ಪರಿಸರ ಮತ್ತು ಅರಣ್ಯ ಸಚಿವಾಲಯ
ಕರಡು ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆ (ಇ.ಐ.ಎ.) 2020 ರ ನೋಟೀಸ್ ಅವಧಿ ಜೂನ್ 30 ರ ವರೆಗೆ ವಿಸ್ತರಣೆ
Posted On:
07 MAY 2020 4:24PM by PIB Bengaluru
ಕರಡು ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆ (ಇ.ಐ.ಎ.) 2020 ರ ನೋಟೀಸ್ ಅವಧಿ ಜೂನ್ 30 ರ ವರೆಗೆ ವಿಸ್ತರಣೆ
ಕೇಂದ್ರ ಸರಕಾರವು ಪರಿಸರ (ರಕ್ಷಣಾ) ಕಾಯ್ದೆ 1986 ರಡಿಯಲ್ಲಿ ದತ್ತವಾದ ಅಧಿಕಾರವನ್ನು ಬಳಸಿ ಕರಡು ಅಧಿಸೂಚನೆಯನ್ನು ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆ ,2020 ಶೀರ್ಷಿಕೆಯಡಿ , ಎಸ್.ಒ. 1199 (ಇ) ದಿನಾಂಕ 23 ನೇ ಮಾರ್ಚ್ 2020 ರಂದು ಹೊರಡಿಸಿದ್ದು, ಅದು 11 ನೇ ಏಪ್ರಿಲ್ 2020 ರ ಅಧಿಕೃತ ಗೆಜೆಟ್ ನಲ್ಲಿ ಸಾರ್ವಜನಿಕರ ಮತ್ತು ಇದರಿಂದ ಸಂತ್ರಸ್ತರಾಗಬಹುದಾದವರ ಮಾಹಿತಿಗಾಗಿ ಪ್ರಕಟಿಸಿದೆ. ಈ ಕರಡು ಸೂಚನೆಯಲ್ಲಿರುವ ಪ್ರಸ್ತಾಪದ ವಿರುದ್ದ ಯಾವುದೇ ಆಕ್ಷೇಪ ಮತ್ತು ಸಲಹೆಗಳಿದ್ದರೆ ಈ ಕರಡು ಅಧಿಸೂಚನೆಯನ್ನು ಒಳಗೊಂಡ ಗೆಜೆಟ್ ಸಾರ್ವಜನಿಕರಿಗೆ ಲಭ್ಯವಾದ ಅರವತ್ತು ದಿನಗಳ ಒಳಗೆ ಸಲ್ಲಿಸಬಹುದಾಗಿದೆ.
ನೋಟೀಸು ಅವಧಿಯನ್ನು ವಿಸ್ತರಿಸುವಂತೆ ಸಚಿವಾಲಯಕ್ಕೆ ಹಲವಾರು ಅಹವಾಲುಗಳು ಬಂದಿರುತ್ತವೆ. ಕರಡು ಇ.ಐ.ಎ.ಅಧಿಸೂಚನೆ 2020ನ್ನು ಕೊರೊನಾವೈರಸ್ (ಕೋವಿಡ್ -19 ) ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಕಟಿಸಿರುವುದರಿಂದ ಅವಧಿ ವಿಸ್ತರಣೆಯನ್ನು ಅವುಗಳಲ್ಲಿ ಕೋರಲಾಗಿದೆ. ಆದುದರಿಂದ ಸಚಿವಾಲಯವು ಇದನ್ನು ಪರಿಗಣಿಸಿ ನೋಟೀಸು ಅವಧಿಯನ್ನು 2020ರ ಜೂನ್ 30 ರವರೆಗೆ ವಿಸ್ತರಿಸುವುದು ಸೂಕ್ತ ಎಂದು ಪರಿಗಣಿಸಿದೆ.
ಯಾವುದೇ ವ್ಯಕ್ತಿಯು ಕರಡು ಅಧಿಸೂಚನೆಯು ಒಳಗೊಂಡ ಪ್ರಸ್ತಾಪಗಳಿಗೆ ಆಕ್ಷೇಪ ಸಲ್ಲಿಸಲು ಅಥವಾ ಸಲಹೆಗಳನ್ನು ನೀಡಲು ಆಸಕ್ತರಾಗಿದ್ದಲ್ಲಿ ಅವುಗಳನ್ನು ಲಿಖಿತವಾಗಿ ಕೇಂದ್ರ ಸರಕಾರದ ಪರಿಗಣನೆಗಾಗಿ 2020 ರ ಜೂನ್ 30 ರೊಳಗೆ ಕಾರ್ಯದರ್ಶಿ, ಪರಿಸರ, ಅರಣ್ಯ ಮತ್ತು ವಾತಾವರಣ ಬದಲಾವಣೆ ಸಚಿವಾಲಯ, ಇಂದಿರಾ ಪರ್ಯಾವರಣ ಭವನ , ಜೋರ್ ಭಾಗ್ ರಸ್ತೆ , ಅಲಿಗಂಜ್, ಹೊಸದಿಲ್ಲಿ-110003-ಈ ವಿಳಾಸಕ್ಕೆ ಅಥವಾ ಅದನ್ನು ಇ-ಮೈಲ್ ಮೂಲಕವಾದರೆ eia2020-moefcc[at]gov[dot]in. ವಿಳಾಸಕ್ಕೆ ಕಳುಹಿಸಬಹುದು.
***
(Release ID: 1622051)
Visitor Counter : 294