ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಇ.ಪಿ.ಎಫ್.ಒ.ದಿಂದ ಇ-ಸಹಿ ಪಡೆದುಕೊಳ್ಳಲು ಇ.ಮೈಲ್ ವ್ಯವಸ್ಥೆ ಆರಂಭ
प्रविष्टि तिथि:
06 MAY 2020 4:20PM by PIB Bengaluru
ಲಾಕ್ ಡೌನ್ ಅವಧಿಯಲ್ಲಿ ಡಿಜಿಟಲ್ ಅಥವಾ ಆಧಾರ್ ಆಧಾರಿತ ಇ-ಸಹಿ ಬಳಕೆಗೆ ಉದ್ಯೋಗದಾತರಿಗೆ ಸಮಸ್ಯೆ ಎದುರಾಗುತ್ತಿರುವುದರಿಂದ ಉದ್ಯೋಗದಾತರಿಗೆ ಇ.ಪಿ.ಎಫ್. ಅನುಸರಣೆ ಪ್ರಕ್ರಿಯೆಯನ್ನು ಸುಲಭ ಮಾಡಲು ಇ.ಪಿ.ಎಫ್.ಒ.ದಿಂದ ಇ-ಸಹಿ ಪಡೆದುಕೊಳ್ಳಲು ಇ.ಮೈಲ್ ವ್ಯವಸ್ಥೆ ಆರಂಭ
ಕೋವಿಡ್ ಜಾಗತಿಕ ಸಾಂಕ್ರಾಮಿಕ ಹರಡುವಿಕೆಯನ್ನು ತಡೆಯಲು ಸರಕಾರ ಘೋಷಿಸಿದ ಲಾಕ್ ಡೌನ್ ನಿಂದ ಉದ್ಭವಿಸಿರುವ ಪ್ರಸಕ್ತ ಸ್ಥಿತಿ ಮತ್ತು ಇತರ ಅವ್ಯವಸ್ಥೆಗಳಿಂದಾಗಿ ಉದ್ಯೋಗದಾತರಿಗೆ ಎಂದಿನಂತೆ ಕೆಲಸ ನಿರ್ವಹಿಸಲು ಸಾಧ್ಯವಾಗಲಿಲ್ಲ. ಮತ್ತು ಅವರಿಗೆ ಅವರ ಡಿಜಿಟಲ್ ಸಹಿಗಳನ್ನು ಅಥವಾ ಆಧಾರ್ ಆಧಾರಿತ ಇ-ಸಹಿಯನ್ನು ಇ.ಪಿ.ಎಫ್. ಒ. ಪೋರ್ಟಲಿನಲ್ಲಿ ಬಳಸುವಲ್ಲಿ ತೊಡಕುಗಳುಂಟಾದವು.
ಕೆ.ವೈ.ಸಿ. ದೃಢೀಕರಣ, ವರ್ಗಾವಣೆ ಕ್ಲೇಮುಗಳ ದೃಢೀಕರಣ ಇತ್ಯಾದಿ ಹಲವು ಪ್ರಮುಖ ಕೆಲಸಗಳನ್ನು ಉದ್ಯೋಗದಾತರ ಪರವಾಗಿ ಅವರು ನೇಮಿಸಲ್ಪಟ್ಟ ಅಧಿಕೃತ ವ್ಯಕ್ತಿಗಳು ಇ.ಪಿ.ಎಫ್.ಒ.ಪೋರ್ಟಲಿನಲ್ಲಿ ಅವರ ಡಿಜಿಟಲ್ ಸಹಿ (ಡಿ.ಎಸ್.ಸಿ.) ಅಥವಾ ಆಧಾರ್ ಆಧಾರಿತ ಇ-ಸಹಿಗಳನ್ನು ಬಳಸಿ ಮಾಡುತ್ತಿದ್ದರು. ಡಿ.ಎಸ್.ಸಿ. /ಇ-ಸಹಿಗಳನ್ನು ಬಳಸಲು ಪ್ರಾದೇಶಿಕ ಕಚೇರಿಗಳಿಂದ ಒಂದು ಬಾರಿಯ ಅನುಮೋದನೆ ಅವಶ್ಯ. ಲಾಕ್ ಡೌನ್ ನಿಂದಾಗಿ ಹಲವಾರು ಉದ್ಯೋಗದಾತರಿಗೆ ಒಂದು ಬಾರಿಯ ನೋಂದಣಿ ಕೋರಿಕೆಯನ್ನು ಪ್ರಾದೇಶಿಕ ಕಚೇರಿಗಳಿಗೆ ಕಳುಹಿಸಲು ಸಮಸ್ಯೆಗಳು ಎದುರಾದವು.
ಮೇಲ್ಕಾಣಿಸಿದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮತ್ತು ಅನುಸರಣಾ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ಇ.ಪಿ.ಎಫ್.ಒ ಇಂತಹ ಕೋರಿಕೆಗಳನ್ನು ಇ-ಮೈಲ್ ಮೂಲಕ ಕೂಡಾ ಅಂಗೀಕರಿಸಲು ನಿರ್ಧರಿಸಿತು. ಉದ್ಯೋಗದಾತರು ಸಹಿ ಮಾಡಲಾದ ಕೋರಿಕೆ ಪತ್ರದ ಸ್ಕ್ಯಾನ್ ಮಾಡಲಾದ ಪ್ರತಿಯನ್ನು ಸಂಬಂಧಿತ ಪ್ರಾದೇಶಿಕ ಕಚೇರಿಗಳಿಗೆ ಇ-ಮೈಲ್ ಮೂಲಕ ಕಳುಹಿಸಬಹುದು. ಪ್ರಾದೇಶಿಕ ಕಚೇರಿಗಳ ಅಧಿಕೃತ ಇ-ಮೈಲ್ ವಿಳಾಸಗಳು www.epfindia.gov.in . ರಲ್ಲಿ ಲಭ್ಯ ಇವೆ.
ಮುಂದುವರೆದು ಇಂತಹ ಸಂಸ್ಥೆಗಳು, ಡಿಜಿಟಲ್ ಸಹಿಯ ಅನುಮೋದನೆಯನ್ನು ಪಡೆದಿರುವ ಅಧಿಕಾರ ಪತ್ರ ಹೊಂದಿರುವಂತಹ ಅಧಿಕಾರಿಗಳಿಗೆ ಡಾಂಗಲ್ ಗುರುತಿಸಲು ಅವರಿಗೆ ಸಾಧ್ಯವಾಗದೇ ಇದ್ದಲ್ಲಿ ಅವರು ಉದ್ಯೋಗದಾತರ ಪೋರ್ಟಲಿನಲ್ಲಿ ಲಾಗಿನ್ ಆಗಿ ಮತ್ತು ಅವರ ಇ-ಸಹಿಯ ನೋಂದಣೆಯನ್ನು ಈಗಾಗಲೇ ನೊಂದಾಯಿಸಲ್ಪಟ್ತ ಅಧಿಕೃತ ಸಹಿಗಳಿರುವ ನೊಂದಾವಣೆ ಲಿಂಕ್ ಮೂಲಕ ಮಾಡಿಕೊಳ್ಳಬಹುದು. ಅನುಮೋದಿತ ಸಹಿಗಳ ಎದುರು ಇರುವ ಹೆಸರು ಅವರ ಆಧಾರ್ ನಲ್ಲಿರುವ ಹೆಸರೇ ಆಗಿದ್ದರೆ ಇ-ಸಹಿಯ ನೋಂದಣಿ ಮತ್ತು ಮುಂದಿನ ಅನುಮೋದನೆ ಅಗತ್ಯವಿಲ್ಲ. ಇತರ ಅಧಿಕೃತ , ಅಧಿಕಾರ ಪತ್ರ ಪಡೆದ ಸಹಿದಾರರು ತಮ್ಮ ಇ-ಸಹಿಯನ್ನು ನೊಂದಾಯಿಸಿ ಉದ್ಯೋಗದಾತರಿಂದ ಅನುಮೋದಿಸಲ್ಪಟ್ಟ ಕೋರಿಕೆ ಪತ್ರಗಳನ್ನು ಕಳುಹಿಸಬಹುದು ಮತ್ತು ಸಂಬಂಧಿತ ಇ.ಪಿ.ಎಫ್.ಒ. ಕಚೇರಿಗಳಿಂದ ಅನುಮತಿ ಕೇಳಬಹುದು.
ಈ ಸೌಲಭ್ಯವು ಜಾಗತಿಕ ಸಾಂಕ್ರಾಮಿಕದಿಂದ ಪ್ರತಿಕೂಲ ಪರಿಣಾಮ ಅನುಭವಿಸುತ್ತಿರುವ ಉದ್ಯೋಗದಾತರಿಗೆ ಮತ್ತು ಇ.ಪಿ.ಎಫ್. ಸದಸ್ಯರಿಗೆ ಪರಿಹಾರವನ್ನು ಒದಗಿಸುತ್ತದೆ.
***
(रिलीज़ आईडी: 1621728)
आगंतुक पटल : 327
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Assamese
,
Punjabi
,
Odia
,
Tamil
,
Telugu
,
Malayalam