ರೈಲ್ವೇ ಸಚಿವಾಲಯ

ಭಾರತೀಯ ರೈಲ್ವೆಯಿಂದ ದೇಶಾದ್ಯಂತ 2020ರ ಮೇ 9ರ ವರೆಗೆ (1430 ಗಂಟೆಗಳ ವರೆಗೆ) 283 “ಶ್ರಮಿಕ ರೈಲು”ಗಳ ಸಂಚಾರ

Posted On: 09 MAY 2020 10:20PM by PIB Bengaluru

ಭಾರತೀಯ ರೈಲ್ವೆಯಿಂದ ದೇಶಾದ್ಯಂತ 2020 ಮೇ 9 ವರೆಗೆ (1430 ಗಂಟೆಗಳ ವರೆಗೆ) 283 “ಶ್ರಮಿಕ ರೈಲುಗಳ ಸಂಚಾರ

ಇಂದು 49 ಶ್ರಮಿಕ ರೈಲುಗಳ ಸಂಚಾರ ಪ್ರಗತಿಯಲ್ಲಿ

ಪ್ರಯಾಣಿಕರಿಗೆ ಉಚಿತ ಊಟ ಮತ್ತು ನೀರು ಪೂರೈಕೆ

ಪ್ರಯಾಣಿಕರನ್ನು ಕಳುಹಿಸುವ ಮತ್ತು ಅವರನ್ನು ಸ್ವೀಕರಿಸುವ ಎರಡೂ ರಾಜ್ಯಗಳ ಒಪ್ಪಿಗೆಯ ನಂತರ ರೈಲ್ವೆಯಿಂದ ರೈಲುಗಳ ಸಂಚಾರ
ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ

ಪ್ರತಿಯೊಂದು ಶ್ರಮಿಕ ರೈಲುಗಳಲ್ಲೂ ಸುಮಾರು 1200 ಪ್ರಯಾಣಿಕರ ಪ್ರಯಾಣ

ಇತ್ತೀಚಿನ ವರದಿಯಂತೆ ಈವರೆಗೆ 300ಕ್ಕೂ ಅಧಿಕ ರೈಲುಗಳ ಸಂಚಾರ

 

ಗೃಹ ಸಚಿವಾಲಯ, ದೇಶದ ನಾನಾ ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರೆ ಜನರ ಸಂಚಾರಕ್ಕೆ ವಿಶೇಷ ರೈಲುಗಳ ಪ್ರಯಾಣಕ್ಕೆ ಅನುಮತಿ ನೀಡಿದ ನಂತರ ಭಾರತೀಯ ರೈಲ್ವೆ ಶ್ರಮಿಕ ರೈಲುಗಳ ಸಂಚಾರ ಕೈಗೊಳ್ಳಲು ನಿರ್ಧರಿಸಿತು.

2020 ಮೇ 9 ವರೆಗೆ ದೇಶದ ನಾನಾ ರಾಜ್ಯಗಳಲ್ಲಿ ಒಟ್ಟು 283 “ಶ್ರಮಿಕ ರೈಲುಗಳ ಕಾರ್ಯಾಚರಣೆ ನಡೆಸಲಾಗಿದೆ. ಅವುಗಳನ್ನು 225 ರೈಲುಗಳು ನಿಗದಿತ ಸ್ಥಳವನ್ನು ತಲುಪಿವೆ ಮತ್ತು 58 ರೈಲುಗಳು ಸಂಚಾರದಲ್ಲಿವೆ. ಇಂದು 49 “ಶ್ರಮಿಕ ರೈಲುಗಳ ಸಂಚಾರ ಪ್ರಗತಿಯಲ್ಲಿದೆ.

283 ರೈಲುಗಳು ನಾನಾ ರಾಜ್ಯಗಳಿಂದ ಸಂಚರಿಸಿವೆ ಅವುಗಳೆಂದರೆ ಆಂಧ್ರಪ್ರದೇಶ (2 ರೈಲು), ಬಿಹಾರ (90 ರೈಲು), ಹಿಮಾಚಲಪ್ರದೇಶ (1 ರೈಲು), ಜಾರ್ಖಂಡ್ (16 ರೈಲು), ಮಧ್ಯಪ್ರದೇಶ (21 ರೈಲು), ಮಹಾರಾಷ್ಟ್ರ (3 ರೈಲು), ಒಡಿಶಾ (21 ರೈಲು), ರಾಜಸ್ಥಾನ (4 ರೈಲು), ತೆಲಂಗಾಣ (2 ರೈಲು), ಉತ್ತರ ಪ್ರದೇಶ (121 ರೈಲು), ಪಶ್ಚಿಮ ಬಂಗಾಳ (2 ರೈಲು).

ರೈಲುಗಳು, ನಗರಗಳಾದ ಪ್ರಯಾಗ್ ರಾಜ್ ಛಾಪ್ರಾ, ಬಲಿಯಾ, ಗಯಾ, ಪುರ್ನಿಯಾ, ವಾರಾಣಸಿ, ದರ್ಭಾಂಗ, ಗೋರಖ್ ಪುರ್, ಲಖನೌ, ಜೌನಪುರ್, ಹತಿಯಾ, ಬಸ್ತಿ, ಕಟಿಹಾರ್, ದಾನಾಪುರ್, ಮುಝಫರ್ ಪುರ್, ಸಹಸ್ರಾ ಇತ್ಯಾದಿ ಸ್ಥಳಗಳಿಂದ ವಲಸೆ ಕಾರ್ಮಿಕರನ್ನು ಹೊತ್ತೊಯ್ದಿವೆ.

ಶ್ರಮಿಕ ರೈಲುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕನಿಷ್ಠ ಸುಮಾರು 1200 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಪ್ರಯಾಣಿಕರನ್ನು ಸೂಕ್ತ ತಪಾಸಣೆಯ ನಂತರ ರೈಲು ಹತ್ತುವುದನ್ನು ಖಾತ್ರಿಪಡಿಸಲಾಗುತ್ತಿದೆ. ಪ್ರಯಾಣದ ವೇಳೆ ಪ್ರಯಾಣಿಕರಿಗೆ ಉಚಿತ ಊಟ ಮತ್ತು ನೀರು ನೀಡಲಾಗುತ್ತಿದೆ.

***


(Release ID: 1622624) Visitor Counter : 201