ನಾಗರೀಕ ವಿಮಾನಯಾನ ಸಚಿವಾಲಯ

ವಂದೇ ಭಾರತ್ ಮಿಷನ್ ಅಡಿಯಲ್ಲಿ 2020ರ ಮೇ 7 ರಿಂದೀಚೆಗೆ 31 ವಿಮಾನಗಳ ಮೂಲಕ ವಿದೇಶದಲ್ಲಿರುವ 6037 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ

Posted On: 12 MAY 2020 2:15PM by PIB Bengaluru

ವಂದೇ ಭಾರತ್ ಮಿಷನ್ ಅಡಿಯಲ್ಲಿ 2020 ಮೇ 7 ರಿಂದೀಚೆಗೆ 31 ವಿಮಾನಗಳ ಮೂಲಕ ವಿದೇಶದಲ್ಲಿರುವ 6037 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ

 

ವಂದೇ ಭಾರತ್ ಮಿಷನ್ ಅಡಿಯಲ್ಲಿ 2020 ಮೇ 7ರಿಂದ ಆರಂಭವಾಗಿ 5 ದಿನಗಳಲ್ಲಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ 31 ವಿಮಾನಗಳ ಮೂಲಕ 6037 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ.

ಭಾರತ ಸರ್ಕಾರ, ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆತರುವ ಅತಿ ದೊಡ್ಡ ಯೋಜನೆ ವಂದೇ ಭಾರತ್ ಮಿಷನ್ ಅನ್ನು 2020 ಮೇ 7ರಿಂದ ಆರಂಭಿಸಿತು. ಮಿಷನ್ ಅಡಿಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತಕ್ಕೆ ವಾಪಸ್ ಕರೆತರುತ್ತಿರುವ ಭಾರತೀಯರ ತವರು ನೆಲದ ಸರ್ಕಾರಗಳೊಂದಿಗೆ ಸಮನ್ವಯ ನಡೆಸುತ್ತಿದೆ.

ಏರ್ ಇಂಡಿಯಾ ತನ್ನ ಉಪ ಸಂಸ್ಥೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಮೂಲಕ ಒಟ್ಟಾರೆ 64 ವಿಮಾನಗಳ(42 ಏರ್ ಇಂಡಿಯಾ ಮತ್ತು 24 ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳು)ನ್ನು 12 ರಾಷ್ಟ್ರಗಳಾದ ಅಮೆರಿಕ, ಬ್ರಿಟನ್, ಬಾಂಗ್ಲಾದೇಶ, ಸಿಂಗಾಪುರ, ಸೌದಿ ಅರೆಬಿಯಾ, ಕುವೈತ್, ಫಿಲಿಪೈನ್ಸ್, ಯುಎಇ ಮತ್ತು ಮಲೇಷ್ಯಾದಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಮೊದಲ ಹಂತದಲ್ಲಿ 14,800 ಭಾರತೀಯರನ್ನು ಕರೆತರಲಾಗುತ್ತಿದೆ.

ಬೃಹತ್ ವಿಮಾನಯಾನ ಸ್ಥಳಾಂತರ ಕಾರ್ಯಾಚರಣೆಯಲ್ಲಿ ಡಿಜಿಸಿಎ ಮತ್ತು ಸರ್ಕಾರದ ಎಲ್ಲ ಸುರಕ್ಷತಾ ಮತ್ತು ಶುಚಿತ್ವ ಶಿಷ್ಟಾಚಾರಗಳನ್ನು ಕಡ್ಡಾಯವಾಗಿ ಪ್ರತಿಯೊಂದು ಹಂತದಲ್ಲೂ ಪಾಲನೆ ಮಾಡಲಾಗುತ್ತಿದೆ. ಎಂಒಸಿಎ, ಎಎಐ ಮತ್ತು ಏರ್ ಇಂಡಿಯಾ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ, ಯಾವುದೇ ಕ್ರಮಗಳಲ್ಲೂ ರಾಜಿ ಮಾಡಿಕೊಳ್ಳುತ್ತಿಲ್ಲ. ಚಾಲಕ ಮತ್ತು ತಳಮಟ್ಟದ ಸಿಬ್ಬಂದಿಯನ್ನು ಜಾಗೃತಿಗೊಳಿಸಿ, ಸೂಕ್ಷ್ಮ ರೀತಿಯಲ್ಲಿ ವೈದ್ಯಕೀಯ ಕ್ರಮಗಳನ್ನು ಅನುಸರಿಸಿ, ಕಾರ್ಯಾಚರಣೆ ನಡೆಸಲಾಗುತ್ತಿದೆ.

ಸರ್ಕಾರದ ಮಾರ್ಗಸೂಚಿಗಳ ಅನುಸಾರ ವ್ಯಾಪಕ ಮತ್ತು ಕಟ್ಟುನಿಟ್ಟಿನ ಸುರಕ್ಷತಾ ಏರ್ಪಾಡುಗಳನ್ನು ಮಾಡಲಾಗಿದೆ.

***



(Release ID: 1623376) Visitor Counter : 227