ಗೃಹ ವ್ಯವಹಾರಗಳ ಸಚಿವಾಲಯ

ಒಂದು ಸಂಕಲ್ಪ, ಒಂದು ಗುರಿ - ಸ್ವಾವಲಂಬಿ ಭಾರತ: ಶ್ರೀ ಅಮಿತ್ ಶಾ

Posted On: 13 MAY 2020 2:39PM by PIB Bengaluru

ಒಂದು ಸಂಕಲ್ಪ, ಒಂದು ಗುರಿ - ಸ್ವಾವಲಂಬಿ ಭಾರತ: ಶ್ರೀ ಅಮಿತ್ ಶಾ

ಜೂನ್ 1, 2020 ರಿಂದ ದೇಶಾದ್ಯಂತ ಇರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಕ್ಯಾಂಟೀನ್ಗಳು ಮತ್ತು ಮಳಿಗೆಗಳಲ್ಲಿ ದೇಶೀಯ ಉತ್ಪನ್ನಗಳು ಮಾತ್ರ ಮಾರಾಟ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಮತ್ತು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನೇ ಬಳಸುವಂತೆ ನಿನ್ನೆ ಮನವಿ ಮಾಡಿದ್ದರು. ಮನವಿಯು ಭವಿಷ್ಯದಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡುವ ದಾರಿದೀಪವಾಗಿದೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಬಣ್ಣಿಸಿದ್ದಾರೆ.

https://twitter.com/AmitShah/status/1260472519347310595?s=20

ನಿಟ್ಟಿನಲ್ಲಿ, ದೇಶಾದ್ಯಂತ ಇರುವ ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಕ್ಯಾಂಟೀನ್ಗಳು ಮತ್ತು ಮಳಿಗೆಗಳು 2020 ಜೂನ್ 01 ರಿಂದ ದೇಶೀಯ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತವೆ ಎಂದು ಇಂದು ಗೃಹ ಸಚಿವಾಲಯ ನಿರ್ಧರಿಸಿದೆ. ಒಟ್ಟು ಖರೀದಿ ಮೌಲ್ಯವು ಸುಮಾರು 2800 ಕೋಟಿ ರೂ. ನಿರ್ಧಾರದಿಂದ ಸುಮಾರು 10 ಲಕ್ಷ ಸಿಎಪಿಎಫ್ ಸಿಬ್ಬಂದಿಯ 50 ಲಕ್ಷ ಕುಟುಂಬ ಸದಸ್ಯರು ದೇಶೀಯ ಉತ್ಪನ್ನಗಳನ್ನು ಬಳಸಲಿದ್ದಾರೆ.

ಗೃಹ ಸಚಿವರು ಸಹ ದೇಶದ ಜನರಿಗೆ ಮನವಿ ಮಾಡಿ, "ನೀವು ಸಾಧ್ಯವಾದಷ್ಟು ದೇಶದಲ್ಲಿ ತಯಾರಿಸಿದ ಉತ್ಪನ್ನಗಳನ್ನೇ ಬಳಸಬೇಕು ಮತ್ತು ಇತರರಿಗೂ ಹಾಗೆಯೇ ಮಾಡುವಂತೆ ಪ್ರೋತ್ಸಾಹಿಸಬೇಕು. ಇದು ಹಿಂದೆ ಸರಿಯುವ  ಸಮಯವಲ್ಲ, ಬದಲಿಗೆ ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸುವ ಸಮಯ."  ಎಂದು ಹೇಳಿದ್ದಾರೆ.

ಪ್ರತಿಯೊಬ್ಬ ಭಾರತೀಯನೂ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನೇ (ಸ್ವದೇಶಿ) ಬಳಸುವುದಾಗಿ ಪ್ರತಿಜ್ಞೆ ಮಾಡಿದರೆ, ಮುಂದಿನ ಐದು ವರ್ಷಗಳಲ್ಲಿ ದೇಶವು ಸ್ವಾವಲಂಬಿಯಾಗಲಿದೆ ಎಂಬುದು ಶ್ರೀ ಷಾ ಅವರ ಅಭಿಪ್ರಾಯವಾಗಿದೆ,

"ಸ್ಥಳೀಯ ಉತ್ಪನ್ನಗಳನ್ನು ಬಳಸಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಪಯಣದಲ್ಲಿ ನಾವೆಲ್ಲರೂ ಪ್ರಧಾನಿ ಮೋದಿಯವರ ಕೈಗಳನ್ನು ಬಲಪಡಿಸೋಣ" ಎಂದು ಗೃಹ ಸಚಿವರು ದೇಶದ ಜನರಿಗೆ ಮನವಿ ಮಾಡಿದ್ದಾರೆ.

***


(Release ID: 1623658) Visitor Counter : 292