ಬುಡಕಟ್ಟು ವ್ಯವಹಾರಗಳ ಸಚಿವಾಲಯ

ಟ್ರೈಫೆಡ್ ಮತ್ತು ಆರ್ಟ್ ಆಫ್ ಲಿವಿಂಗ್ ಸಹಭಾಗಿತ್ವದಲ್ಲಿ ಅಗತ್ಯವಿರುವ ಭಾರತೀಯ ಬುಡಕಟ್ಟು ಕರಕುಶಲಕರ್ಮಿಗಳಿಗೆ ಉಚಿತ ಆಹಾರ ಕಿಟ್ ಪೂರೈಕೆ

Posted On: 08 MAY 2020 5:47PM by PIB Bengaluru

ಟ್ರೈಫೆಡ್ ಮತ್ತು ಆರ್ಟ್ ಆಫ್ ಲಿವಿಂಗ್ ಸಹಭಾಗಿತ್ವದಲ್ಲಿ ಅಗತ್ಯವಿರುವ ಭಾರತೀಯ ಬುಡಕಟ್ಟು ಕರಕುಶಲಕರ್ಮಿಗಳಿಗೆ

ಉಚಿತ ಆಹಾರ ಕಿಟ್ ಪೂರೈಕೆ

 

ಬುಡಕಟ್ಟು ವ್ಯವಹಾರಗಳ ಸಚಿವಾಲಯದಡಿ ಬರುವ ಟ್ರೈಫೆಡ್ ಮತ್ತು ಆರ್ಟ್ ಆಫ್ ಲಿವಿಂಗ್(ಎಒಎಲ್) ಬುಡಕಟ್ಟು ಜನರು ಉದ್ದಿಮೆ ಕೈಗೊಳ್ಳುವುದನ್ನು ಉತ್ತೇಜಿಸಲು ಎರಡೂ ಸಂಸ್ಥೆಗಳು ತಮ್ಮದೇ ಆದ ಕಾರ್ಯಕ್ರಮಗಳನ್ನು ರೂಪಿಸಲು ಒಡಂಬಡಿಕೆ ಮಾಡಿಕೊಂಡಿವೆ. ಆರ್ಟ್ ಆಫ್ ಲಿವಿಂಗ್ ಫೌಂಡೇಶನ್, ಅಗತ್ಯವಿರುವ ಭಾರತೀಯ ಆದಿವಾಸಿ ಬುಡಕಟ್ಟು ಕರಕುಶಲಕರ್ಮಿಗಳಿಗೆ ಉಚಿತ ಆಹಾರ ಕಿಟ್ ಗಳನ್ನು ನೀಡಲು ನಿರ್ಧರಿಸಿದೆ.

ಟ್ರೈಫೆಡ್ ಪ್ರಾದೇಶಿಕ ಕಚೇರಿಗಳು ಅಗತ್ಯವಿರುವ ಆದಿವಾಸಿ ಕರಕುಶಲಕರ್ಮಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ ಮತ್ತು ದೇಶಾದ್ಯಂತ ಅಗತ್ಯವಿರುವ 9,409 ಆದಿವಾಸಿ ಕರಕುಶಲಕರ್ಮಿಗಳನ್ನು ಗುರುತಿಸಿದೆ. ಅವರಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ತನ್ನ #iStandWithHumanity ಅಭಿಯಾನದಡಿ ಉಚಿತ ಆಹಾರ ಕಿಟ್ ಗಳನ್ನು ವಿತರಿಸಲಿದೆ. ಇದನ್ನು ಎಲ್ಲ ರಾಜ್ಯಗಳಲ್ಲಿರುವ ಎಒಎಲ್ ಕಚೇರಿಗಳು ಸಮನ್ವಯ ನಡೆಸಲಿವೆ.

ಕ್ರಮ ಸಂಖ್ಯೆ ಅಗತ್ಯವಿರುವವರು

ಪ್ರಾದೇಶಿಕ ಕಚೇರಿ

ಆಹಾರ ಕಿಟ್ ಗಳು

1

ಅಹಮದಾಬಾದ್

756

2

ಚಂಡಿಗಢ

191

3

ಭೂಪಾಲ್

954

4

ಜೈಪುರ್

2707

5

ಕೋಲ್ಕತ್ತಾ

1576

6

ಮುಂಬೈ

817

7

ರಾಂಚಿ

2017

8

ಡೆಹ್ರಾಡೂನ್

391

 

ಒಟ್ಟು

9409

2020 ಮೇ 10ರಿಂದ ವಾರದ ಅಪ್ ಡೇಟ್ ಗಳು ಲಭ್ಯವಿದೆ.

***



(Release ID: 1622335) Visitor Counter : 196