ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಎನ್‌.ಐ.ಪಿ.ಇ.ಆರ್. ಸಂಸ್ಥೆಗಳು ಸಕಾರಾತ್ಮಕ ಪಾತ್ರವಹಿಸುತ್ತಿವೆ

Posted On: 14 MAY 2020 6:07PM by PIB Bengaluru

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಎನ್‌.ಐ.ಪಿ.ಇ.ಆರ್. ಸಂಸ್ಥೆಗಳು ಸಕಾರಾತ್ಮಕ ಪಾತ್ರವಹಿಸುತ್ತಿವೆ

ಎನ್‌.ಐ.ಪಿ.ಇ.ಆರ್. ಸಂಸ್ಥೆಗಳಲ್ಲಿ ಅಭಿವೃದ್ಧಿಪಡಿಸಿದ ಪರಿಹಾರ ವಸ್ತುಗಳ ಪರವಾನಗಿ ಮತ್ತು ವ್ಯಾಪಾರೀಕರಣದ ಆದ್ಯತೆಯ ಮೇಲೆ ಒತ್ತು,
ಇದರಿಂದಾಗಿ ಉತ್ಪನ್ನಗಳು ಈ ಅಗತ್ಯದ ಸಮಯದಲ್ಲಿ ಮಾರುಕಟ್ಟೆಯನ್ನು ತ್ವರಿತವಾಗಿ ತಲುಪುತ್ತವೆ

 

ಕೋವಿಡ್-19 ಅನ್ನು ನಿಗ್ರಹಿಸಲು ಪ್ರಕ್ರಿಯೆಗಳಲ್ಲಿ ಸಕಾರಾತ್ಮಕವಾಗಿ ಒಳಗೊಂಡಿರುವುದು, ಮತ್ತು ಚಿಕಿತ್ಸೆ ನೀಡುವ ವಿಷಯಗಳಲ್ಲಿ ಬೇಕಾದ ಅಗತ್ಯ ವಸ್ತುಗಳನ್ನು ಗುರುತಿಸುವುದು - ಹೀಗೆ ಹೆಚ್ಚಿನ ಸಂಖ್ಯೆಯ ಬಹುಮುಖಿ ಸಂಶೋಧನಾ ಪ್ರಸ್ತಾಪಗಳನ್ನು ಅನುಮೋದನೆಗಾಗಿ ಸಂಬಂಧಿತ ಏಜೆನ್ಸಿಗಳಿಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ (ಎನ್‌.ಐ.ಪಿ.ಇ.ಆರ್.) ಸಂಸ್ಥೆಗಳು ಸಲ್ಲಿಸಿವೆ. ಕೋವಿಡ್-19 ಆಂಟಿವೈರಲ್ ಏಜೆಂಟ್‌ ಗಳನ್ನು ಗುರಿಯಾಗಿಸುವ ಪ್ರೋಟಿಯೇಸ್‌ನ ವಿನ್ಯಾಸ (ಎನ್‌.ಐ.ಪಿ.ಇ.ಆರ್ -ಮೊಹಲಿ), ಎಫ್‌.ಡಿ.ಎ ಅನುಮೋದಿತ ಔಷಧ-ದತ್ತಸಂಚಯವನ್ನು (ಎನ್‌.ಐ.ಪಿ.ಇ.ಆರ್ -ಮೊಹಲಿ ಮತ್ತು ರಾಯಬರೇಲಿ) , ಕಂಪ್ಯೂಟೇಶನಲ್ ಮಾರ್ಗದರ್ಶಿ ಮೂಲಕ ಔಷಧ-ಮರುಹಂಚಿಕೆ, ಔಷಧಪರವಾದ ಪರಿವರ್ತನೆಗೆ ಅಗತ್ಯ ವಿಶ್ಲೇಷಣೆ (ಎನ್‌.ಐ.ಪಿ.ಇ.ಆರ್ -ಮೊಹಲಿ), ಅನಾರೋಗ್ಯ ಪೀಡಿತ ರೋಗಿಗಳಿಗೆ ಸಹಾಯಕ-ಚಿಕಿತ್ಸಾ ಆಧಾರಿತ ಮೂಗಿನ ತುಂತುರು (ಎನ್‌.ಐ.ಪಿ.ಇ.ಆರ್ -ಹೈದರಾಬಾದ್), ಕ್ವಾಂಟಮ್-ಡಾಟ್ ಆಧಾರಿತ ಮತ್ತು ಕ್ಷಿಪ್ರ ಕೋವಿಡ್-19 ಪಸರಿಸುವಿಕೆ ತಡೆ ವ್ಯವಸ್ಥೆಗಳು (ಎನ್‌.ಐ.ಪಿ.ಇ.ಆರ್ -ಅಹಮದಾಬಾದ್), ಪರೀಕ್ಷೆಯ ವಾಹಕತೆ ಆಧಾರಿತ ಜೈವಿಕ ಸೆನ್ಸಾರ್ ಅಭಿವೃದ್ಧಿ, ಮತ್ತು ಕೋವಿಡ್ -19 ರ ಸಮಯದಲ್ಲಿ ಪಾರ್ಶ್ವವಾಯು ಸಂಭವಿಸುವಿಕೆಯ ನಿಯಂತ್ರಣ ಮುಂತಾದ ಪ್ರಮುಖ ವಿಷಯಗಳು ಈ ಪ್ರಸ್ತಾಪಗಳಲ್ಲಿ ಒಳಗೊಂಡಿವೆ. ಐ.ಐ.ಟಿ ಮತ್ತು ಖಾಸಗಿ ಕೈಗಾರಿಕಾ ಪಾಲುದಾರರೊಂದಿಗೆ ಎನ್‌.ಐ.ಪಿ.ಇ.ಆರ್ –ರಾಯಬರೇಲಿ ಸಾಂಪ್ರದಾಯಿಕವಾಗಿ ಬಳಸುವ ಪೊದೆಗಳನ್ನು ಬಳಸಿಕೊಂಡು ಹೊಸ ಇಮ್ಯುನೊ-ಬೂಸ್ಟರ್ ಸೂತ್ರೀಕರಣದ ಅಭಿವೃದ್ಧಿಯಲ್ಲಿ ನೂತನ ಮೆಗಾ ಯೋಜನೆಯನ್ನು ಪ್ರಾರಂಭಿಸಿದೆ. ಕಡಿಮೆ ವೆಚ್ಚದ ಐ.ಸಿ.ಯು ವೆಂಟಿಲೇಟರ್ ಉತ್ಪಾದನೆ ಕುರಿತು ಎನ್‌.ಐ.ಪಿ.ಇ.ಆರ್ ಕೋಲ್ಕತಾ ಈಗಾಗಲೇ ಸಿ.ಐ.ಎಸ್.ಐ.ಆರ್-ಸಿ.ಇ.ಸಿ.ಆರ್. ಮತ್ತು ಖಾಸಗಿ ತಯಾರಕರ ಸಹಯೋಗದೊಂದಿಗೆ ಸಂಶೋಧನೆ ನಡೆಸಿ ಕಾರ್ಯನಿರ್ವಹಿಸುತ್ತಿದೆ.

https://static.pib.gov.in/WriteReadData/userfiles/image/image001WHWO.jpg

 

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರ ಔಷಧೀಯ ಇಲಾಖೆಯ ಅಂಗಸಂಸ್ಥೆಗಳಲ್ಲಿ ಪ್ರಮುಖವಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ (ಎನ್‌.ಐ.ಪಿ.ಇ.ಆರ್ ) ಗಳು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳಾಗಿವೆ. ದೇಶದಾದ್ಯಂತ ವಿವಿಧಡೆ ಒಟ್ಟು ಏಳು ಸಂಸ್ಥೆಗಳು - ಅಹಮದಾಬಾದ್, ಹೈದರಾಬಾದ್, ಹಾಜಿಪುರ, ಕೋಲ್ಕತಾ, ಗುವಾಹಟಿ, ಮೊಹಾಲಿ, ಮತ್ತು ರಾಯಬರೇಲಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಸಂಶೋಧನೆ ಮತ್ತು ನಾವೀನ್ಯತೆ ಚಟುವಟಿಕೆಗಳಲ್ಲಿ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ವಿಶೇಷವಾಗಿ ಹೊಂದಿರುವ ಮತ್ತು ಮಾಡಬಹುದಾದ ವಿಧಾನಗಳಿಗೆ ಸಂಬಂಧಿಸಿದಂತೆ ಕೋವಿಡ್-19 ಸಾಂಕ್ರಾಮಿಕ ವಿರುದ್ಧ ದೇಶದ ಹೋರಾಟದಲ್ಲಿ ಕೊಡುಗೆ ನೀಡಿದ ಎನ್‌.ಐ.ಪಿ.ಇ.ಆರ್ ಸಂಸ್ಥೆಯ ತನ್ನ ಎಲ್ಲಾ ಅಂಗಸಂಸ್ಥೆಗಳ ನಿರ್ದೇಶಕರು ಮತ್ತು ಅಧ್ಯಕ್ಷರ ಜೊತೆಗೆ ವಿಡಿಯೊ ಸಂವಾದ ಮೂಲಕ ಕೇಂದ್ರ ಔಷಧೀಯ ವಿಭಾಗದ ಕಾರ್ಯದರ್ಶಿ ಡಾ.ಪಿ.ಡಿ.ವಘೇಲಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

“ಮುಖಕವಚ(ಗುರಾಣಿ), ಬಾಗಿಲುಗಳು, ಡ್ರಾಯರ್‌ಗಳು ಮತ್ತು ಎಲಿವೇಟರ್‌ಗಳು, ಆಂಟಿವೈರಲ್ ಮುಖಕವಚಗಳಿಗೆ 3-ಡಿ ಮುದ್ರಿತ ಮೂಲಮಾದರಿಗಳ ತಯಾರಿಕೆ ಮತ್ತು ಚರ್ಮ ಸ್ನೇಹಿ ಗಿಡಮೂಲಿಕೆಗಳ ಸ್ಯಾನಿಟೈಜರ್‌ಗಳನ್ನು ಸ್ಪರ್ಶ-ಕಡಿಮೆ ತೆರೆಯಲು “ಹ್ಯಾಂಡ್ಸ್-ಫ್ರೀ ಆಬ್ಜೆಕ್ಟ್” ಗಳನ್ನು ತಯಾರಿಸಿದೆ. ಈ ಉತ್ಪನ್ನಗಳ ಕೈಗಾರಿಕಾ ಪ್ರಮಾಣದ ಉತ್ಪಾದನೆಯನ್ನು ಇಲಾಖಾ ಸಾರ್ವಜನಿಕ ಕ್ಷೇತ್ರದ ಘಟಕ ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಲಿಮಿಟೆಡ್ ಸಹಯೋಗದೊಂದಿಗೆ ಮಾಡಲಾಗುತ್ತಿದೆ. ಪಂಜಾಬ್ ಸರ್ಕಾರದ ಸಹಯೋಗದೊಂದಿಗೆ ಎನ್‌.ಐ.ಪಿ.ಇ.ಆರ್‌ (ಮೊಹಲಿ)ಯು ರಾಜ್ಯದಲ್ಲಿ ಕೋವಿಡ್-19 ದೃಢೀಕರಣ ಪರೀಕ್ಷೆಗಳನ್ನು ತ್ವರಿತಗೊಳಿಸಲು ಆರ್.ಟಿ-ಪಿ.ಸಿ.ಆರ್. ಆಧಾರಿತ ಕೋವಿಡ್-19 ಪರೀಕ್ಷಾ ಸೌಲಭ್ಯವನ್ನು ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ” ಎಂದು ಎನ್‌.ಐ.ಪಿ.ಇ.ಆರ್ -ಗುವಾಹಟಿ, ಇದರ ನಿರ್ದೇಶಕರು ಮಾಹಿತಿ ನೀಡಿದರು.

“ಅಗತ್ಯವಿರುವವರಿಗೆ ತ್ವರಿತವಾಗಿ ಸಹಾಯವನ್ನು ಒದಗಿಸಲು ಎಲ್ಲಾ ಕೋವಿಡ್-19 ಸಂಬಂಧಿತ ಸಂಶೋಧನೆ ಮತ್ತು ಉತ್ಪನ್ನ ಅಭಿವೃದ್ಧಿ ಉಪಕ್ರಮಗಳನ್ನು ನಾವು ಚುರುಕಾಗಿ ಮಾಡಬೇಕು. ಎನ್‌.ಐ.ಪಿ.ಇ.ಆರ್‌.ಗಳಲ್ಲಿ ಅಭಿವೃದ್ಧಿ ಹೊಂದಿದ ಪರಿಹಾರಗಳ ಎಲ್ಲಾ ಪರವಾನಗಿ ಮತ್ತು ವಾಣಿಜ್ಯೀಕರಣದ ಅಂಶಗಳನ್ನು ನಿಯಂತ್ರಕ ಏಜೆನ್ಸಿಗಳ ಮೂಲಕ ಆದ್ಯತೆಯ ಮೇರೆಗೆ ಸಮನ್ವಯಗೊಳಿಸಬೇಕು, ಇದರಿಂದಾಗಿ ಉತ್ಪನ್ನಗಳು ಈ ಅಗತ್ಯದ ಸಮಯದಲ್ಲಿ ಆದಷ್ಟು ಬೇಗನೆ ಮಾರುಕಟ್ಟೆಯನ್ನು ತಲುಪುತ್ತವೆ. ಈ ಸಂಶೋಧನಾ ಪ್ರಯತ್ನಗಳು ಮತ್ತು ಜನರಿಗೆ ಸಹಾಯ ಮಾಡುವಲ್ಲಿ ಸಾಮಾಜಿಕ ಭಾಗವಹಿಸುವಿಕೆಯ ಮೂಲಕ, ವಿವಿಧ ಗುಂಪುಗಳೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡಲು ಮತ್ತು ದೇಶಕ್ಕೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ಎಲ್ಲಾ ಎನ್‌.ಐ.ಪಿ.ಇ.ಆರ್ ಅಂಗಸಂಸ್ಥೆಗಳು ಬದ್ಧವಾಗಿವೆ “ ಎಂದು ಕೇಂದ್ರ ಔಷಧೀಯ ವಿಭಾಗದ ಕಾರ್ಯದರ್ಶಿ ಡಾ.ಪಿ.ಡಿ.ವಘೇಲಾ ಅವರು ತಿಳಿಸಿದರು.

***



(Release ID: 1623955) Visitor Counter : 185