ಗೃಹ ವ್ಯವಹಾರಗಳ ಸಚಿವಾಲಯ

ಭಾರತದ ಕಲ್ಯಾಣ ರೈತರ ಕಲ್ಯಾಣದ ಮೂಲಕ ಎಂಬುದರಲ್ಲಿ ಮೋದಿ ಸರಕಾರದ ಅಚಲ ನಿಷ್ಠೆ- ರೈತರು ಸಶಕ್ತರಾದಾಗ , ದೇಶವು ಸ್ವಾವಲಂಬಿಯಾಗುತ್ತದೆ: ಶ್ರೀ ಅಮಿತ್ ಶಾ

Posted On: 15 MAY 2020 8:10PM by PIB Bengaluru

ಭಾರತದ ಕಲ್ಯಾಣ ರೈತರ ಕಲ್ಯಾಣದ ಮೂಲಕ ಎಂಬುದರಲ್ಲಿ ಮೋದಿ ಸರಕಾರದ ಅಚಲ ನಿಷ್ಠೆ-
ರೈತರು ಸಶಕ್ತರಾದಾಗ , ದೇಶವು ಸ್ವಾವಲಂಬಿಯಾಗುತ್ತದೆ: ಶ್ರೀ ಅಮಿತ್ ಶಾ

ಪ್ರತಿಕೂಲ ಪರಿಸ್ಥಿತಿಯಲ್ಲೂ ರೈತರ ಬಗ್ಗೆ ಪ್ರಧಾನ ಮಂತ್ರಿ ಮೋದಿ ಅವರ ಸೂಕ್ಷ್ಮತ್ವ ಇಡೀ ವಿಶ್ವಕ್ಕೇ ವಿಶಿಷ್ಟ: ಗೃಹ ಸಚಿವರು

ಮೋದಿ ಸರಕಾರದ ಆತ್ಮನಿರ್ಭರ ಭಾರತ್ ಅಭಿಯಾನ ಅಭೂತಪೂರ್ವ ಅಭಿವೃದ್ದಿಯನ್ನು ತರಲಿದೆ, ಆದಾಯ ಹೆಚ್ಚು ಮಾಡಲಿದೆ ಮತ್ತು ಉದ್ಯೋಗ ಸೃಷ್ಟಿ ಮಾಡಲಿದೆ: ಶ್ರೀ ಅಮಿತ್ ಶಾ

 

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಂದು ಕೃಷಿ ,ಮತ್ತು ಸಂಬಂಧಿತ ವಲಯಗಳಿಗೆ ಆತ್ಮನಿರ್ಭರ ಭಾರತ್ ಯೋಜನೆ ಅಡಿಯಲ್ಲಿ ಹಣಕಾಸು ಪ್ಯಾಕೇಜ್ ಪ್ರಕಟಿಸಿದರು. ಕ್ರಮಗಳಿಗಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಮತ್ತು ಹಣಕಾಸು ಸಚಿವರನ್ನು ಅಭಿನಂದಿಸಿರುವ ಗೃಹ ಸಚಿವ ಶ್ರೀ ಅಮಿತ್ ಶಾ ಮೋದಿ ಸರಕಾರ ಭಾರತದ ಕಲ್ಯಾಣವು ಅದರ ರೈತರ ಕಲ್ಯಾಣದಲ್ಲಿ ಅಡಗಿದೆ ಎಂಬುದನ್ನು ಅರಿತುಕೊಂಡಿದೆ. ಇಂದು ರೈತರಿಗೆ ಒದಗಿಸಿರುವ ಅಭೂತಪೂರ್ವ ನೆರವು ದೇಶವನ್ನು ರೈತರ ಸಶಕ್ತೀಕರಣದ ಮೂಲಕ ಸ್ವಾವಲಂಬಿಯಾಗಿಸುವ ಪ್ರಧಾನ ಮಂತ್ರಿ ಶ್ರೀ ಮೋದಿ ಅವರ ದೂರದೃಷ್ಟಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಲಾಕ್ ಡೌನ್ ಅವಧಿಯಲ್ಲಿ ರೈತರಿಗೆ ಸಹಾಯ ಮಾಡಲು ಕೇಂದ್ರ ಸರಕಾರ ಕೈಗೊಂಡ ಪ್ರಮುಖ ಕ್ರಮಗಳ ಬಗ್ಗೆ ಮಾತನಾಡಿರುವ ಗೃಹ ಸಚಿವರು ಮೋದಿ ಸರಕಾರವು ಲಾಕ್ ಡೌನ್ ಅವಧಿಯಲ್ಲಿ 74,300 ಕೋ.ರೂ. ಮೊತ್ತದ ಬೆಳೆಯನ್ನು ಕನಿಷ್ಟ ಬೆಂಬಲ ಬೆಲೆಯಲ್ಲಿ (ಎಂ.ಎಸ್.ಪಿ.) ಖರೀದಿಸುವ ಮೂಲಕ ರೈತರಿಗೆ ಪರಿಹಾರ ಒದಗಿಸಿದೆ; ಪಿ.ಎಂ. ಕಿಸಾನ್ ಅಡಿಯಲ್ಲಿ ರೈತರ ಖಾತೆಗಳಿಗೆ 18,700 ಕೋ. ರೂಪಾಯಿಗಳನ್ನು ವರ್ಗಾಯಿಸಿದೆ, ಬೆಳೆ ವಿಮಾ ಯೋಜನೆ ಅಡಿಯಲ್ಲಿ 6,400 ಕೋ.ರೂ.ಗಳನ್ನು ನೀಡಲಾಗಿದೆಎಂದಿದ್ದಾರೆ. ಪ್ರಧಾನ ಮಂತ್ರಿ ಅವರು ರೈತರ ಬಗ್ಗೆ ಹೊಂದಿರುವ ಸೂಕ್ಷ್ಮತ್ವ , ಅದೂ ಪ್ರತಿಕೂಲ ಪರಿಸ್ಥಿತಿಯಲ್ಲಿ ಇಡೀ ವಿಶ್ವಕ್ಕೆ ವಿಶಿಷ್ಟವಾದದ್ದು ಎಂದೂ ಶ್ರೀ ಶಾ ಹೇಳಿದ್ದಾರೆ.

ಪಶು ಸಂಗೋಪನಾ ವಲಯಕ್ಕೆ ಒದಗಿಸಲಾಗಿರುವ ಪ್ಯಾಕೇಜಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವರು ಕೋವಿಡ್ -19 ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಹಾಲಿನ ಬಳಕೆ 20-25% ಕಡಿಮೆಯಾಗಿದೆ, ಆದಾಗ್ಯೂ ಮೋದಿ ಸರಕಾರ ರೈತರಿಗೆ ಸಹಾಯ ಮಾಡಲು 4,100 ಕೋ.ರೂ. ಮೌಲ್ಯದ 111 ಕೋಟಿ ಲೀಟರು ಹಾಲನ್ನು ಖರೀದಿ ಮಾಡಿತುಎಂದರು. ಇಂದಿನ ಘೋಷಣೆಗಳ ಮೂಲಕ ಪಶು ಸಂಗೋಪನಾ ವಲಯದ 2 ಕೋಟಿ ರೈತರಿಗೆ 5,000 ಕೋ.ರೂ.ಗಳ ನೆರವನ್ನು ನೀಡಿರುವುದಕ್ಕೆ ಶ್ರೀ ಶಾ ಅವರು ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

1 ಲಕ್ಷ ಕೋ.ರೂ.ಗಳಕೃಷಿ ಮೂಲಸೌಕರ್ಯ ನಿಧಿಘೋಷಣೆಯ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಡಿಯಲ್ಲಿ 1 ಲಕ್ಷ ಕೋ.ರೂ.ಗಳ ಕೃಷಿ ಮೂಲಸೌಕರ್ಯ ನಿಧಿಯನ್ನು ಕೇಂದ್ರ ಸರಕಾರ ಸ್ಥಾಪಿಸುತ್ತಿರುವುದು ಕೃಷಿ ವಲಯಕ್ಕೆ ಹೊಸ ದಿಕ್ಕನ್ನು ಮತ್ತು ರೈತರ ಕಲ್ಯಾಣಕ್ಕೆ ಹೊಸ ಬಲವನ್ನು ಒದಗಿಸಬಲ್ಲದು ಎಂಬ ಬಗ್ಗೆ ನನಗೆ ಭರವಸೆ ಇದೆಎಂದಿದ್ದಾರೆ.

ಗುಚ್ಚ ಮಾದರಿಯ ಧೋರಣೆಯನ್ನು ಅನುಸರಿಸುವ ಮೂಲಕ ಮತ್ತು ಕಿರು ಆಹಾರ ಉದ್ಯಮಗಳಿಗೆ 10,000 ಕೋ.ರೂ.ಗಳನ್ನು ಒದಗಿಸುವ ನಿರ್ಧಾರದ ಮೂಲಕ ಮಾವು, ಕೇಸರಿ, ಮೆಣಸು, ಸೆಣಬು/ಬಿದಿರು , ಮತ್ತು ಇತರ ಸಣ್ಣ ಉದ್ಯಮಗಳಿಗೆ ಸಂಬಂಧಿಸಿದ ಜನರಿಗೆ ಅಭೂತಪೂರ್ವ ಉತ್ತೇಜನ ಒದಗಲಿದೆ . ಇದು ಅವರ ಆದಾಯವನ್ನು ಹೆಚ್ಚಿಸುವುದು ಮಾತ್ರವಲ್ಲ, ಅವರಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸುತ್ತದೆ ಎಂದೂ ಶ್ರೀ ಶಾ ಹೇಳಿದರು.

ಮೀನುಗಾರಿಕಾ ವಲಯಕ್ಕೆ ಒದಗಿಸಲಾಗಿರುವ ಪ್ಯಾಕೇಜಿಗಾಗಿ ಪ್ರಧಾನ ಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಗೃಹ ಸಚಿವರು ಮೀನುಗಾರಿಕಾ ವಲಯಕ್ಕೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನಾ (ಪಿ.ಎಂ.ಎಂ.ಎಸ್.ವೈ.) ಅಡಿಯಲ್ಲಿ 20,000 ಕೋ.ರೂ.ಗಳನ್ನು ಒದಗಿಸುವ ಮೋದಿ ಸರಕಾರದ ನಿರ್ಧಾರ ಮೂಲಸೌಕರ್ಯಗಳಿಗೆ , ಅದರ ಆಧುನೀಕರಣಕ್ಕೆ, ಉತ್ಪಾದಕತೆಗೆ ಮತ್ತು ಗುಣಮಟ್ಟದ ಉತ್ಪನ್ನಗಳಿಗೆ ದೊಡ್ಡ ಉತ್ತೇಜನ ಕೊಡಲಿದೆ ಮತ್ತು ವಲಯದಲ್ಲಿ ಹೊಸ ಉದ್ಯೋಗಗಳ ಸೃಷ್ಟಿಯಾಗಲಿದೆ ಎಂದೂ ಹೇಳಿದ್ದಾರೆ.

ಪಶು ಸಂಗೋಪನಾ ವಲಯಕ್ಕೆ 15,000 ಕೋ.ರೂ.ಗಳ ಪಶು ಸಂಗೋಪನಾ ಮೂಲಸೌಕರ್ಯ ಅಭಿವೃದ್ದಿ ನಿಧಿರಚಿಸುವ ವೈದ್ಯಕೀಯ ಔಷಧೀಯ ಸಸ್ಯಗಳ ಕೃಷಿಗೆ 4,000 ಕೋ.ರೂ. ಒದಗಿಸುವ , ಜೇನು ಸಾಕಾಣಿಕೆಗೆ 500 ಕೋ.ರೂ. ಒದಗಿಸುವ ನಿರ್ಧಾರಗಳು ಕ್ಷೇತ್ರದಲ್ಲಿ ಅಭೂತಪೂರ್ವ ಬೆಳವಣಿಗೆಗೆ ಕಾರಣವಾಗಬಲ್ಲವು ಮತ್ತು ಆದಾಯ ಹೆಚ್ಚಿಸಬಲ್ಲವು ಹಾಗು ಉದ್ಯೋಗ ಸೃಷ್ಟಿಸಬಲ್ಲವು ಎಂದೂ ಶ್ರೀ ಶಾ ಹೇಳಿದರು.

ಕೃಷಿ ಮಾರುಕಟ್ಟೆ ಸುಧಾರಣೆಗಳ ಚಾರಿತ್ರಿಕ ನಿರ್ಧಾರವನ್ನು ಪ್ರಸ್ತಾಪಿಸಿದ ಗೃಹ ಸಚಿವರು, ರೈತರಿಗೆ ತಮ್ಮ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಅನುಕೂಲವಾಗುವಂತಹ ಅವಕಾಶಗಳನ್ನು ಒದಗಿಸಲು ಮೋದಿ ಸರಕಾರವು ಕೇಂದ್ರೀಯ ಕಾನೂನು ತರಲಿದೆ ಎಂದರು. ಇದರ ಬಳಿಕ ಅವರು ಅಡೆ-ತಡೆ ರಹಿತ ಅಂತರ ರಾಜ್ಯ ವ್ಯಾಪಾರ ಮಾಡಲು ಸಮರ್ಥರಾಗುವರು ಮತ್ತು -ವ್ಯಾಪಾರದ ಮೂಲಕ ಅವರ ಉತ್ಪನ್ನಗಳು ದೇಶದ ಯಾವ ಮೂಲೆಗೂ ತಲುಪಲು ಸಾಧ್ಯವಾಗಲಿದೆ ಎಂದರು.

***



(Release ID: 1625067) Visitor Counter : 151