ಆಯುಷ್
ಆರೋಗ್ಯ ಮತ್ತು ಆಯುಷ್ ಸಚಿವಾಲಯದಿಂದ ಅಧಿಕೃತವಾಗಿ ಕೋವಿಡ್-19 ಒಳಗೊಂಡಂತೆ ಆಯುಷ್ ಮಧ್ಯಪ್ರವೇಶದ ಅಂತರ ಶಿಸ್ತೀಯ ಅಧ್ಯಯನಕ್ಕೆ ಚಾಲನೆ
Posted On:
07 MAY 2020 2:51PM by PIB Bengaluru
ಆರೋಗ್ಯ ಮತ್ತು ಆಯುಷ್ ಸಚಿವಾಲಯದಿಂದ ಅಧಿಕೃತವಾಗಿ ಕೋವಿಡ್-19 ಒಳಗೊಂಡಂತೆ ಆಯುಷ್ ಮಧ್ಯಪ್ರವೇಶದ ಅಂತರ ಶಿಸ್ತೀಯ ಅಧ್ಯಯನಕ್ಕೆ ಚಾಲನೆ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಮತ್ತು ಆಯುಷ್ ಖಾತೆ ಸಹಾಯಕ ಸಚಿವ ಶ್ರೀ ಶ್ರೀಪಾದ್ ಯಸ್ಸೋ ನಾಯಕ್ ಜಂಟಿಯಾಗಿ ಕೋವಿಡ್-19 ಸ್ಥಿತಿಗತಿಯಲ್ಲಿ ಆಯುರ್ವೇದದ ಮಧ್ಯಪ್ರವೇಶದ ಮೂಲಕ ಆರೈಕೆ ಕುರಿತ ಕ್ಲಿನಿಕಲ್ ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳಲು ಚಾಲನೆ ನೀಡಿದರು ಮತ್ತು ನವದೆಹಲಿಯಲ್ಲಿಂದು ಆಯುಷ್ ಸಂಜೀವಿನಿ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಯಿತು. ಆಯುಷ್ ಸಚಿವರು ಗೋವಾದಿಂಧ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಹರ್ಷವರ್ಧನ್, ಭಾರತ ಸರ್ಕಾರ ಹಂತ ಹಂತವಾಗಿ ಕ್ರಿಯಾಶೀಲ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಪರಿಣಾಮ ಕೋವಿಡ್-19 ನಿರ್ವಹಣೆ ಮತ್ತು ನಿಯಂತ್ರಣ ಸಾಧಿಸಲಾಗಿದೆ. ಈ ಕ್ರಮಗಳ ಕುರಿತು ಉನ್ನತ ಮಟ್ಟದಲ್ಲಿ ನಿರಂತರ ನಿಗಾ ವಹಿಸಲಾಗುತ್ತಿದೆ ಮತ್ತು ಪರಾಮರ್ಶಿಸಲಾಗುತ್ತಿದೆ ಎಂದರು.
ಡಾ. ಹರ್ಷವರ್ಧನ್ ಅವರು, “ಭಾರತದಲ್ಲಿ ಸಾಂಪ್ರದಾಯಿಕ ವೈದ್ಯ ಪದ್ಧತಿಗಳ ಬಹುದೊಡ್ಡ ಇತಿಹಾಸವಿದೆ ಮತ್ತು ಆಯುರ್ವೇದ ವಲಯದಲ್ಲಿ ಮುಂಚೂಣಿಯಲ್ಲಿದೆ. ಆಯುಷ್ ಸಚಿವಾಲಯ ಕೋವಿಡ್-19 ಸಾಂಕ್ರಾಮಿಕ ಸಮಸ್ಯೆಗೆ ಆಯುಷ್ ಪದ್ಧತಿಗಳ ಕ್ಲಿನಿಕಲ್ ಅಧ್ಯಯನ(ರೋಗ ನಿರೋಧಕಗಳ ಮೂಲಕ ಮಧ್ಯಪ್ರವೇಶ) ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖಾಗಿದೆ ಎಂದರು.
ಕೇಂದ್ರ ಆರೋಗ್ಯ ಸಚಿವರು, ಆಯುಷ್ ಸಚಿವಾಲಯ, ಆಯುಷ್ ಸಂಜೀವಿನಿ ಮೊಬೈಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ. ಇದರಿಂದ ಆಯುಷ್ ಪದ್ಧತಿಗಳ ಬಳಕೆ ಮತ್ತು ಪಾಲನೆಯಿಂದ ಜನಸಂಖ್ಯೆ ಮತ್ತು ಕೋವಿಡ್-19 ನಿಯಂತ್ರಣ ಪರಿಣಾಮಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಸಂಗ್ರಹಿಸಲು ನೆರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಶ್ರೀಪಾದ್ ಯಸ್ಸೋ ನಾಯಕ್, ಆಯುಷ್ ಸಚಿವಾಲಯದ ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಸಮಸ್ಯೆ ಕುರಿತು ಆಯುಷ್ ಪದ್ಧತಿಗಳ ಬಗ್ಗೆ ಕ್ಲಿನಿಕಲ್ ಅಧ್ಯಯನ(ರೋಗ ಪ್ರತಿಬಂಧಕ ಮತ್ತು ಇತರೆ ಮಧ್ಯಪ್ರವೇಶ)ಗಳನ್ನು ಕೈಗೊಳ್ಳಲಿದೆ ಜೊತೆಗೆ ಹೆಚ್ಚಿನ ಅಪಾಯ ಎದುರಿಸುತ್ತಿರುವ ಜನಸಂಖ್ಯೆಗೆ ರೋಗ ಪ್ರತಿಬಂಧಕ (ಪ್ರೊಫೈಲಿಟಿಕ್) ಆಧರಿಸಿದ ಆಯುಷ್ ಪರಿಣಾಮಗಳ ಬಗ್ಗೆಯೂ ಅಧ್ಯಯನ ನಡೆಸಲಾಗುವುದು ಎಂದರು. ಜನರಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಆಯುಷ್ ಪದ್ಧತಿಗಳ ಬಳಕೆ ಮತ್ತು ಆಯುಷ್ ಮೇಲಿನ ಪರಿಣಾಮಗಳ ಬಗ್ಗೆ ಸಚಿವಾಲಯ ಅಧ್ಯಯನ ಕೈಗೊಂಡಿದೆ.
ಶ್ರೀ ನಾಯಕ್ ಅವರು, ಸಮಸ್ಯೆಗೆ ಉತ್ತಮ ಪರಿಹಾರಗಳನ್ನು ಕಂಡುಕೊಳ್ಳಲು ಆಯುಷ್ ಸಚಿವಾಲಯ ಜನಸಂಖ್ಯೆ ಮತ್ತು ಕ್ಲಿನಿಕಲ್ ಆಧರಿಸಿದ ನಾಲ್ಕು ಅಧ್ಯಯನಗಳನ್ನು ಕೈಗೊಂಡಿದೆ ಮತ್ತು ರೋಗಗಳ ನಿಯಂತ್ರಣದಲ್ಲಿ ಆಯುಷ್ ಪಾತ್ರದ ಬಗ್ಗೆ ಮೌಲ್ಯಮಾಪನ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚ, ಸಚಿವಾಲಯ, ಅಂತರ್ ಶಿಸ್ತೀಯ ಆಯುಷ್ ಅಭಿವೃದ್ಧಿ ಮತ್ತು ಸಂಶೋಧನೆ ಕಾರ್ಯಪಡೆಯನ್ನು ರಚಿಸಿದೆ. ವಿಶ್ವವಿದ್ಯಾಲಯ ವೇತನ ಆಯೋಗ(ಯುಜಿಸಿ) ಉಪಾಧ್ಯಕ್ಷ ಡಾ. ಭೂಷಣ್ ಪಟವರ್ಧನ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಗುಂಪು ಈ ಕ್ರಮಗಳಿಗೆ ಕಾರ್ಯತಂತ್ರಗಳನ್ನು ಅಭಿವೃದ್ಧಿಗೊಳಿಸಲಿದೆ ಎಂದರು.
ಆಯುಷ್ ಇಲಾಖೆ ಜಂಟಿ ಕಾರ್ಯದರ್ಶಿ ಶ್ರೀ ಪಿ.ಎನ್. ರಂಜಿತ್ ಕುಮಾರ್, ಕೋವಿಡ್-19ಗೆ ಸಂಬಂಧಿಸಿದಂತೆ ಆಯುಷ್ ಆಧರಿಸಿ ಕೈಗೊಳ್ಳುತ್ತಿರುವ ಮೂರು ಅಧ್ಯಯನಗಳ ವಿವರಗಳನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಿದರು. ಅಲ್ಲದೆ ಅವರು, ಸಂಜೀವಿನಿ ಆಪ್ ನ ಉದ್ದೇಶ ಮತ್ತು ಆಯುರ್ವೇದದ ಪ್ರಯೋಜನಗಳ ಬಗ್ಗೆ ವಿವರಿಸಿದರು. ಆಯುಷ್ ಆಧರಿಸಿದ ಮೂರು ಅಧ್ಯಯನಗಳ ಬಗ್ಗೆ ಮಾತನಾಡಿದ ಅವರು, ಚಿಂತನೆಗಳ ಅಭಿವೃದ್ಧಿ, ಗುಂಪು ಸಂಪನ್ಮೂಲ ಕ್ರೂಢೀಕರಣ, ಕಾರ್ಯಪಡೆ ರಚನೆ, ಎಸ್ ಜಿಪಿಜಿಐ, ಏಮ್ಸ್, ಐಸಿಎಂಆರ್, ಸಿಎಸ್ ಐಆರ್ ಮತ್ತಿತರ ನಾನಾ ಸಂಸ್ಥೆಗಳ ನಡುವೆ ಮೈತ್ರಿ ಸಾಧಿಸಿ, ಒಂದೇ ವೇದಿಕೆಗೆ ತರುವುದು ನನಸಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಈ ಕೆಳಗಿನ ಅಧ್ಯಯನಗಳಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು:
- ಕೋವಿಡ್-19ಗೆ ನಿಗದಿತ ಆರೈಕೆ ಸೇರ್ಪಡೆಗೆ ಆಯುರ್ವೇದ ಮಧ್ಯಪ್ರವೇಶದ ಮೂಲಕ ರೋಗ ಪ್ರತಿಬಂಧಕ ಪ್ರೊಫೈಲಿಟಿಕ್ ಮೂಲಕ ಕ್ಲಿನಿಕಲ್ ಸಂಶೋಧನೆ ಅಧ್ಯಯನ. ಆಯುಷ್ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(ಎಂಒಎಚ್ಎಫ್ ಡಬ್ಲ್ಯೂ) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಮೂಲಕ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್ ಐಆರ್) ಹಾಗೂ (ಐಸಿಎಂಆರ್) ನೆರವಿನಿಂದ ಈ ಸಮಗ್ರ ಕ್ಲಿನಿಕಲ್ ಅಧ್ಯಯನ ಕೈಗೊಳ್ಳಲಾಗುತ್ತಿದೆ.
ಅಂತರ ಶಿಸ್ತೀಯ ಆಯುಷ್ ಅಭಿವೃದ್ಧಿ ಮತ್ತು ಸಂಶೋಧನಾ ಕಾರ್ಯಪಡೆ ಕೋವಿಡ್-19 ಪಾಸಿಟಿವ್ ಪ್ರಕರಣಗಳಲ್ಲಿ ಮಧ್ಯಪ್ರವೇಶದ ಮೂಲಕ ರೋಗ ಪ್ರತಿಬಂಧಕ (ಪ್ರೊಫೈಲಿಟಿಕ್) ಅಧ್ಯಯನ, ಕ್ಲಿನಿಕಲ್ ಸಂಶೋಧನಾ ಮಾನದಂಡಗಳನ್ನು ರೂಪಿಸಿ ವಿನ್ಯಾಸಗೊಳಿಸಿದೆ. ಇದರಲ್ಲಿ ದೇಶಾದ್ಯಂತ ನಾನಾ ಪ್ರತಿಷ್ಠಿತ ಸಂಸ್ಥೆಗಳ ತಜ್ಞರು, ಪರಿಶೀಲನೆ ಮತ್ತು ಸಮಾಲೋಚನೆ ಪ್ರಕ್ರಿಯೆಗಳ ಮೂಲಕ ನಾಲ್ಕು ಭಿನ್ನ ವಿಧಾನಗಳು ಅಂದರೆ ಅಶ್ವಗಂಧ, ಯಶ್ಟಿಮಧು, ಗುಡುಚಿ+ಪಿಪ್ಪಾಲಿ ಮತ್ತು ಪಾಲಿ ಹರ್ಬಲ್ ಫಾರ್ಮುಲೇಶನ್(ಆಯುಷ್-64) ಕುರಿತಂತೆ ಅಧ್ಯಯನ ನಡೆಸುವರು.
-
ಎ. ಕೋವಿಡ್-19 ಸಾಂಕ್ರಾಮಿಕದ ವೇಳೆ ಹೆಚ್ಚಿನ ಅಪಾಯವಿರುವ ಸಾರ್ಸ್-ಸಿಒವಿ-2 ವಿರುದ್ಧ ಪ್ರೊಪೈಲಾಕ್ಸಿಸ್ (ರೋಗ ನಿರೋಧಕಗಳ) ಮೂಲಕ ಅಶ್ವಗಂಧ ಬಳಕೆ: ಆರೋಗ್ಯ ರಕ್ಷಣೆಯಲ್ಲಿ ಬಳಕೆ ಮಾಡುವ ಹೈಡ್ರೋಕ್ಲೋರೋಕ್ವಿನ್ ನೊಂದಿಗೆ ಹೋಲಿಕೆ.
ಬಿ. ಸಾಮಾನ್ಯ ಮತ್ತು ಅಲ್ಪ (ಮೈಲ್ಡ್ ) ಪ್ರಮಾಣದ ಕೋವಿಡ್-19ಗೆ ನಿಗದಿತ ಆರೈಕೆಯೊಂದಿಗೆ ಆಯುರ್ವೇದದ ಸೂತ್ರಗಳನ್ನು ಬಳಸಿ ಪರಿಣಾಮಕಾರಿ ಚಿಕಿತ್ಸೆ ನೀಡುವುದು: ರಾಂಡಮೈಸ್ಡ್, ಓಪನ್ ಲೇಬಲ್, ಪ್ಯಾರಲೆಲ್ ಎಫಿಕಸಿ, ಆಕ್ಟಿವ್ ಕಂಟ್ರೋಲ್, ಮಲ್ಟಿ ಸೆಂಟರ್ ಎಕ್ಸ್ ಪ್ಲೊರೇಟರಿ ಡ್ರಗ್ ಟ್ರಯಲ್.
- ಆಯುಷ್ ಆಧಾರಿತ ರೋಗ ಪ್ರತಿಬಂಧಕ ಮಧ್ಯಪ್ರವೇಶದ ಪರಿಣಾಮಗಳ ಕುರಿತಂತೆ ಜನಸಂಖ್ಯೆ ಆಧಾರಿತ ಅಧ್ಯಯನಗಳು : ಆಯುಷ್ ಸಚಿವಾಲಯ ಹೆಚ್ಚಿನ ಅಪಾಯ ಎದುರಿಸುತ್ತಿರುವ ಜನರಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಆಯುರ್ವೇದ ಪದ್ಧತಿಗಳ ಬಳಕೆ ಪರಿಣಾಮಗಳ ಅಧ್ಯಯನಗಳನ್ನು ಕೈಗೊಳ್ಳಲಿದೆ. ಇದರ ಪ್ರಮುಖ ಉದ್ದೇಶ ಕೋವಿಡ್-19 ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಆಯುಷ್ ಬಳಕೆ ಮತ್ತು ಗಂಭೀರ ಅಪಾಯ ಎದುರಿಸುತ್ತಿರುವ ಜನರ ಜೀವನ ಮಟ್ಟದಲ್ಲಿ ಆಗಿರುವ ಸುಧಾರಣೆಗಳು ಒಳಗೊಂಡಿವೆ. ಈ ಅಧ್ಯಯನವನ್ನು ಆಯುಷ್ ಸಚಿವಾಲಯದಡಿ ಬರುವ ನಾಲ್ಕು ಸಂಶೋಧನಾ ಮಂಡಳಿಗಳು ಮತ್ತು ದೇಶಾದ್ಯಂತ 25 ರಾಜ್ಯಗಳು ರಾಷ್ಟ್ರೀಯ ಸಂಸ್ಥೆಗಳು ಕೈಗೊಳ್ಳಲಿದ್ದು, ಹಲವು ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿ ಅಂದಾಜು 5 ಲಕ್ಷ ಜನಸಂಖ್ಯೆ ವ್ಯಾಪ್ತಿಯನ್ನು ಒಳಗೊಂಡಿದೆ.
ಈ ಅಧ್ಯಯನದಿಂದ ಹೊರಬರುವ ಫಲಿತಾಂಶ ಕೋವಿಡ್-19ನಂತಹ ಸಾಂಕ್ರಾಮಿಕದ ವೇಳೆ ವೈಜ್ಞಾನಿಕ ಪುರಾವೆಗಳ ಮೂಲಕ ಆಯುಷ್ ನ ಪ್ರತಿಬಂಧಕ ಸಾಮರ್ಥ್ಯ ಅರ್ಥೈಸಿಕೊಳ್ಳಲು ಹೊಸ ಆಯಾಮ ದೊರಕಲಿದೆ.
- ಕೋವಿಡ್-19 ನಿಯಂತ್ರಣದಲ್ಲಿ ಆಯುಷ್ ಸಲಹಾ ಸೂಚಿ ಪಾಲನೆ ಪಾತ್ರ ಮತ್ತು ಅದರ ಪರಿಣಾಮಗಳ ಮೌಲ್ಯಮಾಪನಕ್ಕೆ ಆಯುಷ್ ಸಂಜೀವಿನಿ ಅಪ್ಲಿಕೇಶನ್ ಆಧರಿಸಿದ ಅಧ್ಯಯನ ಕೈಗೊಳ್ಳಲಾಗುವುದು: ಆಯುಷ್ ಸಚಿವಾಲಯ ಈ ಆಯುಷ್ ಸಂಜೀವಿನಿ ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಿದ್ದು, ಭಾರೀ ಪ್ರಮಾಣದ ಜನಸಂಖ್ಯೆ ಅಂದರೆ 5 ಮಿಲಿಯನ್ ಜನರ ದತ್ತಾಂಶವನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ಅಧ್ಯಯನಗಳಿಂದ ಹೊರಬರುವ ಫಲಿತಾಂಶಗಳಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಆಯುಷ್ ಪದ್ಧತಿಗಳ ಬಳಕೆ ಮತ್ತು ಅವುಗಳಿಂದ ಜನಸಂಖ್ಯೆ ಮೇಲಾಗಿರುವ ಪರಿಣಾಮಗಳ ಕುರಿತಂತೆ ದತ್ತಾಂಶವನ್ನು ಸಂಗ್ರಹಿಸಲಾಗುವುದು.
***
(Release ID: 1622047)
Visitor Counter : 280