ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಗ್ರಾಮೀಣ ರಸ್ತೆಗಳ ನಿರ್ಮಾಣದಲ್ಲಿ ನಾರಿನ ಭೂ ಹೊದಿಕೆ ಬಳಕೆಗೆ ಒಪ್ಪಿಗೆ

Posted On: 20 MAY 2020 12:59PM by PIB Bengaluru

ಗ್ರಾಮೀಣ ರಸ್ತೆಗಳ ನಿರ್ಮಾಣದಲ್ಲಿ ನಾರಿನ ಭೂ ಹೊದಿಕೆ ಬಳಕೆಗೆ ಒಪ್ಪಿಗೆ

ನಿರ್ಧಾರದಿಂದ ವಿಶೇಷವಾಗಿ ಕೋವಿಡ್ ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಾರು ಉದ್ಯಮಕ್ಕೆ ಉತ್ತೇಜನ ದೊರೆಯಲಿದೆ

 

ನಾರಿನ ಭೂ ಹೊದಿಕೆಯು ನೈಸರ್ಗಿಕ, ಬಲಿಷ್ಟ, ಧೀರ್ಘಾವಧಿ ಬಾಳ್ವಿಕೆಯ, ಕೊಳೆಯಲಾರದ, ನೀರು ಬಸಿದು ಹೋಗುವ , ತೇವಾಂಶ ಪ್ರತಿಬಂಧಕ ಮತ್ತು ಯಾವುದೇ ಸೂಕ್ಷ್ಮಾಣುಗಳ ದಾಳಿಯನ್ನು ತಡೆಯಬಲ್ಲ ವಸ್ತುವಾಗಿ ಪರಿಗಣಿಸಲ್ಪಟ್ಟಿದ್ದು, ಇದು ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಅತ್ಯುತ್ತಮ ಸಾಮಗ್ರಿ ಎಂದು ಅಂಗೀಕೃತವಾಗಿದೆ.

ನಾರಿನ ಭೂ ಹೊದಿಕೆಯನ್ನು ಪಿ.ಎಂ.ಜಿ.ಎಸ್.ವೈ-III ಅಡಿಯಲ್ಲಿ ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಬಳಸಲಾಗುತ್ತದೆ ಎಂದು ಭಾರತ ಸರಕಾರದ ಗ್ರಾಮೀಣಾಭಿವೃದ್ದಿ ಸಚಿವಾಲಯದಡಿಯ ರಾಷ್ಟ್ರೀಯ ಮೂಲಸೌಕರ್ಯ ಅಭಿವೃದ್ದಿ ಏಜೆನ್ಸಿಯ ಪ್ರಕಟಣೆ ತಿಳಿಸಿದೆ.

ಬೆಳವಣಿಗೆಯ ಬಗ್ಗೆ ಮಾತನಾಡಿರುವ ಎಂ.ಎಸ್.ಎಂ. . ಮತ್ತು ರಸ್ತೆ ಸಾರಿಗೆ ಹಾಗು ಹೆದ್ದಾರಿಗಳ ಸಚಿವರೂ ಹಾಗು ನಾರಿನ ಎಳೆಗಳ ಪರ್ಯಾಯ ಬಳಕೆಯ ಬಗ್ಗೆ ಹಿನ್ನೆಲೆಯಲ್ಲಿ ನಿಂತು ಕಾರ್ಯಪ್ರವೃತ್ತರೂ ಆಗಿದ್ದ ಶ್ರೀ ನಿತಿನ್ ಗಡ್ಕರಿ ಅವರುಇದೊಂದು ಮಹತ್ವಪೂರ್ಣ ಬೆಳವಣಿಗೆ , ನಾವು ಈಗ ನಾರಿನ ಭೂ ಹೊದಿಕೆಗಳನ್ನು ರಸ್ತೆ ನಿರ್ಮಾಣಕ್ಕೆ ಬಳಸುವುದರಲ್ಲಿ ಯಶಸ್ವಿಯಾಗಿದ್ದೇವೆ . ನಿರ್ಧಾರ ನಾರಿನ ಉದ್ಯಮಕ್ಕೆ ಅದರಲ್ಲೂ ವಿಶೇಷವಾಗಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಬಹಳ ದೊಡ್ಡ ಉತ್ತೇಜನ ನೀಡಲಿದೆಎಂದರು.

ರಸ್ತೆ ನಿರ್ಮಾಣಕ್ಕೆ ಪಿ.ಎಂ.ಜಿ.ಎಸ್.ವೈ. ಹೊಸ ತಂತ್ರಜ್ಞಾನ ಮಾರ್ಗದರ್ಶಿಗಳ ಪ್ರಕಾರ ಪ್ರತೀ ಪ್ರಸ್ತಾವಗಳ ಗುಂಪಿನಲ್ಲಿ 15 % ಉದ್ದವನ್ನು ಹೊಸ ತಂತ್ರಜ್ಞಾನ ಬಳಸಿ ನಿರ್ಮಿಸಬೇಕಾಗುತ್ತದೆ. ಇದರಲ್ಲಿ 5 % ರಸ್ತೆಗಳು .ಆರ್.ಸಿ. ಮಾನ್ಯತೆ ಪಡೆದ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಬೇಕಾಗುತ್ತದೆ. .ಆರ್.ಸಿ.ಯು ಈಗ ನಾರಿನ ಭೂ ಹೊದಿಕೆಯನ್ನು ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಬಳಸಲು ಮಾನ್ಯತೆ ನೀಡಿದೆ.

ಸೂಚನೆಗಳ ಪ್ರಕಾರ ಪಿ.ಎಂ.ಜಿ.ಎಸ್.ವೈ-III ಅಡಿಯಲ್ಲಿ ನಿರ್ಮಾಣವಾಗುವ ರಸ್ತೆಗಳ 5 % ಉದ್ದದ ರಸ್ತೆಗಳನ್ನು ನಾರು ಭೂ ಹೊದಿಕೆಗಳನ್ನು ಬಳಸಿ ನಿರ್ಮಿಸಲಾಗುತ್ತದೆ. ಇದರನ್ವಯ ಆಂಧ್ರಪ್ರದೇಶದಲ್ಲಿ 164 ಕಿಲೋ ಮೀಟರ್ ರಸ್ತೆಗಳನ್ನು ನಾರಿನ ಭೂ ಹೊದಿಕೆಗಳನ್ನು ನಿರ್ಮಿಸಿ ರಚಿಸಲಾಗುತ್ತದೆ. ಗುಜರಾತಿನಲ್ಲಿ 151 ಕಿಲೋ ಮೀಟರ್, ಕೇರಳದಲ್ಲಿ 71 ಕಿಲೋ ಮೀಟರ್ , ಮಹಾರಾಷ್ಟ್ರದಲ್ಲಿ 328 ಕಿಲೋ ಮೀಟರ್, ಒಡಿಶಾದಲ್ಲಿ 470 ಕಿಲೋ ಮೀಟರ್ , ತಮಿಳುನಾಡಿನಲ್ಲಿ 369 ಕಿಲೋ ಮೀಟರ್, ತೆಲಂಗಾಣದಲ್ಲಿ 121 ಕಿಲೋ ಮೀಟರ್, ರಸ್ತೆಗಳನ್ನು ನಾರಿನ ಹೊದಿಕೆ ಬಳಸಿ ನಿರ್ಮಿಸಲಾಗುತ್ತದೆ. ಹೀಗೆ 1674 ಕಿಲೋ ಮೀಟರ್ ರಸ್ತೆಯನ್ನು 7 ರಾಜ್ಯಗಳ ವ್ಯಾಪ್ತಿಯಲ್ಲಿ ನಾರಿನ ಭೂ ಹೊದಿಕೆಯನ್ನು ಬಳಸಿ ನಿರ್ಮಿಸಲಾಗುತ್ತದೆ. ಇದಕ್ಕಾಗಿ 1 ಕೋಟಿ ಚದರ ಮೀಟರ್ ನಾರಿನ ಭೂ ಹೊದಿಕೆ ಅವಶ್ಯವಿದ್ದು, ಅಂದಾಜು ಮೌಲ್ಯ ಸುಮಾರು 70 ಕೋಟಿ ರೂ.

ನಿರ್ಧಾರವು ದೇಶದಲ್ಲಿ ನಾರು ಭೂ ಹೊದಿಕೆಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸಲಿದೆ ಮತ್ತು ಕೋವಿಡ್ -19 ಪೀಡಿತ ನಾರು ಉದ್ಯಮಕ್ಕೆ ವರವಾಗಲಿದೆ.

***



(Release ID: 1625521) Visitor Counter : 218