ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್ -19 ವಿರುದ್ದ ಹೋರಾಟಕ್ಕೆ ಪಿ.ಎಂ. ಕೇರ್ಸ್ ನಿಧಿ ಟ್ರಸ್ಟ್ ನಿಂದ 3100 ಕೋ.ರೂ. ಮಂಜೂರು

Posted On: 13 MAY 2020 8:23PM by PIB Bengaluru

ಕೋವಿಡ್ -19 ವಿರುದ್ದ ಹೋರಾಟಕ್ಕೆ ಪಿ.ಎಂ. ಕೇರ್ಸ್ ನಿಧಿ ಟ್ರಸ್ಟ್ ನಿಂ 3100 ಕೋ.ರೂ. ಮಂಜೂರು

 

ಪಿ.ಎಂ.ಕೇರ್ಸ್ (ತುರ್ತು ಪರಿಸ್ಥಿತಿಗಳಲ್ಲಿ ಪ್ರಧಾನ ಮಂತ್ರಿ ಅವರ ನಾಗರಿಕ ನೆರವು ಮತ್ತು ಪರಿಹಾರ ) ನಿಧಿ ಟ್ರಸ್ಟ್ ಇಂದು ಕೋವಿಡ್ -19 ವಿರುದ್ದ ಹೋರಾಡಲು 3100 ಕೋ.ರೂ.ಗಳನ್ನು ಮಂಜೂರು ಮಾಡಲು ನಿರ್ಧರಿಸಿತು. ಒಟ್ಟು 3100 ಕೋ.ರೂ.ಗಳಲ್ಲಿ 2000 ಕೋ.ರೂ.ಗಳನ್ನು ವೆಂಟಿಲೇಟರುಗಳ ಖರೀದಿಗೆ , 1000 ಕೋ.ರೂ.ಗಳನ್ನು ವಲಸೆ ಕಾರ್ಮಿಕರ ಕಾಳಜಿಗಾಗಿ ಬಳಸಲು ಮತ್ತು 100 ಕೋ.ರೂ.ಗಳನ್ನು ಲಸಿಕೆ ಅಭಿವೃದ್ದಿಗಾಗಿ ಬೆಂಬಲವಾಗಿ ನೀಡಲು ಮೀಸಲಿಡಲಾಗಿದೆ.

ಟ್ರಸ್ಟನ್ನು 2020 ಮಾರ್ಚ್ 27 ರಂದು ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ (ಅಧಿಕಾರೇತರ) ಅವರ ನೇತೃತ್ವದಲ್ಲಿ ರಚಿಸಲಾಗಿತ್ತು. ಇದರ ಇತರ ಅಧಿಕಾರೇತರ ಸದಸ್ಯರೆಂದರೆ ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ಹಣಕಾಸು ಸಚಿವರು. ಪ್ಯಾಕೇಜನ್ನು ಘೋಷಿಸಿದ ಪ್ರಧಾನ ಮಂತ್ರಿ ಅವರು ಪಿ.ಎಂ. ಕೇರ್ಸ್ ನಿಧಿಗೆ ಉದಾರವಾಗಿ ದೇಣಿಗೆ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು. ನಿಧಿ, ಕೊರೊನಾ-19 ವಿರುದ್ದ ಭಾರತದ ಹೋರಾಟವನ್ನು ಬೆಂಬಲಿಸುತ್ತದೆ.

  1. 50,000 ವೆಂಟಿ ಲೇಟರುಗಳು

ದೇಶಾದ್ಯಂತ ಕೋವಿಡ್-19 ಪ್ರಕರಣಗಳನ್ನು ನಿಭಾಯಿಸಲು ಮೂಲಸೌಕರ್ಯವನ್ನು ಕ್ರೋಢೀಕರಿಸುವುದಕ್ಕಾಗಿ 50,000 ದೇಶೀ ನಿರ್ಮಿತ ವೆಂಟಿಲೇಟರುಗಳನ್ನು ಪಿ.ಎಂ. ಕೇರ್ಸ್ ನಿಧಿಯಿಂದ ಅಂದಾಜು 2,000 ಕೋ.ರೂ. ವೆಚ್ಚದಲ್ಲಿ ಖರೀದಿಸಲಾಗುವುದು. ವೆಂಟಿಲೇಟರುಗಳನ್ನು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರಕಾರ ನಿರ್ವಹಿಸುವ ಕೋವಿಡ್ ಆಸ್ಪತ್ರೆಗಳಿಗೆ ಗಂಭೀರ ಸ್ಥಿತಿಯಲ್ಲಿರುವ ಕೋವಿಡ್ -19 ಪ್ರಕರಣಗಳ ಚಿಕಿತ್ಸೆಗಾಗಿ ಒದಗಿಸಲಾಗುವುದು.

 

  1. ವಲಸೆ ಕಾರ್ಮಿಕರಿಗೆ ಪರಿಹಾರ ಕ್ರಮಗಳು

ವಲಸೆಗಾರರ ಮತ್ತು ಬಡವರ ಕಲ್ಯಾಣಕ್ಕಾಗಿ ಈಗಿರುವ ಕ್ರಮಗಳನ್ನು ಬಲಪಡಿಸಲು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 1000 ಕೋ.ರೂ. ಗಳ ನೆರವನ್ನು ಪಿ.ಎಂ. ಕೇರ್ಸ್ ನಿಧಿಯಿಂದ ಕೊಡಲಾಗುವುದು. ಮೊತ್ತವನ್ನು ಜಿಲ್ಲಾಧಿಕಾರಿಗಳು/ ಮುನ್ಸಿಪಲ್ ಕಮಿಶನರುಗಳು ವಲಸೆಗಾರರಿಗೆ ವಸತಿ ಒದಗಿಸುವಿಕೆ, ಆಹಾರ ವ್ಯವಸ್ಥೆ ಮಾಡುವಿಕೆ , ವೈದ್ಯಕೀಯ ಚಿಕಿತ್ಸೆ ಒದಗಿಸಲು ಮತ್ತು ವಲಸೆಗಾರರ ಸಾರಿಗೆ ವೆಚ್ಚಕ್ಕಾಗಿ ಬಳಸಿಕೊಳ್ಳಲು ಅನುಕೂಲವಾಗುವಂತೆ ನಿಟ್ಟಿನಲ್ಲಿ ಅವರ ಪ್ರಯತ್ನಗಳನ್ನು ಬಲಪಡಿಸಲು ಅವರ ವಿಲೇವಾರಿಯಲ್ಲಿಡುವಂತೆ ರಾಜ್ಯ ಸರಕಾರಗಳಿಗ / ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲಾಗುವುದು. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (1) ಆಯಾ ರಾಜ್ಯ/ ಕೇಂದ್ರಾಡಳಿತ ಪ್ರದೇಶ 2011 ರಲ್ಲಿ ಹೊಂದಿದ್ದ ಜನಗಣತಿ ಆಧರಿಸಿ 50 % ಅದ್ಯತೆ ( 2) ದಿನದವರೆಗೆ ಇರುವ ಕೋವಿಡ್ 19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಆಧರಿಸಿ 40 % ಮತ್ತು ಸಮಾನ ಪಾಲು (10 % ವೈಟೇಜ್) ಆಧರಿಸಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕನಿಷ್ಟ ಮೂಲ ಮೊತ್ತ ಲಭ್ಯವಾಗುವಂತೆ ಖಾತ್ರಿಪಡಿಸಲಾಗುವುದು. ಹಣಕಾಸನ್ನು ಜಿಲ್ಲಾಧಿಕಾರಿಗಳು/ ಜಿಲ್ಲಾ ಮ್ಯಾಜಿಸ್ಟ್ರೇಟರು, ಮುನ್ಸಿಪಲ್ ಕಮಿಶನರುಗಳಿಗೆ ಸಂಬಂಧಿತ ರಾಜ್ಯ /ಕೇಂದ್ರಾಡಳಿತ ಪ್ರದೇಶಗಳ ರಾಜ್ಯ ವಿಪತ್ತು ಪರಿಹಾರ ಕಮಿಶನರ್ ಮೂಲಕ ಬಿಡುಗಡೆ ಮಾಡಲಾಗುವುದು.

  1. ಲಸಿಕೆ ಅಭಿವೃದ್ದಿ

ಕೋವಿಡ್-19 ಕ್ಕೆ ಲಸಿಕೆಯು ಅತ್ಯಂತ ಅವಶ್ಯಕವಾಗಿದ್ದು, ಮತ್ತು ಭಾರತೀಯ ಶೈಕ್ಷಣಿಕ ವಲಯ, ನವೋದ್ಯಮಗಳು, ಹಾಗು ಕೈಗಾರಿಕೆಗಳು ಲಸಿಕೆ ವಿನ್ಯಾಸ ಮತ್ತು ಅಭಿವೃದ್ದಿಗಾಗಿ ಮುಂದೆ ಬಂದಿವೆ. ಕೋವಿಡ್ -19 ಲಸಿಕೆ ವಿನ್ಯಾಸಕಾರರನ್ನು ಮತ್ತು ಅಭಿವೃದಿಗಾರರನ್ನು ಬೆಂಬಲಿಸಲು ಪಿ.ಎಂ. ಕೇರ್ಸ್ ನಿಧಿಯಿಂದ 100 ಕೋಟಿ ರೂಪಾಯಿಗಳನ್ನು ಲಸಿಕೆ ಅಭಿವೃದ್ದಿಗೆ ವೇಗ ತಂದುಕೊಡುವುದಕ್ಕಾಗಿ ನೀಡಲಾಗುವುದು, ಇದನ್ನು ಪ್ರಧಾನ ವೈಜ್ಞಾನಿಕ ಸಲಹೆಗಾರರ ಮೇಲುಸ್ತುವಾರಿಯಲ್ಲಿ ಬಳಸಲಾಗುವುದು.

***


(Release ID: 1623699) Visitor Counter : 311