ರೈಲ್ವೇ ಸಚಿವಾಲಯ

ದೇಶಾದ್ಯಂತ ಮೇ 12, 2020 ರ (09:30 ಗಂಟೆ) ವರೆಗೆ ಭಾರತೀಯ ರೈಲ್ವೇ 542 “ಶ್ರಮಿಕ್ ವಿಶೇಷ” ರೈಲುಗಳ ಸಂಚಾರವನ್ನು ಕೈಗೊಂಡಿದೆ

प्रविष्टि तिथि: 12 MAY 2020 12:50PM by PIB Bengaluru

ದೇಶಾದ್ಯಂತ ಮೇ 12, 2020 ರ (09:30 ಗಂಟೆ) ವರೆಗೆ ಭಾರತೀಯ ರೈಲ್ವೇ

542 “ಶ್ರಮಿಕ್ ವಿಶೇಷ” ರೈಲುಗಳ ಸಂಚಾರವನ್ನು ಕೈಗೊಂಡಿದೆ

6.48 ಲಕ್ಷ ಪ್ರಯಾಣಿಕರ ಪ್ರಯಾಣ

ಪ್ರಯಾಣಿಕರಿಗೆ ಉಚಿತ ಊಟ ಮತ್ತು ನೀರು ನೀಡಲಾಗುತ್ತಿದೆ

ಭಾರತೀಯ ರೈಲ್ವೆಯು ರೈಲುಗಳನ್ನು ಪ್ರಯಾಣಿಕರನ್ನು ಕಳುಹಿಸುವ ರಾಜ್ಯ ಮತ್ತು ಅವರನ್ನು ಸ್ವೀಕರಿಸುವ ರಾಜ್ಯ ಎರಡೂ ಸಹಮತ ನೀಡಿದ ನಂತರವೇ ಓಡಿಸಲಾಗುತ್ತಿದೆ.

ಸಾಮಾಜಿಕ ಅಂತರವನ್ನು ಪಾಲಿಸಲಾಗುತ್ತಿದೆ

 

ವಿಶೇಷ ರೈಲುಗಳಲ್ಲಿ ವಿವಿಧ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳ ಸಂಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯದ ಆದೇಶದ ನಂತರ, ಭಾರತೀಯ ರೈಲ್ವೆಯು “ಶ್ರಮಿಕ್ ವಿಶೇಷ” ರೈಲುಗಳನ್ನು ಓಡಿಸಲು ನಿರ್ಧರಿಸಿತು.

ಮೇ 12, 2020 ರ ಹೊತ್ತಿಗೆ, ದೇಶಾದ್ಯಂತ ವಿವಿಧ ರಾಜ್ಯಗಳಿಂದ ಒಟ್ಟು 542 “ಶ್ರಮಿಕ್ ಸ್ಪೆಷಲ್” ರೈಲುಗಳನ್ನು ಕಾರ್ಯಗತಗೊಳಿಸಲಾಗಿದ್ದು, ಇದರಲ್ಲಿ 448 ರೈಲುಗಳು ಅವುಗಳ ಗಮ್ಯಸ್ಥಾನವನ್ನು ತಲುಪಿವೆ ಮತ್ತು 94 ರೈಲುಗಳು ಸಾಗುತ್ತಿವೆ.

448 ರೈಲುಗಳು ವಿವಿಧ ರಾಜ್ಯಗಳಲ್ಲಿ ಅಂದರೆ ಆಂಧ್ರಪ್ರದೇಶ (1 ರೈಲು), ಬಿಹಾರ (117 ರೈಲುಗಳು), ಛತ್ತೀಸ್‌ಗಢ (1 ರೈಲು), ಹಿಮಾಚಲ ಪ್ರದೇಶ (1 ರೈಲು), ಜಾರ್ಖಂಡ್ (27 ರೈಲುಗಳು), ಕರ್ನಾಟಕ (1 ರೈಲು), ಮಧ್ಯಪ್ರದೇಶ ( 38 ರೈಲುಗಳು), ಮಹಾರಾಷ್ಟ್ರ (3 ರೈಲುಗಳು), ಒಡಿಶಾ (29 ರೈಲುಗಳು), ರಾಜಸ್ಥಾನ (4 ರೈಲುಗಳು), ತಮಿಳುನಾಡು (1 ರೈಲು), ತೆಲಂಗಾಣ (2 ರೈಲುಗಳು), ಉತ್ತರ ಪ್ರದೇಶ (221 ರೈಲುಗಳು), ಪಶ್ಚಿಮ ಬಂಗಾಳ (2 ರೈಲುಗಳು) ತಲುಪಿವೆ.

ರೈಲುಗಳು ತಿರುಚ್ಚಿರಪ್ಪಳ್ಳಿ, ಟಿಟ್ಲಾಗಢ್, ಬರೌನಿ, ಖಂಡವಾ, ಜಗನ್ನಾಥಪುರ, ಖುರ್ಡಾ ರಸ್ತೆ, ಪ್ರಯಾಗರಾಜ್, ಛಾಪ್ರಾ, ಬಲಿಯಾ, ಗಯಾ, ಪೂರ್ಣಿಯಾ, ವಾರಣಾಸಿ, ದರ್ಭಂಗಾ, ಗೋರಖ್‌ಪುರ, ಲಕ್ನೋ, ಜೌನ್‌ಪುರ್, ಹಾತಿಯಾ, ಬಸ್ತಿ, ಕಾಟಿಹಾರ್, ದಾನಾಪುರ್ ಮುಝಫರ್ ಪುರ್, ಸಹರ್ಸಾ ಇತ್ಯಾದಿ ಸ್ಥಳಗಳಿಗೆ ವಲಸೆ ಬಂದವರನ್ನು ಸಾಗಿಸಿವೆ

ಶ್ರಮಿಕ್ ವಿಶೇಷ ರೈಲುಗಳಲ್ಲಿ, ರೈಲು ಹತ್ತುವ ಮೊದಲು ಪ್ರಯಾಣಿಕರನ್ನು ಸರಿಯಾಗಿ ಪರೀಕ್ಷಿಸುವುದನ್ನು ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಉಚಿತ ಊಟ ಮತ್ತು ನೀರು ನೀಡಲಾಗುತ್ತದೆ.

***


(रिलीज़ आईडी: 1623404) आगंतुक पटल : 292
इस विज्ञप्ति को इन भाषाओं में पढ़ें: Tamil , English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Telugu , Malayalam