ಕಾನೂನು ಮತ್ತು ನ್ಯಾಯ ಸಚಿವಾಲಯ

ಭಾರತ ಸರಕಾರದ ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್ ಮತ್ತು ಎಲ್ಲಾ ಕಾನೂನು ಅಧಿಕಾರಿಗಳ ಜೊತೆ ಪರಾಮರ್ಶಾ ಸಭೆ ನಡೆಸಿದ ಕಾನೂನು ಸಚಿವರು

Posted On: 10 MAY 2020 4:51PM by PIB Bengaluru

ಭಾರತ ಸರಕಾರದ ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್ ಮತ್ತು ಎಲ್ಲಾ ಕಾನೂನು ಅಧಿಕಾರಿಗಳ ಜೊತೆ ಪರಾಮರ್ಶಾ ಸಭೆ ನಡೆಸಿದ ಕಾನೂನು ಸಚಿವರು

ನ್ಯಾಯ ವಿತರಣೆಯನ್ನು ಹೆಚ್ಚು ಬಲಿಷ್ಟಗೊಳಿಸಲು ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದಕ್ಕೆ ಲಾಕ್ ಡೌನ್ ಒಂದು ಅವಕಾಶವಾಗಿ ಪರಿಗಣಿಸೋಣ: ಶ್ರೀ ರವಿಶಂಕರ ಪ್ರಸಾದ್

 

ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವರಾದ ಶ್ರೀ ರವಿಶಂಕರ ಪ್ರಸಾದ್ ಅವರು ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಭಾರತದ ಅಟಾರ್ನಿ ಜನರಲ್ ನೇತೃತ್ವದ ಕಾನೂನು ಅಧಿಕಾರಿಗಳ ತಂಡದ ಜೊತೆ ಸಂವಾದ ನಡೆಸಿದರು. ಭಾರತದ ಅಟಾರ್ನಿ ಜನರಲ್ ಕೆ.ಕೆ. ವೇಣು ಗೋಪಾಲ್. ಸಾಲಿಸಿಟರ್ ಜನರಲ್ ಶ್ರೀ ತುಷಾರ್ ಮೆಹ್ತಾ, ಎಲ್ಲಾ ಹೆಚ್ಚುವರಿ ಸಾಲಿಸಿಟರ್ ಜನರಲ್ ಮತ್ತು ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ , ಕಾನೂನು ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ, ನ್ಯಾಯಾಂಗ ಇಲಾಖೆಯ ಕಾರ್ಯದರ್ಶಿ ಸಭೆಯಲ್ಲಿ ಭಾಗವಹಿಸಿದ್ದರು. ಕೊರೊನಾವೈರಸ್ ಹರಡುವಿಕೆ ತಡೆಯಲು ಜಾರಿಯಲ್ಲಿರುವ ಲಾಕ್ ಡೌನ್ ಅವಧಿಯಲ್ಲಿ ನಡೆದಿರುವ ಮೊದಲ ವರ್ಚುವಲ್ ಸಭೆ ಇದಾಗಿದೆ.

ತಮ್ಮ ಆರಂಭಿಕ ಮಾತುಗಳಲ್ಲಿ ಕಾನೂನು ಸಚಿವರು ನಾವು ಸವಾಲಿನ ಸಂದರ್ಭಗಳಲ್ಲಿ ಬದುಕುತ್ತಿದ್ದೇವೆ ಮತ್ತು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶವನ್ನು ಭಾರತದ ತಂಡದ ನಾಯಕತ್ವ ವಹಿಸಿಕೊಂಡು ಮುನ್ನಡೆಸುತ್ತಿದ್ದಾರೆ ಮತ್ತು ಭಾರತ ಸರಕಾರ ಹಾಗು ಎಲ್ಲಾ ರಾಜ್ಯ ಸರಕಾರಗಳು ಆಗಾಗ ಸಂವಾದ ನಡೆಸಿ ಸವಾಲಿಗೆ ಸೂಕ್ತ ಉತ್ತರ ನೀಡಲು ತೀರ್ಮಾನವನ್ನು ಕೈಗೊಳ್ಳುತ್ತಿವೆ ಎಂದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರೇ ಲಾಕ್ ಡೌನ್ ಆವಶ್ಯಕತೆಯ ಬಗ್ಗೆ ಅವಿರೋಧವಾದ ತೀರ್ಮಾನಕ್ಕೆ ಬರುವುದಕ್ಕಾಗಿ ಮತ್ತು ಲಾಕ್ ಡೌನ್ ನಿಂದ ಉದ್ಭವಿಸುವ ಸವಾಲುಗಳನ್ನು ಎದುರಿಸಲು ಮುಖ್ಯಮಂತ್ರಿಗಳ ಜೊತೆ ಸರಣಿ ವರ್ಚುವಲ್ ಸಭೆಗಳನ್ನು ನಡೆಸಿದ್ದಾರೆ ಎಂದು ಶ್ರೀ ಪ್ರಸಾದ್ ಅವರು ಕಾನೂನು ಅಧಿಕಾರಿಗಳಿಗೆ ತಿಳಿಸಿದರು. ಸಂಪುಟ ಕಾರ್ಯದರ್ಶಿ ಮತ್ತು ಆರೋಗ್ಯ ಕಾರ್ಯದರ್ಶಿಗಳು ವಿವಿಧ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಕಾರ್ಯದರ್ಶಿಗಳ ಜೊತೆ ಸಂವಾದ ನಡೆಸುತ್ತಿದ್ದಾರೆ. ವಿಸ್ತಾರವಾದ ಹಿಮ್ಮಾಹಿತಿಯ ಆಧಾರದಲ್ಲಿ ಗೃಹ ಸಚಿವಾಲಯ, ಆರೋಗ್ಯ ಸಚಿವಾಲಯ ಮತ್ತು ಇತರ ಸಂಬಂಧಿತ ಸಚಿವಾಲಯಗಳು ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಮಾರ್ಗದರ್ಶಿಗಳನ್ನು ಹೊರಡಿಸುತ್ತಿವೆ.

ಇಂತಹ ಗಂಭೀರವಾದ ಜಾಗತಿಕ ಸಾಂಕ್ರಾಮಿಕವನ್ನು ನಿಭಾಯಿಸುವಾಗ ಅದು ಸಂಕೀರ್ಣ ಮತ್ತು ಸೂಕ್ಷ್ಮ ಸ್ವರೂಪದ ಸವಾಲುಗಳನ್ನು ಹಾಕುತ್ತದೆ ಎಂಬುದನ್ನು ವಿಶೇಷವಾಗಿ ಪ್ರಸ್ತಾಪಿಸಿದ ಸಚಿವರು , ಇದರಲ್ಲಿ ಆಡಳಿತ ವ್ಯವಸ್ಥೆ ತಕ್ಷಣ ಪ್ರತಿಕ್ರಿಯಿಸಿದೆ ಮತ್ತು ಭಾರತ ಸರಕಾರದ ಹಾಗು ರಾಜ್ಯ ಸರಕಾರಗಳ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ನಂಬಿಕಾರ್ಹವಾಗಿದೆ. ಅಟಾರ್ನಿ ಜನರಲ್ ಕೂಡಾ ಚಿಂತನೆಯನ್ನು ಬೆಂಬಲಿಸಿದ್ದಾರೆ ಹಾಗು ಕೋರ್ಟುಗಳು ಕೂಡಾ ಇದನ್ನು ಪ್ರಶಂಸಿಸಬೇಕಾಗಿದೆ ಎಂದರು. ಸಾಲಿಸಿಟರ್ ಜನರಲ್ ಶ್ರೀ ತುಷಾರ್ ಮೆಹ್ತಾ ಅವರು ಸಲ್ಲಿಕೆಯಾಗುತ್ತಿರುವ ಪ್ರಕರಣಗಳ ಸ್ವರೂಪವನ್ನು ವಿವರಿಸಿದರಲ್ಲದೆ ಕಾಲ ಕಾಲಕ್ಕೆ ಸರ್ವೋಚ್ಚ ನ್ಯಾಯಾಲಯ ನೀಡುತ್ತಿರುವ ಆದೇಶಗಳ ಬಗ್ಗೆಯೂ ಪ್ರಸ್ತಾಪಿಸಿ , ಸರಕಾರ ಹೊರಡಿಸಿದ ಮಾರ್ಗದರ್ಶಿಗಳನ್ನು ಅದು ಎತ್ತಿ ಹಿಡಿದಿರುವ ಬಗ್ಗೆಯೂ ಮತ್ತು ಕ್ರಮ ತೆಗೆದುಕೊಂಡಿರುವ ಬಗ್ಗೆಯೂ ವಿವರಿಸಿದರು.

ಸವಾಲಿನ ಸಮಯದಲ್ಲಿ ಅತ್ಯುತ್ಸಾಹೀ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು (ಪಿ..ಎಲ್.) ಬದಿಗಿಡುವ ಬಗ್ಗೆ ಕಾನೂನು ಸಚಿವರು ನಿರ್ದಿಷ್ಟವಾಗಿ ಪ್ರಸ್ತಾಪಿಸಿದರು. ಅರ್ಜಿಗಳನ್ನು ಸಲ್ಲಿಸುವವರನ್ನು ಯಾರೊಬ್ಬರೂ ತಡೆಯುವುದು ಸಾಧ್ಯ ಇಲ್ಲದಿದ್ದರೂ , ಅಂತಹ ಸಂದರ್ಭಗಳಲ್ಲಿ ಸೂಕ್ತ ಪ್ರತಿಕ್ರಿಯೆ ಇರಬೇಕು . ಇದನ್ನು ಅಟಾರ್ನಿ ಜನರಲ್ ಅವರೂ ಎಲ್ಲಾ ಕಾನೂನು ಅಧಿಕಾರಿಗಳೂ ಪ್ರಶಂಸಿಸಿದ್ದಾರೆ ಎಂದರು. ನ್ಯಾಯಾಂಗ ಇಲಾಖೆ ಕಾರ್ಯದರ್ಶಿ -ನ್ಯಾಯಾಲಯಗಳು ಮತ್ತು ಅದನ್ನು ಹೆಚ್ಚು ಕ್ರಿಯಾಶೀಲಗೊಳಿಸುವ ಇತರ ಬೆಳವಣಿಗೆಗಳನ್ನು, ಅಂಶಗಳನ್ನು ಪ್ರಸ್ತಾಪಿಸಿದರು. ಲಾಕ್ ಡೌನ್ ಅವಧಿಯಲ್ಲಿ ಪ್ರಕರಣಗಳನ್ನು -ಫೈಲಿಂಗ್ ಮಾಡುವುದಕ್ಕಾಗಿ ನೊಂದಾಯಿಸಿಕೊಂಡ ವಕೀಲರ ಸಂಖ್ಯೆಯಲ್ಲಿ ಕೂಡಾ ಗಮನಾರ್ಹ ಹೆಚ್ಚಳವಾಗಿದೆ ಎಂಬ ಅಂಶವನ್ನು ಅವರು ಹಂಚಿಕೊಂಡರು. ಲಾಕ್ ಡೌನ್ ಅವಧಿಯಲ್ಲಿ ಪ್ರಕರಣಗಳನ್ನು -ಫೈಲಿಂಗ್ ಮಾಡಿಕೊಡಲು ನೊಂದಾಯಿಸಿಕೊಂಡ ವಕೀಲರ ಸಂಖ್ಯೆ 1282 ಆಗಿದ್ದು, ಇವರಲ್ಲಿ 534 ವಕೀಲರು ಕಳೆದ ಒಂದು ವಾರದಲ್ಲಿಯೇ ನೊಂದಾಯಿಸಿಕೊಂಡಿದ್ದಾರೆ. ಕೋವಿಡ್ -19 ಕ್ಕೆ ಸಂಬಂಧಿಸಿ ಸಲ್ಲಿಕೆಯಾದ ಪ್ರಕರಣಗಳನ್ನು ಹಿಂಬಾಲಿಸಲು ಕಾನೂನು ಸಚಿವಾಲಯದಲ್ಲಿ ಲಭ್ಯ ಇರುವ ಸಮನ್ವಯ ವ್ಯವಸ್ಥೆಯನ್ನು ಕಾನೂನು ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅವರು ವಿವರಿಸಿದರು. ನಮ್ಮ ಧೋರಣೆಯಲ್ಲಿ ಏಕತ್ವ ಇರಬೇಕು ಎಂಬುದು ಸಮಾನ ಒಟ್ಟಾಭಿಪ್ರಾಯ ಆಗಿದೆ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ತಕ್ಷಣವೇ ವಿವಿಧ ಹೈಕೋರ್ಟುಗಳಿಗೆ ತಿಳಿಸಬೇಕು ಎಂಬ ನಿಲುವೂ ಇದರಲ್ಲಿದೆ ಎಂದರು.

ಸಂಪರ್ಕಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಹರಿಸಲು ಮತ್ತು -ನ್ಯಾಯಾಲಯ ನಿರ್ವಹಣೆಯಲ್ಲಿ ವಕೀಲರಿಗೆ ತರಬೇತಿ ನೀಡುವ ಮೂಲಕ - ನ್ಯಾಯಾಲಯ ವ್ಯವಸ್ಥೆಗಳನ್ನು ಬಲಪಡಿಸಬೇಕಾದ ಅಗತ್ಯವನ್ನು ಅಟಾರ್ನಿ ಜನರಲ್ ಅವರು ಮತ್ತು ಇತರ ಕಾನೂನು ಅಧಿಕಾರಿಗಳು ಒತ್ತಿ ಹೇಳಿದರು. ಕಾನೂನು ಸಚಿವರು, ಸರ್ವೋಚ್ಚ ನ್ಯಾಯಾಲಯದ -ನ್ಯಾಯಾಲಯ ಸಮಿತಿಯ ಸದಸ್ಯರೂ ಆಗಿರುವ ನ್ಯಾಯಾಂಗ ಕಾರ್ಯದರ್ಶಿಗಳಿಗೆ ಸವಾಲುಗಳನ್ನು ಸಮಿತಿಯ ಎದುರು ತರಲು ಸಮನ್ವಯ ಸಾಧಿಸುವಂತೆ ಹಾಗು ಎನ್..ಸಿ. ಮತ್ತು ಇತರ ಏಜೆನ್ಸಿಗಳ ಜೊತೆಗೂಡಿ ವ್ಯವಸ್ಥೆಯನ್ನು ಸುಧಾರಿಸಲು ಸಮನ್ವಯ ಮಾಡುವಂತೆ ನಿರ್ದೇಶನ ನೀಡಿದರು. ಜಾಗತಿಕ ಸಾಂಕ್ರಾಮಿಕದ ಗಂಭೀರತೆಯ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕ್ರಿಯೆಗಳ ವೀಡಿಯೋ ಕಾನ್ಫರೆನ್ಸಿಂಗ್ ಇನ್ನೂ ಕೆಲವು ಕಾಲ ಮಾನದಂಡವಾಗಿ ಉಳಿಯಲಿದೆ ಎಂದು ಭಾವಿಸಲಾಗುತ್ತದೆ. ಸವಾಲನ್ನು ಒಂದು ಅವಕಾಶವಾಗಿ ಪರಿಗಣಿಸಿ ನ್ಯಾಯ ವಿತರಣೆಯಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಹೆಚ್ಚು ಬಲಯುತ ಮಾಡಬೇಕು ಎಂದು ಕಾನೂನು ಸಚಿವರು ಒತ್ತಿ ಹೇಳಿದರು.

***



(Release ID: 1622871) Visitor Counter : 1363