ರಕ್ಷಣಾ ಸಚಿವಾಲಯ

ಒಪಿ ಸಮುದ್ರ ಸೇತು ಹಂತ 2 - ಮಾಲ್ಡೀವ್ ನಿಂದ 588 ಭಾರತೀಯರನ್ನು ಹೊತ್ತು ಐ.ಎನ್.ಎಸ್. ಜಲಶ್ವಾ ಕರೆತಂದಿದೆ

Posted On: 17 MAY 2020 4:14PM by PIB Bengaluru

ಒಪಿ ಸಮುದ್ರ ಸೇತು ಹಂತ 2 - ಮಾಲ್ಡೀವ್ ನಿಂದ 588 ಭಾರತೀಯರನ್ನು ಹೊತ್ತು .ಎನ್.ಎಸ್. ಜಲಶ್ವಾ ಕರೆತಂದಿದೆ

 

ಮಾಲ್ಡೀವ್ಸ್ ಮಾಲೆಯಿಂದ ಭಾರತೀಯರನ್ನು ಮರಳಿ ಕರೆತರಲು ಒಪಿ ಸಮುದ್ರ ಸೇತುಗೆ ನಿಯೋಜಿಸಲಾಗಿರುವ .ಎನ್.ಎಸ್ ಜಲಶ್ವಾ ಇಂದು ಬೆಳಿಗ್ಗೆ ಕೊಚಿನ್ ಬಂದರನ್ನು ಪ್ರವೇಶಿಸಿ ತನ್ನ ಎರಡನೇ ಸಮುದ್ರಯಾನವನ್ನು ಮುಕ್ತಾಯಗೊಳಿಸಿತು. ಕೊಚಿನ್ ಪೋರ್ಟ್ ಟ್ರಸ್ಟ್ ಸಮುದ್ರಿಕಾ ಕ್ರೂಸ್ ಟರ್ಮಿನಲ್ನಲ್ಲಿ ಹಡಗು ತನ್ನಲ್ಲಿದ್ದ 70 ಮಹಿಳೆಯರು (06 ಗರ್ಭಿಣಿಯರು /ನಿರೀಕ್ಷಿತ ತಾಯಂದಿರು) ಮತ್ತು 21 ಮಕ್ಕಳು ಸೇರಿದಂತೆ ಒಟ್ಟು 588 ಭಾರತೀಯ ನಾಗರಿಕರನ್ನು ಇಳಿಸಿ ಭಾರತದ ನಲೆಯಲ್ಲಿ ಸೇರಿಸಿತು . 

.ಎನ್.ಎಸ್ ಜಲಶ್ವಾ ನೌಕೆಯು ಬೆಳಿಗ್ಗೆ 11: 30 ಕ್ಕೆ ಕೊಚ್ಚಿನ್ ಪೋರ್ಟ್ ಟ್ರಸ್ಟ್ ನಲ್ಲಿ ನೆಲೆಯೂರಿತು ಮತ್ತು ಇದನ್ನು ಭಾರತೀಯ ನೌಕಾಪಡೆ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ಪೋರ್ಟ್ ಟ್ರಸ್ಟ್ ಸಿಬ್ಬಂದಿಗಳು ಸ್ವೀಕರಿಸಿದರು. ಕೋವಿಡ್ ತಪಾಸಣೆ, ಕ್ವಾರೈಂಟೈನ್ ಮತ್ತು ವಲಸೆ ಕಾರ್ಯವಿಧಾನಗಳನ್ನು ಸುವ್ಯವಸ್ಥಿತಗೊಳಿಸಲು ಬಂದರು ಅಧಿಕಾರಿಗಳು ಮತ್ತು ನಾಗರಿಕ ಆಡಳಿತವು ಸ್ಥಳಾಂತರಿಸಿದ ಭಾರತೀಯ ಪ್ರಜೆಗಳಿಗೆ ಆಯಾ ಜಿಲ್ಲೆಗಳಿಗೆ / ರಾಜ್ಯಗಳಿಗೆ ಸಾಗಾಟಕ್ಕಾಗಿ ಹೆಚ್ಚಿನ ಸಾರಿಗೆ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ವಿದೇಶಿ ತೀರದಿಂದ ಭಾರತೀಯ ನಾಗರಿಕರನ್ನು ಹಿಂದಿರುಗಿಸಿ ಕರೆತರಲು ಅನುಕೂಲವಾಗುವಂತೆ ಭಾರತ ಸರ್ಕಾರದ ಪ್ರಯತ್ನಗಳ ಭಾಗವಾಗಿ .ಎನ್.ಎಸ್ ಜಲಶ್ವಾ ನೌಕೆ ಮೇ 15, 2020 ರಂದು ಮಾಲ್ಡೀವ್ಸ್ ಮಾಲೆಯಿಂದ ಭಾರತೀಯ ನಾಗರಿಕರನ್ನು ಹೊತ್ತು ಭಾರತದತ್ತ ಸಾಗಬೇಕಿತ್ತು, ಆದರೆ, ಭಾರೀ ಮಳೆ ಮತ್ತು ಬಲವಾದ ಗಾಳಿಯೊಂದಿಗೆ ಹವಾಮಾನ ವೈಪರೀತ್ಯದಿಂದಾಗಿ ನಿಗದಿತ ಮೇ 15,2020 ಹಡಗಿನ ನಿರ್ಗಮನವು ವಿಳಂಬವಾಯಿತು, ಮತ್ತು ಹಡಗು ಮೇ 16 ,2020 ರಂದು ಮಾಲ್ಡೀವ್ಸ್ ಮಾಲೆಯಿಂದ ಹೊರಟಿತು.

***



(Release ID: 1624792) Visitor Counter : 155