ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ನಿರ್ವಹಣೆಗೆ ಸಾಕಷ್ಟು ಆರೋಗ್ಯ ಮೂಲಸೌಕರ್ಯ ಮತ್ತು ಆರೋಗ್ಯ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ

Posted On: 10 MAY 2020 2:44PM by PIB Bengaluru

ಕೋವಿಡ್-19 ನಿರ್ವಹಣೆಗೆ ಸಾಕಷ್ಟು ಆರೋಗ್ಯ ಮೂಲಸೌಕರ್ಯ ಮತ್ತು ಆರೋಗ್ಯ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ

 

ದೇಶದಲ್ಲಿ ಕೋವಿಡ್-19 ನಿರ್ವಹಣೆಗೆ ಸಾಕಷ್ಟು ಆರೋಗ್ಯ ಮೂಲಸೌಕರ್ಯ ಮತ್ತು ಆರೋಗ್ಯ ಸೌಲಭ್ಯಗಳನ್ನು ಗುರುತಿಸಲಾಗಿದೆ ಮತ್ತು ಸ್ಥಾಪಿಸಲಾಗಿದೆ. ಕೋವಿಡ್-19 ಪ್ರಕರಣಗಳ ನಿರ್ವಹಣೆಗೆ ಮೀಸಲಾಗಿರುವ ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಕೆಳಗಿನಂತೆ ಮೂರು ವರ್ಗಗಳನ್ನಾಗಿ ವಿಂಗಡಿಸಲಾಗಿದೆ:

  1. ವರ್ಗ I ಮೀಸಲಾದ ಕೋವಿಡ್ ಆಸ್ಪತ್ರೆ (ಡಿಸಿಹೆಚ್) - ಮೀಸಲಾದ ಕೋವಿಡ್ ಆಸ್ಪತ್ರೆಗಳು ಪ್ರಾಥಮಿಕವಾಗಿ ತೀವ್ರ ಅನಾರೋಗ್ಯವಾದವರೆಂದು ಗುರುತಿಸಲ್ಪಟ್ಟವರಿಗೆ ಸಮಗ್ರ ಆರೈಕೆಯನ್ನು ನೀಡುವ ಆಸ್ಪತ್ರೆಗಳಾಗಿವೆ ಆಸ್ಪತ್ರೆಗಳು ಐಸಿಯುಗಳು, ವೆಂಟಿಲೇಟರ್ಗಳು ಮತ್ತು ಹಾಸಿಗೆಗಳನ್ನು ಸಂಪೂರ್ಣ ಆಕ್ಸಿಜನ್ ಸೌಲಭ್ಯಗಳನ್ನು ಹೊಂದಿರಬೇಕು. ಆಸ್ಪತ್ರೆಗಳು ಶಂಕಿತ ಮತ್ತು ದೃಢಪಡಿಸಿದ ಪ್ರಕರಣಗಳಿಗೆ ಪ್ರತ್ಯೇಕ ಜಾಗಗಳನ್ನು ಹೊಂದಿರುತ್ತವೆ. ಮೀಸಲಾದ ಕೋವಿಡ್ ಆಸ್ಪತ್ರೆಗಳು, ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರಗಳಿಗೆ ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ಉಲ್ಲೇಖಿತ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ.
  2. ವರ್ಗ II ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರ (ಡಿಸಿಹೆಚ್ ಸಿ) - ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರಗಳು ಚಿಕಿತ್ಸಕವಾಗಿ ಮಧ್ಯಮ ಎಂದು ಗುರುತಿಸಲಾದ ಎಲ್ಲಾ ಪ್ರಕರಣಗಳಿಗೆ ಆರೈಕೆ ನೀಡುತ್ತದೆ. ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರವು ಶಂಕಿತ ಮತ್ತು ದೃಢಪಡಿಸಿದ ಪ್ರಕರಣಗಳಿಗೆ ಪ್ರತ್ಯೇಕ ಜಾಗಗಳನ್ನು ಹೊಂದಿರುತ್ತದೆ. ಆಸ್ಪತ್ರೆಗಳು ಆಕ್ಸಿಜನ್ ಸೌಲಭ್ಯದೊಂದಿಗೆ ಹಾಸಿಗೆಗಳನ್ನು ಹೊಂದಿರುತ್ತವೆ. ಪ್ರತಿ ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರವನ್ನು ಒಂದು ಅಥವಾ ಹೆಚ್ಚಿನ ಮೀಸಲಾದ ಕೋವಿಡ್ ಆಸ್ಪತ್ರೆಗಳಿಗೆ ಜೋಡಿಸಲಾಗಿದೆ.
  3. ವರ್ಗ III ಮೀಸಲಾದ ಕೋವಿಡ್ ಆರೈಕೆ ಕೇಂದ್ರ (ಡಿಸಿಸಿಸಿ) - ಕೋವಿಡ್ ಆರೈಕೆ ಕೇಂದ್ರಗಳು ಪ್ರಾಯೋಗಿಕವಾಗಿ ಸೌಮ್ಯ ಅಥವಾ ಅತ್ಯಂತ ಸೌಮ್ಯವಾದ ಪ್ರಕರಣಗಳು ಅಥವಾ ಕೋವಿಡ್ ಶಂಕಿತ ಪ್ರಕರಣಗಳಾಗಿ ಗುರುತಿಸಲ್ಪಟ್ಟ ಪ್ರಕರಣಗಳಿಗೆ ಮಾತ್ರ ಸೇವೆಯನ್ನು ನೀಡುತ್ತವೆ. ಇವು ತಾತ್ಕಾಲಿಕ ಸೌಲಭ್ಯಗಳಾಗಿವೆ, ಇವುಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಹಾಸ್ಟೆಲ್ಗಳು, ಹೋಟೆಲ್ಗಳು, ಶಾಲೆಗಳು, ಕ್ರೀಡಾಂಗಣಗಳು, ವಸತಿಗೃಹಗಳು ಇತ್ಯಾದಿಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸ್ಥಾಪಿಸಬಹುದು. ಸೌಲಭ್ಯಗಳು ಶಂಕಿತ ಮತ್ತು ದೃಢಪಡಿಸಿದ ಪ್ರಕರಣಗಳಿಗೆ ಪ್ರತ್ಯೇಕ ಜಾಗಗಳನ್ನು ಹೊಂದಿರುತ್ತವೆ.ಪ್ರತಿ ಮೀಸಲಾದ ಕೋವಿಡ್ ಆರೈಕೆ ಕೇಂದ್ರವನ್ನು ಒಂದು ಅಥವಾ ಹೆಚ್ಚಿನ ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರಗಳಿಗೆ ಮತ್ತು ಉಲ್ಲೇಖಿತ ಉದ್ದೇಶಕ್ಕಾಗಿ ಕನಿಷ್ಠ ಒಂದು ಮೀಸಲಾದ ಕೋವಿಡ್ ಆಸ್ಪತ್ರೆಗೆ ಜೋಡಿಸಲಾಗಿದೆ.

10/05/2020 ರಂತೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 483 ಜಿಲ್ಲೆಗಳಲ್ಲಿ 7740 ಸೌಲಭ್ಯ ಕೇಂದ್ರಗಳನ್ನು ಗುರುತಿಸಲಾಗಿದೆ, ಇವುಗಳಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಮತ್ತು ಕೇಂದ್ರ ಸರ್ಕಾರದ ಆಸ್ಪತ್ರೆಗಳು ಮತ್ತು ಸೌಲಭ್ಯ ಕೇಂದ್ರಗಳು ಸೇರಿವೆ. 656769 ಪ್ರತ್ಯೇಕ ಹಾಸಿಗೆಗಳು, ದೃಢಪಡಿಸಿದ ಪ್ರಕರಣಗಳಿಗೆ 305567 ಹಾಸಿಗೆಗಳು, ಶಂಕಿತ ಪ್ರಕರಣಗಳಿಗೆ 351204 ಹಾಸಿಗೆಗಳು, 99492 ಆಮ್ಲಜನಕ ಸೌಲಭ್ಯದ ಹಾಸಿಗೆಗಳು, ಆಕ್ಸಿಜನ್ ಮ್ಯಾನಿಫೋಲ್ಡ್ನೊಂದಿಗೆ 1696 ಸೌಲಭ್ಯ ಕೇಂದ್ರಗಳು ಮತ್ತು 34076 ಐಸಿಯು ಹಾಸಿಗೆಗಳಿವೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಾರ್ವಜನಿಕ ಮಾಹಿತಿಗಾಗಿ ತಮ್ಮ ಜಾಲತಾಣಗಳಲ್ಲಿ ನಿಯೋಜಿಸಲಾದ ಮೂರು ರೀತಿಯ ಕೋವಿಡ್ ಮೀಸಲಾದ ಸೌಲಭ್ಯಗಳನ್ನು ತಿಳಿಸಲು ಮತ್ತು ಅಪ್ಲೋಡ್ ಮಾಡಲು ಭಾರತ ಸರ್ಕಾರದಿಂದ ಕೋರಲಾಗಿದೆ. 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ತಮ್ಮ ಜಾಲತಾಣಗಳು ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಗಳಲ್ಲಿ ಮಾಹಿತಿಯನ್ನು ಅಪ್ಲೋಡ್ ಮಾಡಿವೆ ಮತ್ತು ಉಳಿದವುಗಳು ಅದೇ ರೀತಿ ಮಾಡುವ ಪ್ರಕ್ರಿಯೆಯಲ್ಲಿವೆ.

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್ಸಿಡಿಸಿ) ದಲ್ಲಿ ಕೋವಿಡ್ -19 ಪರೀಕ್ಷಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯತೆಯ ದೃಷ್ಟಿಯಿಂದ, ಅಧಿಕಾರಯುಕ್ತ ಸಮಿತಿ 2 ಶಿಫಾರಸುಗಳ ಪ್ರಕಾರ ಹೆಚ್ಚಿನ ಥ್ರೋಪುಟ್ ಯಂತ್ರವನ್ನು ಖರೀದಿಸಲು ಅನುಮೋದನೆ ನೀಡಲಾಯಿತು. ಕೋಬಾಸ್ 6800 ಪರೀಕ್ಷಾ ಯಂತ್ರವನ್ನು ಈಗ ಎನ್ಸಿಡಿಸಿಯಲ್ಲಿ ಯಶಸ್ವಿಯಾಗಿ ಸ್ಥಾಪಿಸಲಾಗಿದೆ. ಎನ್ಸಿಡಿಸಿ ದೆಹಲಿ, ಎನ್ಸಿಆರ್, ಲಡಾಖ್, ಜಮ್ಮು ಮತ್ತು ಕಾಶ್ಮೀರ ಮತ್ತು ಇತರ ರಾಜ್ಯಗಳ ಮಾದರಿಗಳನ್ನು ಪರೀಕ್ಷಿಸಲು ಸೌಲಭ್ಯವನ್ನು ಒದಗಿಸುತ್ತಿದೆ. ಪ್ರಸ್ತುತ ಎನ್ಸಿಡಿಸಿಯಲ್ಲಿ ದಿನಕ್ಕೆ 300-350 ಪರೀಕ್ಷೆಗಳ ಸಾಮರ್ಥ್ಯವಿದೆ. 24 ಗಂಟೆಗಳಲ್ಲಿ ಸುಮಾರು 1200 ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯ ಹೊಂದಿರುವ ಹೆಚ್ಚಿನ ಥ್ರೋಪುಟ್ ಯಂತ್ರವಾಗಿರುವ ಕೋಬಾಸ್ 6800 ನೊಂದಿಗೆ, ಎನ್ಸಿಡಿಸಿಯಲ್ಲಿ ಕೋವಿಡ್-19 ಪರೀಕ್ಷಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ.

ಈವರೆಗೆ ಒಟ್ಟು 19,357 ಜನರನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 1511 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದಾಗಿ ಒಟ್ಟು ಗುಣಮುಖರಾದ ಪ್ರಮಾಣವು 30.76% ಆಗಿದೆ. ದೃಢಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 62,939 ಆಗಿದೆ. ನಿನ್ನೆಯಿಂದ, ಭಾರತದಲ್ಲಿ ಕೋವಿಡ್-19 ದೃಢಪಡಿಸಿದ ಪ್ರಕರಣಗಳ ಸಂಖ್ಯೆಯಲ್ಲಿ 3277 ಹೆಚ್ಚಳ ಕಂಡುಬಂದಿದೆ.

ಕೋವಿಡ್-19ಕ್ಕೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***(Release ID: 1622829) Visitor Counter : 146