ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಕಾರ್ಯಕ್ರಮ ಮತ್ತು ಮನೋರಂಜನೆ ನಿರ್ವಹಣಾ ಉದ್ಯಮ ಹಾಗು ಸಣ್ಣ ಹಣಕಾಸು ಉದ್ಯಮಗಳಿಗೆ ಶ್ರೀ ಗಡ್ಕರಿ ಸಲಹೆ

Posted On: 08 MAY 2020 6:00PM by PIB Bengaluru

ಪ್ರಸ್ತುತ ಪರಿಸ್ಥಿತಿಯನ್ನು ಬಳಸಿಕೊಳ್ಳುವ ಸಾಧ್ಯತೆಯ ಬಗ್ಗೆ ಅನ್ವೇಷಿಸುತ್ತಾ ಧನಾತ್ಮಕವಾಗಿರಲು

ಕಾರ್ಯಕ್ರಮ ಮತ್ತು ಮನೋರಂಜನೆ ನಿರ್ವಹಣಾ ಉದ್ಯಮ ಹಾಗು ಸಣ್ಣ ಹಣಕಾಸು ಉದ್ಯಮಗಳಿಗೆ ಶ್ರೀ ಗಡ್ಕರಿ ಸಲಹೆ

 

ಕೇಂದ್ರ ಎಂ.ಎಸ್.ಎಂ.. ಮತ್ತು ರಸ್ತೆ ಸಾರಿಗೆ ಹಾಗು ಹೆದ್ದಾರಿಗಳ ಖಾತೆಯ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರಿಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಮತ್ತು ಮನೋರಂಜನಾ ನಿರ್ವಹಣಾ ಅಸೋಸಿಯೇಶನ್ ಮತ್ತು ಹಣಕಾಸು ಉದ್ಯಮ ಅಭಿವೃದ್ದಿ ಮಂಡಳಿಯ ಸದಸ್ಯರ ಜೊತೆ ಅವರ ವಲಯಗಳಲ್ಲಿ ಕೋವಿಡ್ -19 ಪರಿಣಾಮ ಕುರಿತು ಸಭೆ ನಡೆಸಿದರು.

ಸಂವಾದದಲ್ಲಿ ಪ್ರತಿನಿಧಿಗಳು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ನಡುವೆ ಎಂ.ಎಸ್.ಎಂ.. ಗಳು ಎದುರಿಸುತ್ತಿರುವ ವಿವಿಧ ಸವಾಲುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮತ್ತು ಕೆಲವು ಸಲಹೆಗಳನ್ನು ನೀಡಿ ತಮ್ಮ ವಲಯ ಕಾರ್ಯಚಟುವಟಿಕೆಗಳನ್ನು ನಡೆಸುವಂತಾಗಲು ಸರಕಾರದಿಂದ ಬೆಂಬಲ ಕೋರಿದರು.

ವಲಯ ಅತ್ಯುತ್ತಮ ಕೆಲಸ ಮಾಡುತ್ತಿರುವ ಬಗ್ಗೆ ಒತ್ತಿ ಹೇಳಿದ ಶ್ರೀ ಗಡ್ಕರಿ ಅವರು ಅವರ ಪ್ರತಿಭೆ ಮತ್ತು ಮುಂಗಾಣ್ಕೆ ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ. ನಾವೀಗ ಕೊರೊನಾ ವಿರುದ್ದ ಯುದ್ದ ನಿರತರಾಗಿರುವಾಗ ಕಾರ್ಯಕ್ರಮ ಮತ್ತು ಮನೋರಂಜನಾ ವಲಯದ ಸದಸ್ಯರು ತಮ್ಮನ್ನು ಎಂ.ಎಸ್.ಎಂ..ಗಳಾಗಿ ನೊಂದಾಯಿಸಿಕೊಂಡರೆ ನಿಟ್ಟಿನಲ್ಲಿರುವ ಕಾರ್ಯಕ್ರಮಗಳ ಲಾಭ ಪಡೆಯಲು ಸಾಧ್ಯವಾಗಬಹುದೆಂದರು.

ವಲಯದಲ್ಲಿ ಉದ್ಯಮಶೀಲತ್ವಕ್ಕೆ ಭಾರತದಲ್ಲಿ ಅಪಾರ ಅವಕಾಶಗಳಿವೆ. ಭಾರತವು ಪ್ರಗತಿ ಮೈದಾನವನ್ನು ಅಂತಾರಾಷ್ಟ್ರೀಯ ಪ್ರದರ್ಶಕ ಕೇಂದ್ರವಾಗಿ ಪುನರ್ ನಿರ್ಮಾಣ ಮಾಡುತ್ತಿದೆ. ಸರಕಾರವು ಎಲ್ಲಾ ಮಟ್ಟದಲ್ಲಿಯೂ ಸಾಧ್ಯ ಇರುವ ಗರಿಷ್ಟ ಬೆಂಬಲವನ್ನು ಒದಗಿಸಲು ಸಿದ್ದವಾಗಿದೆ ಎಂದ ಅವರು ಇತರ ಸಚಿವಾಲಯ, ಇಲಾಖೆಗಳ ಜೊತೆ ವಿಷಯವನ್ನು ಪ್ರಸ್ತಾಪಿಸಲು ವಿವರವಾದ ಮನವಿಯನ್ನು ಸಲ್ಲಿಸುವಂತೆ ಪ್ರತಿನಿಧಿಗಳಿಗೆ ಸೂಚಿಸಿದರು.

ಬಿಕ್ಕಟ್ಟನ್ನು ದಾಟಲು ಧನಾತ್ಮಕ ಧೋರಣೆಯನ್ನು ಅಳವಡಿಸಿಕೊಳ್ಳುವಂತೆ ಶ್ರೀ ಗಡ್ಕರಿ ಅವರು ಕೈಗಾರಿಕೋದ್ಯಮಕ್ಕೆ ಮನವಿ ಮಾಡಿಕೊಂಡರು.

ಚೀನಾದಿಂದ ಜಪಾನೀ ಹೂಡಿಕೆಯನ್ನು ಹಿಂತೆಗೆದುಕೊಂಡು ಬೇರೆಲ್ಲಾದರೂ ಹೋಗುವುದಿದ್ದರೆ ಅದರ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ಒದಗಿಸುವ ಜಪಾನ್ ಸರಕಾರದ ಕ್ರಮವನ್ನು ಸ್ಮರಿಸಿಕೊಂಡ ಸಚಿವರು ಭಾರತ ತಕ್ಷಣವೇ ಕೈವಶ ಮಾಡಿಕೊಳ್ಳಬೇಕಾದ ಅವಕಾಶ ಇದೆಂದು ಅಭಿಪ್ರಾಯಪಟ್ಟರು.

ಪ್ರಮುಖವಾಗಿ ಪ್ರಸ್ತಾಪವಾದ ವಿಷಯಗಳು ಮತ್ತು ನೀಡಲಾದ ಸಲಹೆಗಳಲ್ಲಿ ಕಾರ್ಯಕ್ರಮ ಮತ್ತು ನಿರ್ವಹಣಾ ವರ್ಗವನ್ನು ಎಂ.ಎಸ್.ಎಂ..ಯಲ್ಲಿ ನೊಂದಾಯಿಸಿಕೊಳ್ಳಲು ವಿಭಾಗವರ್ಗದ (ಕೆಟಗರಿ) ಅಳವಡಿಕೆ, ರಾಜ್ಯ/ ಜಿಲ್ಲಾ ಮಟ್ಟಗಳಲ್ಲಿ ಎಂ.ಎಸ್ ಎಂ..ಗಳಿಗಾಗಿಯೇ ಅಧಿಕಾರಿಗಳ ಆವಶ್ಯಕತೆ, ಹಣಕಾಸು ಮೂಲಕ್ಕೆ ಸಂಬಂಧಿಸಿ ಸಣ್ಣ ಹಣಕಾಸು ಘಟಕಗಳಿಗೆ ಸಹಾಯ, ಆಯಾ ಸೂಕ್ತ ಯೋಜನೆಗಳಡಿಯಲ್ಲಿ ಗ್ಯಾರಂಟಿಗಳನ್ನು ಪಡೆಯಲು ಸಣ್ಣ ಹಣಕಾಸು ಘಟಕಗಳಿಗೆ ಕ್ರೆಡಿಟ್ ರೇಟಿಂಗ್ ಆವಶ್ಯಕತೆಯನ್ನು ತೆಗೆದುಹಾಕುವಿಕೆ ಇತ್ಯಾದಿಗಳು ಒಳಗೊಂಡಿವೆ.

ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀ ಗಡ್ಕರಿ ಅವರು ಸಾಧ್ಯ ಇರುವ ಎಲ್ಲಾ ಸಹಾಯವನ್ನು ಮಾಡುವುದಾಗಿ ಹೇಳಿದರು. ಅವರ ಮನವಿಯನ್ನು ತಮ್ಮ ಸಚಿವಾಲಯದ ವ್ಯಾಪ್ತಿಯಲ್ಲಿ ಪರಿಶೀಲಿಸುವುದಾಗಿ ತಿಳಿಸಿದರಲ್ಲದೆ ಸರಕಾರದ ಇತರ ಇಲಾಖೆಗಳಿಗೆ ಸಂಬಂಧಿಸಿದವುಗಳನ್ನು ಆಯಾ ಇಲಾಖೆಗಳ ಜೊತೆ ಪ್ರಸ್ತಾಪಿಸುವುದಾಗಿಯೂ ಹೇಳಿದರು.

ಉದ್ಯಮವು ಧನಾತ್ಮಕ ಧೋರಣೆಯನ್ನು ಮೈಗೂಢಿಸಿಕೊಂಡು ಮತ್ತು ಕೋವಿಡ್ -19 ಬಿಕ್ಕಟ್ಟು ಮುಗಿದ ಕೂಡಲೇ ಉಂಟಾಗುವ ಅವಕಾಶಗಳನ್ನು ಬಳಸಿಕೊಳ್ಳಲು ಸಿದ್ದವಾಗಿರಬೇಕು ಎಂದವರು ಒತ್ತಿ ಹೇಳಿದರು.

***


(Release ID: 1622341) Visitor Counter : 138