ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಶಿಕ್ಷಣ ವಲಯದ ಉತ್ತೇಜನಕ್ಕೆ ಹಲವು ಕ್ರಮಗಳನ್ನು ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವರು

Posted On: 18 MAY 2020 4:06PM by PIB Bengaluru

ಶಿಕ್ಷಣ ವಲಯದ ಉತ್ತೇಜನಕ್ಕೆ ಹಲವು ಕ್ರಮಗಳನ್ನು ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವರು

ಮಾನವ ಸಂಪನ್ಮೂಲದಲ್ಲಿ ಹೂಡಿಕೆ ಮಾಡುವುದು, ಉತ್ಪಾದನೆ ಮತ್ತು ದೇಶದ ಅಭ್ಯುದಯಕ್ಕೆ ಹೂಡಿಕೆ ಮಾಡಿದಂತೆ -ಶ್ರೀಮತಿ ನಿರ್ಮಲಾ ಸೀತಾರಾಮನ್

ಒಂದು ರಾಷ್ಟ್ರ, ಒಂದು ಡಿಜಿಟಲ್ ವೇದಿಕೆಮತ್ತು ಒಂದು ತರಗತಿ, ಒಂದು ಚಾನಲ್ನಿಂದಾಗಿ ದೇಶದ ಮೂಲೆ ಮೂಲೆಗೂ ಗುಣಮಟ್ಟದ ಶಿಕ್ಷಣ ತಲುಪುವುದು ಚಿತ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು

 

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ನವದೆಹಲಿಯಲ್ಲಿ ಮೇ. 17 ರಂದು ಶಿಕ್ಷಣ ವಲಯದ ಉತ್ತೇಜನಕ್ಕೆ ಹಲವು ಕ್ರಮಗಳನ್ನು ಪ್ರಕಟಿಸಿದರು. ಸಚಿವರು ಮಾನವ ಸಂಪನ್ಮೂಲದ ಮೇಲಿನ ಹೂಡಿಕೆ, ಉತ್ಪಾದನೆಯಲ್ಲಿನ ಹೂಡಿಕೆಗೆ ಸಮನಾದುದು ಮತ್ತು ಅದು ರಾಷ್ಟ್ರದ ಅಭ್ಯುದಯಕ್ಕೆ ಸಹಕಾರಿ ಎಂದರು. ಪ್ರಸಕ್ತ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹಲವು ಹೊಸ ಸವಾಲುಗಳನ್ನು ಮತ್ತು ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿವೆ.

ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಶೈಕ್ಷಣಿಕ ವಲಯ ಯೋಜನೆಗಳನ್ನು ರೂಪಿಸಬೇಕು ಎಂದ ಸಚಿವರು, ವಿಶೇಷವಾಗಿ ನಾವಿನ್ಯ ಪಠ್ಯಕ್ರಮ ಮತ್ತು ಶಿಕ್ಷಣಶಾಸ್ತ್ರ ಅಳವಡಿಕೆಗೆ ಹಾಗೂ ಅಂತರವಿರುವ ಪ್ರದೇಶಗಳಲ್ಲಿ ಸಮಗ್ರ ಮತ್ತು ತಂತ್ರಜ್ಞಾನವನ್ನು ಪ್ರತಿಯೊಂದು ಹಂತದಲ್ಲೂ ಅಳವಡಿಸಿಕೊಳ್ಳಲು ಮುಂದಾಗಬೇಕು ಹಾಗೂ ಹೊಸ ಯುಗದಲ್ಲಿ ಮಾನವ ಸಂಪನ್ಮೂಲದ ಮೇಲೆ ಕೇಂದ್ರೀಕೃತ ಹೂಡಿಕೆ ಮಾಡಬೇಕು ಎಂದು ಹೇಳಿದರು.

ಅಲ್ಲದೆ ಸರ್ವರಿಗೂ ಸಮಾನ ಕಲಿಕೆ ಖಾತ್ರಿಪಡಿಸಲು ಕೇಂದ್ರ ಸರ್ಕಾರ ಬದ್ಧವಿದೆ ಎಂದ ಸಚಿವರು, ಶಿಕ್ಷಣದ ಎಲ್ಲ ಹಂತಗಳಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಒಳಗೊಳ್ಳಲಿದೆ ಮತ್ತು ದೇಶದ ಕುಗ್ರಾಮಗಳೂ ಸೇರಿದಂತೆ ಎಲ್ಲ ಭೌಗೋಳಿಕ ಪ್ರದೇಶಗಳನ್ನು ತಲುಪಲಾಗುವುದು ಎಂದರು.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್, ಶಿಕ್ಷಣ ವಲಯಕ್ಕೆ ಆದ್ಯತೆ ನೀಡಿರುವುದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಉಪಕ್ರಮಗಳನ್ನು ಪ್ರಕಟಿಸಿದ್ದಕ್ಕಾಗಿ ಕೇಂದ್ರ ಹಣಕಾಸು ಸಚಿವರಿಗೆ ಧನ್ಯವಾದಗಳನ್ನು ಹೇಳಿದ ಅವರು, ಶಿಕ್ಷಣ ವಲಯದಲ್ಲಿ ಪರಿವರ್ತನೆಯಾಗಲಿದೆ ಮತ್ತು ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ಸಮಗ್ರ ಅಭಿವೃದ್ಧಿ ಹೊರಹೊಮ್ಮಲಿದೆ ಎಂದರು.

ಒಂದು ರಾಷ್ಟ್ರ, ಒಂದು ಡಿಜಿಟಲ್ ವೇದಿಕೆ ಮತ್ತು ಒಂದು ತರಗತಿ ಒಂದು ಚಾನಲ್ನಿಂದಾಗಿ ಗುಣಮಟ್ಟದ ಶೈಕ್ಷಣಿಕ ಸಾಮಗ್ರಿ ದೇಶದ ಗುಡ್ಡಗಾಡು ಪ್ರದೇಶದ ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲರನ್ನೂ ತಲುಪಲಿದೆ ಎಂದು ಶ್ರೀ ಪೋಖ್ರಿಯಾಲ್ ನಿಶಾಂಕ್ ಹೇಳಿದರು. ಉಪಕ್ರಮಗಳಿಂದಾಗಿ ಶಿಕ್ಷಣದಲ್ಲಿ ಸಮಾನತೆ ಮತ್ತು ಸರ್ವರಿಗೂ ಲಭ್ಯವಾಗಲಿದೆ ಹಾಗೂ ಮುಂದಿನ ದಿನಗಳಲ್ಲಿ ಒಟ್ಟು ಶೈಕ್ಷಣಿಕ ನೋಂದಣಿ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ ಎಂದರು. ದಿವ್ಯಾಂಗ ಮಕ್ಕಳಿಗೂ ಸಹ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ ಎಂದ ಅವರು, ಎಲ್ಲ ಕ್ರಮಗಳಿಂದಾಗಿ ನವಭಾರತ ನಿರ್ಮಾಣಕ್ಕೆ ಹೊಸ ಆಯಾಮ ದೊರಕಲಿದೆ ಎಂದರು.

ಕೇಂದ್ರ ಹಣಕಾಸು ಸಚಿವರು ತಕ್ಷಣಕ್ಕೆ ಪ್ರಕಟಿಸಿರುವ ಕ್ರಮಗಳಲ್ಲಿ ಕೆಳಗಿನ ನಿರ್ದೇಶನಗಳು ಸೇರಿವೆ:

  1. ಪಿಎಂ -ವಿದ್ಯಾ ಹೆಸರಿನ ಸಮಗ್ರ ಉಪಕ್ರಮ ಆರಂಭಿಸಲಾಗುವುದು, ಅದರಲ್ಲಿ ಡಿಜಿಟಲ್/ಆನ್ ಲೈನ್ ಮತ್ತು ರೇಡಿಯೋ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಯತ್ನಗಳನ್ನು ಒಗ್ಗೂಡಿಸಲಾಗುವುದು. ಇದರಿಂದಾಗಿ ಬಹು ಮಾದರಿಯ ಶಿಕ್ಷಣ ಲಭ್ಯವಾಗುತ್ತದೆ ಮತ್ತು ಅದರಲ್ಲಿ ದೀಕ್ಷಾ (ಒಂದು ರಾಷ್ಟ್ರ, ಒಂದು ಡಿಜಿಟಲ್ ವೇದಿಕೆ ಸೇರಿದ್ದು) ಇದು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಶಾಲಾ ಶಿಕ್ಷಣಕ್ಕೆ ಗುಣಮಟ್ಟದ -ಪಠ್ಯ ಒದಗಿಸಲು ರಾಷ್ಟ್ರದ ಡಿಜಿಟಲ್ ಮೂಲಸೌಕರ್ಯವಾಗಲಿದೆ; ಟಿವಿ (ಒಂದು ತರಗತಿ ಒಂದು ಚಾನಲ್) ಒಂದರಿಂದ 12ನೇ ತರಗತಿವರೆಗಿನ ಪ್ರತಿಯೊಂದು ತರಗತಿಗಳಿಗೂ ಒಂದು ನಿಗದಿತ ಚಾನಲ್ ನಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲಾಗುವುದು. ಸ್ವಯಂ ಶಾಲಾ ಮತ್ತು ಉನ್ನತ ಶಿಕ್ಷಣಗಳಿಗೆ ಮೂಕ್ಸ್(ಎಂಒಒಸಿಎಸ್) ಪದ್ಧತಿಯಡಿ ಸ್ವಯಂ ಆನ್ ಲೈನ್ ಕೋರ್ಸ್ ಗಳನ್ನು ನಡೆಸಲಾಗುವುದು. ಐಐಟಿ/ಜೆಇಇ/ನೀಟ್ ಸಿದ್ಧತೆಗೆ ಐಐಟಿಪಿಎಎಲ್, ಸಮುದಾಯ ರೇಡಿಯೋದ ಮೂಲಕ ದೂರಶಿಕ್ಷಣ ಮತ್ತು ಸಿಬಿಎಸ್ಇ ಶಿಕ್ಷಾ ವಾಣಿ ಪೋಡ್ ಕಾಸ್ಟ್ ಮತ್ತು ವಿಶೇಷಚೇತನರಿಗೆ ಅಭ್ಯಾಸ ಸಾಮಗ್ರಿಗಳನ್ನು ಡಿಜಿಟಲ್ ಲಭ್ಯತೆ ಮಾಹಿತಿ ವ್ಯವಸ್ಥೆ(ಡಿಎಐಎಸ್ ವೈ)ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಎನ್ ಐಒಎಸ್ ವೆಬ್ ಸೈಟ್/ಯೂಟ್ಯೂಬ್ ನಲ್ಲಿ (ಸೈನ್ ) ಸನ್ನೆ ಭಾಷೆಯಲ್ಲಿ ಒದಗಿಸಲಾಗುವುದು. ಇದು ದೇಶಾದ್ಯಂತ ಸುಮಾರು 25 ಕೋಟಿ ಶಾಲಾ ಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ.
  2. ಇಂತಹ ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಕುಟುಂಬಗಳಿಗೆ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮ ಬೆಂಬಲ ನೀಡುವುದು ಅತ್ಯವಶ್ಯಕ. ಅದಕ್ಕಾಗಿ ಮನೋದರ್ಪಣ ಉಪಕ್ರಮವನ್ನು ಆರಂಭಿಸಲಾಗಿದೆ. ಇದು ವೆಬ್ ಸೈಟ್, ಟೋಲ್ ಫ್ರೀ ಸಹಾಯವಾಣಿ, ರಾಷ್ಟ್ರೀಯ ಆಪ್ತ ಸಮಾಲೋಚಕರ ಡೈರೆಕ್ಟರಿ ಮತ್ತು ಸಂವಹನಾತ್ಮಕ ಮಾತುಕತೆ ವೇದಿಕೆಗಳ ಮೂಲಕ ನೆರವು ನೀಡುತ್ತದೆ. ಇದರಿಂದ ದೇಶದ ಎಲ್ಲ ಶಾಲಾ ಮಕ್ಕಳಿಗೂ ಅನುಕೂಲವಾಗಲಿದೆ. ಅಲ್ಲದೆ ಅವರ ಪೋಷಕರು, ಶಿಕ್ಷಕರು ಮತ್ತು ಸಮುದಾಯದ ಎಲ್ಲರಿಗೂ ಪ್ರಯೋಜನವಾಗಲಿದೆ.
  3. ಸರ್ಕಾರ ಉನ್ನತ ಶಿಕ್ಷಣದಲ್ಲಿ -ಕಲಿಕೆಯನ್ನು ವಿಸ್ತರಿಸುತ್ತಿದೆ. ಅದನ್ನು ಮುಕ್ತ, ದೂರಶಿಕ್ಷಣ ಮತ್ತು ಆನ್ ಲೈನ್ ಶಿಕ್ಷಣ ನಿಯಂತ್ರಣ ಚೌಕಟ್ಟಿನಲ್ಲಿ ಸರಳೀಕರಣಗೊಳಿಸಲಾಗುವುದು. ದೇಶದ 100 ಅಗ್ರ ವಿಶ್ವ ವಿದ್ಯಾಲಯಗಳಲ್ಲಿ ಆನ್ ಲೈನ್ ಕೋರ್ಸ್ ಗಳು ಆರಂಭವಾಗಲಿವೆ. ಸಾಂಪ್ರದಾಯಿಕ ವಿಶ್ವ ವಿದ್ಯಾಲಯಗಳಲ್ಲೂ ಆನ್ ಲೈನ್ ಕೋರ್ಸ್ ಗಳು ಹಾಗೂ ಒಡಿಎಲ್ ಕಾರ್ಯಕ್ರಮಗಳನ್ನು ಪ್ರಸಕ್ತ ಶೇ.20ರಿಂದ ಶೇ.40ಕ್ಕೆ ಹೆಚ್ಚಿಸಲಾಗುವುದು. ಇದರಿಂದ ದೇಶದ ನಾನಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಲ್ಲಿನ ಸುಮಾರು 7 ಕೋಟಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಕಲಿಕೆ ಅವಕಾಶಗಳು ಲಭ್ಯವಾಗಲಿವೆ.
  4. ಸೃಜನಾತ್ಮಕ ಮತ್ತು ಗಂಭೀರ ಚಿಂತನೆ ಹಾಗೂ ಸಂವಹನ ಕಲೆಯನ್ನು ಉತ್ತೇಜಿಸುವ ಅಗತ್ಯವಿದೆ ಮತ್ತು ವಿದ್ಯಾರ್ಥಿಗಳಿಗೆ ಪ್ರಯೋಗಾತ್ಮಕ ಮತ್ತು ವಿನೋದದ ಮೂಲಕ ಕಲಿಸಿ ಅವರ ಫಲಿತಾಂಶದತ್ತ ಗಮನಹರಿಸಬೇಕಿದೆ. ಪಠ್ಯಕ್ರಮ ಭಾರತದ ಪುರಾಣಗಾಥೆಗಳನ್ನು ಆಧರಿಸಿರಬೇಕು ಮತ್ತು ಅದರಲ್ಲಿ ಜಾಗತಿಕ ಕೌಶಲ್ಯ ಅಗತ್ಯತೆಗಳು ಸೇರ್ಪಡೆಯಾಗಿರಬೇಕು. ಆದ್ದರಿಂದ ಶಾಲಾ ಶಿಕ್ಷಣಕ್ಕೆ, ಶಿಕ್ಷಕರ ಶಿಕ್ಷಣ ಮತ್ತು ಬಾಲ್ಯದ ಶಿಕ್ಷಣಕ್ಕೆ ರಾಷ್ಟ್ರೀಯ ಪಠ್ಯಕ್ರಮ ಮತ್ತು ಶಿಕ್ಷಣಶಾಸ್ತ್ರದ ಚೌಕಟ್ಟನ್ನು ರೂಪಿಸಲಾಗುವುದು ಹಾಗೂ ವಿದ್ಯಾರ್ಥಿಗಳನ್ನು ಭವಿಷ್ಯದ ಶಿಕ್ಷಕರನ್ನು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಸಜ್ಜುಗೊಳಿಸಲಾಗುವುದು.
  5. ರಾಷ್ಟ್ರೀಯ ಅಡಿಪಾಯ ಸಾಕ್ಷರತಾ ಮತ್ತು ಸಂಖ್ಯಾ ಮಿಷನ್ ಅನ್ನು ಆರಂಭಿಸಲಾಗುವುದು. ಮೂಲಕ ದೇಶದ ಪ್ರತಿಯೊಂದು ಮಗುವೂ ಮೂಲ (ಅಡಿಪಾಯ) ಸಾಕ್ಷರತೆಯನ್ನು ಪಡೆಯುವುದು ಅತ್ಯಗತ್ಯವಾಗಿದೆ ಮತ್ತು 2025 ವೇಳೆಗೆ ಪ್ರತಿ ಮಗುವೂ 5ನೇ ತರಗತಿಯಲ್ಲಿ ಕಲಿಕೆಯ ಮಟ್ಟ ಮತ್ತು ಫಲಿತಾಂಶವನ್ನು ಖಾತ್ರಿಪಡಿಸಿಕೊಳ್ಳಲಾಗುವುದು. ಅದಕ್ಕಾಗಿ ಶಿಕ್ಷಕರ ಸಾಮರ್ಥ್ಯವೃದ್ಧಿ, ಪಠ್ಯಕ್ರಮ ಚೌಕಟ್ಟು, ಕಲಿಕಾ ಸಾಮಗ್ರಿ ಆನ್ ಲೈನ್, ಆಫ್ ಲೈನ್ ಎರಡೂ, ಕಲಿಕೆಯ ಫಲಿತಾಂಶಗಳು ಮತ್ತು ಅವುಗಳ ಮಾನದಂಡ, ಮೌಲ್ಯಮಾಪನ ತಂತ್ರಜ್ಞಾನಗಳು, ಕಲಿಕಾ ಪ್ರಗತಿ ಮೇಲೆ ನಿಗಾ ಇತ್ಯಾದಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಲು ವಿನ್ಯಾಸಗೊಳಿಸಲಾಗುವುದು. ಯೋಜನೆಯಲ್ಲಿ 3 ರಿಂದ 11 ವರ್ಷದೊಳಗಿನ ಸುಮಾರು 4 ಕೋಟಿ ಮಕ್ಕಳ ಕಲಿಕಾ ಅಗತ್ಯತೆಯ ವ್ಯಾಪ್ತಿ ತಲುಪಲಾಗುವುದು.

 

***(Release ID: 1624949) Visitor Counter : 920