PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 15 MAY 2020 6:36PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.pnghttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಕೋವಿಡ್ -19 ಕುರಿತ ಸಚಿವರ ಗುಂಪಿನ 15ನೇ ಸಭೆ:  ಕೋವಿಡ್ 19 ಪ್ರಸಕ್ತ ಪರಿಸ್ಥಿತಿ, ನಿರ್ವಹಣೆಗಾಗಿ ಸನ್ನದ್ಧತೆ ಮತ್ತು ಕ್ರಮಗಳ ಕುರಿತು ಪರಾಮರ್ಶಿಸಿತು

ಕೋವಿಡ್ -19 ಕುರಿತು ಉನ್ನತ ಮಟ್ಟದ ಮಂತ್ರಿಗಳ (ಜಿಓಎಂ) 15 ನೇ ಸಭೆ ಇಂದು ದೆಹಲಿಯ ನಿರ್ಮಾಣ್ ಭವನದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ ವರ್ಧನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು,. ಕೋವಿಡ್-19 ರ ಕಂಟೈನ್ಮೆಂಟ್ ತಂತ್ರ ಮತ್ತು ನಿರ್ವಹಣಾ ಅಂಶಗಳ ಬಗ್ಗೆ ಮತ್ತು ಕೇಂದ್ರ ಮತ್ತು ವಿವಿಧ ರಾಜ್ಯಗಳು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಜಿಓಎಂ ಆಳವಾಗಿ ಚರ್ಚೆ ನಡೆಸಿತು. ಭಾರತದಲ್ಲಿ, ಒಟ್ಟು ಕೋವಿಡ್ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ 81,970 ಆಗಿದ್ದು, 2649 ಜನರು ಮೃತಪಟ್ಟಿದ್ದಾರೆ, ಮರಣ ಪ್ರಮಾಣ ದರ ಶೇ.3.23 ಆಗಿದೆ. ಈವರೆಗೆ 27,920 ಜನರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 1,685 ರೋಗಿಗಳು ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟು ಚೇತರಿಕೆಯ ಪ್ರಮಾಣ ಶೇ34.06 ಆಗಿದೆ. ಇದರ ಪರಿಣಾಮ ಡಬಲಿಂಗ್ ದರದ ಮೇಲೂ ಆಗಿದ್ದು, ಸುಧಾರಣೆ ಕಂಡಿದೆ. ಲಾಕ್ ಡೌನ್ ಗೂ ಮೊದಲು 3.4 ದಿನ ಇದ್ದದ್ದು, ಕಳೆದ ವಾರ 12.9 ದಿನವಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1624057

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಭಾರತೀಯ ಆರ್ಥಿಕತೆಗೆ ಬೆಂಬಲ ನೀಡಲು ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಮೂರನೇ ಕಂತಿನ ವಿವರಗಳನ್ನು ಪ್ರಸ್ತುತಪಡಿಸಿದರು

ವಿವರಗಳಿಗೆ: https://pib.gov.in/PressReleseDetail.aspx?PRID=1624104

ವಲಸಿಗರು, ರೈತರು, ಸಣ್ಣ ವ್ಯಾಪಾರಸ್ಥರು, ಬೀದಿ ಪದಿ ವ್ಯಾಪಾರಿಗಳು ಸೇರಿದಂತೆ ಬಡವರ ಬೆಂಬಲಕ್ಕಾಗಿ ದೀರ್ಘಕಾಲೀನ ಮತ್ತು ಅಲ್ಪ ಕಾಲೀನ ಕ್ರಮಗಳನ್ನು ಹಣಕಾಸು ಸಚಿವರು ಪ್ರಕಟಿಸಿದರು

ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ವಲಸಿಗ ನಗರ ಬಡವರು, ಸಣ್ಣ ವ್ಯಾಪಾರಿಗಳು ಸ್ವಯಂ ಉದ್ಯೋಗಿಗಳು, ಸಣ್ಣ ರೈತರು ವಿಶೇಷವಾಗಿ  ಎದುರಿಸುತ್ತಿರುವ ಕಷ್ಟಗಳನ್ನು ನಿವಾರಿಸುವ ಕುರಿತಂತೆ  2 ನೇ ಹಂತದ ಕ್ರಮಗಳನ್ನು ಪ್ರಕಟಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ. ನಿರ್ಮಲಾ ಸೀತಾರಾಮನ್ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು, ಇದರಲ್ಲಿ ವಲಸಿಗರು, ರೈತರು, ಸಣ್ಣ ಉದ್ಯಮಗಳು ಮತ್ತು ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಬಡವರಿಗೆ ಸಹಾಯ ಮಾಡುವ ಅಲ್ಪಕಾಲೀನ ಮತ್ತು ದೀರ್ಘಕಾಲೀನ ಕ್ರಮಗಳನ್ನು ವಿವರಿಸಿದರು.

ಇವುಗಳಲ್ಲಿ ಕೆಳಗಿನವ ಸೇರಿವೆ: ವಲಸಿಗರಿಗೆ 2 ತಿಂಗಳವರೆಗೆ ಉಚಿತ ಆಹಾರ ಧಾನ್ಯ ಸರಬರಾಜು; ಮಾರ್ಚ್ 20, 2021ರೊಳಗೆ ವಲಸಿಗರಿಗೆ ಭಾರತದ ಯಾವುದೇ ನ್ಯಾಯ ಬೆಲೆ ಅಂಗಡಿಗಳಿಂದ ಪಿಡಿಎಸ್ (ಪಡಿತರ) ಲಭ್ಯತೆಗೆ ಅನುವು ಮಾಡಿಕೊಡುವ ತಂತ್ರಜ್ಞಾನ ವ್ಯವಸ್ಥೆಯ ಬಳಕೆ –ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್; ವಲಸೆ ಕಾರ್ಮಿಕರಿಗೆ ಮತ್ತು ನಗರ ಬಡವರಿಗೆ ಕೈಗೆಟುಕುವ ದರದ ಬಾಡಿಗೆ. ವಸತಿ ಸಂಕೀರ್ಣಗಳ ಯೋಜನೆ; ಮುದ್ರಾ ಶಿಶು ಸಾಲ ಪಡೆದವರಿಗೆ 12 ತಿಂಗಳುಗಳವರೆಗೆ ಶೇ2 ಬಡ್ಡಿ ಸಹಾಯಧನ- ರೂ. 1500 ಕೋಟಿ ಪರಿಹಾರ; ಬೀದಿ ಬದಿ ಮಾರಾಟಗಾರರಿಗೆ 5000 ಕೋಟಿ ರೂ. ಸಾಲ ಸೌಲಭ್ಯ,  ಪಿಎಂಎವೈ (ನಗರ) ಅಡಿಯಲ್ಲಿ ಎಂಐಜಿಗೆ ಸಬ್ಸಿಡಿ ಸಂಪರ್ಕಿತ ಸಾಲ ಯೋಜನೆಯನ್ನು ವಿಸ್ತರಿಸುವ ಮೂಲಕ ವಸತಿ ವಲಯ ಮತ್ತು ಮಧ್ಯಮ ಆದಾಯದ ಗುಂಪಿಗೆ 70,000 ಕೋಟಿ ರೂ. ಚೈತನ್ಯ; ಕ್ಯಾಂಪಾ ನಿಧಿ ಹಣವನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಸಲು 6,000 ಕೋಟಿ ರೂ. ; ನಬಾರ್ಡ್ ಮೂಲಕ ರೈತರಿಗೆ 30,000 ಕೋಟಿ ರೂ. ಹೆಚ್ಚುವರಿ ತುರ್ತು ಕಾರ್ಯ ಬಂಡವಾಳ; ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 2.5 ಕೋಟಿ ರೈತರಿಗೆ 2 ಲಕ್ಷ ಕೋಟಿ ರೂ. ಕಡಿಮೆ ಬಡ್ಡಿ ದರದ ಸಾಲ.

ವಿವರಗಳಿಗೆ: https://pib.gov.in/PressReleseDetail.aspx?PRID=1623862

ಲಾಕ್ ಡೌನ್ ಹಿನ್ನೆಲೆಯಲ್ಲಿ ಡೈರಿ ವಲಯಕ್ಕೆ ಕಾರ್ಯ ಬಂಡವಾಳದ ಮೇಲೆ ಬಡ್ಡಿ ಸಹಾಯಧನ

ಡೈರಿ ವಲಯದ ಮೇಲೆ ಕೋವಿಡ್ -19 ರ ಆರ್ಥಿಕ ಪರಿಣಾಮವನ್ನು ಸರಿದೂಗಿಸಲು, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಡೈರಿ ಸಹಕಾರಿ ಮತ್ತು ಡೈರಿ ಚಟುವಟಿಕೆಗಳಲ್ಲಿ ತೊಡಗಿರುವ ರೈತ ಉತ್ಪಾದಕ ಸಂಸ್ಥೆಗಳನ್ನು ಬೆಂಬಲಿಸಲು "ಡೈರಿ ವಲಯಕ್ಕಾಗಿ ಕಾರ್ಯ ಬಂಡವಾಳ ಸಾಲದ ಮೇಲಿನ ಬಡ್ಡಿ ಸಹಾಯಧನ" ಎಂಬ ಹೊಸ ಯೋಜನೆಯನ್ನು ಪರಿಚಯಿಸಿದ್ದು, 2020-21ರ ಸಾಲಿನಲ್ಲಿ ಅನುಷ್ಠಾನಗೊಳ್ಳಲಿದೆ. ಸಹಕಾರಿ ಮತ್ತು ರೈತರ ಸ್ವಾಮ್ಯದ ಹಾಲು ಉತ್ಪಾದಕ ಕಂಪನಿಗಳ ಕಾರ್ಯ ಬಂಡವಾಳದ ಅಗತ್ಯಗಳನ್ನು ಪೂರೈಸುವ ಸಲುವಾಗಿ, ನಿಗದಿತ ವಾಣಿಜ್ಯ ಬ್ಯಾಂಕುಗಳು / ಆರ್‌.ಆರ್‌.ಬಿಗಳು / ಸಹಕಾರಿ ಬ್ಯಾಂಕುಗಳು / ಹಣಕಾಸು ಸಂಸ್ಥೆಗಳಿಂದ ತೆಗೆದುಕೊಳ್ಳಲಾದ ಕಾರ್ಯ ಬಂಡವಾಳದ ಸಾಲಕ್ಕೆ 2020 ರ ಏಪ್ರಿಲ್ 1 ರಿಂದ 2021 ರ ಮಾರ್ಚ್ 31 ರವರೆಗೆ ಸಹಕಾರ ಸಂಘಗಳು/ಎಫ್.ಪಿ.ಓ.ಗಳು ಹಾಲನ್ನು ಸಂರಕ್ಷಿಸಲು ಸಂರಕ್ಷಿತ ಉತ್ಪನ್ನವಾಗಿ ಪರಿವರ್ತಿಸುವುದಕ್ಕಾಗಿ ಮತ್ತು ಇತರ ಹಾಲಿನ ಉತ್ಪನ್ನಕ್ಕಾಗಿ  ಪಡೆದ ಸಾಲಕ್ಕೆ ಬಡ್ಡಿ ಸಹಾಯಧನ ನೀಡಲಾಗುವುದು.

ವಿವರಗಳಿಗೆ: https://pib.gov.in/PressReleseDetail.aspx?PRID=1623843

ರಾಷ್ಟ್ರಪತಿ ಭವನ ವೆಚ್ಚವನ್ನು ತಗ್ಗಿಸುವ ಮೂಲಕ ಇತರರಿಗೆ ಮಾದರಿಯಾಗಿದೆ

ಕೋವಿಡ್ -19 ಪರಿಹಾರ ಕ್ರಮಗಳಿಗಾಗಿ ಹೆಚ್ಚಿನ ಸಂಪನ್ಮೂಲಗಳನ್ನು ಲಭ್ಯಗೊಳಿಸುವ ಕ್ರಮದ ಭಾಗವಾಗಿ, ಭಾರತದ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು ಮಾರ್ಚ್‌ ನಲ್ಲಿ ಪಿಎಂ-ಕೇರ್ಸ್ ನಿಧಿಗೆ ಒಂದು ತಿಂಗಳ ಸಂಬಳವನ್ನು ನೀಡಿದ ನಂತರ, ಒಂದು ವರ್ಷ ಕಾಲ ತಮ್ಮ ವೇತನದ ಶೇ.30ರಷ್ಟನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ವೆಚ್ಚವನ್ನು ತಗ್ಗಿಸುವುದರ ಮೂಲಕ, ಸಂಪನ್ಮೂಲಗಳ ಅತ್ಯುತ್ತಮ ಬಳಕೆಯನ್ನು ಮಾಡುವ ಮೂಲಕ ಉಳಿಸಿದ ಹಣವನ್ನು ಕೋವಿಡ್ -19 ಎದುರಿಸಲು ಮತ್ತು ಜನರ ಆರ್ಥಿಕ ಸಂಕಷ್ಟ ತಗ್ಗಿಸಲು ನೀಡುವ ಮೂಲಕ ಇತರರಿಗೆ ರಾಷ್ಟ್ರಪತಿ ಭವನ ಮಾದರಿ ಆಗಬೇಕು ಎಂದು ರಾಷ್ಟ್ರಪತಿಗಳು ಸೂಚನೆ ನೀಡಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1623936

ಶ್ರೀ ಬಿಲ್ ಗೇಟ್ಸ್ ಅವರೊಂದಿಗೆ ಪ್ರಧಾನಮಂತ್ರಿಗಳ ಸಂವಾದ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಹ- ಅಧ್ಯಕ್ಷರಾದ ಶ್ರೀ ಬಿಲ್ ಗೇಟ್ಸ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು. ಕೋವಿಡ್-19ಕ್ಕೆ ಜಾಗತಿಕ ಸ್ಪಂದನೆ ಮತ್ತು ಸಾಂಕ್ರಾಮಿಕ ರೋಗವನ್ನು ಎದುರಿಸಲು ವೈಜ್ಞಾನಿಕ ನಾವೀನ್ಯತೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕುರಿತು ಜಾಗತಿಕ ಸಮನ್ವಯದ ಮಹತ್ವವನ್ನು ಚರ್ಚಿಸಿದರು. ಸಂದರ್ಭದಲ್ಲಿ ಗಣ್ಯರು ಪರಾಮರ್ಶಿಸಿದ ಕೆಲವು ವಿಚಾರಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೊನೆಯ ಮೈಲಿಗೂ ಆರೋಗ್ಯ ಚಿಕಿತ್ಸಾ ಸೌಲಭ್ಯ ದೊರಕಿಸುವ ಭಾರತದ ಅನನ್ಯ ಮಾದರಿಯನ್ನು ಮೂಡಿಸುವುದು, ಭಾರತ ಸರ್ಕಾರ ಅಭಿವೃದ್ಧಿ ಪಡಿಸಿದ ಪರಿಣಾಮಕಾರಿ ಸಂಪರ್ಕ-ಪತ್ತೆ ಮೊಬೈಲ್ ಅಪ್ಲಿಕೇಶನ್‌ ನ ಪ್ರಸಾರ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಬೃಹತ್ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಲಸಿಕೆಗಳು ಮತ್ತು ಚಿಕಿತ್ಸಕಗಳ ಉತ್ಪಾದನೆಯನ್ನು ಅವುಗಳ ಆವಿಷ್ಕಾರದ ಮೇಲೆ ಅಳೆಯುವ  ಔಷಧೀಯ ಸಾಮರ್ಥ್ಯ ಹೆಚ್ಚಿಸುವುದು.

ವಿವರಗಳಿಗೆ: https://pib.gov.in/PressReleseDetail.aspx?PRID=1623944

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಡೆನ್ಮಾರ್ಕ್ ಪ್ರಧಾನಮಂತ್ರಿ ಘನತೆವೆತ್ತ ಮೆಟ್ಟೆ ಫ್ರೆಡೆರಿಕ್ಸೆನ್ ಅವರ ನಡುವೆ ದೂರವಾಣಿ ಸಂಭಾಷಣೆ

ಡೆನ್ಮಾರ್ಕ್‌ನ ಪ್ರಧಾನ ಮಂತ್ರಿ ಘನತೆವೆತ್ತ ಶ್ರೀಮತಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರೊಂದಿಗೆ ಪ್ರಧಾನಿಯವರು ಇಂದು ದೂರವಾಣಿ ಮೂಲಕ ಸಂಭಾಷಣೆ ನಡೆಸಿದರು. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಉಭಯ ದೇಶಗಳಲ್ಲಿ ಕೈಗೊಂಡ ಕ್ರಮಗಳನ್ನು ಉಭಯ ನಾಯಕರು ತುಲನೆ ಮಾಡಿದರು. ಸೋಂಕಿನ ಹೆಚ್ಚಳವಾಗದಂತೆ ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ಡೆನ್ಮಾರ್ಕ್‌ನ ಯಶಸ್ಸನ್ನು ಪ್ರಧಾನಿಯವರು ಶ್ಲಾಘಿಸಿದರು. ಪರಸ್ಪರರ ಅನುಭವದಿಂದ ಕಲಿಯಲು ಭಾರತೀಯ ಮತ್ತು ಡ್ಯಾನಿಶ್ ತಜ್ಞರು ಸಂಪರ್ಕದಲ್ಲಿರಲು ಅವರು ಸಮ್ಮತಿಸಿದರು.ಕೋವಿಡ್ ನಂತರದ ವಿಶ್ವದಲ್ಲಿ ಎರಡೂ ರಾಷ್ಟ್ರಗಳು ಒಗ್ಗೂಡಿ ನಡೆಯುವ ಮಾರ್ಗೋಪಾಯಗಳ ಕುರಿತಂತೆ ಚರ್ಚಿಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1623876

ಭಾರತದ ವಿದೇಶ ವ್ಯಾಪಾರ: ಏಪ್ರಿಲ್ 2020

ಏಪ್ರಿಲ್ 2020ರಲ್ಲಿ ಭಾರತದ ಒಟ್ಟಾರೆ ರಫ್ತು (ವಾಣಿಜ್ಯ ಮತ್ತು ಸೇವೆಗಳೆರಡೂ ಸೇರಿ) 27.96 ಶತಕೋಟಿ ಅಮೆರಿಕನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಋಣಾತ್ಮಕ (-) 36.65 ವೃದ್ಧಿ ಪ್ರದರ್ಶಿಸಿತ್ತು. ಏಪ್ರಿಲ್ 2020ರಲ್ಲಿ ಒಟ್ಟಾರೆ ಆಮದನ್ನು 27.80 ಶತಕೋಟಿ ಅಮೆರಿಕನ್ ಡಾಲರ್ ಎಂದು ಅಂದಾಜು ಮಾಡಲಾಗಿದ್ದು, ಕಳೆದ ವರ್ಷ ಇದು  ಋಣಾತ್ಮಕ (-) 47.36 ವೃದ್ಧಿ ಪ್ರದರ್ಶಿಸಿತ್ತು

ವಿವರಗಳಿಗೆ: https://pib.gov.in/PressReleseDetail.aspx?PRID=1624102

ಭಾರತ ಜಿ 20 ರಾಷ್ಟ್ರಗಳಿಗೆ ಅತ್ಯಾವಶ್ಯಕ ಔಷಧಗಳು, ಚಿಕಿತ್ಸೆ ಮತ್ತು ಲಸಿಕೆಗಳು ಕೈಕೆಟಕುವ ದರದಲ್ಲಿ ದೊರಕುವುದನ್ನು ಖಾತ್ರಿಪಡಿಸುವಂತೆ ಕರೆ ನೀಡಿದೆ

ಕೈಗೆಟಕುವ ದರದಲ್ಲಿ ಅಗತ್ಯ ಔಷಧಗಳು, ಚಿಕಿತ್ಸೆಗಳು ಮತ್ತು ಲಸಿಕೆಗಳ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಭಾರತ, ಜಿ-20 ರಾಷ್ಟ್ರಗಳಿಗೆ ಕರೆ ನೀಡಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಎರಡನೇ ಜಿ-20 ರಾಷ್ಟ್ರಗಳ ವರ್ಚ್ಯುಯಲ್ ವಾಣಿಜ್ಯ ಮತ್ತು ಬಂಡವಾಳ ಹೂಡಿಕೆ ಸಚಿವರ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಶ್ ಗೋಯಲ್ ಅವರು, ಕೋವಿಡ್-19 ಸಾಂಕ್ರಾಮಿಕದಿಂದಾಗಿ ಇಡೀ ವಿಶ್ವದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಆ ಕಷ್ಟಗಳನ್ನು ದೂರಮಾಡಲು ಸಮಗ್ರ ಮತ್ತು ತಕ್ಷಣದ ಕ್ರಮಗಳಿಗೆ ಜಿ-20 ರಾಷ್ಟ್ರಗಳು ಮೊದಲ ಆದ್ಯತೆ ನೀಡಬೇಕು ಎಂದರು. ಭಾರತ ವಿಸ್ತೃತವಾಗಿ ವಿಶ್ವದ ಔಷಧಾಲಯ ಎಂದೇ ಪರಿಗಣಿತವಾಗಿದ್ದು, ಅದು ರೋಗಕ್ಕೆ ಸಮರ್ಥ ಚಿಕಿತ್ಸೆ ಮತ್ತು ಲಸಿಕೆ ಅಭಿವೃದ್ಧಿ ಪಡಿಸುವ ಜಾಗತಿಕ ಪ್ರಯತ್ನದಲ್ಲಿ ಸಹಯೋಗ ನೀಡಿದೆ ಎಂದು ಸಚಿವರು ತಿಳಿಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1623888

ದಿನದಲ್ಲಿ 4 ರೈಲಿನಿಂದ ದಿನಕ್ಕೆ 145 ರೈಲಿನವರೆಗೆ, ಭಾರತೀಯ ರೈಲ್ವೆ ತನ್ನ ಮರಳಿ ಮನೆಗೆ ಅಭಿಯಾನವನ್ನು ಶ್ರಮಿಕ್ ವಿಶೇಷ ರೈಲುಗಳ ಮೂಲಕ ದೊಡ್ಡ ರೀತಿಯಲ್ಲಿ ಹೆಚ್ಚಿಸಿದೆ

2020ರ ಮೇ 1ರಂದು ಕೇವಲ 4 ರೈಲಿನಿಂದ, ಕೆವಲ 15 ದಿನಗಳಲ್ಲಿ ಭಾರತೀಯ ರೈಲ್ವೆ 1000ಕ್ಕೂ ಹೆಚ್ಚು ಇಂಥ ಶ್ರಮಿಕ ವಿಶೇಷ ರೈಲುಗಳ ಮೂಲಕ ಕಾರ್ಯಚರಣೆ ನಿರ್ವಹಿಸುತ್ತಿದೆ. ಗಣನೀಯ ಸಾಧನೆಯಲ್ಲಿ 2020ರ ಮೇ 14ರಂದು ಒಟ್ಟು 145 ಶ್ರಮಿಕ ವಿಶೇಷ ರೈಲುಗಳು ವಿವಿಧ ರಾಜ್ಯಗಳಿಂದ ಕಾರ್ಯಾಚರಣೆ ಮಾಡಿದ್ದು, 2.10 ಲಕ್ಷ ಪ್ರಯಾಣಿಕರನ್ನು ಮರಳಿ ಅವರ ತವರು ರಾಜ್ಯಗಳಿಗೆ ತಲುಪಿಸಿದೆ.  ಇದೇ ಮೊದಲ ಬಾರಿಗೆ ಒಂದೇ ದಿನ ಶ್ರಮಿಕ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ 2 ಲಕ್ಷ ದಾಟಿದೆ. ಈವರೆಗೆ 12 ಲಕ್ಷ ಪ್ರಯಾಣಿಕರನ್ನು ಶ್ರಮಿಕ ರೈಲುಗಳ ಮೂಲಕ ಅವರ ತವರು ರಾಜ್ಯಗಳಿಗೆ ತಲುಪಿಸಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1624059

ಲಾಕ್ಡೌನ್ ಸಮಯದಲ್ಲಿ ಬಾಕಿ ಹಣವನ್ನು ಜಮಾ ಮಾಡುವುದು ತಡವಾಗಿದ್ದಕ್ಕಾಗಿ ದಂಡ ವಿಧಿಸುವುದರಿಂದ ಇಪಿಎಫ್ ಮತ್ತು ಎಂ.ಪಿ. ಕಾಯಿದೆ, 1952 ಅಡಿಯಲ್ಲಿ ಸ್ಥಾಪನೆಗಳಿಗೆ ಪರಿಹಾರ

ಕೋವಿಡ್ 19 ನಿಗ್ರಹಿಸುವ ಸಲುವಾಗಿ ಸರ್ಕಾರ ಪ್ರಕಟಿಸಿದ ದೀರ್ಘ ಕಾಲದ ಲಾಕ್ ಡೌನ್ ನಿಂದಾಗಿ ಮತ್ತು ಸಾಂಕ್ರಾಮಿಕದ ಇತರ ತೊಂದರೆಗಳಿಂದ, ಇಪಿಎಫ್ ಮತ್ತು ಎಂ.ಪಿ.ಕಾಯಿದೆ 1952 ಅಡಿ ಬರುವ ಸಂಸ್ಥೆಗಳು ಸಂಕಷ್ಟದಲ್ಲಿದ್ದು, ಸಾಮಾನ್ಯವಾಗಿ ಕಾರ್ಯನಿರ್ವಹಣೆ ಮತ್ತು ಕಾಲಮಿತಿಯೊಳಗೆ ಶಾಸನಾತ್ಮಕ ದೇಣಿಗೆ ಪಾವತಿ ಮಾಡಲಾಗದ ಸ್ಥಿತಿಯಲ್ಲಿವೆ. ಸ್ಥಾಪನೆಗಳು ಸರಿಯಾದ ಸಮಯದೊಳಗೆ ತಮ್ಮ ದೇಣಿಗೆ ಜಮಾ ಮಾಡಲು ಕಷ್ಟಪಡುತ್ತಿರುವುದನ್ನು ಪರಿಗಣಿಸಿ ಅಥವಾ ಲಾಕ್ ಡೌನ್ ಯಾವುದೇ ಅವಧಿಯಲ್ಲಿ ಆಡಳಿತಾತ್ಮಕ ಶುಲ್ಕ ಬಾಕಿ ಪಾವತಿ ವಿಳಂಬವನ್ನು ಬಾಕಿ ಎಂದು ಪರಿಗಣಿಸುವುದಿಲ್ಲ, ಅಂತಹ ವಿಳಂಬಕ್ಕೆ ಯಾವುದೇ ದಂಡ ವಿಧಿಸಲಾಗುವುದು. 

ವಿವರಗಳಿಗೆ: https://pib.gov.in/PressReleseDetail.aspx?PRID=1624093

ಸಿಬಿಎಸ್ಇ ಪರೀಕ್ಷೆಯಲ್ಲಿ ಅನುತ್ತೀರ್ಣರಾದ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಆಧಾರಿತ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಿದೆ

ಕೋವಿಡ್ 19ರಿಂದ ಅಭೂತಪೂರ್ವವಾದ ಸನ್ನಿವೇಶ ನಿರ್ಮಾಣವಾಗಿರುವುದರಿಂದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಸಿಬಿಎಸ್ಇಗೆ 9 ಮತ್ತು 11 ತರಗತಿಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ಎಲ್ಲ ವಿದ್ಯಾರ್ಥಿಗಳಿಗೆ ಆನ್ ಲೈನ್/ಆಫ್ ಲೈನ್ ಟೆಸ್ಟ್ ಗೆ ಹಾಜರಾಗುವ ಅವಕಾಶ ಕಲ್ಪಿಸಲು ಸಲಹೆ ಮಾಡಿದ್ದಾರೆ. ಆ ಪ್ರಕಾರವಾಗಿ, ಸಿಬಿಎಸ್.ಇ ಸಂಬಂಧ ಅಧಿಸೂಚನೆ ಹೊರಡಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1623867

ನಾಮ್ ನೊಂದಿಗೆ 38 ಹೊಸ ಮಂಡಿಗಳ ಜೋಡಣೆ

38 ಹೆಚ್ಚುವರಿ ಮಂಡಿಗಲನ್ನು ನಾಮ್ ವೇದಿಕೆಯೊಂದಿಗೆ ಇಂದು ಜೋಡಣೆ ಮಾಡಲಾಗಿದ್ದು, ನಿಗದಿತ ಗುರಿಯಂತೆ 415 ಮಂಡಿಗಳನ್ನು ಜೋಡಣೆ ಮಾಡುವ ಗುರಿ ಸಾಧನೆಯ ಮೈಲಿಗಲ್ಲು ಸಾಧಿಸಿದೆ. ಜೋಡಣೆಯಾದ 38 ಮಂಡಿಗಳಲ್ಲಿ ಮಧ್ಯಪ್ರದೇಶದ (19)  ತೆಲಂಗಾಣ (10), ಮಹಾರಾಷ್ಟ್ರ (4) ಮತ್ತು ಗುಜರಾತ್, ಹರಿಯಾಣ, ಪಂಜಾಬ್, ಕೇರಳ ಮತ್ತು ಜೆ ಮತ್ತು ಕೆ ನಿಂದ ತಲಾ ಒಂದು (1).  ಹಂತ 1 ರಲ್ಲಿ 585 ಮಂಡಿಗಳ ಒಟ್ಟಾರೆ ಯಶಸ್ಸಿನೊಂದಿಗೆ ಮತ್ತು 2 ನೇ ಹಂತದಲ್ಲಿ 415 ಹೊಸ ಮಂಡಿಗಳನ್ನು ಸಂಯೋಜಿಸಲು ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವುದರೊಂದಿಗೆ, ಇ-ನ್ಯಾಮ್ ವೇದಿಕೆಯನ್ನು ಈಗ 18 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 1000 ಮಂಡಿಗಳನ್ನು ಹೊಂದಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1624083

ರಕ್ಷಣಾ ಸಚಿವರು ಇಂದು ಭಾರತೀಯ ಕರಾವಳಿ ಕಾವಲು ಪಡೆ ಹಡಗು ಸಾಚೆಟ್ ಮತ್ತು ಎರಡು ಬೇಧಕ ದೋಣಿಗಳನ್ನು ನಿಯುಕ್ತಿಗೊಳಿಸಿದರು

ಶ್ರೀ ರಾಜನಾಥ್ ಸಿಂಗ್ ಅವರು ಭಾರತೀಯ ಕರಾವಳಿ ಭದ್ರತಾ ಪಡೆ ಹಡಗು (ಐಸಿಜಿಎಸ್) ಸಾಚೆಟ್ ಮತ್ತು ಎರಡು ಬೇಧಕ ದೋಣಿಗಳಾದ (ಐಬಿಎಸ್.) ಸಿ 450 ಮತ್ತು ಸಿ-451 ಅನ್ನು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಗೋವಾದಲ್ಲಿ ನಿಯುಕ್ತಿಗೊಳಿಸಿದರು. ಐಸಿಜಿಎಸ್ ಸ್ಯಾಚೆಟ್, ಐದು ಆಫ್ ಶೋರ್ ಪೆಟ್ರೋಲ್ ಹಡಗು (ಓಪಿವಿಗಳು)ಗಳ ಪೈಕಿ ಮೊದಲನೆಯದಾಗಿದ್ದು, ಅದನ್ನು ಗೋವಾ ಶಿಪ್ ಯಾರ್ಡ್ ಲಿಮಿಟೆಡ್ (ಜಿಎಸ್ಎಲ್) ವಿನ್ಯಾಸಗೊಳಿಸಿ ದೇಶೀಯವಾಗಿ ನಿರ್ಮಾಣ ಮಾಡಿದ್ದು, ಸುಸಜ್ಜಿತ ಪಥದರ್ಶಕ ಮತ್ತು ಸಂವಹನ ಸಾಧನಗಳನ್ನೂ ಅಳವಡಿಸಲಾಗಿದೆ. ಐಸಿಜಿ ಮತ್ತು ಜಿಎಸ್ಎಲ್ ಅನ್ನು ಡಿಜಿಟಲ್ ಮಾಧ್ಯಮದ ಮೂಲಕ ನಿಯುಕ್ತಿಗೊಳಿಸಿದ ಶ್ರೀ ರಾಜನಾಥ್ ಸಿಂಗ್, ಈ ಹಡಗುಗಳ ಕಾರ್ಯಾಚರಣೆ ಒಂದು ಮಹತ್ವದ ಮೈಲಿಗಲ್ಲಾಗಿದ್ದು, ಭಾರತೀಯ ಕರಾವಳಿ ಸಾಮರ್ಥ್ಯವನ್ನು ವರ್ಧಿಸುವ ಪ್ರಕ್ರಿಯೆಯಾಗಿದೆ. ಕೋವಿಡ್ 19ರ ಸವಾಲಿನ ನಡುವೆಯೂ ದೇಶದ ಸುರಕ್ಷತೆ ಮತ್ತು ಭದ್ರತೆಯಲ್ಲಿ ಇದು ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದರು. ನಮ್ಮ ಸಮುದ್ರ ಕಾವಲು ಶಕ್ತಿಯನ್ನು ಹೆಚ್ಚಿಸುತ್ತದೆ, ಐಸಿಜಿ ಮತ್ತು ಭಾರತೀಯ ಹಡಗು ನಿರ್ಮಾಣ ಕೈಗಾರಿಕೆ ನಮ್ಮ ದೇಶದ ಹೆಮ್ಮೆಯಾಗಿದೆ ಎಂದರು.

ವಿವರಗಳಿಗೆ: https://pib.gov.in/PressReleseDetail.aspx?PRID=1624023

ಜಲ ಜೀವನ ಅಭಿಯಾನದಡಿ ಗ್ರಾಮೀಣ ಕುಡಿಯುವ ನೀರಿನ ವಲಯದಲ್ಲಿ ಗುಜರಾತ್ ಪ್ರಾಯೋಗಿಕವಾಗಿ ಸೆನ್ಸಾರ್ ಆಧಾರಿತ ಸೇವಾ ಪೂರೈಕೆ ನಿಗಾ ವ್ಯವಸ್ಥೆಯನ್ನು ತಂದಿದೆ

ಗುಜರಾತ್ ಸೆನ್ಸಾರ್ ಆಧಾರಿತ ಸೇವಾ ಪೂರೈಕೆ ನಿಗಾ ವ್ಯವಸ್ಥೆಯನ್ನು ಜಲ್ ಜೀವನ ಅಭಿಯಾನ (ಜೆಜೆಎಂ) ಅಡಿಯಲ್ಲಿ ಗ್ರಾಮೀಣ ನೀರು ವಲಯಕ್ಕೆ ಅಳವಡಿಸಲು ಸಜ್ಜಾಗಿದೆ. ಪ್ರಾಯೋಗಿಕ ವ್ಯವಸ್ಥೆ ಈಗಾಗಲೇ ರಾಜ್ಯದ ಎರಡು ಜಿಲ್ಲೆಗಳಲ್ಲಿ ಪ್ರಗತಿಯಲ್ಲಿದ್ದು, ನೀರು ಪೂರೈಕೆಯ ಕಾರ್ಯಾಚರಣೆಯ ನಿಗಾ ಇಟ್ಟಿದೆ, ಅಂದರೆ, ಕುಡಿಯುವ ನೀರಿನ ಅಗತ್ಯ ಪ್ರಮಾಣ ಮತ್ತು ನಿಗದಿತ ಗುಣಮಟ್ಟದ ನೀರನ್ನು ಪ್ರತಿ ಗ್ರಾಮೀಣ ಮನೆಗೆ ನಿಯಮಿತವಾಗಿ ಮತ್ತು ದೀರ್ಘ ಕಾಲದ ಆಧಾರದಲ್ಲಿ ಪೂರೈಸಲಾಗುತ್ತಿದೆಯೇ ಎಂದು ನಿಗಾ ಇಡುತ್ತದೆ. ಪ್ರಸಕ್ತ ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎಲ್ಲರಿಗೂ ನೀರು ಲಭ್ಯವಾಗುವಂತೆ ಮಾಡುವ ಅಗತ್ಯವಿದ್ದು, ಇದಕ್ಕಾಗಿ ಭಾರತ ಸರ್ಕಾರ, ರಾಜ್ಯಗಳಿಗೆ ಸೂಚನೆ ನೀಡಿ ಆದ್ಯತೆಯ ಮೇಲೆ ನೀರು ಪೂರೈಕೆ ಸಂಬಂಧಿಕ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ತಿಳಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1623821

ಶ್ರೀ ಅರ್ಜುನ್ ಮುಂಡಾ ಅವರು ಫೇಸ್ಬುಕ್ ಸಹಭಾಗಿತ್ವದಲ್ಲಿ ಭಾರತದಾದ್ಯಂತ ಬುಡಕಟ್ಟು ಯುವಕರ ಡಿಜಿಟಲ್ ಕೌಶಲ್ಯಕ್ಕಾಗಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಆರಂಭಿಸಿರುವ ಗೋಲ್ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಗೋಲ್ ಕಾರ್ಯಕ್ರಮವನ್ನು ಬುಡಕಟ್ಟು ಯುವಕರಿಗೆ ಡಿಜಿಟಲ್ ಮಾಧ್ಯಮದ ಮೂಲಕ ಮಾರ್ಗದರ್ಶನ ನೀಡಲು ವಿನ್ಯಾಸಗೊಳಿಸಲಾಗಿದೆ. ಡಿಜಿಟಲ್ ನಿಂದ ಶಕ್ತಗೊಂಡ ಕಾರ್ಯಕ್ರಮವು ಬುಡಕಟ್ಟು ಯುವಕರ ಸುಪ್ತ ಪ್ರತಿಭೆಯನ್ನು ಅನ್ವೇಷಿಸಲು ವೇಗವರ್ಧಕವಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ, ಇದು ಅವರ ವೈಯಕ್ತಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಮತ್ತು ಅವರ ಸಮಾಜದ ಸರ್ವತೋಮುಖ ಉನ್ನತಿಗಾಗಿ ಸಹಕಾರಿಯಾಗುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1624021

ಕೋವಿಡ್ 19 ವಿರುದ್ಧ ಹೋರಾಡಲು ಎನ್..ಪಿ..ಆರ್ ಗಳು ಸಕ್ರಿಯ ಪಾತ್ರ ವಹಿಸುತ್ತಿವೆ

ಕೋವಿಡ್ -19 ಕಂಟೈನ್ಮೆಂಟ್, ಗುರುತಿಸುವಿಕೆ ಮತ್ತು ಚಿಕಿತ್ಸೆಗಾಗಿ ವಿವಿಧ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ (ಎನ್‌.ಐ.ಪಿಇಆರ್)ಸಂಸ್ಥೆಗಳು ದೊಡ್ಡ ಸಂಖ್ಯೆಯ ಬಹುಮುಖಿ ಸಂಶೋಧನಾ ಪ್ರಸ್ತಾಪಗಳನ್ನು ಸೂಕ್ತ ಸಂಸ್ಥೆಗಳ ಅನುಮೋದನೆಗಾಗಿ ಸಲ್ಲಿಸಿವೆ. ಈ ಪ್ರಸ್ತಾಪಗಳ ಪ್ರಮುಖ ವಿಷಯಗಳು ಕೋವಿಡ್-19 ಆಂಟಿವೈರಲ್ ಏಜೆಂಟ್‌ಗಳನ್ನು ಗುರಿಯಾಗಿಸುವ ಪ್ರೋಟಿಯೇಸ್‌ನ ವಿನ್ಯಾಸ (ಎನ್.ಐ.ಪಿ.ಇ.ಆರ್-ಮೊಹಾಲಿ), ಎಫ್‌ಡಿಎ ಅನುಮೋದಿತ ಔಷಧ-ಡೇಟಾಬೇಸ್ (ಎನ್.ಐ.ಪಿ.ಇ.ಆರ್-ಮೊಹಾಲಿ ಮತ್ತು ರಾಯ್ ಭರೇಲಿ) ಬಳಸಿಕೊಂಡು ಕಂಪ್ಯೂಟೇಶನಲ್ ಮಾರ್ಗದರ್ಶಿ ಔಷಧ-ಮರುಹಂಚಿಕೆ, ಔಷಧ ಪರವಾದ ಔಷಧ ಪರಿವರ್ತನೆಗೆ ವಿಶ್ಲೇಷಣೆ ರೆಮ್ಡೆಸ್ವಿರ್ (ಎನ್ಐಪಿಇಆರ್, ಮೊಹಾಲಿ), ಅನಾರೋಗ್ಯ ಪೀಡಿತ ರೋಗಿಗಳಿಗೆ ಸಹಾಯಕ-ಚಿಕಿತ್ಸಾ ಆಧಾರಿತ ಮೂಗಿನ ಸ್ಪ್ರೇ (ಎನ್ಐಪಿಇಆರ್ -ಹೈದರಾಬಾದ್), ಕ್ವಾಂಟಮ್-ಡಾಟ್ ಆಧಾರಿತ ಮತ್ತು ಕ್ಷಿಪ್ರ ಕೋವಿಡ್-19 (ಎನ್ಐಪಿಇಆರ್ - ಅಹಮದಾಬಾದ್) ಪರೀಕ್ಷೆಗೆ ವಾಹಕತೆ ಆಧಾರಿತ ಜೈವಿಕ ಸೆನ್ಸಾರ್ ಅಭಿವೃದ್ಧಿ, ಮತ್ತು ಕುತೂಹಲಕಾರಿ ಅಧ್ಯಯನ ಕೋವಿಡ್ -19 ರ ಸಮಯದಲ್ಲಿ ಸ್ಟ್ರೋಕ್ ಸಂಭವಿಸುವಿಕೆಯ ನಿಯಂತ್ರಣ.

ವಿವರಗಳಿಗೆ: https://pib.gov.in/PressReleseDetail.aspx?PRID=1623835

ಕೋವಿಡ್ 19 ವಿರುದ್ಧ ಹೋರಾಡಲು ಎನ್ಐಪಿಇಆರ್-ಗುವಾಹಟಿ ನಾವಿನ್ಯಪೂರ್ಣ 3ಡಿ ಉತ್ಪನ್ನಗಳನ್ನು ವಿನ್ಯಾಸಗೊಳಿಸಿದೆ

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ – ಗುವಾಹಟಿ, ಕೋವಿಡ್ 19 ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ನೆರವಾಗಲು ಎರಡು ಉತ್ಪನ್ನಗಳನ್ನು ಸಿದ್ಧಪಡಿಸಿದೆ. ಮೊದಲನೆಯ ಉತ್ಪನ್ನ 3ಡಿ ಪ್ರಿಂಟೆಡ್ ಕೈ ಬಳಕೆ ಅಗತ್ಯವಿಲ್ಲದ ಬಾಗಿಲು, ಕಿಟಕಿ, ಕಪಾಟು (ವರ್ಚುಯಲ್ ಮತ್ತು ಹಾರಿಜಾಂಟಲ್), ರೆಫ್ರಿಜರೇಟರ್ ಹಿಡಿ ಅಥವಾ ಎಲಿವೇಟರ್ ಗುಂಡಿ ಒತ್ತದೆ ಬಾಗಿಲು ತೆಗೆಯುವ ಮತ್ತು ಮುಚ್ಚುವ ಸಾಧನ ಮತ್ತು ಲ್ಯಾಪ್ ಟಾಪ್/ಡೆಸ್ಕ್ ಟಾಪ್ ಕೀಬೋರ್ಡ್, ಸ್ವಿಚ್ ಬಟನ್ ಮುಟ್ಟದೆ ಆಫ್ ಮತ್ತು ಆನ್ ಮಾಡುವ ಸಾಧನ. ಇನ್ನು ಎರಡನೇ ಉತ್ಪನ್ನ ಮಾರಕ ಕೊರೊನಾ ವೈರಸ್ ಪ್ರಸರಣ ತಡೆಯುವ 3ಡಿ ಪ್ರಿಂಟೆಡ್ ಆಂಟಿಮೈಕ್ರೋಬೈಲ್ ಫೇಸ್ ಶೀಲ್ಡ್.

ವಿವರಗಳಿಗೆ: https://pib.gov.in/PressReleseDetail.aspx?PRID=1624068

ಪ್ರವಾಸೋದ್ಯಮ ಸಚಿವಾಲಯ ವೆಬಿನೇರ್ ಮೂಲಕ ಮೈಸೂರು:ಕ್ರಾಫ್ಟ್ ಕಾರ್ವಾನ್ ಆಫ್ ಕರ್ನಾಟಕ ಎಂಬ ಹೆಸರಿನಲ್ಲಿ ದೇಕೋ ಅಪ್ನಾ ದೇಶ್ ಸರಣಿಯಲ್ಲಿ ಶತಮಾನಗಳ ಹಳೆಯ ಕಲೆಯನ್ನು ಪ್ರದರ್ಶಿಸಿದೆ

ವಿವರಗಳಿಗೆ: https://pib.gov.in/PressReleseDetail.aspx?PRID=1624026

 

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ

 • ಪಂಜಾಬ್: ರಾಜ್ಯದಲ್ಲಿ ಹೆಚ್ಚು ಅಗತ್ಯವಿರುವ ಕೈಗಾರಿಕಾ ಪುನರುಜ್ಜೀವನಕ್ಕೆ ಅನುಕೂಲವಾಗುವಂತೆ, ಮತ್ತು ವಿವಿಧ ಕೈಗಾರಿಕಾ ಸಂಘಗಳು ವ್ಯಕ್ತಪಡಿಸಿದ ಕಳವಳಗಳಿಗೆ ಸ್ಪಂದಿಸಲು, ಪಂಜಾಬ್ ಮುಖ್ಯಮಂತ್ರಿ ಲುಧಿಯಾನದ ಸಣ್ಣ/ಗುಡಿ ಕೈಗಾರಿಕೆಗಳಿಗೆ ಲುಧಿಯಾನದ ಕಂಟೈನ್ಮೆಂಟ್ ಅಲ್ಲದ ಮಿಶ್ರ ಬಳಕೆಯ ಪ್ರದೇಶಗಳಲ್ಲಿ ತಕ್ಷಣ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಘಟಕಗಳಿಗೆ ಸಣ್ಣ ಉದ್ಯಮಗಳ ಮೇಲೆ ಅವಲಂಬಿತವಾಗಿರುವ ದೊಡ್ಡ ಕೈಗಾರಿಕೆಗಳನ್ನು ತೆರೆಯುವುದನ್ನು ಬೆಂಬಲಿಸುವುದು. ಪಂಜಾಬ್ ಶಿಕ್ಷಣ ಸಚಿವರು ರಾಜ್ಯದ ಪೋಷಕರಿಗೆ ದೊಡ್ಡ ಪರಿಹಾರ ನೀಡಿದ್ದು, ಆನ್ಲೈನ್ ಶಿಕ್ಷಣವನ್ನು ನೀಡುವ ಶಾಲೆಗಳಿಗೆ ಬೋಧನಾ ಶುಲ್ಕವನ್ನು ಮಾತ್ರ ವಿಧಿಸಲು ಅನುಮತಿಸಲಾಗುವುದು ಎಂದು ಹೇಳಿದ್ದಾರೆ. ಲಾಕ್ಡೌನ್ ಅವಧಿ ಮತ್ತು ಪ್ರವೇಶ ಶುಲ್ಕ, ಸಮವಸ್ತ್ರ ಅಥವಾ ಯಾವುದೇ ರೂಪದಲ್ಲಿ ಯಾವುದೇ ಶುಲ್ಕವನ್ನು ವಿದ್ಯಾರ್ಥಿಗಳಿಗೆ ವಿಧಿಸುವಂತಿಲ್ಲ. ರಾಷ್ಟ್ರವ್ಯಾಪಿ ವಿಪತ್ತಿನ ಹಿನ್ನೆಲೆಯಲ್ಲಿ 2020-21 ಶೈಕ್ಷಣಿಕ ವರ್ಷದಲ್ಲಿ ಶಾಲಾ ಆಡಳಿತ ಮಂಡಳಿಗಳು ಶುಲ್ಕ ಅಥವಾ ಇತರ ಯಾವುದೇ ಶುಲ್ಕವನ್ನು ಹೆಚ್ಚಿಸುವುದರಿಂದ ದೂರವಿರಬೇಕು ಎಂದು ಅವರು ಹೇಳಿದ್ದಾರೆ.
 • ಹರಿಯಾಣ: ವಿಶೇಷ ಕೋವಿಡ್ ಪ್ಯಾಕೇಜ್ ಎರಡನೇ ಹಂತವನ್ನು ಘೋಷಿಸಿದ್ದಕ್ಕಾಗಿ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಮುಖ್ಯಮಂತ್ರಿ ಧನ್ಯವಾದ ಅರ್ಪಿಸಿದ್ದು, ಆರ್ಥಿಕ ಪ್ಯಾಕೇಜ್ ವಲಸಿಗರಿಗೆ ಮತ್ತು ಹರಿಯಾಣದ ರೈತರಿಗೆ ಹೆಚ್ಚಿನ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.. ಎಂಎಸ್‌.ಎಂಇ ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಿಂದ ಹಿಡಿದು ರಿಯಲ್ ಎಸ್ಟೇಟ್ ಮತ್ತು ವಿದ್ಯುತ್ ವಿತರಣೆಯವರೆಗೆ ಮತ್ತು ಸಂಬಳ ಪಡೆಯುವವರಲ್ಲಿ ಆರ್ಥಿಕತೆಯ ಹೊಸ ಚೈತನ್ಯವನ್ನು ತುಂಬಲಿದೆ ಮತ್ತು ವಿವಿಧ ಆರ್ಥಿಕ ಕ್ಷೇತ್ರಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಕೇಂದ್ರ ಹಣಕಾಸು ಸಚಿವರು ಇಂದು ಮಾಡಿದ ವಿವಿಧ ಪ್ರಕಟಣೆಗಳು ತಿಳಿಸಿವೆ. ಹರಿಯಾಣ ಸರ್ಕಾರವು ತಮ್ಮ ರಾಜ್ಯಗಳಿಗೆ ಮರಳಲು ಉತ್ಸುಕರಾಗಿರುವ ವಲಸೆ ಕಾರ್ಮಿಕರನ್ನು ಕಳುಹಿಸುತ್ತಿದೆ. ಹರಿಯಾಣ ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಕಳುಹಿಸುವುದಷ್ಟೇ ಮುಖ್ಯವಲ್ಲ, ಆದರೆ ಅವರು ತಮ್ಮ ಪ್ರಯಾಣದ ಸಮಯದಲ್ಲಿ ಯಾವುದೇ ರೀತಿಯ ತೊಂದರೆಗಳನ್ನು ಎದುರಿಸದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
 • ಹಿಮಾಚಲ ಪ್ರದೇಶ: ರಾಜ್ಯದಲ್ಲಿ ಹೋಂ ಕ್ಯಾರೆಂಟೈನ್ ಸೌಲಭ್ಯಗಳ ಪರಿಣಾಮಕಾರಿ ನಿರ್ವಹಣೆ ಮತ್ತು ಕಾರ್ಯಗತಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಮುಂದೆ ಬರುವಂತೆ ಮುಖ್ಯಮಂತ್ರಿಗಳು ಗ್ರಾಮ ಪಂಚಾಯಿತಿಗಳ ಪ್ರಧಾನರು ಮತ್ತು ತಳಮಟ್ಟದ ಪ್ರಜಾಪ್ರಭುತ್ವ ಸಂಸ್ಥೆಗಳ ಇತರ ಚುನಾಯಿತ ಪ್ರತಿನಿಧಿಗಳಿಗೆ ಕರೆ ನೀಡಿದ್ದಾರೆ.. ಆಯಾ ಪ್ರದೇಶಗಳು, ರಾಜ್ಯ ಸರ್ಕಾರ ಪ್ರಾರಂಭಿಸಿರುವ ನಿಗಾಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಪಂಚಾಯತಿಯ ಪ್ರಧಾನ್ರುಗಳು ತಮ್ಮ ತುಂಬುಹೃದಯದ ಸಹಕಾರವನ್ನು ನೀಡಬೇಕೆಂದು ಮುಖ್ಯಮಂತ್ರಿಗಳು ಆಗ್ರಹಿಸಿದ್ದಾರೆ.. ಕಾರ್ಯಕ್ರಮವು ಹೋಂ ಕ್ಯಾರೆಂಟೈನ್ ನಲ್ಲಿರುವವರ ಮೇಲೆ ತೀವ್ರ ನಿಗಾ ಇಡಲು ಉದ್ದೇಶಿಸಿದೆ, ಹೀಗಾಗಿ ಅವರು ಕ್ವಾರಂಟೈನ್ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
 • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯ 1602 ಹೊಸ ಕರೋನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ 27,524ಕ್ಕೆ ತಲುಪಿದೆ. ರಾಜ್ಯದಲ್ಲಿ 20,441 ಸಕ್ರಿಯ ಪ್ರಕರಣಗಳಿದ್ದು, 6,059 ಜನರು ಚೇತರಿಸಿಕೊಂಡಿದ್ದಾರೆ ಎಂದು ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. ಮಹಾರಾಷ್ಟ್ರದ ಕೋವಿಡ್ ಹಾಟ್ಸ್ಪಾಟ್ ನಗರಗಳಲ್ಲಿ ಲಾಕ್ಡೌನ್ ವಿಸ್ತರಿಸುವ ಸಾಧ್ಯತೆಯ ವರದಿಗಳ ನಡುವೆ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇಂದು ಎನ್‌.ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಸಭೆ ನಡೆಸಿ ರಾಜ್ಯಕ್ಕೆ ಸಂಬಂಧಿಸಿದ ವ್ಯಾಪಕ ವಿಷಯಗಳ ಬಗ್ಗೆ ಚರ್ಚಿಸಿದರು.
 • ಗುಜರಾತ್: ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಈಗ 9,592 ಕ್ಕೆ ಏರಿಕೆಯಾಗಿದ್ದು, ನಿನ್ನೆ 13 ಜಿಲ್ಲೆಗಳಿಂದ 324 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ನಿನ್ನೆ ಕೋವಿಡ್ -19 ರಿಂದ ಸಂಪೂರ್ಣ ಚೇತರಿಸಿಕೊಂಡ ನಂತರ 191 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ, ಆದರೆ 20 ಸಾವುಗಳು ಸಹ ವರದಿಯಾಗಿದೆ. ಏತನ್ಮಧ್ಯೆ, ಲಾಕ್ ಡೌನ್ ಮಧ್ಯೆ ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಪುನರಾರಂಭಗೊಂಡಿವೆ. ರಸ್ತೆ ಮತ್ತು ಕಟ್ಟಡಗಳ ನಿರ್ಮಾಣಕ್ಕಾಗಿ 9,000 ಕೋಟಿ ರೂಪಾಯಿ ಮೌಲ್ಯದ 300 ಮೂಲಸೌಕರ್ಯ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಎಂದು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ತಿಳಿಸಿದ್ದಾರೆ. ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಆತ್ಮನಿರ್ಭರ್ ಗುಜರಾತ್ ಸಹಾಯ್ ಯೋಜನೆಯನ್ನು ಘೋಷಿಸಿದ್ದಾರೆ, ಇದರ ಅಡಿಯಲ್ಲಿ 1 ಲಕ್ಷ ರೂಪಾಯಿಗಳನ್ನು ಸಣ್ಣ ವ್ಯಾಪಾರಿಗಳು, ಅಂಗಡಿಯವರು ಮತ್ತು ಸ್ವಯಂ ಉದ್ಯೋಗಿಗಳಿಗೆ ಖಾತ್ರಿ ರಹಿತ 2 ಪ್ರತಿಶತದಷ್ಟು ರಿಯಾಯಿತಿ ಬಡ್ಡಿದರದಲ್ಲಿ ಸಾಲ ನೀಡಲಾಗುವುದು.
 • ರಾಜಸ್ಥಾನ: ರಾಜ್ಯದಲ್ಲಿ ಇಂದು 55 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಸಕ್ರಿಯ ರೋಗಿಗಳ ಸಂಖ್ಯೆ 1,881 ಆಗಿದೆ. ಒಟ್ಟಾರೆಯಾಗಿ, 2,646 ರೋಗಿಗಳು ಈವರೆಗೆ ಚೇತರಿಸಿಕೊಂಡಿದ್ದಾರೆ. ಇಂದು ಕೋಟಾದಿಂದ 29, ಜೈಪುರದಿಂದ 11 ಮತ್ತು ಉದಯಪುರದಲ್ಲಿ ಒಂಬತ್ತು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಉದಯಪುರವು ಕೋವಿಡ್- 19 ಹೊಸ ಹಾಟ್ಸ್ಪಾಟ್ ಆಗಿ ಹೊರಹೊಮ್ಮಿದೆ, ಅಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 313 ಕ್ಕೆ ಏರಿದೆ. ಇದುವರೆಗೆ ಕರೋನಾ ಸೋಂಕಿನಿಂದ ಒಟ್ಟು 125 ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ವಲಸೆ ಬಂದವರ ಮರಳಿದ ನಂತರ ಕಳೆದ ನಾಲ್ಕು ದಿನಗಳಲ್ಲಿ ಸೋಂಕಿತರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ.
 • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ, 253 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ, ಒಟ್ಟು ಕರೋನಾ ಸೋಂಕಿತ ಪ್ರಕರಣಗಳ ಸಂಖ್ಯೆ 4,426 ಕ್ಕೆ ಏರಿದೆ. 2,171 ಜನರು ಗುಣಮುಖರಾಗಿದ್ದರೆ, 2,018 ಜನರ ಸ್ಥಿತಿ ಇಲ್ಲಿಯವರೆಗೆ ಸ್ಥಿರವಾಗಿದೆ. ಅಲ್ಲದೆ, ಇಲ್ಲಿಯವರೆಗೆ ರಾಜ್ಯದಲ್ಲಿ ಸೋಂಕಿನಿಂದ 237 ಜನರು ಸಾವನ್ನಪ್ಪಿದ್ದಾರೆ.
 • ಗೋವಾ: ಮುಂಬೈನಲ್ಲಿ 14 ದಿನಗಳ ಕ್ವಾರಂಟೈನ್  ಪೂರ್ಣಗೊಳಿಸಿದ ನಂತರ ಗೋವಾಕ್ಕೆ ಮರಳಿದ ಕಡಲತೀರದವರೊಬ್ಬರಲ್ಲಿ ಗುರುವಾರ ರಾತ್ರಿ ಸೋಂಕು ದೃಢಪಟ್ಟಿದ್ದು, ಗೋವಾದ ಸಕ್ರಿಯ ಕೋವಿಡ್-19 ಸಕಾರಾತ್ಮಕ ಪ್ರಕರಣಗಳನ್ನು ಎಂಟಕ್ಕೆ ಏರಿದೆ. ಕಳೆದ ಎರಡು ದಿನಗಳಲ್ಲಿ ದಾಖಲಾದ ಕೋವಿಡ್-19 ಹೊಸ ಪ್ರಕರಣಗಳಿಂದಾಗಿ ಗೋವಾ ಈಗ ರೈಲ್ವೆ ಮೂಲಕ ಜನರ ಒಳಹರಿವನ್ನು ತಡೆಯಲು ಪ್ರಯತ್ನಿಸುತ್ತಿದೆ.
 • ಅರುಣಾಚಲ ಪ್ರದೇಶ: ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ 2020-21 ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ಅರುಣಾಚಲ ಪ್ರದೇಶದ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಮತ್ತು ಅದರ ಅಧೀನದ ಕಾಲೇಜುಗಳು ಜೂನ್ 29 ರಿಂದ ಪುನರಾರಂಭಗೊಳ್ಳಲಿವೆ.
 • ಅಸ್ಸಾಂ: ಲಾಕ್ಡೌನ್ ಹೊಸ ಎಸ್‌.ಒಪಿಗಳ ಬಗ್ಗೆ ಚರ್ಚಿಸಲು ಮತ್ತು ಹೊಂ ಕ್ವಾರಂಟೈನ್ ನಲ್ಲಿರುವವರ ಮೇಲೆ ಕಟ್ಟುನಿಟ್ಟಿನ ನಿಗಾ ಖಚಿತಪಡಿಸಿಕೊಳ್ಳಲು ಆರೋಗ್ಯ ಸಚಿವರು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
 • ಮಣಿಪುರ: ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಪ್ರತ್ಯೇಕ ವಾರ್ಡ್ನಲ್ಲಿ ಕೋವಿಡ್ -19 ಸೋಂಕಿತ ರೋಗಿಯನ್ನು ದಾಖಲಿಸಲಾಗಿದೆ.
 • ಮಿಜೋರಾಂ: ಗಡಿ ಭದ್ರತಾ ನಿರ್ವಹಣಾ ತಂಡ, ಕೊಲಾಸಿಬ್ ಮಿಜೋರಾಂ, ಗಡಿ ಗ್ರಾಮಗಳಲ್ಲಿನ ಅಗತ್ಯ ಇರುವ ಜನರಿಗೆ ಮತ್ತಷ್ಟು ವಿತರಣೆಗಾಗಿ ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆಕಾಳುಗಳು, ಉಪ್ಪು, ಈರುಳ್ಳಿ, ಸೋಯಾಬೀನ್, ಖಾದ್ಯ ತೈಲವನ್ನು 10 ಗ್ರಾಮ ಕಾರ್ಯಪಡೆಗಳಿಗೆ ವಿತರಿಸಿತು.
 • ನಾಗಾಲ್ಯಾಂಡ್: ನಾಗಾಲ್ಯಾಂಡ್ನಲ್ಲಿ, ಕೋವಿಡ್ 19 ಪರೀಕ್ಷೆಗೆ ಕಳುಹಿಸಲಾದ 891 ರಲ್ಲಿ 873 ಮಾದರಿಗಳು ನೆಗೆಟೀವ್ ಆಗಿವೆ. 18 ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ.
 • ಕೇರಳ: ರಾಜ್ಯಕ್ಕೆ ಮರಳಿದವರ ಹೆಚ್ಚಳದೊಂದಿಗೆ ಕೋವಿಡ್ -19 ಸೋಂಕಿನ ಪ್ರಕರಣಗಳ ಹಠಾತ್ ಏರಿಕೆಯ ನಂತರ ರಾಜ್ಯವ್ಯಾಪಿ ಜಾಗರೂಕತೆ ಹೆಚ್ಚಾಗಿದೆ. ನವದೆಹಲಿಯ ಮೊದಲ ವಿಶೇಷ ರೈಲು ಇಂದು ಬೆಳಗ್ಗೆ ರಾಜ್ಯ ರಾಜಧಾನಿಯನ್ನು ತಲುಪಿದೆ. ಜ್ವರ ಲಕ್ಷಣಗಳಿದ್ದ ಏಳು ಪ್ರಯಾಣಿಕರನ್ನು ಕೋಳಿಕೋಡ್ ಮತ್ತು ತಿರುವನಂತಪುರಂನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದೇಶಗಳಿಂದ ಹಿಂದಿರುಗುವ ಭಾರತೀಯರಿಗೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಎಂದು ಕೇಂದ್ರ, ಕೇರಳ ಹೈಕೋರ್ಟ್ಗೆ ತಿಳಿಸಿದೆ; 7 ದಿನಗಳ ಕಾಲ ಸಾಕೆಂಬ ರಾಜ್ಯದ ಕೋರಿಕೆಯನ್ನು ತಿರಸ್ಕರಿಸಿದೆ. ಕೇರಳದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಸ್ಥಳಾಂತರಿಸಲು ಪಶ್ಚಿಮ ಬಂಗಾಳ ಸರ್ಕಾರ 28 ರೈಲು ಸೇವೆಗಳನ್ನು ನಿಗದಿಪಡಿಸಿದೆ. ಕೊಲ್ಲಿಯಲ್ಲಿ ಕೋವಿಡ್ -19ಕ್ಕೆ ಇನ್ನೂ ಮೂವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮಾರಕ ವೈರಾಣುವಿನಿಂದ ಅನಿವಾಸಿ ಕೇರಳೀಯರ ಸಾವಿನ ಸಂಖ್ಯೆ 120 ಆಗಿದೆ.
 • ತಮಿಳುನಾಡು: ಮದ್ಯದಂಗಡಿಗಳನ್ನು ಮುಚ್ಚುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ರಾಜ್ಯ ಮಾಸ್ಟರ್ ಯೋಜನೆಯನ್ನು ಸಿದ್ಧಪಡಿಸುತ್ತಿದೆ; ಕೇಂದ್ರವು ಘೋಷಿಸಿದ ಉತ್ತೇಜಕ ಯೋಜನೆಯಲ್ಲಿ ತನ್ನ ಪಾಲಿಗಾಗಿ. ಮದುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಈಗ ಕೋವಿಡ್-19 ರೋಗಿಗಳ ಸೇವೆಯಲ್ಲಿ ರೋಬೋಟ್ಗಳನ್ನು ಬಳಸಲಾಗುತ್ತಿದ್ದು, ಕೋವಿಡ್ ರೋಗಿಗಳಿಗೆ ಆಹಾರ ಮತ್ತು ಷಧಿಯನ್ನು ತಲುಪಿಸಲಾಗುತ್ತಿದೆ. ಪುದುಚೇರಿಯಲ್ಲಿ, ಅಪ್ರಾಪ್ತ ವಯಸ್ಕ ಬಾಲಕಿ ಸೇರಿದಂತೆ ಮೂವರಲ್ಲಿ ಸೋಂಕು ದೃಢಪಟ್ಟಿದ್ದು, ಕೋವಿಡ್ -19 ಪ್ರಕರಣಗಳು 12 ಕ್ಕೆ ಏರಿಕೆಯಾಗಿವೆ. ನಿನ್ನೆ ತನಕ ತಮಿಳು ನಾಡಿನಲ್ಲಿ ಒಟ್ಟು ಪ್ರಕರಣಗಳು: 9674, ಸಕ್ರಿಯ ಪ್ರಕರಣಗಳು: 7365, ಸಾವು: 66, ಡಿಸ್ಚಾರ್ಜ್: 2240. ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು 5637.
 • ಕರ್ನಾಟಕ: 42500 ಆಶಾ ಕಾರ್ಮಿಕರಿಗೆ ಸಿಎಂ 3,000 ರೂ. ಎಕ್ಸ್ ಗ್ರೇಷಿಯಾ ಪರಿಹಾರವನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ. ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ರಾಜ್ಯವು ಅನುಮೋದನೆ ನೀಡಿದೆ, ಇದು ರೈತರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಮತ್ತು ಅವರ ಉತ್ಪನ್ನಗಳಿಗೆ ಸೂಕ್ತ ದರವನ್ನು ಪಡೆಯಲು ಸಹಾಯ ಮಾಡುತ್ತದೆ. ಏರ್ ಇಂಡಿಯಾ ವಿಶೇಷ ವಿಮಾನ 109 ಪ್ರಯಾಣಿಕರೊಂದಿಗೆ ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಬಂದಿಳಿದಿದೆ. ದುಬೈನಿಂದ ವಿಮಾನದಲ್ಲಿ ಮಂಗಳೂರಿಗೆ ಮರಳಿದ 20 ಜನರಲ್ಲಿ ಕೋವಿಡ್ -19 ಸೋಂಕು ದೃಢಪಟ್ಟಿದೆ. 45 ಹೊಸ ಪ್ರಕರಣಗಳು ಇಂದು ಮಧ್ಯಾಹ್ನ 12 ರವರೆಗೆ ವರದಿಯಾಗಿದೆ; ಬೆಂಗಳೂರು 14, ದಕ್ಷಿಣ ಕನ್ನಡ 16, ಉಡುಪಿ 5, ಬೀದರ್ ಮತ್ತು ಹಾಸನ ತಲಾ 3, ಚಿತ್ರದುರ್ಗ 2, ಮತ್ತು ಬಾಗಲಕೋಟೆ ಮತ್ತು ಕೋಲಾರ ತಲಾ ಒಂದು. ರಾಜ್ಯದಲ್ಲಿ ಒಟ್ಟು ಸೋಂಕಿನ ಪ್ರಕರಣಗಳು 1032 ತಲುಪಿವೆ. ಸಕ್ರಿಯ ಪ್ರ