ಸಂಸ್ಕೃತಿ ಸಚಿವಾಲಯ

ಗಾಂಧಿ ಶಾಂತಿ ಪ್ರಶಸ್ತಿ 2020ಕ್ಕೆ ನಾಮಾಂಕನ ಸಲ್ಲಿಸುವ ಕೊನೆಯ ದಿನಾಂಕವನ್ನು 15.06.2020 ರವರೆಗೆ ವಿಸ್ತರಿಸಿದ ಸರ್ಕಾರ

प्रविष्टि तिथि: 11 MAY 2020 6:23PM by PIB Bengaluru

ಗಾಂಧಿ ಶಾಂತಿ ಪ್ರಶಸ್ತಿ 2020ಕ್ಕೆ ನಾಮಾಂಕನ ಸಲ್ಲಿಸುವ ಕೊನೆಯ ದಿನಾಂಕವನ್ನು 15.06.2020 ರವರೆಗೆ ವಿಸ್ತರಿಸಿದ ಸರ್ಕಾರ

 

ಕೇಂದ್ರ ಸಂಸ್ಕೃತಿ ಸಚಿವಾಲಯ ಪ್ರತಿವರ್ಷ ಗಾಂಧಿ ಶಾಂತಿ ಪ್ರಶಸ್ತಿಗೆ ನಾಮಾಂಕನಗಳನ್ನು ಆಹ್ವಾನಿಸುತ್ತದೆ. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಂತರ್ಜಾಲ ತಾಣ www.indiaculture.nic.in. ದಲ್ಲಿ ಲಭ್ಯವಿರುವ ಗಾಂಧಿ ಶಾಂತಿ ಪ್ರಶಸ್ತಿಯ ಕಾರ್ಯವಿಧಾನಗಳ ನಿಯಮಾವಳಿಗನುಗುಣವಾಗಿ ನಾಮಾಂಕನಗಳನ್ನು ಸಲ್ಲಿಸಬೇಕು.

2020 ಸಾಲಿಗೆ ನಾಮಾಂಕನಗಳನ್ನು ಸ್ವೀಕರಿಸಲು 2020 ಏಪ್ರಿಲ್ 30 ಕೊನೆಯ ದಿನವಾಗಿತ್ತು. ಕೋವಿಡ್ -19 ದೇಶವ್ಯಾಪಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಗಾಂಧಿ ಶಾಂತಿ ಪ್ರಶಸ್ತಿ 2020ಕ್ಕೆ ನಾಮಾಂಕನಗಳನ್ನು ಸ್ವೀಕರಿಸುವ ಕೊನೆಯ ದಿನಾಂಕವನ್ನು 16.6.2020 ಸೇರಿದಂತೆ ದಿನಾಂಕದವರೆಗೆ ವಿಸ್ತರಿಸಲಾಗಿದೆ.

ನಾಮಾಂಕನಗಳು/ಶಿಫಾರಸುಗಳನ್ನು ನಿಗದಿತ ನಮೂನೆಗಳಲ್ಲಿ ಅಂಚೆ/ -ಮೇಲ್ ಮೂಲಕ

ಮೆ. ನಿರುಪಮಾ ಕೊಟ್ರು, ಜಂಟಿ ಕಾರ್ಯದರ್ಶಿ,

ಸಂಸ್ಕೃತಿ ಸಚಿವಾಲಯ,

ಕೊಠಡಿ ಸಂಖ್ಯೆ 334 ಸಿ, ಶಾಸ್ತ್ರೀ ಭವನ,

ನವದೆಹಲಿ

ಟೆಲಿ ಫ್ಯಾಕ್ಸ್ ನಂ. 011-23381198

ಮೇಲ್: jsmuseakad-culture[at]gov[dot]in

mdehuri.rgi[at]nic[dot]in ಇಲ್ಲಿ ಕಳುಹಿಸಬಹುದು.

***


(रिलीज़ आईडी: 1623195) आगंतुक पटल : 314
इस विज्ञप्ति को इन भाषाओं में पढ़ें: Tamil , English , Urdu , Marathi , हिन्दी , Bengali , Manipuri , Punjabi , Odia , Telugu