ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಸ್ಥಳೀಯ ಕಚ್ಚಾ ಸಾಮಗ್ರಿ ಬಳಸಿ ಉತ್ಪನ್ನಗಳನ್ನು ತಯಾರಿಸಲು ಕೃಷಿ, ಮೀನುಗಾರಿಕೆ ಮತ್ತು ಅರಣ್ಯ ಎಂ.ಎಸ್.ಎಂ.ಇ.ಗಳಿಗೆ ಶ್ರೀ ನಿತಿನ್ ಗಡ್ಕರಿ ಆಗ್ರಹ

Posted On: 12 MAY 2020 6:30PM by PIB Bengaluru

ಸ್ಥಳೀಯ ಕಚ್ಚಾ ಸಾಮಗ್ರಿ ಬಳಸಿ ಉತ್ಪನ್ನಗಳನ್ನು ತಯಾರಿಸಲು

ಕೃಷಿ, ಮೀನುಗಾರಿಕೆ ಮತ್ತು ಅರಣ್ಯ ಎಂ.ಎಸ್.ಎಂ..ಗಳಿಗೆ ಶ್ರೀ ನಿತಿನ್ ಗಡ್ಕರಿ ಆಗ್ರಹ

 

ಕೇಂದ್ರ ಎಂ.ಎಸ್.ಎಂ. . ಮತ್ತು ರಸ್ತೆ ಸಾರಿಗೆ ಹಾಗು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ಸ್ಥಳೀಯ ಕಚ್ಚಾ ಸಾಮಗ್ರಿಗಳನ್ನು ಬಳಸಿ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ಸಾಧ್ಯತೆಗಳನ್ನು ಅನ್ವೇಷಿಸುವಂತೆ ಕೃಷಿ ಎಂ.ಎಸ್.ಎಂ.., ಮೀನುಗಾರಿಕಾ ಎಂ.ಎಸ್.ಎಂ..ಗಳು ಮತ್ತು ಅರಣ್ಯ ಎಂ.ಎಸ್.ಎಂ.. ಗಳನ್ನು ಆಗ್ರಹಿಸಿದ್ದಾರೆ.

ಭಾರತೀಯ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಚೇಂಬರ್ ಪ್ರತಿನಿಧಿಗಳು ಮತ್ತು ಭಾರತೀಯ ವೆಚ್ಚ ಅಕೌಂಟೆಂಟ್ ಗಳ ಸಂಸ್ಥೆಯ ಪ್ರತಿನಿಧಿಗಳ ಜೊತೆ ಎಂ.ಎಸ್.ಎಂ.. ಗಳ ಮೇಲೆ ಕೋವಿಡ್ -19 ಪರಿಣಾಮಗಳನ್ನು ಕುರಿತ ಸಭೆಯನ್ನು ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಅವರು ಮಾತನಾಡಿದರು.

ಕೈಗಾರಿಕಾ ಗುಚ್ಚಗಳಲ್ಲಿ , ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಲಾಜಿಸ್ಟಿಕ್ ಪಾರ್ಕ್ ಗಳಲ್ಲಿ ಕೈಗಾರಿಕೆಗಳಿಗೆ ಭವಿಷ್ಯದ ಹೂಡಿಕೆಯನ್ನು ಮಾಡಲು ಹೊಸ ಹಸಿರು ಎಕ್ಸ್ ಪ್ರೆಸ್ ಹೆದ್ದಾರಿಗಳು ಅವಕಾಶ ಒದಗಿಸುತ್ತವೆ ಎಂಬುದನ್ನು ಪುನರುಚ್ಚರಿಸಿದ ಅವರು ಕೈಗಾರಿಕೆಗಳ ವಿಕೇಂದ್ರೀಕರಣದ ನಿಟ್ಟಿನಲ್ಲಿ ಕಾರ್ಯಾಚರಿಸಬೇಕಾದ ಮತ್ತು ಗ್ರಾಮೀಣ, ಬುಡಕಟ್ಟು ಹಾಗು ದೇಶದ ಹಿಂದುಳಿದ ಪ್ರದೇಶಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.

ರಫ್ತು ಹೆಚ್ಚಳ ಮಾಡಬೇಕಾದ ನಿಟ್ಟಿನಲ್ಲಿ ವಿಶೇಷ ಗಮನ ಕೊಡಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಕೇಂದ್ರ ಸಚಿವರು ಇಂಧನ ವೆಚ್ಚ, ಸಾಗಾಣಿಕಾ ವೆಚ್ಚ ಮತ್ತು ಉತ್ಪಾದನಾ ವೆಚ್ಚಗಳನ್ನು ಕಡಿಮೆ ಮಾಡುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಬೇಕು, ಇದಕ್ಕಾಗಿ ಅವಶ್ಯ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು ಎಂದೂ ಅವರು ಕರೆ ನೀಡಿದರು.

ಮುಂದುವರೆದು ಅವರು ವಿದೇಶಿ ಆಮದಿಗೆ ಪರ್ಯಾಯವಾದುದನ್ನು ದೇಶೀಯವಾಗಿ ಉತ್ಪಾದಿಸುವ ನಿಟ್ಟಿನಲ್ಲಿ ಆದ್ಯ ಗಮನ ಕೊಡಬೇಕು ಎಂಬುದನ್ನು ಪ್ರತಿಪಾದಿಸಿದರು. ಕೈಗಾರಿಕೋದ್ಯಮವು ನಾವೀನ್ಯ, ಉದ್ಯಮಶೀಲತ್ವ, ವಿಜ್ಞಾನ ಮತ್ತು ತಂತ್ರಜ್ಞಾನ , ಸಂಶೋಧನಾ ಕೌಶಲ್ಯ ಹಾಗು ಜ್ಞಾನವನ್ನು ಸಂಪತ್ತಾಗಿ ಪರಿವರ್ತಿಸುವ ಪರಿಣಿತಿಯತ್ತ ಗಮನ ಕೇಂದ್ರೀಕರಿಸಬೇಕು ಎಂದರು.

ಎಂ.ಎಸ್.ಎಂ..ಗಳನ್ನು ರೇಟಿಂಗ್ ಮಾಡಲು ಮಾಹಿತಿ ತಂತ್ರಜ್ಞಾನ ಆಧಾರಿತ ವಿಶ್ಲೇಷಣಾ ವ್ಯವಸ್ಥೆಯನ್ನು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಚಿಂತನೆಗಳನ್ನು ಹೊಂದಿಸಲು ಬೆಂಬಲ ನೀಡುವಂತೆ ಮನವಿ ಮಾಡಿದ ಸಚಿವರು ಇದರಿಂದ ಪಾರದರ್ಶಕತೆ ತರಲು ಸಾಧ್ಯವಾಗುತ್ತದೆ ಹಾಗು ಫಲಿತಾಂಶ ಆಧಾರಿತ , ಕಾಲಮಿತಿಯಾಧಾರಿತ ಪ್ರಕ್ರಿಯೆಯೂ ಆಗುತ್ತದೆ ಎಂದರು. ಇದರ ಜೊತೆಗೆ ಭಾರತದಲ್ಲಿ ಎಂ.ಎಸ್.ಎಂ.. ಅವಕಾಶವನ್ನು ಬಲಪಡಿಸಲು ವಿಶ್ವದಲ್ಲಿಯ ಉತ್ತಮ ಪದ್ದತಿಗಳ ಅದ್ಯಯನಕ್ಕೆ ಬೆಂಬಲವನ್ನೂ ಅವರು ಕೋರಿದರಲ್ಲದೆ ಯೋಜನೆಗಳ ವೆಚ್ಚ ಲೆಕ್ಕಾಚಾರ ಮಾಡುವಾಗ ನಿರ್ಧಾರ ಕೈಗೊಳ್ಳುವಲ್ಲಿ ಸಮಯದ ಮಹತ್ವವನ್ನೂ ಪರಿಗಣಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.

ಕೋವಿಡ್ -19 ಹರಡದಂತೆ ತಡೆಯಲು ಅವಶ್ಯ ಪ್ರತಿಬಂಧಕ ಕ್ರಮಗಳನ್ನು ಕೈಗಾರಿಕೋದ್ಯಮಗಳು ಖಾತ್ರಿಪಡಿಸಬೇಕು ಎಂದು ಕರೆ ನೀಡಿದ ಶ್ರೀ ಗಡ್ಕರಿ ಪಿ.ಪಿ.. ( ಮುಖಗವಸುಗಳು, ಸ್ಯಾನಿಟೈಸರ್ ಗಳು ಇತ್ಯಾದಿ) ಬಳಕೆಯನ್ನು ಒತ್ತಿ ಹೇಳಿದರು ಮತ್ತು ವೈಯಕ್ತಿಕ ಬದುಕಿನಲ್ಲಿ ಹಾಗು ವ್ಯಾಪಾರೋದ್ಯಮ ಕಾರ್ಯಾಚರಣೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದೂ ಸಲಹೆ ಮಾಡಿದರು.

ಜನರ ಜೀವನ ಮತ್ತು ಜೀವನೋಪಾಯಗಳನ್ನು ಖಾತ್ರಿಪಡಿಸಿಕೊಂಡೇ , ಬಿಕ್ಕಟ್ಟನ್ನು ನಿವಾರಿಸಲು ಸಮಗ್ರ ಧೋರಣೆಯೊಂದನ್ನು ಎಲ್ಲಾ ಭಾಗೀದಾರರು ಅಂಗೀಕರಿಸಬೇಕು ಎಂಬುದನ್ನು ಅವರು ಉಲ್ಲೇಖಿಸಿದರು. ಬಿಕ್ಕಟ್ಟನ್ನು ನಿಭಾಯಿಸಲು ಸಮಯದಲ್ಲಿ ಧನಾತ್ಮಕ ಮನೋಭಾವವನ್ನು ಹೊಂದುವಂತೆ ಶ್ರೀ ಗಡ್ಕರಿ ಅವರು ಕೈಗಾರಿಕೋದ್ಯಮಕ್ಕೆ ಮನವಿ ಮಾಡಿದರು. ಕೋವಿಡ್ -19 ಜೊತೆ ಬದುಕುವ ಕಲೆಯನ್ನು ಕಲಿಯಬೇಕಾದ ಅಗತ್ಯ ಇದೆ ಎಂದೂ ಅವರು ಅಭಿಪ್ರಾಯಪಟ್ಟರು.

ಜಪಾನ್ ಸರಕಾರ ಚೀನಾದಿಂದ ಜಪಾನೀ ಹೂಡಿಕೆಯನ್ನು ಹಿಂಪಡೆದು ಬೇರೆಲ್ಲಾದರೂ ನೆಲೆಗೊಳ್ಳಲು ತನ್ನ ಕೈಗಾರಿಕೋದ್ಯಮಗಳಿಗೆ ವಿಶೇಷ ಪ್ಯಾಕೇಜ್ ನೀಡಿರುವುದನ್ನು ಸಚಿವರು ನೆನಪಿಸಿಕೊಂಡರು. ಅವಕಾಶವನ್ನು ಹಿಡಿದುಕೊಳ್ಳಲು ಭಾರತಕ್ಕಿದು ಸುಸಂದರ್ಭ ಎಂದವರು ಅಭಿಪ್ರಾಯಪಟ್ಟರು.

ಸಂವಾದದಲ್ಲಿ , ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಿಂದಾಗಿ ಎದುರಿಸಬೇಕಾಗಿರುವ ವಿವಿಧ ಸವಾಲುಗಳ ಬಗ್ಗೆ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದರಲ್ಲದೆ, ಕೆಲವು ಸಲಹೆಗಳನ್ನೂ ನೀಡಿದರು ಹಾಗು ವಲಯ ಸುಸೂತ್ರವಾಗಿ ಮುನ್ನಡೆದುಕೊಂಡು ಹೋಗಲು ಸರಕಾರದ ಬೆಂಬಲವನ್ನು ಕೋರಿದರು. ನೀಡಲಾದ ಪ್ರಮುಖ ಸಲಹೆಗಳಲ್ಲಿ ಮತ್ತು ಪ್ರಸ್ತಾಪವಾದ ಪ್ರಮುಖ ವಿಷಯಗಳಲ್ಲಿ ಕೆಳಗಿನ ಅಂಶಗಳು ಸೇರಿವೆ. : ಎಂ.ಎಸ್.ಎಂ.. ಪ್ರಕರಣಗಳಿಗೆ ವಿಶೇಷ ನ್ಯಾಯ ಮಂಡಳಿ ಸ್ಥಾಪನೆ, ಸರ್ಫೇಸಿ ಕಾಯ್ದೆಯನ್ನು ಒಂದು ವರ್ಷದ ಮಟ್ಟಿಗೆ ಸ್ಥಗಿತಗೊಳಿಸುವುದು, ಸಾಕಷ್ಟು ಹಣಕಾಸು ಲಭ್ಯತೆಯ ದಾರಿಗಳನ್ನು ಖಾತ್ರಿಪಡಿಸುವುದು, ಮತ್ತು ಅದರ ಸಮರ್ಪಕ ಬಳಕೆಗೆ ವ್ಯವಸ್ಥೆಯನ್ನು ರೂಪಿಸುವುದು, ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಿರುವುದರಿಂದ ಉಂಟಾಗುವ ಕಾರ್ಮಿಕರ ಕೊರತೆಯನ್ನು ನಿವಾರಿಸುವ ಸವಾಲನ್ನು ಎದುರಿಸಲು ಯೋಜನೆ, ಕಡಿಮೆ ಬೆಲೆಯ ಆಮದಿನಿಂದ ಎಂ.ಎಸ್.ಎಂ.. ವಲಯಕ್ಕೆ ಉಂಟಾಗುವ ಬೆದರಿಕೆಯ ಪರಿಗಣನೆ, ವಿಳಂಬವಾಗಿರುವ ಪಾವತಿಗಳ ಬಿಡುಗಡೆ, ಎನ್.ಪಿ..ಖಾತೆಗಳ ಮರುಹೊಂದಾಣಿಕೆ. ಬಾಹ್ಯ ಕ್ರೆಡಿಟ್ ರೇಟಿಂಗ್ ಆವಶ್ಯಕತೆಯನ್ನು ತೆಗೆದುಹಾಕುವಿಕೆ, ಮತ್ತು ಬ್ಯಾಂಕ್ ಸಾಲಕ್ಕೆ ಸಿಬಿಲ್ ಅಂಕಗಳನ್ನು ತೆಗೆದುಹಾಕುವಿಕೆ , ಯಾವುದಾದರೂ ನ್ಯಾಯಾಲಯವು ಎಂ.ಎಸ್.ಎಂ.. ಪರ ತೀರ್ಪು ನೀಡಿದ್ದರೆ, ಎಂ.ಎಸ್.ಎಂ.. ವಿರುದ್ದ ಅಪೀಲ್ ಮಾಡುವ ಅವಕಾಶವನ್ನು ಸ್ಥಗಿತಗೊಳಿಸುವಿಕೆ , ಅಂತಿಮ ಉತ್ಪಾದನೆಗಳಿಗೆ ಪೂರೈಕೆ ಸರಪಳಿ ವಿಷಯಗಳು, ಬರಬೇಕಾದ ಮೊತ್ತಕ್ಕೆ ಜಿ.ಎಸ್.ಟಿ. ಅನ್ವಯಿಸುವಿಕೆ, ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ದಾಖಲೆಗಳ ವ್ಯವಸ್ಥೆ (ಭೂ ಬಳಕೆ ಅನುಮತಿ, ಅಗ್ನಿ ಶಾಮಕ ಇಲಾಖೆಯಿಂದ ಎನ್..ಸಿ. ಇತ್ಯಾದಿ .) , ಬ್ಯಾಂಕ್ ಗ್ಯಾರಂಟಿಯಲ್ಲಿ ಮಾರ್ಜಿನ್ ಹಣವನ್ನು ಪರಿಗಣಿಸದಿರುವಿಕೆ, ವೆಚ್ಚದ ಕುರಿತು ತರಬೇತಿಗೆ ಯೋಜನೆ, ಎಂ.ಎಸ್.ಎಂ.. ಗಳಲ್ಲಿಯ ಉತ್ತಮ ಪದ್ದತಿಗಳು .. ಇತ್ಯಾದಿ.

ಪ್ರತಿನಿಧಿಗಳಿಂದ ಬಂದ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀ ಗಡ್ಕರಿ ಅವರು ಸರಕಾರದಿಂದ ಸಾಧ್ಯ ಇರುವ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರು. ಅವರು ಸಂಬಂಧಿತ ಇಲಾಖೆಗಳ ಜೊತೆಯೂ ವಿಷಯಗಳನ್ನು ಪ್ರಸ್ತಾಪಿಸುವುದಾಗಿ ತಿಳಿಸಿದರು.

ಉದ್ಯಮ ವಲಯವು ಧನಾತ್ಮಕ ಧೋರಣೆಯನ್ನು ಅನುಸರಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಅವರು ಕೋವಿಡ್ -19 ಬಿಕ್ಕಟ್ಟು ಮುಕ್ತಾಯಗೊಂಡ ಬಳಿಕ ಉಂಟಾಗುವ ಅವಕಾಶಗಳನ್ನು ಬಳಸಿಕೊಳ್ಳುವಂತೆಯೂ ಸಲಹೆ ಮಾಡಿದರು.

***



(Release ID: 1624632) Visitor Counter : 183