ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

‘ಆಯುಷ್ ಸಂಜೀವಿನಿ’ ಆಪ್ ಮತ್ತು ಕೋವಿಡ್-19 ಎದುರಿಸಲು ಆಯುಷ್ ಒಳಗೊಂಡ ಅಂತರ ಶಿಸ್ತೀಯ ಅಧ್ಯಯನಗಳಿಗೆ ಡಾ. ಹರ್ಷವರ್ಧನ್ ಚಾಲನೆ

Posted On: 07 MAY 2020 4:08PM by PIB Bengaluru

ಆಯುಷ್ ಸಂಜೀವಿನಿಆಪ್ ಮತ್ತು ಕೋವಿಡ್-19 ಎದುರಿಸಲು ಆಯುಷ್ ಒಳಗೊಂಡ ಅಂತರ ಶಿಸ್ತೀಯ ಅಧ್ಯಯನಗಳಿಗೆ ಡಾ. ಹರ್ಷವರ್ಧನ್ ಚಾಲನೆ

 “ತಂತ್ರಜ್ಞಾನಕ್ಕೆ ಸಂಬಂಧಿಸಿದವರ ಮೈತ್ರಿಯಿಂದಾಗಿ ಆಯುಷ್ ಕುರಿತ ಸಾಂಪ್ರದಾಯಿಕ ಜ್ಞಾನ ಬಹುದೊಡ್ಡ ಜಾಗತಿಕ ಜನಸಂಖ್ಯೆ ತಲುಪಲು ನೆರವು

 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು, ‘ಆಯುಷ್ ಸಂಜೀವಿನಿಆಪ್ ಗೆ ಮತ್ತು ಕೋವಿಡ್-19 ಪರಿಸ್ಥಿತಿಗೆ ಸಂಬಂಧಿಸಿದಂತೆ ಎರಡು ಆಯುಷ್ ಅಧ್ಯಯನಗಳನ್ನು ಕೈಗೊಳ್ಳುವುದಕ್ಕೆ ಆಯುಷ್ ಖಾತೆ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ) ಶ್ರೀ ಶ್ರೀಪಾದ್ ಯಸ್ಸೋ ನಾಯಕ್ ಸಮಕ್ಷಮದಲ್ಲಿ ಇಂದು ಚಾಲನೆ ನೀಡಿದರು. ನಾಯಕ್ ಗೋವಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.

ಕೋವಿಡ್-19 ಎದುರಿಸಲು ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಲು ಪ್ರಾಮುಖ್ಯತೆ ನೀಡಿರುವ ಕುರಿತು, ಕೇಂದ್ರ ಆರೋಗ್ಯ ಸಚಿವರು ಇಂದು ಆಯುಷ್ ಸಂಜೀವಿನಿಮೊಬೈಲ್ ಆಪ್ ಗೆ ಚಾಲನೆ ನೀಡಲಾಗಿದೆ. ಇದು ಜನರಲ್ಲಿ ಆಯುಷ್ ಪದ್ಧತಿಯ ಕ್ರಮಗಳನ್ನು ಬಳಕೆ ಮತ್ತು ಸ್ವೀಕೃತಿ ಕುರಿತ ದತ್ತಾಂಶವನ್ನು ಸಂಗ್ರಹಿಸಲು ನೆರವಾಗಲಿದೆ ಮತ್ತು ಕೋವಿಡ್-19 ನಿಯಂತ್ರಣ ಕುರಿತಂತೆ ಆಯುಷ್ ಬಳಕೆಯಿಂದ ಜನರ ಮೇಲಾಗಿರುವ ಪರಿಣಾಮಗಳನ್ನು ಗುರುತಿಸಲು ನೆರವಾಗಲಿದೆ. ಆಪ್ ಅನ್ನು ಆಯುಷ್ ಸಚಿವಾಲಯ ಮತ್ತು ಎಂಇಐಟಿವೈ ಅಭಿವೃದ್ಧಿಪಡಿಸಿದ್ದು, ಅದು 50 ಲಕ್ಷ ಮಂದಿಗೆ ತಲುಪಿಸುವ ಗುರಿ ಹೊಂದಲಾಗಿದೆಎಂದರು.

ಡಾ. ಹರ್ಷವರ್ಧನ್ ಅವರು, ಕೋವಿಡ್-19 ನಿರ್ವಹಣೆಯಿಂದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಆಯುಷ್ ಸಚಿವಾಲಯ ಹಾಗೂ ತಂತ್ರಜ್ಞಾನ ಸಂಸ್ಥೆಗಳಾದ ಸಿಎಸ್ ಐಆರ್,

ಐಸಿಎಂಆರ್ ಮತ್ತು ಯುಜಿಸಿ ಇತ್ಯಾದಿಗಳ ನಡುವೆ ಮೈತ್ರಿ ಏರ್ಪಡಲು ವೇದಿಕೆ ಒದಗಿಸಿದೆ. ಇವು ಆಯುಷ್ ಪದ್ಧತಿಗಳಲ್ಲಿ ಮಧ್ಯಪ್ರವೇಶ ಮಾಡುವುದು ಮತ್ತು ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ನೆರವಾಗುವುದಲ್ಲದೆ, ಆಯುಷ್ ಜ್ಞಾನವನ್ನು ಜಾಗತಿಕ ಸಮುದಾಯದ ಒಳಿತಿಗೆ ನೆರವಾಗುವುದನ್ನು ಉತ್ತೇಜಿಸಲು ಸಹಾಯಕವಾಗಲಿದೆ ಎಂದರು. ಎಲ್ಲ ಸಂಸ್ಥೆಗಳು ಇಂದು ಒಂದು ಗೂಡಿದ್ದು, ಇವುಗಳಿಗೆ ಐಸಿಎಂಆರ್ ಮತ್ತು ಡಿಸಿಜಿಐ ಮಾರ್ಗದರ್ಶನ ಮತ್ತು ಬೆಂಬಲ ನೀಡುತ್ತಿವೆ. ಮೂಲಕ ಶತಮಾನಗಳಷ್ಟು ಹಳೆಯದಾದ ಆಯುರ್ವೇದ ಕುರಿತ ಸಾಂಪ್ರದಾಯಿಕ ಜ್ಞಾನದ ಸಮಗ್ರ ಆರೋಗ್ಯ ಪ್ರಯೋಜನಗಳನ್ನು ವಿಸ್ತೃತವಾಗಿ ಪ್ರಚುರಪಡಿಸಲು ನೆರವಾಗಲಿದೆ ಎಂದು ಹೇಳಿದರು.

ಆಪ್ ಮಾತ್ರವಲ್ಲದೆ ಡಾ. ಹರ್ಷವರ್ಧನ್ ಅವರು ಎರಡು ವೈಜ್ಞಾನಿಕ ಅಧ್ಯಯನಗಳಿಗೂ ಚಾಲನೆ ನೀಡಿದರು. ಒಂದು, ಕೋವಿಡ್-19 ವಿರುದ್ಧ ನಿಗದಿತ ಆರೈಕೆ ಕೈಗೊಳ್ಳಲು ಮತ್ತು ರೋಗ ನಿರೋಧಕ (ಪ್ರೊಫೈಲಾಕ್ಸಿಸ್) ಹಸ್ತಕ್ಷೇಪದಿಂದ ಆಯುರ್ವೇದದ ಪರಿಣಾಮಗಳ ಬಗ್ಗೆ ಸಮಗ್ರ ಕ್ಲಿನಿಕಲ್ ಸಂಶೋಧನಾ ಅಧ್ಯಯನ ಕೈಗೊಳ್ಳುವುದು. ಇದನ್ನು ಆಯುಷ್ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(ಎಂಒಎಚ್ಎಫ್ ಡಬ್ಲ್ಯೂ) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಮೂಲಕ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್ಐಆರ್), ಐಸಿಎಂಆರ್ ತಾಂತ್ರಿಕ ಬೆಂಬಲದೊಂದಿಗೆ ಜಂಟಿಯಾಗಿ ಕೈಗೊಳ್ಳಲಿವೆ. ಅಂತರ್ ಶಿಸ್ತೀಯ ಆಯುಷ್ ಸಂಶೋಧನಾ ಮತ್ತು ಅಭಿವೃದ್ಧಿ ಕಾರ್ಯಪಡೆಯ ನೇತೃತ್ವವನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಉಪಾಧ್ಯಕ್ಷ ಡಾ. ಭೂಷಣ್ ಪಟವರ್ಧನ್ ವಹಿಸಿದ್ದು, ಅವರು ಕೋವಿಡ್-19 ಪಾಸಿಟಿವ್ ಪ್ರಕರಣಗಳಲ್ಲಿ ಮಧ್ಯಪ್ರವೇಶದ ಮೂಲಕ ರೋಗ ಪ್ರತಿಬಂಧನಕ (ಪ್ರೊಫೈಲಿಟಿಕ್) ಅಧ್ಯಯನ, ಕ್ಲಿನಿಕಲ್ ಸಂಶೋಧನಾ ಮಾನದಂಡಗಳನ್ನು ರೂಪಿಸಿ ವಿನ್ಯಾಸಗೊಳಿಸಿದೆ. ಇದರಲ್ಲಿ ದೇಶಾದ್ಯಂತ ನಾನಾ ಪ್ರತಿಷ್ಠಿತ ಸಂಸ್ಥೆಗಳ ತಜ್ಞರು, ಪರಿಶೀಲನೆ ಮತ್ತು ಸಮಾಲೋಚನೆ ಪ್ರಕ್ರಿಯೆಗಳ ಮೂಲಕ ನಾಲ್ಕು ಭಿನ್ನ ವಿಧಾನಗಳು ಅಂದರೆ ಅಶ್ವಗಂಧ, ಯಶ್ಟಿಮಧು, ಗುಡುಚಿ+ಪಿಪ್ಪಾಲಿ ಮತ್ತು ಪಾಲಿ ಹರ್ಬಲ್ ಫಾರ್ಮುಲೇಶನ್(ಆಯುಷ್-64) ಕುರಿತಂತೆ ಅಧ್ಯಯನ ನಡೆಸುವರು. ಇದರಲ್ಲಿ ಕೆಳಗಿನ ಎರಡು ವಿಭಾಗಗಳು ಸೇರಿವೆ:

. ಕೋವಿಡ್-19 ಸಾಂಕ್ರಾಮಿಕದ ವೇಳೆ ಹೆಚ್ಚಿನ ಅಪಾಯವಿರುವ ಸಾರ್ಸ್-ಸಿಒವಿ-2 ವಿರುದ್ಧ ಪ್ರೊಪೈಲಾಕ್ಸಿಸ್ (ರೋಗ ನಿರೋಧಕಗಳ) ಮೂಲಕ ಅಶ್ವಗಂಧ ಬಳಕೆ: ಆರೋಗ್ಯ ರಕ್ಷಣೆಯಲ್ಲಿ ಬಳಕೆ ಮಾಡುವ ಹೈಡ್ರೋಕ್ಸಿಕ್ಲೋರೋಕ್ವಿನ್ ನೊಂದಿಗೆ ಹೋಲಿಕೆ.

ಬಿ. ಸಾಮಾನ್ಯ ಮತ್ತು ಅಲ್ಪ (ಮೈಲ್ಡ್ ) ಪ್ರಮಾಣದ ಕೋವಿಡ್-19ಗೆ ನಿಗದಿತ ಆರೈಕೆಯೊಂದಿಗೆ ಆಯುರ್ವೇದದ ಸೂತ್ರಗಳನ್ನು ಬಳಸಿ ಪರಿಣಾಮಕಾರಿ ಚಿಕಿತ್ಸೆ ನೀಡುವುದು: ರಾಂಡಮೈಸ್ಡ್, ಓಪನ್ ಲೇಬಲ್, ಪ್ಯಾರಲೆಲ್ ಎಫಿಕಸಿ, ಆಕ್ಟಿವ್ ಕಂಟ್ರೋಲ್, ಮಲ್ಟಿ ಸೆಂಟರ್ ಎಕ್ಸ್ ಪ್ಲೊರೇಟರಿ ಡ್ರಗ್ ಟ್ರಯಲ್.

ಡಾ. ಹರ್ಷವರ್ಧನ್ ಅವರು, ಹೆಚ್ಚಿನ ಅಪಾಯವಿರುವ ಜನಸಂಖ್ಯೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಆಯುಷ್ ಆಧಾರಿತ ರೋಗ ನಿರೋಧಕ (ಪ್ರೊಪೈಲಿಟಿಕ್) ಮಧ್ಯಪ್ರವೇಶದ ಪರಿಣಾಮಗಳ ಬಗ್ಗೆ ಅಧ್ಯಯನ ಕೈಗೊಳ್ಳುವುದಕ್ಕೂ ಚಾಲನೆ ನೀಡಿದರು. ಕೋವಿಡ್-19 ವಿರುದ್ಧ ಆಯುಷ್ ಬಳಕೆಯ ಸಂಭವನೀಯ ಮುಂಜಾಗ್ರತೆಯ ಮೌಲ್ಯಮಾಪನದ ಉದ್ದೇಶಗಳು ಅತ್ಯಂತ ಪ್ರಮುಖವಾಗಿದೆ. ಅಲ್ಲದೆ ಹೆಚ್ಚಿನ ಅಪಾಯವಿರುವ ಜನಸಂಖ್ಯೆಯ ಜೀವನಮಟ್ಟದಲ್ಲಿ ಸುಧಾರಣೆಯನ್ನು ಮೌಲ್ಯಮಾಪನ ಮಾಡಲಾಗುವುದು. ಅಧ್ಯಯನವನ್ನು ಆಯುಷ್ ಸಚಿವಾಲಯದಡಿ ಬರುವ ನಾಲ್ಕು ಸಂಶೋಧನಾ ಮಂಡಳಿಗಳು ಮತ್ತು ದೇಶಾದ್ಯಂತ 25 ರಾಜ್ಯಗಳು ರಾಷ್ಟ್ರೀಯ ಸಂಸ್ಥೆಗಳು ಕೈಗೊಳ್ಳಲಿದ್ದು, ಹಲವು ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿ ಅಂದಾಜು 5 ಲಕ್ಷ ಜನಸಂಖ್ಯೆ ವ್ಯಾಪ್ತಿಯನ್ನು ಒಳಗೊಂಡಿದೆ. ಅಧ್ಯಯನದಿಂದ ಹೊರಬರುವ ಫಲಿತಾಂಶ ಕೋವಿಡ್-19ನಂತಹ ಸಾಂಕ್ರಾಮಿಕದ ವೇಳೆ ವೈಜ್ಞಾನಿಕ ಪುರಾವೆಗಳ ಮೂಲಕ ಆಯುಷ್ ಪ್ರತಿಬಂಧಕ ಸಾಮರ್ಥ್ಯ ಅರ್ಥೈಸಿಕೊಳ್ಳಲು ಹೊಸ ಆಯಾಮ ದೊರಕಲಿದೆ.

ಅಧ್ಯಯನಗಳ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದ ಡಾ. ಹರ್ಷವರ್ಧನ್ ಅವರು, ಅಧ್ಯಯನಗಳು ಆಯುಷ್ ಪದ್ಧತಿಗಳ ಪ್ರಾಮುಖ್ಯತೆಯನ್ನು ಮರುಸ್ಥಾಪಿಸಲಿವೆ ಇದಕ್ಕೆ ಸಿಎಸ್ಐಆರ್, ಐಸಿಎಂಆರ್ ಮತ್ತು ಡಿಸಿಜಿಐ ನೆರವು ನೀಡಲಿವೆ ಎಂದರು. ಇದು ನಿಜಕ್ಕೂ ಅತ್ಯಂತ ಅವಿಸ್ಮರಣೀಯ ದಿನ. ಕೋವಿಡ್-19 ಸಾಂಕ್ರಾಮಿಕದ ನಂತರ ತಂತ್ರಜ್ಞಾನದ ಮೈತ್ರಿ, ಜ್ಞಾನ ಆಧಾರಿತ ಪರಿಹಾರಗಳನ್ನು ತಿಳಿಸಿಕೊಡುವ ಮೌಲ್ಯಯುತ ಅವಕಾಶಗಳನ್ನು ಒದಗಿಸಿದೆ. ಮತ್ತು ವೈಜ್ಞಾನಿಕ ಪ್ರಯತ್ನಗಳ ಮುಖ್ಯವಾಹಿನಿಗೆ ಆಯುಷ್ ಸೇರ್ಪಡೆ ಮಾಡುವ ಸಾಧ್ಯತೆಗಳನ್ನು ಹೆಚ್ಚಿಸಿದೆಎಂದು ಹೇಳಿದರು. ಅಲ್ಲದೆ ಆಧುನಿಕ ವೈದ್ಯಕೀಯ ಮತ್ತು ವೈಜ್ಞಾನಿಕ ಪದ್ಧತಿಗಳನ್ನೂ ಸಹ ನಾವು ಅರ್ಥಮಾಡಿಕೊಳ್ಳಬೇಕು. ಅವುಗಳು ಆಯುಷ್ ವಿರುದ್ಧ ಸ್ಪರ್ಧಿಸುತ್ತಿಲ್ಲ. ಅವು ಪರಸ್ಪರ ಪೂರಕವಾಗಿ ಬಲವರ್ಧನೆಗೊಳಿಸಲಿವೆ ಎಂದು ಡಾ. ಹರ್ಷವರ್ಧನ್ ಹೇಳಿದರು. ನಮ್ಮೆಲ್ಲರ ನೆಚ್ಚಿನ ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ ಕೋವಿಡ್-19 ಸಾಂಕ್ರಾಮಿಕದ ವೇಳೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಸಲಹಾ ಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು, ಅವುಗಳನ್ನು ವಿಶ್ವವ್ಯಾಪಿ ಸ್ವೀಕರಿಸಿದ್ದಾರೆ ಎಂದು ಹೇಳಿದ್ದಾರೆ.

ಶ್ರೀ ರಾಜೇಶ್ ಭೂಷಣ್, ಒಎಸ್ ಡಿ/ಕಾರ್ಯದರ್ಶಿ(ಎಚ್ಎಫ್ ಡಬ್ಲ್ಯೂ), ಶ್ರೀ ವೈದ್ಯ ರಾಜೇಶ್ ಕೋಟೇಚ, ಕಾರ್ಯದರ್ಶಿ ಆಯುಷ್, ಡಾ. ಶೇಖರ್ ಮಾಂಡೆ, ಪ್ರಧಾನ ನಿರ್ದೇಶಕರು, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ಡಾ. ವಿ.ಜಿ. ಸೋಮನಿ, ಭಾರತದ ಔಷಧ ಮಹಾನಿಯಂತ್ರಕರು ಮತ್ತು ಎಂಒಎಚ್ಎಫ್ ಡಬ್ಲ್ಯೂ ಹಾಗೂ ಆಯುಷ್ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

***



(Release ID: 1621885) Visitor Counter : 206