PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 08 MAY 2020 6:48PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.pnghttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಕೋವಿಡ್-19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಇದುವರೆಗೆ 216 ಜಿಲ್ಲೆಗಳಲ್ಲಿ ಯಾವುದೇ ಕೋವಿಡ್-19 ಪ್ರಕರಣಗಳು ವರದಿಯಾಗಿಲ್ಲ. ಕಳೆದ 28 ದಿನಗಳಲ್ಲಿ 42 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಕಂಡು ಬಂದಿಲ್ಲ. 29 ಜಿಲ್ಲೆಗಳಲ್ಲಿ 21 ದಿನಗಳಿಂದಹೊಸ ಪ್ರಕರಣಗಳು ವರದಿಯಾಗಿಲ್ಲ. 36 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಹೊಸ ಪ್ರಕರಣಗಳು ಕಂಡುಬಂದಿಲ್ಲ. 46 ಜಿಲ್ಲೆಗಳಲ್ಲಿ ಕಳೆದ 7 ದಿನಗಳಿಂದ ಹೊಸ ಪ್ರಕರಣಗಳು ವರದಿಯಾಗಿಲ್ಲ. ಇದುವರೆಗೆ, 16,540 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 1273 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದ ಚೇತರಿಕೆಯ ಪ್ರಮಾಣ ಶೇ.29.36 ಕ್ಕೇರಿದೆ. ಇದುವರೆಗಿನ ದೃಢಪಟ್ಟ ಪ್ರಕರಣಗಳ ಸಂಖ್ಯೆ 56,342. ದೇಶದಲ್ಲಿ ನಿನ್ನೆಯಿಂದ 3390 ಪ್ರಕರಣಗಳು ಹೆಚ್ಚಾಗಿವೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು, ತಮಿಳುನಾಡು, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಸಂವಾದ ನಡೆಸಿ, ಕೋವಿಡ್-19ಕ್ಕೆ ಸಂಬಂಧಿಸಿದ ಸಿದ್ಧತೆ ಪ್ರಯತ್ನಗಳು ಮತ್ತು ನಿಗ್ರಹ ಕ್ರಮಗಳನ್ನು ಪರಿಶೀಲಿಸಿದರು. ಕಾಯಿಲೆಯು ಸೌಮ್ಯವಾಗಿರುವ ಕೋವಿಡ್-19 ಸಂಬಂಧಿತ ತೊಡಕುಗಳನ್ನು ಮಿತಿಗೊಳಿಸಲು ಕಾನ್ವೆಲೆಸೆಂಟ್ ಪ್ಲಾಸ್ಮಾದ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಐಸಿಎಂಆರ್ PLACID ಪ್ರಯೋಗ ಎಂಬ ಬಹು-ಕೇಂದ್ರ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1622160

ಭಾರತ ಸರ್ಕಾರ ಮತ್ತು ಎಐಐಬಿ ನಡುವೆ ಭಾರತದಲ್ಲಿ ಕೋವಿಡ್-19 ಬೆಂಬಲಕ್ಕಾಗಿ 500 ಮಿಲಿಯನ್ ಡಾಲರ್ ಒಪ್ಪಂದ

ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸ್ಪಂದಿಸಲು ಮತ್ತು ಸಾರ್ವಜನಿಕ ಆರೋಗ್ಯ ಸನ್ನದ್ಧತೆಯನ್ನು ಬಲಪಡಿಸಲು ಭಾರತಕ್ಕೆ ಸಹಾಯ ಮಾಡಲು ಭಾರತ ಸರ್ಕಾರ ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (AIIB) ಇಂದು 500 ದಶಲಕ್ಷ ಡಾಲರ್ ಗಳ “ಕೋವಿಡ್-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಗಳ ಸಿದ್ಧತೆ ಯೋಜನೆಗೆ” ಸಹಿ ಹಾಕಿವೆ. ಇದು ಬ್ಯಾಂಕಿನಿಂದ ಭಾರತಕ್ಕೆ ಮೊಟ್ಟಮೊದಲ ಆರೋಗ್ಯ ವಲಯದ ನೆರವಾಗಿದೆ. ಈ ಹೊಸ ನೆರವು ಭಾರತದಾದ್ಯಂತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಳ್ಳುತ್ತದೆ. ಸೋಂಕಿತರು, ಅಪಾಯದಲ್ಲಿರುವ ಜನರು, ವೈದ್ಯಕೀಯ ಮತ್ತು ತುರ್ತು ಸಿಬ್ಬಂದಿ ಮತ್ತು ಸೇವಾ ಪೂರೈಕೆದಾರರು, ವೈದ್ಯಕೀಯ ಮತ್ತು ಪರೀಕ್ಷಾ ಸೌಲಭ್ಯಗಳು ಮತ್ತು ರಾಷ್ಟ್ರೀಯ ಮತ್ತು ಪ್ರಾಣಿ ಆರೋಗ್ಯ ಸಂಸ್ಥೆಗಳ ಅಗತ್ಯಗಳನ್ನು ಪೂರೈಸುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1622145

ಲಾಕ್ಡೌನ್ ನಡುವೆಯೂ ಹೆಚ್ಚಿದ ಆಹಾರ ಧಾನ್ಯಗಳ ಸಂಗ್ರಹ

ಕೇಂದ್ರ ಸಂಗ್ರಹಣೆಗಾಗಿ ಉದ್ದೇಶಿತ 400 ಲಕ್ಷ ಮೆಟ್ರಿಕ್ ಟನ್ ಗೋಧಿಯಲ್ಲಿ ಅರ್ಧಕ್ಕಿಂತ ಹೆಚ್ಚು ಸಂಗ್ರಹಿಸಲಾಗಿದೆ. 45 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಸಹ ಸಂಗ್ರಹಿಸಲಾಗಿದೆ, 30 ಲಕ್ಷ ಮೆಟ್ರಿಕ್ ಟನ್ ನೊಂದಿಗೆ ತೆಲಂಗಾಣವು ಮೊದಲ ಸ್ಥಾನದಲ್ಲಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ 70 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳ ಸಂಗ್ರಹ ಮಾಡಲಾಗಿದೆ. ಇದು 3 ತಿಂಗಳ ಒಟ್ಟು ಹಂಚಿಕೆಯ ಶೇ.58 ಆಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621985

PM-GKAY ಅಡಿಯಲ್ಲಿ ದೇಶಾದ್ಯಂತ ಸುಮಾರು 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ಮತ್ತು ದ್ವಿದಳ ಧಾನ್ಯಗಳನ್ನು ಪೂರೈಸುವ ಬೃಹತ್ ಕಾರ್ಯ ನಡೆಯುತ್ತಿದೆ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು ಹೇಳಿದ್ದಾರೆ

ಭಾರತೀಯ ಆಹಾರ ನಿಗಮವು ಒಟ್ಟು 74 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಹೊತ್ತ ಒಟ್ಟು 2641 ರೇಕ್‌ಗಳನ್ನು ಲೋಡ್ ಮಾಡಿದ್ದು,,ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಶ್ರೀ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ದೇಶದಲ್ಲಿ ಮೂರು ತಿಂಗಳವರೆಗೆ ಸುಮಾರು 19.50 ಕೋಟಿ ಕುಟುಂಬಗಳಿಗೆ ಉಚಿತ ದ್ವಿದಳ ಧಾನ್ಯಗಳನ್ನು ಒದಗಿಸಲು ನಾಫೆಡ್ ಬೃಹತ್ ಕಾರ್ಯಾಚರಣೆ ನಡೆಸಿದೆ ಎಂದು ಸಚಿವರು ಹೇಳಿದ್ದಾರೆ. “ಒಂದು ದೇಶ ಒಂದು ಪಡಿತರ ಚೀಟಿ” ಯೋಜನೆಯಡಿ, ಇನ್ನೂ 5 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ರಾಷ್ಟ್ರೀಯ ಕ್ಲಸ್ಟರ್‌ನೊಂದಿಗೆ ಸಂಯೋಜಿಸಲು ಕೇಳಲಾಗಿದೆ. ಕ್ಲಸ್ಟರ್ ಈಗಾಗಲೇ 12 ರಾಜ್ಯಗಳನ್ನು ಹೊಂದಿದೆ. ಈಗ, ಒಟ್ಟು 17 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ರಾಷ್ಟ್ರೀಯ ಕ್ಲಸ್ಟರ್‌ನೊಂದಿಗೆ ಸಂಯೋಜಿಸಲ್ಪಟ್ಟರೆ, 60 ಕೋಟಿ ಎನ್‌ಎಫ್‌ಎಸ್‌ಎ ಫಲಾನುಭವಿಗಳು ಈಗ ಅಸ್ತಿತ್ವದಲ್ಲಿರುವ ಪಡಿತರ ಚೀಟಿಯಿಂದಲೇ ತಮ್ಮ ಆಯ್ಕೆಯ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ತಮ್ಮ ಹೆಸರಿನ ಆಹಾರ ಧಾನ್ಯಗಳ ಕೋಟಾವನ್ನು ತೆಗೆದುಕೊಳ್ಳುವ ಮೂಲಕ ರಾಷ್ಟ್ರೀಯ/ ಅಂತರ-ರಾಜ್ಯ ಪೋರ್ಟಬಿಲಿಟಿ ಸೌಲಭ್ಯವನ್ನು ಸಕ್ರಿಯಗೊಳಿಸಲಾಗುವುದು ಎಂದರು.

ವಿವರಗಳಿಗೆ: https://pib.gov.in/PressReleseDetail.aspx?PRID=1622147

ಸಂಕಷ್ಟದ ಸಮಯದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸೇವೆಗಳನ್ನು ಶ್ಲಾಘಿಸಿದ ಡಾ. ಹರ್ಷವರ್ಧನ್

‘ವಿಶ್ವ ರೆಡ್‌ಕ್ರಾಸ್ ದಿನಾಚರಣೆ'ಯ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು ಇಂದು ನವದೆಹಲಿಯ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಶತಮಾನೋತ್ಸವದಲ್ಲಿ ಪಾಲ್ಗೊಂಡರು. ಸ್ವಯಂಪ್ರೇರಿತ ರಕ್ತದಾನವನ್ನು ಉತ್ತೇಜಿಸಲು ಸ್ವಯಂಸೇವಾ ಸಂಸ್ಥೆಗಳು, ಎನ್‌ಜಿಒಗಳು ಮತ್ತು ಸಾಮಾನ್ಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುವಂತೆ ಮನವಿ ಮಾಡಿದರು. ತಮ್ಮ ಜನ್ಮದಿನ ಅಥವಾ ವಿವಾಹ ವಾರ್ಷಿಕೋತ್ಸವದಂದು ವರ್ಷಕ್ಕೊಮ್ಮೆಯಾದರೂ ರಕ್ತದಾನ ಮಾಡುವಂತೆ ಅವರು ಜನರಿಗೆ ಮನವಿ ಮಾಡಿದರು. ಈ ಸಂದರ್ಭವು ತಮಗೆ ಮಾತ್ರವಲ್ಲದೆ ರಕ್ತದ ಅಗತ್ಯವಿರುವವರಿಗೂ ವಿಶೇಷವಾಗಿಸುತ್ತದೆ. ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಕೊರೊನಾರೋಗಿಗಳು ಮತ್ತು ಕೊರೊನಾ ಯೋಧರನ್ನು ಕಳಂಕದಿಂದ ನೋಡಬಾರದು ಮತ್ತು ಅವರು ಬಹಳ ಉತ್ಸಾಹದಿಂದ ಕೆಲಸ ಮಾಡಲು ಸಕಾರಾತ್ಮಕ ವಾತಾವರಣವನ್ನು ಉತ್ತೇಜಿಸಬೇಕು, ಈ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಭಾರತೀಯ ರೆಡ್‌ಕ್ರಾಸ್ ಸೊಸೈಟಿಯು ಮುಂದೆ ಬರಬೇಕೆಂದು ಅವರು ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1622157

ಐಎನ್ಎಂಎಎಸ್ (ಪರಮಾಣು ಔಷಧ ಮತ್ತು ಪೂರಕ ವಿಜ್ಞಾನಗಳ ಸಂಸ್ಥೆ) ಪ್ರಮಾಣಪತ್ರ ಪಡೆದ ಭಾರತೀಯ ನೌಕಾಪಡೆಯ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ)

ಭಾರತೀಯ ನೌಕಾಪಡೆ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ) ವನ್ನು ಪಿಪಿಇ ಪ್ರಮಾಣೀಕರಣದ ಜವಾಬ್ದಾರಿ ಹೊತ್ತಿರುವ ಡಿಆರ್.ಡಿ.ಒ.ದ ಸಂಸ್ಥೆಯಾದ ದೆಹಲಿಯ ಐ.ಎನ್.ಎಂ.ಎ.ಎಸ್.(ಪರಮಾಣು ಔಷಧ ಮತ್ತು ಪೂರಕ ವಿಜ್ಞಾನ ಸಂಸ್ಥೆ) ಅವುಗಳನ್ನು ಪರೀಕ್ಷಿಸಿದ್ದು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ, ಕೋವಿಡ್  ಚಿಕಿತ್ಸೆಯಲ್ಲಿ ಬಳಸಲು ಪ್ರಮಾಣೀಕರಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1622046

ಭಾರತೀಯ ಅಂಚೆಯು ಐಸಿಎಂಆರ್ ಪ್ರಾದೇಶಿಕ ಡಿಪೋಗಳಿಂದ ಕೋವಿಡ್ -19 ಪರೀಕ್ಷಾ ಕಿಟ್ಗಳನ್ನು ದೂರ ಪ್ರದೇಶಗಳು ಸೇರಿದಂತೆ ದೇಶಾದ್ಯಂತದ ಪರೀಕ್ಷಾ ಪ್ರಯೋಗಾಲಯಗಳಿಗೆ ತಲುಪಿಸಿದೆ

ಭಾರತೀಯ ಅಂಚೆ ತನ್ನ 16 ಪ್ರಾದೇಶಿಕ ಡಿಪೋಗಳಿಂದ ಕೋವಿಡ್ -19 ಪರೀಕ್ಷಾ ಕಿಟ್‌ಗಳನ್ನು ದೇಶದ ಉದ್ದಗಲಕ್ಕೂ ಕೋವಿಡ್ -19 ಪರೀಕ್ಷೆಗೆ ಗೊತ್ತುಪಡಿಸಿದ 200 ಹೆಚ್ಚುವರಿ ಪ್ರಯೋಗಾಲಯಗಳಿಗೆ ತಲುಪಿಸಲು ಐಸಿಎಂಆರ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ದೇಶಾದ್ಯಂತ ದಿನಕ್ಕೆ ಸುಮಾರು 1 ಲಕ್ಷ ಪರೀಕ್ಷೆಗಳನ್ನು ನಡೆಸುವ ಗುರಿಯನ್ನು ಹೊಂದಿದೆ. ಈ ನಿರ್ಣಾಯಕ ಕೆಲಸಕ್ಕಾಗಿ, ಭಾರತೀಯ ಅಂಚೆಯು ತನ್ನ 1,56,000 ಅಂಚೆ ಕಚೇರಿಗಳ ವಿಶಾಲ ಜಾಲವನ್ನು ಹೊಂದಿದ್ದು ಕೋವಿಡ್ ಯೋಧನಾಗಿ ಕಾರ್ಯನಿರ್ವಹಿಸಲು ಸಜ್ಜಾಗಿದೆ. ಭಾರತೀಯ ಅಂಚೆಯು ದೂರ ಪ್ರದೇಶಗಳಿಗೆ ಸರಕುಗಳನ್ನು ತಲುಪಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1622143

ಐರೋಪ್ಯ ಮಂಡಳಿಯ ಅಧ್ಯಕ್ಷ ಶ್ರೀ ಚಾರ್ಲ್ಸ್ ಮೈಖೆಲ್ ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿ ನಡುವೆ ದೂರವಾಣಿ ಮಾತುಕತೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಐರೋಪ್ಯ ಮಂಡಳಿಯ ಅಧ್ಯಕ್ಷ ಘನತೆವೆತ್ತ ಚಾರ್ಲ್ಸ್ ಮೈಖೆಲ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಇಬ್ಬರೂ ನಾಯಕರು, ಕೋವಿಡ್ 19 ಮಹಾಮಾರಿ ಹಿನ್ನೆಲೆಯಲ್ಲಿ ಭಾರತ ಮತ್ತು ಐರೋಪ್ಯ ಒಕ್ಕೂಟದಲ್ಲಿನ ಪರಿಸ್ಥಿತಿಯ ಸ್ಪಂದನೆ ಕುರಿತಂತೆ ಚರ್ಚಿಸಿದರು. ಸಾಂಕ್ರಾಮಿಕದ ಸಂದರ್ಭದಲ್ಲಿ ಅತ್ಯಾವಶ್ಯಕ ವೈದ್ಯಕೀಯ ಪೂರೈಕೆ ಸೇರಿದಂತೆ ಪರಸ್ಪರ ಸಹಕಾರಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್ 19 ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಪ್ರಾದೇಶಿಕ ಮತ್ತು ಜಾಗತಿಕ ಸಹಯೋಗದ ಮಹತ್ವವನ್ನು ಪರಿಗಣಿಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1622045

ಜಪಾನ್ ರಕ್ಷಣಾ ಸಚಿವರೊಂದಿಗೆ ಕೋವಿಡ್-19 ನಿಗ್ರಹ ಕುರಿತು ದೂರವಾಣಿ ಮಾತುಕತೆ ನಡೆಸಿದ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್

ಇಬ್ಬರೂ ರಕ್ಷಣಾ ಮಂತ್ರಿಗಳು ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ತಮ್ಮ ದೇಶಗಳ ಪ್ರತಿಕ್ರಿಯೆಗಳ ಕುರಿತು ಚರ್ಚೆ ನಡೆಸಿದರು. ಕೋವಿಡ್-19 ವಿರುದ್ಧದ ಅಂತರರಾಷ್ಟ್ರೀಯ ಪ್ರಯತ್ನಗಳಿಗೆ ಭಾರತದ ಕೊಡುಗೆ ಕುರಿತು ಶ್ರೀ ರಾಜನಾಥ್ ಸಿಂಗ್ ಅವರು ಶ್ರೀ ಕೊನೊ ತಾರೊಗೆ ಮಾಹಿತಿ ನೀಡಿದರು. ಸಾಂಕ್ರಾಮಿಕ ರೋಗದ ವಿರುದ್ಧದ ಜಾಗತಿಕ ಹೋರಾಟದಲ್ಲಿ ಪರಸ್ಪರ ಸಹಕಾರದ ಕ್ಷೇತ್ರಗಳ ಬಗ್ಗೆಯೂ ಅವರು ಚರ್ಚಿಸಿದರು. ಕೋವಿಡ್-19 ನಂತರದ ಸವಾಲುಗಳನ್ನು ಎದುರಿಸಲು ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವವು ಇತರ ದೇಶಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ಉತ್ತಮ ಅಡಿಪಾಯ ಒದಗಿಸುತ್ತದೆ ಎಂದು ಅವರು ಒಪ್ಪಿಕೊಂಡರು.

ವಿವರಗಳಿಗೆ: https://pib.gov.in/PressReleseDetail.aspx?PRID=1622162

ಕಾರ್ಯಕ್ರಮ ಮತ್ತು ಮನರಂಜನೆ ನಿರ್ವಹಣೆ ಉದ್ಯಮ ಮತ್ತು ಸಣ್ಣ ಹಣಕಾಸು ಉದ್ಯಮಗಳು ಸಕಾರಾತ್ಮಕವಾಗಿರುವಂತೆ ಮತ್ತು ಪ್ರಸ್ತುತ ಪರಿಸ್ಥಿತಿಯ ಲಾಭವನ್ನು ಅನ್ವೇಷಿಸುವಂತೆ ಶ್ರೀ ಗಡ್ಕರಿ ಹೇಳಿದ್ದಾರೆ

ಕೇಂದ್ರ ಎಂಎಸ್‌ಎಂಇ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಕಾರ್ಯಕ್ರಮ ಮತ್ತು ಮನರಂಜನೆ ನಿರ್ವಹಣೆ ಸಂಘಟನೆಯ ಪ್ರತಿನಿಧಿಗಳು ಮತ್ತು ಹಣಕಾಸು ಉದ್ಯಮ ಅಭಿವೃದ್ಧಿ ಮಂಡಳಿಯ ಸದಸ್ಯರೊಂದಿಗೆ ವಲಯಗಳ ಮೇಲೆ ಕೋವಿಡ್-19ರ ಪರಿಣಾಮ ಕುರಿತು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದರು. ಈ ಕ್ಷೇತ್ರವು ಅತ್ಯುತ್ತಮ ಕೆಲಸ ಮಾಡುತ್ತಿದೆ ಮತ್ತು ಅವರ ಪ್ರತಿಭೆ ಮತ್ತು ದೃಷ್ಟಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ ಎಂದು ಶ್ರೀ ಗಡ್ಕರಿ ಒತ್ತಿ ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1622164

ಪ್ರವಾಸೋದ್ಯಮ ಸಚಿವಾಲಯವು "ದೇಖೋ ಅಪ್ನಾ ದೇಶ್" ಸರಣಿಯಡಿಯಲ್ಲಿಗೋವಾ-ಕ್ರೂಸಿಬಲ್ ಆಫ್ ಕಲ್ಚರ್ಎಂಬ ಶೀರ್ಷಿಕೆಯ 16 ನೇ ವೆಬಿನಾರ್ ಅನ್ನು ಆಯೋಜಿಸಿದೆ

ಪ್ರವಾಸೋದ್ಯಮ ಸಚಿವಾಲಯದ "ದೇಖೋ ಅಪ್ನಾ ದೇಶ್"  ವೆಬಿನಾರ್ ಸರಣಿಯು, ಮೇ 7, 2020 ರಂದು "ಗೋವಾ-ಕ್ರೂಸಿಬಲ್ ಆಫ್ ಕಲ್ಚರ್" ಶೀರ್ಷಿಕೆಯೊಂದಿಗೆ ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಗೋವಾದ 'ಹೆಚ್ಚು ಗೊತ್ತಿಲ್ಲದ ಅಥವಾ 'ಅಜ್ಞಾತ' ಪ್ರಯಾಣದ ಅನುಭವಗಳನ್ನು ಪ್ರಸ್ತುತಪಡಿಸಿತು, ಗೋವಾದಲ್ಲಿರುವ ಅಪರಿಚಿತ ತಾಣಗಳ ಸೌಂದರ್ಯವನ್ನು ವೆಬಿನಾರ್ ನಲ್ಲಿ ಭಾಗವಹಿಸಿದವರಿಗೆ ಮುಖಾಮುಖಿಯಾಗಿಸಿತು.

ವಿವರಗಳಿಗೆ: https://pib.gov.in/PressReleseDetail.aspx?PRID=1622121

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಪಂಜಾಬ್: ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಲಸಿಗರು / ಪ್ರಯಾಣಿಕರ ಸಾಗಾಟದ ವೇಳೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು (ಪಂಜಾಬ್ ರೋಡ್ ವೇಸ್ / ಪಿಆರ್ಟಿಸಿ / ಪಿಯುಎನ್ ಬಸ್) ಮತ್ತು ಖಾಸಗಿ ಬಸ್ ನಿರ್ವಾಹಕರು ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಕಾಪಾಡುವಂತೆ ಪಂಜಾಬ್ ಸರ್ಕಾರ ಸೂಚನೆ ನೀಡಿದೆ. ರಾಜ್ಯದಲ್ಲಿ ಗೋಧಿ ಬೆಳೆಯ ಬಂಪರ್ ಇಳುವರಿಯಾಗಿದ್ದು, ಕೋವಿಡ್-19 ಕರ್ಫ್ಯೂ / ಲಾಕ್ ಡೌನ್ ನಡುವೆಯೂ, ಹಲವಾರು ಸವಾಲುಗಳಿದ್ದಾಗ್ಯೂ ಪಂಜಾಬ್ ಗೋಧಿ ಸಂಗ್ರಹದಲ್ಲಿ 100 ಎಲ್ಎಂಟಿ ಗಡಿ ದಾಟಿದೆ.
  • ಹರಿಯಾಣ: ಕೋವಿಡ್-19 ಗೆ ಸಂಬಂಧಿಸಿದ ಸಾರ್ವಜನಿಕ ಕುಂದುಕೊರತೆಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರ ಹರಿಯಾಣ ಸರ್ಕಾರವನ್ನು ಪ್ರಶಂಸಿಸಿದೆ. ಮಾರ್ಚ್ 30, 2020 ರಿಂದ ಮೇ 6, 2020 ಅವಧಿಯಲ್ಲಿ ಸ್ವೀಕರಿಸಲಾದ 2827 ಪೈಕಿ 2436 ಕುಂದುಕೊರತೆಗಳನ್ನು ಪರಿಹರಿಸಲಾಗಿದೆ. ಹರಿಯಾಣ ಸರ್ಕಾರವು ಉದ್ಯೋಗವನ್ನು ಒದಗಿಸಲು ಮತ್ತು ರಾಜ್ಯದ ಆರ್ಥಿಕತೆಯನ್ನು ಹೆಚ್ಚಿಸಲು ಅಚಲವಾಗಿದೆ ಮತ್ತು ಇದಕ್ಕಾಗಿ ಸ್ವಯಂಚಾಲಿತ ಅನುಮೋದನೆಗಳನ್ನು https://saralharyana.gov.in/ ಪೋರ್ಟಲ್ನಲ್ಲಿ ನೀಡಲಾಗುತ್ತಿದೆ ಮತ್ತು ಇಲ್ಲಿಯವರೆಗೆ 19,626 ಘಟಕಗಳನ್ನು ಅನುಮೋದಿಸಲಾಗಿದ್ದು 11,21,287 ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ.
  • ಹಿಮಾಚಲ ಪ್ರದೇಶ: ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಲು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ವಹಿಸಿದ್ದರು, ಕರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ, ದೇಶದ ಇತರ ಭಾಗಗಳಿಂದ ಬರುವ ರಾಜ್ಯದ ಜನರು ಕಟ್ಟುನಿಟ್ಟಾಗಿ ಕ್ವಾರಂಟೈನ್ ನಿಯಮ ಪಾಲಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿದರು. ದೇಶದ ಇತರ ಭಾಗಗಳಿಂದ ರಾಜ್ಯಕ್ಕೆ ಹಿಂತಿರುಗುವ ಎಲ್ಲ ವ್ಯಕ್ತಿಗಳನ್ನು ಪರೀಕ್ಷಿಸಬೇಕು ಮತ್ತು ನಂತರ ಅವನು ಅಥವಾ ಅವಳನ್ನು ಹೊಂ ಕ್ವಾರಂಟೈನ್ ನಲ್ಲಿ ಅಥವಾ ಸಾಂಸ್ಥಿಕ ಪ್ರತ್ಯೇಕೀಕರಣದ ಅಡಿಯಲ್ಲಿ ಇರಿಸಿಕೊಳ್ಳಬೇಕೇ ಎಂಬುದನ್ನು ನಿರ್ಧರಿಸಬೇಕು ಎಂದು ಅವರು ಹೇಳಿದರು.
  • ಕೇರಳ: ಬಹ್ರೇನ್ನಿಂದ 177 ಮತ್ತು ಸೌದಿ ಅರೇಬಿಯಾದಲ್ಲಿ ಸಿಲುಕಿದ್ದ 162 ಭಾರತೀಯರನ್ನು ಹೊತ್ತ ಎರಡು ವಿಮಾನಗಳು ಇಂದು ರಾತ್ರಿ ಅನುಕ್ರಮವಾಗಿ ಕೊಚ್ಚಿ ಮತ್ತು ಕೋಳಿಕೋಡ್ನಲ್ಲಿ ಬಂದು ಇಳಿಯಲಿವೆ. 1,150 ವಲಸೆ ಕಾರ್ಮಿಕರನ್ನು ಹೊತ್ತ ಒಂದು ಶ್ರಮಿಕ್ ವಿಶೇಷ ರೈಲು ಇಂದು ಸಂಜೆ ತ್ರಿಶೂರ್ನಿಂದ ಉತ್ತರ ಪ್ರದೇಶಕ್ಕೆ ತೆರಳಲಿದೆ. ರಾಜ್ಯದಲ್ಲಿ ಇದೀಗ ಕೇವಲ 25 ಸಕ್ರಿಯ ಕೋವಿಡ್ ಪ್ರಕರಣಗಳು ಮಾತ್ರ ಇವೆ.
  • ತಮಿಳುನಾಡು: ರಾಜ್ಯದಲ್ಲಿನ ಸಾವಿರಾರು ಮದ್ಯದಂಗಡಿಗಳಲ್ಲಿ ಜನದಟ್ಟಣೆ ಸೇರುತ್ತಿದ್ದು, ವೈಯಕ್ತಿಕ ಅಂತರದ ನಿಯಮವನ್ನು ಗಾಳಿಗೆ ತೂರಿವೆ; ತಾಸ್ಮ್ಯಾಕ್ ಮಳಿಗೆಗಳನ್ನು ಪುನಃ ತೆರೆಯುವುದರ ವಿರುದ್ಧ ಹಲವಾರು ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆದವು. ಕೋವಿಡ್ ನಂತರದ ಅವಧಿಯಲ್ಲಿ ಸಾರ್ವಜನಿಕ ಸಾರಿಗೆಗೆ ಶೇಕಡಾ 50 ರಷ್ಟು ಸಾಮರ್ಥ್ಯದೊಂದಿಗೆ ಆರಂಭಿಸಲು ಮತ್ತು ಕೋವಿಡ್ ಯೋಧರಿಗೆ ಪ್ರತ್ಯೇಕ ಬಸ್ ಸೇವೆಗಳನ್ನು ಒದಗಿಸಲು ರಾಜ್ಯ ಸಿದ್ಧತೆ ನಡೆಸಿದೆ. ನಿನ್ನೆ ತನಕ ಒಟ್ಟು ಪ್ರಕರಣಗಳು: 5409, ಸಕ್ರಿಯ ಪ್ರಕರಣಗಳು: 3822, ಸಾವು: 37, ಬಿಡುಗಡೆ: 1547. ಕೊಯೆಂಬೆಡು ಮಾರುಕಟ್ಟೆಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಇತ್ತೀಚೆಗೆ ವರದಿಯಾಗಿವೆ.
  • ಕರ್ನಾಟಕ: ಇಂದು 45 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಒಂದು ದಿನದಲ್ಲಿ ಅತಿ ಹೆಚ್ಚು ಪ್ರಕರಣ ವರದಿಯಾದಂತಾಗಿದೆ; ಬೆಂಗಳೂರು 7, ಬಳ್ಳಾರಿ 1, ಬೆಳಗಾವಿ 11, ದಾವಣಗೆರೆ 14 ಮತ್ತು ಉತ್ತರ ಕನ್ನಡದಲ್ಲಿ 12 ಪ್ರಕರಣಗಳು ವರದಿಯಾಗಿವೆ. ಇಂದು 14 ಜನರು ಬಿಡುಗಡೆಯಾಗಿದ್ದಾರೆ ಮತ್ತು ಒಂದು ಸಾವು ಸಂಭವಿಸಿದೆ. ಇಲ್ಲಿಯವರೆಗೆ ಒಟ್ಟು ಪ್ರಕರಣಗಳು 750. ಇಲ್ಲಿಯವರೆಗೆ 30 ಸಾವು ಸಂಭವಿಸಿದೆ ಮತ್ತು 371 ಜನರು ಬಿಡುಗಡೆ ಆಗಿದ್ದಾರೆ. ಏತನ್ಮಧ್ಯೆ, ನಾಳೆಯಿಂದ ಎಲ್ಲಾ ಮದ್ಯದಂಗಡಿಗಳು, ಪಬ್ಗಳು ಮತ್ತು ಬಾರ್ಗಳು ಮದ್ಯ ಮಾರಾಟಕ್ಕೆ ತೆರೆಯಲಿವೆ ಎಂದು ರಾಜ್ಯ ಘೋಷಿಸಿದೆ.
  • ಆಂಧ್ರಪ್ರದೇಶ: ಚಿತ್ತೂರು ಜಿಲ್ಲಾ ಪೊಲೀಸರು ಸರಕು ಸಾಗಣೆ ವಾಹನ ಚಾಲಕರು ಮತ್ತು ಕ್ಲೀನರ್ಗಳು ಮತ್ತು ಇತ್ತೀಚೆಗೆ ಚೆನ್ನೈನ ಕೊಯಂಬೇಡು ಮಾರುಕಟ್ಟೆಯಿಂದ ಹಿಂದಿರುಗಿದ ರೈತರ ವಿವರಗಳನ್ನು ಪತ್ತೆಹಚ್ಚಲು ಪ್ರಾರಂಭಿಸಿದೆ. 7320 ಮಾದರಿಗಳನ್ನು ಪರೀಕ್ಷಿಸಿದ ನಂತರ ಕಳೆದ 24 ಗಂಟೆಗಳಲ್ಲಿ 54 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ, 62 ರೋಗಿಗಳು ಬಿಡುಗಡೆಯಾಗಿದ್ದಾರೆ ಮತ್ತು ಮೂರು ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸೋಂಕಿನ ಪ್ರಕರಣಗಳು 1887ಕ್ಕೆ ಏರಿಕೆಯಾಗಿವೆ. ಸಕ್ರಿಯ ಪ್ರಕರಣಗಳು: 1004, ಬಿಡುಗಡೆ: 842, ಸಾವುಗಳು: 41. ಹೆಚ್ಚು ಸೋಂಕಿನ ಪ್ರಕರಣದ ಜಿಲ್ಲೆಗಳು: ಕರ್ನೂಲ್ (547), ಗುಂಟೂರು (374), ಕೃಷ್ಣ (322).
  • ತೆಲಂಗಾಣ: ರಾಷ್ಟ್ರವ್ಯಾಪಿ ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳುತ್ತಿದ್ದು, ಬಿಹಾರದಿಂದ ಸುಮಾರು 225 ವಲಸೆ ಕಾರ್ಮಿಕರಿದ್ದ ಶ್ರಮಿಕ್ ವಿಶೇಷ ರೈಲು ಶುಕ್ರವಾರ ತೆಲಂಗಾಣವನ್ನು ತಲುಪಿದೆ. ಹೈದರಾಬಾದ್ ಮೂಲದ ಲಸಿಕೆಗಳು ಮತ್ತು ಜೈವಿಕ ಚಿಕಿತ್ಸಾ ತಯಾರಕ ಭಾರತ್ ಬಯೋಟೆಕ್ ಕೋವಿಡ್ 19 ಚಿಕಿತ್ಸೆಗೆ ಮಾನವ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇಲ್ಲಿಯವರೆಗೆ ಒಟ್ಟು ಕೋವಿಡ್ ಪ್ರಕರಣಗಳು: 1122, ಸಕ್ರಿಯ ಪ್ರಕರಣಗಳು: 400, ಬಿಡುಗಡೆ: 693, ಸಾವು: 29.
  • ಅಸ್ಸಾಂ: ಅಸ್ಸಾಂನಲ್ಲಿ ಇನ್ನೂ ಮೂವರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಒಟ್ಟು ಪ್ರಕರಣ 56 ಕ್ಕೆ ಏರಿದೆ, ಸಕ್ರಿಯ 21, ಬಿಡುಗಡೆಯಾದವರು 34 ಮತ್ತು 1 ಸಾವು ಸಂಭವಿಸಿದೆ ಎಂದು ಅಸ್ಸಾಂ ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ. ಗುವಾಹಟಿಯಲ್ಲಿನ ಹೊಸ ಕೋವಿಡ್ 19 ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಕೆಳಗಿನ ಪ್ರದೇಶಗಳು ಅಂದರೆ, ಅಮಿಯೋನಗರ, ಡಾ. ಬಿ. ಬರುವಾ ಕ್ಯಾನ್ಸರ್ ಆಸ್ಪತ್ರೆ ಸಮೀಪದ ಚಂದಮಾರಿ ಪ್ರದೇಶ ಮತ್ತು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸಮೀಪ ಪ್ರದೇಶ ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಿಸಲಾಗಿದೆ.
  • ಮಣಿಪುರ: 2020 ಮುಂಗಾರು ಹಂಗಾಮಿನಲ್ಲಿ ಯೂರಿಯಾ ಗೊಬ್ಬರವನ್ನು ಕಳೆದ ವರ್ಷದಂತೆಯೇ ಲಭ್ಯವಾಗುವಂತೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಕೃಷಿ ನಿರ್ದೇಶನಾಲಯ ಹೇಳಿದೆ. ಮಣಿಪುರ ಸಮಾಜ ಕಲ್ಯಾಣ ಇಲಾಖೆ, ಎಲ್ಲ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಮೇಲ್ವಿಚಾರಕರಿಗೆ ಅಂಗನವಾಡಿ ಚಟುವಟಿಕೆಗಳ ಮತ್ತು ಫಲಾನುಭವಿಗಳಿಗೆ ಸಕಾಲದಲ್ಲಿ ಪಡಿತರ ವಿತರಣೆಯ ನಿಗಾಕ್ಕಾಗಿ ಐಸಿಡಿಎಸ್ ಸಿಎಎಸ್ ಹೊಂದಿದ ಸ್ಮಾರ್ಟ್ ಫೋನ್ ನೀಡಿದೆ.
  • ಮಿಜೋರಾಂ: ರಾಜ್ಯ ಪ್ರಾಧಿಕಾರಗಳಿಗೆ ಮಾಹಿತಿ ನೀಡದೆ ರಾಜ್ಯಕ್ಕೆ ಮರಳಿದ 150 ಕ್ಕೂ ಹೆಚ್ಚು ಜನರನ್ನು ಸರ್ಕಾರ ಕ್ವಾರಂಟೈನ್ ಮಾಡಿದೆ.
  • ನಾಗಾಲ್ಯಾಂಡ್: ದೈನಂದಿನ ಪ್ರಕರಣ ವರದಿಗಳ ಫಲಿತಾಂಶವನ್ನು ಅವಲಂಬಿಸಿ ಹಂತ ಹಂತವಾಗಿ ಲಾಕ್ಡೌನ್ನಲ್ಲಿ ಸಡಿಲ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ನಿವೃತ್ತ ನೌಕರರ ಪಿಂಚಣಿಯನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಪಿಂಚಣಿದಾರರಿಗೆ ಎಸ್‌.ಬಿಐನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲು ನಾಗಾಲ್ಯಾಂಡ್ ಸರ್ಕಾರ ಹೇಳಿದೆ.
  • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಗುರುವಾರ 1,216 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 17,974 ತಲುಪಿದೆ. ಪೈಕಿ 11,394 ಪ್ರಕರಣಗಳು ಮುಂಬೈನಿಂದ ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಗುರುವಾರ ಒಂದೇ ದಿನ ಅತಿ ಹೆಚ್ಚು 43 ಸಾವು ಸಂಭವಿಸಿದ್ದು ಒಟ್ಟು ಸಾವಿನ ಸಂಖ್ಯೆ 694 ಕ್ಕೆ ಏರಿದೆ. ಏತನ್ಮಧ್ಯೆ, ರಾಜ್ಯದಲ್ಲಿ ಪರೀಕ್ಷಿಸಲ್ಪಟ್ಟವರ ಸಂಖ್ಯೆ 2 ಲಕ್ಷ ದಾಟಿದೆ. ಔರಂಗಾಬಾದ್ ರೈಲು ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಹತ್ತಿರದ ಸಂಬಂಧಿಗಳಿಗೆ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಸರ್ಕಾರಗಳು ಆಯಾ ರಾಜ್ಯ ಸರ್ಕಾರಗಳ ಭಾಗವಾಗಿ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿವೆ. ರೈಲ್ವೆ ಹಳಿ ಮೇಲೆ ಮಲಗಿದ್ದ 16 ವಲಸೆ ಕಾರ್ಮಿಕರು ಇಂದು ಮುಂಜಾನೆ ಔರಂಗಾಬಾದ್ ಬಳಿಯ ಕರ್ಮದ್ ನಲ್ಲಿ ಸರಕು ರೈಲಿಗೆ ಸಿಕ್ಕಿ ಮೃತಪಟ್ಟಿದ್ದರು.
  • ಗುಜರಾತ್: 388 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಗುಜರಾತ್ನಲ್ಲಿ ಒಟ್ಟು ಸೋಂಕಿನ ಪ್ರಕರಣಗಳು ಏಳು ಸಾವಿರವನ್ನು ದಾಟಿ 7,013 ಕ್ಕೆ ತಲುಪಿದೆ. ಬುಧವಾರ ರಾತ್ರಿಯಿಂದ ಪತ್ತೆಯಾದ 388 ಹೊಸ ಪ್ರಕರಣಗಳಲ್ಲಿ 275 ಪ್ರಕರಣಗಳು ಅಹಮದಾಬಾದ್ ಜಿಲ್ಲೆಯೊಂದರಲ್ಲೇ ಕಂಡುಬಂದಿವೆ. ಗುಜರಾತ್ ನಲ್ಲಿ ಒಟ್ಟು 425 ಕೊವಿಡ್ ಸಂಬಂಧಿತ ಸಾವುಗಳು ವರದಿಯಾಗಿವೆ. ಕೋವಿಡ್ ಪೀಡಿತ ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದನ್ನು ಮತ್ತು ರೋಗಲಕ್ಷಣವಿಲ್ಲದ ಶಂಕಿತ ರೋಗಿಗಳಿಗೆ ಸಾಕಷ್ಟು ಕ್ವಾರಂಟೈನ್ ಸೌಲಭ್ಯ ಖಚಿತಪಡಿಸಿಕೊಳ್ಳಲು, ಅಹಮದಾಬಾದ್ ಮಹಾನಗರ ಪಾಲಿಕೆ 800 ಹಾಸಿಗೆಗಳಿರುವ 8 ಖಾಸಗಿ ಆಸ್ಪತ್ರೆಗಳು ಮತ್ತು 3,000 ಹಾಸಿಗೆ ಸಾಮರ್ಥ್ಯ ಹೊಂದಿರುವ 60 ಹೋಟೆಲ್ಗಳನ್ನು ಸ್ವಾಧೀನಪಡಿಸಿಕೊಂಡಿದೆ.
  • ರಾಜಸ್ಥಾನ: ರಾಜಸ್ಥಾನದಿಂದ ಇನ್ನೂ 26 ಕರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 3,453 ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ವೈರಸ್ ಸೋಂಕಿನಿಂದ 1,596 ಜನರು ಗುಣಮುಖರಾಗಿದ್ದರೂ ಸಹ, ರಾಜ್ಯದಲ್ಲಿ ಒಟ್ಟು 97 ಸಾವುಗಳು ಸಂಭವಿಸಿದೆ.
  • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 3,252 ಕ್ಕೆ ಏರಿದೆ. 1,231 ಜನರು ಚೇತರಿಸಿಕೊಂಡರೆ, ರಾಜ್ಯದಲ್ಲಿ 193 ಜನರು ಸಾವಿಗೀಡಾಗಿದ್ದಾರೆ. ಮಧ್ಯಪ್ರದೇಶದ ಇಂದೋರ್, ಭೋಪಾಲ್ ಮತ್ತು ಉಜ್ಜಯಿನಿ ಹೆಚ್ಚು ಬಾಧಿತ ನಗರಗಳಾಗಿವೆ.

ಪಿ ಐ ಬಿ ವಾಸ್ತವ ಪರೀಶೀಲನೆ

 

***


(Release ID: 1622312) Visitor Counter : 283