ರೈಲ್ವೇ ಸಚಿವಾಲಯ

19 ದಿನಗಳಲ್ಲಿ ‘ಶ್ರಮಿಕ ವಿಶೇಷ’ ರೈಲುಗಳ ಮೂಲಕ 21.5 ಲಕ್ಷ ವಲಸೆ ಕಾರ್ಮಿಕರನ್ನು ತಮ್ಮ ತವರು ರಾಜ್ಯಗಳಿಗೆ ತಲುಪಿಸಿದ ಭಾರತೀಯ ರೈಲ್ವೆ ಮತ್ತು 1600ಕ್ಕೂ ಅಧಿಕ ‘ಶ್ರಮಿಕ ವಿಶೇಷ’ ರೈಲುಗಳ ಕಾರ್ಯಾಚರಣೆ

Posted On: 19 MAY 2020 9:38PM by PIB Bengaluru

19 ದಿನಗಳಲ್ಲಿ ಶ್ರಮಿಕ ವಿಶೇಷರೈಲುಗಳ ಮೂಲಕ 21.5 ಲಕ್ಷ ವಲಸೆ ಕಾರ್ಮಿಕರನ್ನು ತಮ್ಮ ತವರು ರಾಜ್ಯಗಳಿಗೆ ತಲುಪಿಸಿದ ಭಾರತೀಯ ರೈಲ್ವೆ ಮತ್ತು 1600ಕ್ಕೂ ಅಧಿಕ ಶ್ರಮಿಕ ವಿಶೇಷರೈಲುಗಳ ಕಾರ್ಯಾಚರಣೆ

ಹೆಚ್ಚಿನ ವಲಸೆ ಕಾರ್ಮಿಕರಿಗೆ ನೆಮ್ಮದಿ ತರಲು ಶ್ರಮಿಕ ವಿಶೇಷ ರೈಲುಗಳ ಸಂಖ್ಯೆ ದುಪ್ಪಟ್ಟುಗೊಳಿಸಲಿರುವ ಭಾರತೀಯ ರೈಲ್ವೆ: ಇಂದು ರಾತ್ರಿ ಸುಮಾರು 200 ರೈಲುಗಳ ಸಂಚಾರ

2020 ಜೂ.1ರಿಂದ ಪ್ರತಿದಿನ ನಿಗದಿತ ವೇಳಾಪಟ್ಟಿಯಲ್ಲಿ 200 ರೈಲುಗಳ ಸಂಚಾರ ಆರಂಭಿಸಲಿರುವ ಭಾರತೀಯ ರೈಲ್ವೆ
ಬುಕಿಂಗ್ ಕೇವಲ ಆನ್ ಲೈನ್ ನಲ್ಲಿ ಮಾತ್ರ ಮತ್ತು ಕೆಲವೇ ದಿನಗಳಲ್ಲಿ ಆರಂಭ: ಹವಾನಿಯಂತ್ರಣ ರಹಿತ ರೈಲುಗಳ ವೇಳಾಪಟ್ಟಿ ಮತ್ತು ವಿವರಗಳು ಸದ್ಯದಲ್ಲೇ ಪ್ರಕಟ
ದೇಶಾದ್ಯಂತ ವಲಸಿಗರಿಗೆ ಹೆಚ್ಚಿನ ನೆಮ್ಮದಿ ಮೂಡಿಸಲಿದೆ ಕ್ರಮ

 

ವಲಸಿಗರಿಗೆ ಇನ್ನೂ ಹೆಚ್ಚಿನ ನೆಮ್ಮದಿ ಮೂಡಿಸುವ ಸಲುವಾಗಿ ಭಾರತೀಯ ರೈಲ್ವೆ ಶ್ರಮಿಕ ರೈಲುಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ಯೋಜಿಸುತ್ತಿದೆ. ಹೆಚ್ಚುವರಿ ಶ್ರಮಿಕ ವಿಶೇಷ ರೈಲುಗಳಲ್ಲದೆ, ಭಾರತೀಯ ರೈಲ್ವೆ 2020 ಜೂ.1ರಿಂದ ನಿಗದಿತ ವೇಳಾಪಟ್ಟಿಯಲ್ಲಿ 200 ಹೊಸ ರೈಲುಗಳ ಸಂಚಾರವನ್ನು ಆರಂಭಿಸಲಿದೆ. ರೈಲು ಮಾರ್ಗಗಳು ಮತ್ತು ವೇಳಾಪಟ್ಟಿಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು.

ರೈಲುಗಳಿಗೆ ಕೇವಲ ಆನ್ ಲೈನ್ ನಲ್ಲಿ ಮಾತ್ರ ಬುಕಿಂಗ್ ಮಾಡಬಹುದಾಗಿದ್ದು, ಪ್ರಕ್ರಿಯೆ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.

ರೈಲುಗಳ ಹವಾನಿಯಂತ್ರಿತವಲ್ಲ. ರೈಲು ನಿಲ್ದಾಣಗಳಲ್ಲಿ ಯಾವುದೇ ಮಾರಾಟವಿರುವುದಿಲ್ಲ ಮತ್ತು ಸಂಭಾವ್ಯ ಪ್ರಯಾಣಿಕರು ಟಿಕೆಟ್ ಖರೀದಿಗಾಗಾಗಿ ರೈಲು ನಿಲ್ದಾಣಗಳಿಗೆ ಬರುವ ಅಗತ್ಯವಿಲ್ಲ.

ಭಾರತೀಯ ರೈಲ್ವೆ, ವಲಸಿಗರು ಯಾರೂ ಆಂತಕ್ಕೆ ಒಳಗಾಗಬೇಕಾಗಿಲ್ಲ ಎಂದು ಮನವಿ ಮಾಡಿದೆ. ಎಲ್ಲರೂ ಆದಷ್ಟು ಶೀಘ್ರ ತಮ್ಮ ತವರು ರಾಜ್ಯಗಳಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಎಲ್ಲ ಪ್ರಯತ್ನಗಳನ್ನು ಖಾತ್ರಿಪಡಿಸಲಾಗುತ್ತಿದೆ.

ವಲಸಿಗರುವ ಹಾಲಿ ನೆಲೆಸಿರುವ ಸ್ಥಳಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣದಿಂದಲೇ ರೈಲು ಹತ್ತುವ ವ್ಯವಸ್ಥೆಯನ್ನು ಒದಗಿಸಲು ಎಲ್ಲ ಪ್ರಯತ್ನಗಳು ನಡೆದಿವೆ.

ವಲಸಿಗರು ತಮ್ಮ ರಾಜ್ಯಗಳನ್ನು ತಲುಪಲು ರಸ್ತೆಗಳಲ್ಲಿ ನಡೆದುಕೊಂಡು ಹೋಗುತ್ತಿರುವ ಪ್ರದೇಶಗಳನ್ನು ಗುರುತಿಸುವಂತೆ ರೈಲ್ವೆ, ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಮತ್ತು ಅವರ ನೋಂದಣಿ ನಂತರ ಅವರಿಗೆ ಸಮೀಪದ ರೈಲು ನಿಲ್ದಾಣ ಯಾವುದು ಎಂಬುದನ್ನು ಗುರುತಿಸುವಂತೆ ಹಾಗೂ ಪ್ರಯಾಣಿ ಮಾಡಲಿಚ್ಚಿಸುವವರ ಪಟ್ಟಿಯನ್ನು ರೈಲ್ವೆ ಅಧಿಕಾರಿಗಳಿಗೆ ಒದಗಿಸುವಂತೆ ಸೂಚಿಸಿದೆ. ಇದರಿಂದಾಗಿ ರೈಲ್ವೆ ಹೆಚ್ಚಿನ ಶ್ರಮಿಕ ರೈಲುಗಳ ಮೂಲಕ ಅವರ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲು ನೆರವಾಗಲಿದೆ ಎಂದು ರೈಲ್ವೆ ಹೇಳಿದೆ.

19 ದಿನಗಳಲ್ಲಿ ಶ್ರಮಿಕ ರೈಲುಗಳ ಮೂಲಕ ರೈಲ್ವೆ 21.5 ಲಕ್ಷಕ್ಕೂ ಅಧಿಕ ವಲಸಿಗರನ್ನು ಅವರ ತವರು ರಾಜ್ಯಗಳಿಗೆ ತಲುಪಿಸಿದೆ ಮತ್ತು ಮೇ 19ರವರೆಗೆ 160ಕ್ಕೂ ಅಧಿಕ ಶ್ರಮಿಕ ರೈಲುಗಳ ಕಾರ್ಯಾಚರಣೆ ನಡೆಸಲಾಗಿದೆ.

ಭಾರತೀಯ ರೈಲ್ವೆ ವಲಸಿಗರಲ್ಲಿ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದೆ. ಅವರನ್ನು ಆದಷ್ಟು ಶೀಘ್ರ ಅವರ ತವರು ರಾಜ್ಯಗಳಿಗೆ ಪ್ರಯಾಣಿಸುವ ವ್ಯವಸ್ಥೆ ಕಲ್ಪಿಸಲು ಎಲ್ಲ ಪ್ರಯತ್ನಗಳನ್ನು ಖಾತ್ರಿಪಡಿಸಲಾಗುತ್ತಿದೆ ಎಂದು ಹೇಳಿದೆ.

***



(Release ID: 1625287) Visitor Counter : 183