ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ದೇಶಾದ್ಯಂತ ಆಹಾರ ಸಾಮಗ್ರಿಗಳ ಲಭ್ಯತೆಯನ್ನು ಖಾತ್ರಿಪಡಿಸಲು ಎಫ್.ಸಿ.ಐ. ಯಿಂದ ವಿವಿಧ ಕ್ರಮಗಳ ಅನುಷ್ಟಾನ

Posted On: 13 MAY 2020 5:11PM by PIB Bengaluru

ದೇಶಾದ್ಯಂತ ಆಹಾರ ಸಾಮಗ್ರಿಗಳ ಲಭ್ಯತೆಯನ್ನು ಖಾತ್ರಿಪಡಿಸಲು ಎಫ್.ಸಿ.. ಯಿಂದ ವಿವಿಧ ಕ್ರಮಗಳ ಅನುಷ್ಟಾನ

ಸುಮಾರು 160 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗಿದೆ, 671 ಎಲ್.ಎಂ.ಟಿ.ಗೂ ಅಧಿಕ ದಾಸ್ತಾನಿದೆ

 

ಭಾರತೀಯ ಆಹಾರ ನಿಗಮದ ದಿನಾಂಕ 12.05.2020 ವರದಿಯ ಪ್ರಕಾರ ನಿಗಮವು ಪ್ರಸ್ತುತ 271.27 ಎಲ್.ಎಂ.ಟಿ. ಅಕ್ಕಿ ಮತ್ತು 400.48 ಎಲ್.ಎಂ.ಟಿ. ಗೋಧಿಯನ್ನು ಹೊಂದಿದೆ. ಆದುದರಿಂದ ಒಟ್ಟು 671.75 ಎಲ್.ಎಂ.ಟಿ. ಆಹಾರ ಧಾನ್ಯ ದಾಸ್ತಾನು ಲಭ್ಯವಿದ್ದಂತಾಗಿದೆ. ( ಈಗ ನಡೆಯುತ್ತಿರುವ ಗೋಧಿ ಮತ್ತು ಭತ್ತದ ಖರೀದಿಯನ್ನು ಹೊರತುಪಡಿಸಿ, ಇದು ಇನ್ನೂ ಗೋದಾಮಿಗೆ ತಲುಪಿಲ್ಲ.) . ತಿಂಗಳೊಂದಕ್ಕೆ ಸುಮಾರು 60 ಎಲ್.ಎಂ.ಟಿ. ಆಹಾರಧಾನ್ಯಗಳು ಎನ್.ಎಫ್.ಎಸ್.. ಮತ್ತು ಇತರ ಕಲ್ಯಾಣ ಕಾರ್ಯಕ್ರಮಗಳಡಿ ಬೇಕಾಗುತ್ತವೆ.

ಲಾಕ್ ಡೌನ್ ನಿಂದಾಗಿ ಸುಮಾರು 80.64 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡಿ 2880 ರೈಲ್ ರೇಕ್ ಗಳ ಮೂಲಕ ಸಾಗಾಟ ಮಾಡಲಾಗಿದೆ. ರೈಲ್ವೇ ಮಾರ್ಗವಲ್ಲದೆ ಸಾಗಾಟವನ್ನು ರಸ್ತೆ ಮಾರ್ಗ ಮತ್ತು ಜಲ ಮಾರ್ಗದ ಮೂಲಕವೂ ಮಾಡಲಾಗಿದೆ.. ಒಟ್ಟು 159.36 ಎಲ್.ಎಂ.ಟಿ. ಯನ್ನು ಸಾಗಾಟ ಮಾಡಲಾಗಿದೆ. 15,031 ಎಂ.ಟಿ. ಬೇಳೆ ಕಾಳುಗಳನ್ನು 11 ಹಡಗುಗಳಲ್ಲಿ ಸಾಗಾಟ ಮಾಡಲಾಗಿದೆ. ಒಟ್ಟು 7.36 ಎಲ್.ಎಂ.ಟಿ. ಆಹಾರ ಧಾನ್ಯಗಳನ್ನು ಈಶಾನ್ಯ ರಾಜ್ಯಗಳಿಗೆ ಸಾಗಾಟ ಮಾಡಲಾಗಿದೆ. ಎನ್.ಎಫ್.ಎಸ್..ಮತ್ತು ಪಿ.ಎಂ.ಜಿ.ಕೆ..ವೈ. ಅಡಿಯಲ್ಲಿ ಮುಂದಿನ 3 ತಿಂಗಳ ಕಾಲ 11 ಎಲ್.ಎಂ.ಟಿ. ಆಹಾರ ಧಾನ್ಯಗಳು ಈಶಾನ್ಯ ರಾಜ್ಯಗಳಿಗೆ ಬೇಕಾಗುತ್ತವೆ.

ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ

ಲಾಕ್ ಡೌನ್ ಅವಧಿಯಲ್ಲಿ , ಎನ್.ಜಿ.. ಗಳು ಮತ್ತು ಸಾಮಾಜಿಕ ಸಂಸ್ಥೆಗಳು ಪರಿಹಾರ ಶಿಬಿರಗಳನ್ನು ನಡೆಸುತ್ತಿದ್ದರೆ ಅವುಗಳು ಎಫ್.ಸಿ.. ಡಿಪೋಗಳಿಂದ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ದರದಲ್ಲಿ (.ಎಂ.ಎಸ್.ಎಸ್.) ಅಕ್ಕಿ ಮತ್ತು ಗೋಧಿಯನ್ನು ನೇರವಾಗಿ ಖರೀದಿ ಮಾಡಬಹುದು. ರಾಜ್ಯ ಸರಕಾರಗಳು ಕೂಡಾ ಆಹಾರ ಧಾನ್ಯಗಳನ್ನು ಎಫ್.ಸಿ..ಯಿಂದ ನೇರವಾಗಿ ಖರೀದಿಸಬಹುದು.

ರಾಜ್ಯ ಸರಕಾರಗಳು ಕೂಡಾ ಮುಂದಿನ ಮೂರು ತಿಂಗಳ ಅವಧಿಗೆ ರಾಜ್ಯ ಸರಕಾರಗಳಿಂದ ನೀಡಲ್ಪಟ್ಟ ಪಡಿತರ ಕಾರ್ಡುಗಳನ್ನು ಹೊಂದಿರುವ ಎನ್.ಎಫ್.ಎಸ್..ಯೇತರ ಕುಟುಂಬಗಳಿಗೆ ಅಕ್ಕಿ/ಗೋಧಿಯನ್ನು ಒದಗಿಸಬಹುದು. .ಎಂ.ಎಸ್.ಎಸ್.ನಡಿಯಲ್ಲಿ ಅಕ್ಕಿಯ ದರವನ್ನು ಕಿಲೋ ಒಂದರ 22 ರೂ. ಮತ್ತು ಗೋಧಿಗೆ ಕಿಲೋ ಒಂದರ 21 ರೂ. ಗಳೆಂದು ನಿಗದಿ ಮಾಡಲಾಗಿದೆ. ಏತನ್ಮಧ್ಯೆ ಎಫ್.ಸಿ.. ಯು 4.68 ಎಲ್.ಎಂ.ಟಿ. ಗೋಧಿಯನ್ನು ಮತ್ತು 6.58 ಎಲ್.ಎಂ.ಟಿ. ಅಕ್ಕಿಯನ್ನು ಲಾಕ್ ಡೌನ್ ಅವಧಿಯಲ್ಲಿ .ಎಂ.ಎಸ್.ಎಸ್. ಮೂಲಕ ಮಾರಾಟ ಮಾಡಿದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾ

ಆಹಾರ ಧಾನ್ಯಗಳು (ಅಕ್ಕಿ/ ಗೋಧಿ)

ಪಿ.ಎಂ.ಜಿ.ಕೆ.. ವೈ .ಅಡಿಯಲ್ಲಿ ಮುಂದಿನ ಮೂರು ತಿಂಗಳಿಗೆ ಒಟ್ಟು 104.4 ಎಲ್.ಎಂ.ಟಿ. ಅಕ್ಕಿ ಮತ್ತು 15.6 ಎಲ್.ಎಂ.ಟಿ.ಗೋಧಿ ಬೇಕಾಗುತ್ತದೆ. ಇದರಲ್ಲಿ 69.65 ಎಲ್.ಎಂ.ಟಿ ಅಕ್ಕಿ ಮತ್ತು 10.1 ಎಲ್.ಎಂ.ಟಿ.ಗೋಧಿಯನ್ನು ಈಗಾಗಲೇ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎತ್ತುವಳಿ ಮಾಡಿವೆ. ಒಟು 79.75 ಎಲ್.ಎಂ.ಟಿ.ಯಷ್ಟನ್ನು ಎತ್ತುವಳಿ ಮಾಡಲಾಗಿದೆ. ಭಾರತ ಸರಕಾರವು ಯೋಜನೆ ಅಡಿಯಲ್ಲಿ 100 % ಹಣಕಾಸು ಹೊರೆಯನ್ನು ಅಂದರೆ ಅಂದಾಜು 46,000 ಕೋ.ರೂ.ಗಳನ್ನು ಭರಿಸುತ್ತಿದೆ. ಆರು ರಾಜ್ಯಗಳಿಗೆ/ ಕೇಂದ್ರಾಡಳಿತ ಪ್ರದೇಶಗಳಿಗೆ ಪಂಜಾಬ್, ಹರ್ಯಾಣಾ, ರಾಜಸ್ತಾನ, ಚಂಡೀಗಢ, ದಿಲಿ, ಮತ್ತು ಗುಜರಾತ್ ಗಳಿಗೆ ಗೋಧಿಯನ್ನು ಮಂಜೂರು ಮಾಡಲಾಗಿದೆ. ಉಳಿದ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಕ್ಕಿಯನ್ನು ಒದಗಿಸಲಾಗುತ್ತಿದೆ.

ಬೇಳೆ ಕಾಳುಗಳು

ಬೇಳೆ ಕಾಳುಗಳಿಗೆ ಸಂಬಂಧಿಸಿದಂತೆ ಮುಂದಿನ ಮೂರು ತಿಂಗಳ ಅಗತ್ಯ 5.87 ಎಲ್.ಎಂ.ಟಿ. ಇದುವರೆಗೆ 3.15 ಎಲ್.ಎಂ.ಟಿ. ಬೇಳೆ ಕಾಳುಗಳನ್ನು ರವಾನೆ ಮಾಡಲಾಗಿದೆ. 2.26 ಎಲ್.ಎಂ.ಟಿ. ಬೇಳೆ ಕಾಳುಗಳು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ತಲುಪಿವೆ. ಮತ್ತು 71,738 ಎಂ.ಟಿ. ಯಷ್ಟನ್ನು ಪೂರೈಕೆ ಮಾಡಲಾಗಿದೆ. ಒಟ್ಟು 12.75 ಎಲ್.ಎಂ.ಟಿ.ಬೇಳೆ ಕಾಳುಗಳು (ತೊಗರಿ-5.70 ಎಲ್.ಎಂ.ಟಿ., ಹೆಸರು-1.72 ಎಲ್.ಎಂ.ಟಿ., ಉದ್ದು_ 2.44 ಎಲ್.ಎಂ.ಟಿ,. ಕಡಲೆ 2.42 ಎಲ್.ಎಂ.ಟಿ. ಮತ್ತು ಮಾಸುರ್ -0.47 ಎಲ್.ಎಂ.ಟಿ ) 2020 ಮೇ 12 ರವರೆಗೆ ಬಫರ್ ದಾಸ್ತಾನು ಆಗಿ ಲಭ್ಯವಿದೆ.

.ಸಿ. ಕಾಯ್ದೆ.

ಗ್ರಾಹಕ ವ್ಯವಹಾರಗಳ ಇಲಾಖೆಯು ಕೋವಿಡ್ -19 ಹಿನ್ನೆಲೆಯಲ್ಲಿ ಮುಖಗವಸುಗಳು ಮತ್ತು ಸ್ಯಾನಿಟೈಸರ್ ಗಳಿಗೆ ಬೇಡಿಕೆ ಹೆಚ್ಚಿದ ಕಾರಣಕ್ಕೆ ಅವುಗಳನ್ನು ಅವಶ್ಯಕ ಸಾಮಗ್ರಿಗಳ ಕಾಯ್ದೆ ಅಡಿಯಲ್ಲಿ ಅಧಿಸೂಚಿಸಿದೆ. ಮುಖಗವಸುಗಳು , ಸ್ಯಾನಿಟೈಸರ್ ಗಳ ದರಗಳು ಮತ್ತು ಅವುಗಳ ಉತ್ಪಾದನೆಯಲ್ಲಿ ಬಳಸುವ ಕಚ್ಚಾವಸ್ತುಗಳ ದರಗಳ ಮೇಲೆ ನಿಯಂತ್ರಣ ಹಾಕಲಾಗಿದೆ.

ಲಾಕ್ ಡೌನ್ ಕಾರಣದಿಂದಾಗಿ ಪೂರೈಕೆ ಸರಪಳಿಯಲ್ಲಿ ಯಾವುದೇ ಅಡೆ ತಡೆಗಳಿರದಂತೆ ಖಾತ್ರಿಪಡಿಸುವಂತೆ ರಾಜ್ಯಗಳಿಗೆ ಮಾರ್ಗದರ್ಶಿಗಳನ್ನು ನೀಡಲಾಗಿದೆ. ಮತ್ತು ಅವಶ್ಯಕ ಸಾಮಗ್ರಿಗಳ ದರವನ್ನು ನಿಯಂತ್ರಿಸುವಂತೆ ಸೂಚಿಸಲಾಗಿದೆ. .ಸಿ. ಕಾಯ್ದೆಯಡಿ ನಿರ್ಧಾರಗಳನ್ನು ಕೈಗೊಳ್ಳುವ ಎಲ್ಲಾ ಅಧಿಕಾರವನ್ನು ಕೇಂದ್ರವು ರಾಜ್ಯ ಸರಕಾರಗಳಿಗೆ ನೀಡಿದೆ.

ಆಹಾರ ಧಾನ್ಯಗಳ ಖರೀದಿ

12.05.2020 ವರೆಗೆ ಒಟ್ಟು 268.9 ಎಲ್.ಎಂ.ಟಿ. ಗೋಧಿಯನ್ನು (ಆರ್.ಎಂ.ಎಸ್. 2020-21) ಮತ್ತು 666.9 ಎಲ್.ಎಂ.ಟಿ. ಅಕ್ಕಿಯನ್ನು (ಕೆ.ಎಂ.ಎಸ್. 2019-20) ಖರೀದಿಸಲಾಗಿದೆ.

ಕೊನೆಯಿಂದ ಕೊನೆಯವರೆಗೆ ಕಂಪ್ಯೂಟರೀಕರಣ

ಒಟ್ಟು 90 % ಎಫ್.ಪಿ.ಎಸ್. ಅಟೋಮೇಶನ್ ನ್ನು -ಪಿ..ಎಸ್. ಗಳ ಮೂಲಕ ಮಾಡಲಾಗಿದೆ, 20 ರಾಜ್ಯಗಳಲ್ಲಿ ಇದು 100 % ಆಗಿದೆ.

90 % ಪಡಿತರ ಕಾರ್ಡುಗಳ ಆಧಾರ್ ಜೋಡಣೆಯನ್ನು ಸಾಧಿಸಲಾಗಿದೆ, 11 ರಾಜ್ಯಗಳಲ್ಲಿ / ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದು 100% ಆಗಿದೆ.

***



(Release ID: 1624247) Visitor Counter : 251