ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಕೈಗಾರಿಕೆಗಳು ಸಕಾರಾತ್ಮಕ ಮಾರ್ಗವನ್ನು ತೆಗೆದುಕೊಳ್ಳಬೇಕು ಮತ್ತು ಕೋವಿಡ್ -19 ಬಿಕ್ಕಟ್ಟು ಮುಗಿದ ನಂತರ ಸೃಷ್ಠಿಯಾಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು: ಶ್ರೀ ನಿತಿನ್ ಗಡ್ಕರಿ
Posted On:
07 MAY 2020 5:15PM by PIB Bengaluru
ಕೈಗಾರಿಕೆಗಳು ಸಕಾರಾತ್ಮಕ ಮಾರ್ಗವನ್ನು ತೆಗೆದುಕೊಳ್ಳಬೇಕು ಮತ್ತು ಕೋವಿಡ್ -19 ಬಿಕ್ಕಟ್ಟು ಮುಗಿದ ನಂತರ ಸೃಷ್ಠಿಯಾಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು: ಶ್ರೀ ನಿತಿನ್ ಗಡ್ಕರಿ
ಕೈಗಾರಿಕೆಗಳು ಸಕಾರಾತ್ಮಕ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು ಮತ್ತು ಕೊವಿಡ್ ಸಾಂಕ್ರಾಮಿಕ ರೋಗ ಮುಗಿದ ನಂತರ ಉಂಟಾಗಬಹುದಾದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಕೇಂದ್ರ ಎಂ.ಎಸ್.ಎಂ.ಇ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. ಇಂದೋರ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಇಂದು ಆಯೋಜಿಸಿರುವ "ಕೊವಿಡ್ -19ರ ನಂತರ, ಎಂ.ಎಸ್.ಎಂ.ಇ. ಮತ್ತು ಮೂಲಸೌಕರ್ಯಗಳು: ಭಾರತೀಯ ಆರ್ಥಿಕತೆಯ ಈ ಎರಡು ಜೀವನಾಡಿಗಳ ಯಶಸ್ಸು" ಕುರಿತು ಜರುಗಿದ ವೆಬ್‌ನಾರ್ ಅನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕೊವಿಡ್-19 ಹರಡುವುದನ್ನು ತಡೆಗಟ್ಟಲು ಅಗತ್ಯವಾದ ಕ್ರಮಗಳನ್ನು ಖಡ್ಡಾಯವಾಗಿ ಕೈಗೊಳ್ಳುವುದನ್ನು ಕೈಗಾರಿಕೆಗಳು ಮೊದಲು ಖಚಿತಪಡಿಸಿಕೊಳ್ಳಬೇಕು ಎಂದು ಸಚಿವ ಶ್ರೀ ಗಡ್ಕರಿ ಉದ್ಯಮಕ್ಕೆ ಕರೆ ನೀಡಿದರು. ಸಂಸ್ಥೆಗಳು ತಮ್ಮ ಕಾರ್ಮಿಕರು ಮತ್ತು ಕಾರ್ಯನಿರ್ವಾಹಕರನ್ನು ನೋಡಿಕೊಳ್ಳುವುದನ್ನು - ಆಹಾರ, ಆಶ್ರಯ ಮತ್ತು ಸಾಮಾಜಿಕ ಅಂತರ ಕಾಪಾಡುವ ಮಾನದಂಡಗಳನ್ನು ಕಾಪಾಡಿಕೊಳ್ಳುವ ಮೂಲಕ ಸ್ಪಷ್ಟವಾಗಿ ಖಾತ್ರಿಪಡಿಸಿಕೊಳ್ಳಬೇಕು. ಉದ್ಯಮವು ಸಕಾರಾತ್ಮಕ ವಿಧಾನವನ್ನು ತೆಗೆದುಕೊಳ್ಳಬೇಕು ಮತ್ತು ಕೊವಿಡ್-19 ಬಿಕ್ಕಟ್ಟು ಎದುರಾದಾಗ ಸೃಷ್ಟಿಯಾಗುವ ಅವಕಾಶಗಳನ್ನು ಸ್ಪರ್ಶಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ಜನರ ಜೀವನ ಮತ್ತು ಜೀವನೋಪಾಯವನ್ನು ಖಾತರಿಪಡಿಸುವಾಗ ಎಲ್ಲಾ ಮಧ್ಯಸ್ಥಗಾರರು ಬಿಕ್ಕಟ್ಟನ್ನು ಎದುರಿಸಲು ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಈ ಸಮಯದಲ್ಲಿ ಈ ಬಿಕ್ಕಟ್ಟನ್ನು ಎದುರಿಸಲು ಉದ್ಯಮವು ಸಕಾರಾತ್ಮಕ ಮನೋಭಾವವನ್ನು ಹೊಂದಿರಬೇಕು ಎಂದು ಶ್ರೀ ಗಡ್ಕರಿ ಆಗ್ರಹಿಸಿದರು.
ರಫ್ತು ವರ್ಧನೆಗೆ ವಿಶೇಷ ಗಮನ ನೀಡುವುದು ಇಂದಿನ ಸಮಯದ ಅತಿಅಗತ್ಯಕಾರ್ಯವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಇದಲ್ಲದೆ, ಆಮದುಗಳನ್ನು ಕಡಿಮೆ ಮಾಡಿ ಅದರ ಬದಲಾಗಿ ದೇಶೀಯ ಉತ್ಪಾದನೆಯೊಂದಿಗೆ ಬದಲಿಸಲು ಆಮದು ಪರ್ಯಾಯ ಕಾರ್ಯ ವಿಧಾನಗಳ ಬಗ್ಗೆಯೂ ಗಮನಹರಿಸಬೇಕಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಚೀನಾದಿಂದ ಜಪಾನಿನ ಹೂಡಿಕೆಗಳನ್ನು ತೆಗೆದುಕೊಂಡು ಬೇರೆ ದೇಶಗಳ ಕಡೆಗೆ ಹೋಗಲು ಜಪಾನ್ ಸರ್ಕಾರ ತನ್ನ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ನೀಡಿ ಉತ್ತೇಜಿಸುತ್ತಿದೆ ಎಂದು ಸಚಿವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಇದು ಭಾರತಕ್ಕೆ ದೊರಕಬೇಕಾದ ಅವಕಾಶ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಸ್ತಾವಿತ ಕೆಲವು ಪ್ರಮುಖ ವಿಷಯಗಳು ಮತ್ತು ನೀಡಿರುವ ಸಲಹೆಗಳು:
10% ರಷ್ಟು ದೈನಂದಿನ ಕಾರ್ಯನಿರತ ಬಂಡವಾಳದ ಮಿತಿಯನ್ನು ಹೆಚ್ಚುವರಿ ನಿಧಿಯಾಗಿ 30% ಕ್ಕೆ ಹೆಚ್ಚಿಸುವುದು, ಕಂಪನಿಗಳ ಕಾಯ್ದೆಯಲ್ಲಿ ರಿಯಾಯಿತಿ ನೀಡುವುದರಿಂದ ಸಾಮಾಜಿಕ ವಲಯದಿಂದ ಹಣಕಾಸು ಚಲನೆ/ದ್ರವ್ಯತೆಯನ್ನು ವ್ಯವಸ್ಥೆಗೊಳಿಸಬಹುದು, ಕೊವಿಡ್-19 ಸೋಂಕಿತ ಕಾರ್ಮಿಕರಿಗೆ ಸಹಾಯ , ಕಾರ್ಮಿಕ ಕಾನೂನುಗಳಲ್ಲಿ ರಿಯಾಯಿತಿ, ಲಾಕ್‌ಡೌನ್ ಸಮಯದಲ್ಲಿ ವಿದ್ಯುತ್ ಬಿಲ್‌ಗಳಲ್ಲಿ ವಿನಾಯಿತಿ, ಜಿ.ಎಸ್.ಟಿ ಮತ್ತು ಮುಂಗಡ ತೆರಿಗೆಯನ್ನು ಮುಂದೂಡುವುದು, ಆದಾಯ ಯೋಜನೆಯ ಸ್ವಯಂಪ್ರೇರಿತ ಬಹಿರಂಗಪಡಿಸುವಿಕೆಯಂತೆಯೇ ಕೊವಿಡ್-19 ಗಾಗಿ ಒಂದು ಹೊಸ ಯೋಜನೆಯನ್ನು ಪರಿಚಯಿಸುವುದು ಇತ್ಯಾದಿ.
ಪ್ರತಿನಿಧಿಗಳ ಪ್ರಶ್ನೆಗಳಿಗೆ ಸಚಿವ ಶ್ರೀ ಗಡ್ಕರಿ ಅವರು ಪ್ರತಿಕ್ರಿಯಿಸಿ ಉತ್ತರಿಸಿದರು ಮತ್ತು ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಸಕಾಲಿಕವಾಗಿ ನೀಡುವ ಭರವಸೆ ನೀಡಿದರು. ಸಮಸ್ಯೆಗಳನ್ನು ಸಂಬಂಧಿತ ಇಲಾಖೆಗಳೊಂದಿಗೆ ಕೈಗೆತ್ತಿಕೊಳ್ಳುವುದಾಗಿ ಸಚಿವರು ಪ್ರತಿನಿಧಿಗಳಿಗೆ ತಿಳಿಸಿದರು.
***
(Release ID: 1621977)
Visitor Counter : 208