಾದನಾ ಸೊಸೈಟಿ (ಎಸ್.ಐ.ಡಿ.ಎಂ.) ಮತ್ತು ಇತರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಂ.ಎಸ್.ಎಂ.ಇ.ಗಳು) ನಿರ್ವಹಿಸಿರುವ ಪಾತ್ರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶ್ಲಾಘಿಸಿದ್ದಾರೆ. ಇಂದು ಎಐಡಿಎಂ, ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಮತ್ತು ರಕ್ಷಣಾ ಉತ್ಪಾದನೆಗಳ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಎಂ.ಎಸ್.ಎಂ.ಇ.ಗಳ ಇ-ಕಾಂನ್ ಕ್ಲೇವ್ ಉದ್ದೇಶಿಸಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
“ಡಿಆರ್.ಡಿ.ಓ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ವಿನ್ಯಾಸಗೊಳಿಸಿರುವ ಪಿಪಿಇ (ವೈಯಕ್ತಿಕ ಸುರಕ್ಷತಾ ಸಾಧನ) ಕಿಟ್ ಗಳನ್ನು, ಮಾಸ್ಕ್ ಗಳು, ವೆಂಟಿಲೇಟರ್ ಭಾಗಗಳನ್ನು ರಕ್ಷಣಾ ಕೈಗಾರಿಕೆ ಕ್ಷೇತ್ರದಲ್ಲಿ ಸಮರ್ಥ ಸಹಯೋಗ ಮತ್ತು ನಿರ್ದಿಷ್ಟ ಮಾರ್ಗದಲ್ಲಿ ಎಸ್.ಐ.ಡಿ.ಎಂ. ಉತ್ಪಾದನೆಯನ್ನು ಹೆಚ್ಚಿಸಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಎರಡು ತಿಂಗಳುಗಳಿಗೂ ಕಡಿಮೆ ಅವಧಿಯಲ್ಲಿ ನಾವು ನಮ್ಮ ದೇಶೀಯ ಅವಶ್ಯಕತೆಗಳನ್ನು ಪೂರೈಸಿಕೊಂಡಿದ್ದಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನಮ್ಮ ನೆರೆಯ ರಾಷ್ಟ್ರಗಳಿಗೆ ನೆರವು ನೀಡಲೂ ಚಿಂತಿಸಿದ್ದೇವೆ”ಎಂದರು.
ಎಂ.ಎಸ್.ಎಂ.ಇ.ಗಳು ದೇಶದ ಜಿಡಿಪಿಯನ್ನು ಹೆಚ್ಚಿಸಬಲ್ಲವಾಗಿದ್ದು, ಭಾರತೀಯ ಆರ್ಥಿಕತೆಯ ಬೆನ್ನೆಲುಬು ಎಂದು ಬಣ್ಣಿಸಿದ ರಕ್ಷಣಾ ಸಚಿವರು, ಅವು ರಫ್ತಿನ ಮೂಲಕ ವಿದೇಶೀ ವಿನಿಮಯವನ್ನೂ ಗಳಿಸುತ್ತವೆ ಮತ್ತು ಉದ್ಯೋಗಾವಕಾಶಗಳನ್ನೂ ಕಲ್ಪಿಸುತ್ತವೆ ಎಂದರು. ಎಂ.ಎಸ್.ಎಂ.ಇ.ಗಳನ್ನು ಸದೃಢವಾಗಿಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು. 8000ಕ್ಕೂ ಹೆಚ್ಚು ಎಂ.ಎಸ್.ಎಂ.ಇ.ಗಳು, ನಮ್ಮ ಹಲವು ಸಂಸ್ಥೆಗಳ -ಆರ್ಡನೆನ್ಸ್ ಕಾರ್ಖಾನೆಗಳು, ಡಿಪಿಎಸ್.ಯುಗಳು ಮತ್ತು ಸೇವಾ ಸಂಸ್ಥೆಗಳ ಪಾಲುದಾರರಾಗಿವೆ. ಈ ಸಂಸ್ಥೆಗಳ ಒಟ್ಟು ಉತ್ಪಾದನೆಯಲ್ಲಿ ಶೇಕಡಾ 20 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿವೆ ” ಎಂದರು.
ರಕ್ಷಣಾ ಕೈಗಾರಿಕೆಗಳು ಎದುರಿಸುತ್ತಿರುವ ಕಷ್ಟದ ಬಗ್ಗೆ ಮಾತನಾಡಿದ ಸಚಿವ ರಾಜನಾಥ ಸಿಂಗ್, ಲಾಕ್ ಡೌನ್ ಮತ್ತು ಪ್ರಸಕ್ತ ಪೂರೈಕೆ ಸರಪಣಿಯಲ್ಲಿನ ಅಡೆತಡೆಗಳಿಂದಾಗಿ ಉತ್ಪಾದನಾ ವಲಯ ತೀವ್ರ ಬಾಧಿತವಾಗಿದ್ದು, ರಕ್ಷಣಾ ವಲಯವೂ ಇದಕ್ಕೆ ಹೊರತಾಗಿಲ್ಲ ಎಂದರು. ರಕ್ಷಣಾ ಉತ್ಪನ್ನಗಳನ್ನು ಇತರ ವಲಯಗಳಿಗಿಂತ ಹೆಚ್ಚು ಉಲ್ಬಣಗೊಂಡಿವೆ ಎಂದು ಹೇಳಬಹುದು ಏಕೆಂದರೆ ರಕ್ಷಣಾ ಉತ್ಪನ್ನಗಳನ್ನು ಖರೀದಿಸುವವರು ಸರ್ಕಾರ ಮಾತ್ರ.” ಲಾಕ್ ಡೌನ್ ಜಾರಿಗೆ ಬಂದಾಗಿನಿಂದ ಎಸ್.ಐಡಿಎಂ ಸಚಿವಾಲಯ ಮತ್ತು ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳೊಂದಿಗೆ ಅನೇಕ ಸಂವಾದಗಳನ್ನು ನಡೆಸಿದೆ. ರಕ್ಷಣಾ ಕೈಗಾರಿಕೆಗಳ ಸಮಸ್ಯೆಗಳನ್ನು ತಿಳಿದುಕೊಳ್ಳಲು ಇದು ಅವಕಾಶವನ್ನು ನೀಡಿದೆ ಮತ್ತು ಅವುಗಳ ನಿವಾರಣೆಗಾಗಿ ಅನೇಕ ಸಲಹೆಗಳನ್ನು ಸಹ ಎಸ್.ಐ.ಡಿ.ಎಂ.ನಿಂದ ಸ್ವೀಕರಿಸಲಾಗಿದೆ ಎಂದರು.
ಈ ಸವಾಲುಗಳನ್ನು ಎದುರಿಸಲು ರಕ್ಷಣಾ ಸಚಿವಾಲಯ ಕೈಗಾರಿಕೆಗಳಿಗೆ ಅದರಲ್ಲೂ ಎಂ.ಎಸ್.ಎಂ.ಇ.ಗಳಿಗೆ ಹಲವು ಕ್ರಮ ಕೈಗೊಂಡಿದೆ. ಅಂದರೆ – ಆರ್.ಎಫ್.ಪಿ/ಆರ್.ಎಫ್.ಐ, ಸ್ಪಂದನಾ ದಿನಾಂಕಗಳ ವಿಸ್ತರಣೆ, ಬಾಕಿ ಇರುವ ಪಾವತಿಗಳ ಚುಕ್ತಿ ಇತ್ಯಾದಿ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕೈಗಾರಿಕೆಗಳ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ಹಲವು ಹಣಕಾಸು ಬೆಂಬಲದ ಕ್ರಮಗಳನ್ನು ಸರ್ಕಾರ ಮತ್ತು ಆರ್.ಬಿ.ಐ. ಪ್ರಕಟಿಸಿವೆ. ಇವು ಹೆಚ್ಚುವರಿ ಕಾರ್ಯ ಬಂವಾಳ ಲಭ್ಯತೆ, ಬಡ್ಡಿ ಪಾವತಿಯ ಮುಂದೂಡಿಕೆಯಂಥ ಪರಿಹಾರ ನೀಡುತ್ತವೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಪ್ರೇರಿತವಾದ ಆತ್ಮ ನಿರ್ಭರ ಭಾರತ ಆಂದೋಲನ ಭಾರತೀಯ ಕೈಗಾರಿಕೆಗಳಿಗೆ ಹಲವು ಅವಕಾಶಗಳನ್ನು ಒದಗಿಸುತ್ತದೆ ಮತ್ತು ಲಕ್ಷಾಂತರ ಉದ್ಯೋಗ ಪುನರ್ ಸ್ಥಾಪನೆಗೆ ನೆರವಾಗುತ್ತದೆ ಎಂದು ರಕ್ಷಣಾ ಸಚಿವರು ಭರವಸೆ ನೀಡಿದರು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಸ್ಥಳೀಯತೆಯ ಬಗ್ಗೆ ಧ್ವನಿಯಾಗುವಂತೆ ಕರೆ ನೀಡಿದ್ದಾರೆ ಎಂದರು. ನಮ್ಮ ಸ್ಥಳೀಯ ಉತ್ಪನ್ನಗಳನ್ನು ನಾವು ಹೊಂದಿರಬೇಕು ಎಂದು ನಾನು ಹೇಳಲು ಬಯಸುತ್ತೇನೆ, ಅಂದರೆ 'ಸ್ಥಳೀಯತೆಗೆ ಧ್ವನಿ', ಆದರೆ ಅದಕ್ಕೂ ಮೊದಲು 'ಸ್ಥಳೀಯ'ನಮ್ಮ ಜೀವನದಲ್ಲಿ, ಕೇಂದ್ರ ಬಿಂದುವಾಗಿರಬೇಕು. ಅಂದರೆ, ನಾವು ನಮ್ಮ ಬದುಕಿನಲ್ಲಿ 'ಸ್ವದೇಶಿ' ಉತ್ಪನ್ನಗಳನ್ನು ಅಳವಡಿಸಿಕೊಳ್ಳಬೇಕು. ಸ್ಥಳೀಯ ಉತ್ಪಾದನೆಯ ಗುರಿಯಲ್ಲಿ ಮತ್ತು ಸ್ವಾವಲಂಬಿ ಭಾರತದ ಗುರಿಯಲ್ಲಿ ಎಂಎಸ್.ಎಂಇಗಳು ಬಹಳ ಮುಖ್ಯವಾದ ಪಾತ್ರವನ್ನು ಹೊಂದಿವೆ ಎಂಬುದರಲ್ಲಿ ಸಂದೇಹವಿಲ್ಲ.” ಎಂದರು.
ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಆತ್ಮ ನಿರ್ಭರ ಭಾರತ ಯೋಜನೆ ಅಡಿಯಲ್ಲಿ ಪ್ರಕಿಟಿಸಿರುವ ಕೆಲವು ಕ್ರಮಗಳನ್ನು ಅವರು ಪ್ರಸ್ತಾಪಿಸಿದರು. ಎಂ.ಎಸ್.ಎಂ.ಇ.ಗಳಿಗೆ 3 ಲಕ್ಷ ರೂ.ವರೆಗೆ ಮೇಲಾಧಾರ ರಹಿತ ಸಾಲ – ಇದು ಸುಮಾರು 45 ಲಕ್ಷ ಘಟಕಗಳು ಪುನರ್ ಸ್ಥಾಪನೆಗೆ ಸಮರ್ಥನೆ ನೀಡಲಿವೆ ಮತ್ತು ಉದ್ಯೋಗವನ್ನೂ ಉಳಿಸಲಿವೆ ಎಂದರು. ಎರಡು ಲಕ್ಷ ಎಂಎಸ್ಎಂಇಗಳಿಗೆ 20,000 ಕೋಟಿ ರೂ.ಗಳ ಅಧೀನ ಸಾಲದ ಅವಕಾಶ ಘೋಷಿಸಲಾಗಿದೆ, ಇದು ಒತ್ತಡಕ್ಕೊಳಗಾದ ಎಂಎಸ್.ಎಂಇಗಳಿಗೆ ಸಹಾಯ ಮಾಡುತ್ತದೆ. ಅಗತ್ಯವಿರುವ ಎಂಎಸ್.ಎಂಇಗಳಿಗೆ ಅನುಕೂಲವಾಗುವ ಉದ್ದೇಶದಿಂದ 50,000 ಕೋಟಿ ರೂ.ಗಳ ಈಕ್ವಿಟಿ ಪೂರಣವನ್ನು ‘ಮದರ್-ಡಾಟರ್ ಫಂಡ್’ (ತಾಯಿ – ಮಗಳ ನಿಧಿ) ಮೂಲಕ ನೀಡಲಾಗುವುದು. ಈ ಘಟಕಗಳ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಮಾರುಕಟ್ಟೆ ಮಾಡಲು 10,000 ಕೋಟಿ ರೂಪಾಯಿಗಳ 'ನಿಧಿಯ ನಿಧಿ' ಯನ್ನು ಸ್ಥಾಪಿಸಲಾಗುವುದು ಎಂದರು.
ಎಂ.ಎಸ್.ಎಂ.ಇ.ಗಳ ವ್ಯಾಖ್ಯಾನವನ್ನು ಪರಿಷ್ಕರಿಸಲಾಗಿದ್ದು, ಎಂ.ಎಸ್.ಎಂ.ಇ.ಗಳು ವಿಸ್ತರಣೆಯಾಗಲಿವೆ. ಅದೇ ವೇಳೆ ಎಂ.ಎಸ್.ಎಂ.ಇ.ಗಳ ಸೇವಾ ಮತ್ತು ಉತ್ಪಾದನಾ ವಲಯದ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ. 200 ಕೋಟಿ ಅಥವಾ ಅದಕ್ಕಿಂತ ಕಡಿಮೆ ಮೌಲ್ಯದ ಸರ್ಕಾರಿ ಒಪ್ಪಂದಗಳಲ್ಲಿ (ಸಂಗ್ರಹಣೆ), ಜಾಗತಿಕ ಟೆಂಡರ್ ಗಳನ್ನು ಅನುಮತಿಸಲಾಗುವುದಿಲ್ಲ. ಇದು ಎಂಎಸ್.ಎಂಇಗಳಿಗೆ ತಮ್ಮ ವ್ಯವಹಾರವನ್ನು ಬೆಳೆಸಲು ಸಹಾಯ ಮಾಡುತ್ತದೆ. ಕೋವಿಡ್ 19 ಕಾರಣದಿಂದಾಗಿ ವ್ಯಾಪಾರ ಮೇಳಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಹೀಗಾಗಿ, ಇ-ಮಾರುಕಟ್ಟೆ ಸಂಪರ್ಕಗಳನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಸರ್ಕಾರ ಮತ್ತು ಪಿಎಸ್.ಯುಗಳು ಮುಂದಿನ 45 ದಿನಗಳಲ್ಲಿ ಬಾಕಿ ಇರುವ ಎಲ್ಲಾ ಪಾವತಿಗಳ ಇತ್ಯರ್ಥವನ್ನು ಖಚಿತಪಡಿಸುತ್ತದೆ ಎಂದರು.
ಇ- ಕಾನ್ ಕ್ಲೇವ್ ಥೀಮ್ ‘ರಕ್ಷಣಾ ವಲಯದಲ್ಲಿ ಎಂ.ಎಸ್.ಎಂ.ಇ.ಗಳಿಗಾಗಿ ವಾಣಿಜ್ಯ ಸಮುದಾಯ ಮತ್ತು ವಾಯುಪ್ರದೇಶ ವಲಯ’ ಎಂಬುದಾಗಿದ್ದು, ಇದರಲ್ಲಿ 800 ರಕ್ಷಣಾ ಎಂ.ಎಸ್.ಎಂ.ಇ.ಗಳು ಭಾಗಿಯಾಗಿದ್ದವು.
ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಅಮೆರಿಕದ ಉದಾಹರಣೆಯನ್ನು ನೀಡಿ, ವಿಶ್ವ ಯುದ್ಧ -2ರ ಬಳಿಕ ಎರಡೇ ವರ್ಷಗಳ ಅವಧಿಯಲ್ಲಿ ದೇಶೀಯ ರಕ್ಷಣಾ ಕೈಗಾರಿಕೆ ಅಭಿವೃದ್ಧಿ ಹೊಂದಿದವು, ಭಾರತವೂ ಸಹ ತನ್ನದೇ ಸ್ವಂತ ರಕ್ಷಣಾ ಕೈಗಾರಿಕೆ ಹೊಂದಬೇಕು ಎಂದರು. ಎಂ.ಎಸ್.ಎಂ.ಇ.ಗಳು ಭಾರತವನ್ನು ರಕ್ಷಣಾ ತಂತ್ರಜ್ಞಾನದ ಮೊದಲ ಹತ್ತು ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಲು ಶ್ರಮಿಸಬೇಕು ಎಂದರು.
ಕಾರ್ಯದರ್ಶಿ (ರಕ್ಷಣಾ ಉತ್ಪಾದನೆ) ಶ್ರೀ ರಾಜ್ ಕುಮಾರ್ ತಮ್ಮ ಭಾಷಣದಲ್ಲಿ, ಕೋವಿಡ್ 19 ಹಿನ್ನೆಲೆಯಲ್ಲಿ ರಕ್ಷಣಾ ಉತ್ಪಾದನಾ ವಲಯ ಎದುರಿಸುತ್ತಿರುವ ಕಷ್ಟವನ್ನು ಪರಿಹರಿಸಲು ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ವಿವರಿಸಿದರು. ಡಿಪಿಎಸ್.ಯು.ಗಳಿಗೆ ಎಂ.ಎಸ್.ಎಂ.ಇ.ಗಳ ಬಾಕಿ ಪಾವತಿಸಲು ತಿಳಿಸಲಾಗಿದೆ ಎಂದ ಅವರು, ಅವರುಗಳ ಉತ್ಪಾದನಾ ಗುರಿಯನ್ನು ತಗ್ಗಿಸಲಾಗಿಲ್ಲ ಎಂದೂ ಹೇಳಿದರು. ಹಣಕಾಸು ಸಚಿವರು ಇತ್ತೀಚಿಗೆ ಪ್ರಕಟಿಸಿದ ಸುಧಾರಣೆಗಳನ್ನು ಉಲ್ಲೇಖಿಸಿದ ಅವರು, ಈ ಕ್ರಮಗಳು 2025ರ ಹೊತ್ತಿಗೆ 25 ಶತಕೋಟಿ ಅಮೆರಿಕನ್ ಡಾಲರ್ ರಕ್ಷಣಾ ಉತ್ಪಾದನೆಯ ಗುರಿ ಸಾಧನೆ ಸಾಕಾರಕ್ಕೆ ನೆರವಾಗಲಿವೆ ಎಂದರು.
ಎಸ್.ಐ.ಡಿ.ಎಂ. ಅಧ್ಯಕ್ಷ ಶ್ರೀ ಜಯಂತ್ ಡಿ ಪಾಟೀಲ್, ಎಸ್.ಐ.ಡಿ.ಎಂ. ಮಾಜಿ ಅಧ್ಯಕ್ಷ ಶ್ರೀ ಬಾಬಾ ಎನ್. ಕಲ್ಯಾಣಿ, ಸಿಐಐನ ಮಹಾ ನಿರ್ದೇಶಕ ಶ್ರೀ ಚಂದ್ರಜಿತ್ ಬ್ಯಾನರ್ಜಿ, ರಕ್ಷಣಾ ಇಲಾಖೆಯ ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ ಮತ್ತು ಡಿಪಿಎಸ್.ಯುಗಳ ಹಿರಿಯ ನಾಗರಿಕ ಮತ್ತು ರಕ್ಷಣಾ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
***
(Release ID: 1625863)
Visitor Counter : 290
Read this release in:
Punjabi
,
English
,
Urdu
,
Marathi
,
Hindi
,
Manipuri
,
Assamese
,
Odia
,
Tamil
,
Telugu
,
Malayalam