ನಾಗರೀಕ ವಿಮಾನಯಾನ ಸಚಿವಾಲಯ
ವಂದೇ ಭಾರತ್ ಮಿಷನ್ ಅಡಿಯಲ್ಲಿ 2020ರ ಮೇ 7 ರಿಂದೀಚೆಗೆ 43 ವಿಮಾನಗಳ ಮೂಲಕ ವಿದೇಶದಲ್ಲಿರುವ 8503 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ
Posted On:
13 MAY 2020 11:58AM by PIB Bengaluru
ವಂದೇ ಭಾರತ್ ಮಿಷನ್ ಅಡಿಯಲ್ಲಿ 2020ರ ಮೇ 7 ರಿಂದೀಚೆಗೆ 43 ವಿಮಾನಗಳ ಮೂಲಕ
ವಿದೇಶದಲ್ಲಿರುವ 8503 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ
7 ಮೇ 2020 ರಿಂದ ಆರಂಭಗೊಂಡು 6 ದಿನಗಳಲ್ಲಿ ವಂದೇ ಭಾರತ್ ಮಿಷನ್ ಅಡಿಯಲ್ಲಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ನಿರ್ವಹಿಸುತ್ತಿದ್ದ 43 ವಿಮಾನಗಳಲ್ಲಿ 8503 ಭಾರತೀಯರನ್ನು ಭಾರತಕ್ಕೆ ಕರೆತರಲಾಗಿದೆ.
ಮೇ 7, 2020 ರಂದು ಭಾರತ ಸರ್ಕಾರವು ವಂದೇ ಭಾರತ್ ಮಿಷನ್ ಅನ್ನು ಪ್ರಾರಂಭಿಸಿತು – ಭಾರತೀಯರನ್ನು ಸ್ವದೇಶಕ್ಕೆ ಕರೆಸಿಕೊಳ್ಳುವ ಅತಿದೊಡ್ಡ ಉಪಕ್ರಮಗಳಲ್ಲಿ ಇದು ಒಂದಾಗಿದೆ. ಈ ಕಾರ್ಯಾಚರಣೆಯಡಿಯಲ್ಲಿ, ನಾಗರಿಕ ವಿಮಾನಯಾನ ಸಚಿವಾಲಯವು ವಿದೇಶಾಂಗ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.
ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್ಪ್ರೆಸ್ ಮೊದಲ ಹಂತದಲ್ಲಿ 14,800 ಭಾರತೀಯರನ್ನು ವಾಪಾಸು ಕರೆತರಲು ಒಟ್ಟು 64 ವಿಮಾನಗಳನ್ನು (ಏರ್ ಇಂಡಿಯಾದಿಂದ 42 ಮತ್ತು ಎಐ ಎಕ್ಸ್ಪ್ರೆಸ್ ನಿಂದ 24) ಅಮೆರಿಕಾ, ಯುಕೆ, ಬಾಂಗ್ಲಾದೇಶ, ಸಿಂಗಾಪುರ್, ಸೌದಿ ಅರೇಬಿಯಾ, ಕುವೈತ್, ಫಿಲಿಪೈನ್ಸ್, ಯುಎಇ ಮತ್ತು ಮಲೇಷಿಯಾ ಸೇರಿದಂತೆ 12 ದೇಶಗಳಿಗೆ ಹಾರಾಟ ನಡೆಸುತ್ತಿದೆ,
ಈ ಬೃಹತ್ ವಾಯುಯಾನದಿಂದ ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿನ ಪ್ರತಿಯೊಂದು ಕಾರ್ಯವು ಸರ್ಕಾರ ಮತ್ತು ಡಿಜಿಸಿಎ ನಿಗದಿಪಡಿಸಿದ ಸುರಕ್ಷತೆ ಮತ್ತು ನೈರ್ಮಲ್ಯ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಈ ಸೂಕ್ಷ್ಮ ವೈದ್ಯಕೀಯ ಸ್ಥಳಾಂತರಿಸುವ ಕಾರ್ಯಾಚರಣೆಗಳಲ್ಲಿ ಪ್ರಯಾಣಿಕರು, ಸಿಬ್ಬಂದಿ ಮತ್ತು ತಳಮಟ್ಟದ ನಿರ್ವಹಣಾ ಸಿಬ್ಬಂದಿಗಳ ಸುರಕ್ಷತೆಗೆ ಆದ್ಯತೆ ನೀಡಲು ನಾಗರಿಕ ವಿಮಾನಯಾನ ಸಚಿವಾಲಯ, ಎಎಐ ಮತ್ತು ಏರ್ ಇಂಡಿಯಾ ಸಕಲ ವ್ಯವಸ್ಥೆಯನ್ನು ಮಾಡಿದೆ. ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ವ್ಯಾಪಕ ಮತ್ತು ನಿಖರವಾದ ಸುರಕ್ಷತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
***
(Release ID: 1623664)
Visitor Counter : 279
Read this release in:
Punjabi
,
Telugu
,
Assamese
,
English
,
Urdu
,
Marathi
,
Hindi
,
Bengali
,
Manipuri
,
Gujarati
,
Odia
,
Odia
,
Tamil
,
Malayalam