ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಆಹಾರ ಧಾನ್ಯಗಳ ವಿತರಣೆ ಕುರಿತಂತೆ 24 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಆಹಾರ ಕಾರ್ಯದರ್ಶಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಆಹಾರ ಮತ್ತು ಪಡಿತರ ವಿತರಣಾ ಕಾರ್ಯದರ್ಶಿ

Posted On: 06 MAY 2020 7:01PM by PIB Bengaluru

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಆಹಾರ ಧಾನ್ಯಗಳ ವಿತರಣೆ ಕುರಿತಂತೆ 24 ರಾಜ್ಯಗಳುಕೇಂದ್ರಾಡಳಿತ ಪ್ರದೇಶಗಳ ಆಹಾರ ಕಾರ್ಯದರ್ಶಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಆಹಾರ ಮತ್ತು ಪಡಿತರ ವಿತರಣಾ ಕಾರ್ಯದರ್ಶಿ

ಪಿಎಂಜಿಕೆಎವೈ ಅಡಿಯಲ್ಲಿ ಕೋವಿಡ್-19 ಬಿಕ್ಕಟ್ಟು ವೇಳೆ ಭಾರತದ ಒಟ್ಟು ಜನಸಂಖ್ಯೆಯ ಎರಡನೇ ಮೂರರಷ್ಟು ಜನರಿಗೆ ಅಂದರೆ 80 ಕೋಟಿ ಸಾರ್ವಜನಿಕರಿಗೆ ಸುಮಾರು 120 ಲಕ್ಷ ಮಿಲಿಯನ್ ಟನ್ ಆಹಾರ ಧಾನ್ಯ ವಿತರಣೆ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 69 ಲಕ್ಷ ಮೆಟ್ರಿಕ್ ಟನ್ ಗೂ ಅಧಿಕ ಆಹಾರ ಧಾನ್ಯ ಎತ್ತುವಳಿ, 5 ಕೇಂದ್ರಾಡಳಿತ ಪ್ರದೇಶಗಳು 3 ತಿಂಗಳ ಸಂಪೂರ್ಣ ಕೋಟಾ,18 ರಾಜ್ಯಗಳುಕೇಂದ್ರಾಡಳಿತ ಪ್ರದೇಶಗಳು ಎರಡು ತಿಂಗಳ ಕೋಟಾ ಮತ್ತು 14 ರಾಜ್ಯಗಳು ಒಂದು ತಿಂಗಳ ಕೋಟಾ ಆಹಾರ ಧಾನ್ಯ ಸ್ವೀಕಾರ

ಯೋಜನೆಗೆ ಒಟ್ಟು ತಗಲುವ 46 ಸಾವಿರ ಕೋಟಿ ರೂ.ಗಳನ್ನು ಭರಿಸಲಿರುವ ಕೇಂದ್ರ ಸರ್ಕಾರ

 

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಶ್ರೀ ಸುಧನ್ಶು ಪಾಂಡೆ ಅವರು, ಇಂದು 24 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆಹಾರ ಕಾರ್ಯದರ್ಶಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಗ್ರ ಪರಿಶೀಲನಾ ಸಭೆಯನ್ನು ನಡೆಸಿದರು. ಸಭೆಯಲ್ಲಿ ಶ್ರೀ ಪಾಂಡೆ ಅವರು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾ(ಪಿಎಂ-ಜಿಕೆಎವೈ)ಅಡಿಯಲ್ಲಿ 2020 ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಫಲಾನುಭವಿಗಳಿಗೆ ಆಹಾರಧಾನ್ಯ ವಿತರಣೆ ಮತ್ತು ಎತ್ತುವಳಿ ಸ್ಥಿತಿಗತಿ ಕುರಿತು ಚರ್ಚಿಸಿದರು. ಪ್ರಸ್ತುತ ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎಲ್ಲ ಎನ್ಎಫ್ಎಸ್ಎ ಫಲಾನುಭವಿಗಳಿಗೆ ಸಾಮಾನ್ಯ ಎನ್ಎಫ್ಎಸ್ಎ/ಟಿಪಿಡಿಎಸ್ ಅಡಿಯಲ್ಲಿ ಆಹಾರಧಾನ್ಯಗಳನ್ನು ಖಾತ್ರಿಪಡಿಸುವ ಕುರಿತು ಪರಿಶೀಲಿಸಲಾಯಿತು. ಅಲ್ಲದೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ಯೋಜನೆಅನುಷ್ಠಾನ ಕುರಿತು ಹಾಗೂ ವ್ಯವಸ್ಥೆ ಅಳವಡಿಕೆಗೆ ಅನುಸರಿಸಬೇಕಾದ ಕಾರ್ಯತಂತ್ರ ಮತ್ತು ಆನಂತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಕೈಗೊಳ್ಳಬೇಕಿರುವ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ವಿಡಿಯೋ ಕಾನ್ಫರೆನ್ಸ್ ನಲ್ಲಿ 24 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ ಬಿಹಾರ, ಡಿಎನ್ಎಚ್ ಮತ್ತು ದಾಮನ್ ಮತ್ತು ದಿಯು, ದೆಹಲಿ, ಗುಜರಾತ್, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮೇಘಾಲಯ, ಒಡಿಶಾ, ಪಂಜಾಬ್, ಸಿಕ್ಕಿಂ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಆಂಧ್ರಪ್ರದೇಶ, ಛತ್ತೀಸ್ ಗಢ, ಗೋವಾ, ಹರಿಯಾಣ, ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಾಖಂಡ ಮತ್ತು ಉತ್ತರಪ್ರದೇಶ ಭಾಗವಹಿಸಿದ್ದವು.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ(ಪಿಎಂಜಿಕೆಎವೈ)

ಪ್ರಸ್ತುತ ಇರುವ ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟು ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಪ್ರಮುಖ ಕ್ರಮಗಳಲ್ಲಿ ಸಂಕಷ್ಟಕ್ಕೀಡಾದ ಜನರಿಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ(ಪಿಎಂಜಿಕೆಎವೈ) ಘೋಷಿಸಿದೆ. ಯೋಜನೆಯ ಪ್ರಮುಖಾಂಶಗಳು ಕೆಳಗಿನಂತಿವೆ:

· ಭಾರತ ಸರ್ಕಾರ ಯಾವುದೇ ವ್ಯಕ್ತಿ ವಿಶೇಷವಾಗಿ ಯಾವುದೇ ಬಡಕುಟುಂಬ ಮೂರು ತಿಂಗಳ ಕಾಲ ಯಾವುದೇ ಆಹಾರ ಧಾನ್ಯಗಳು ಲಭ್ಯವಾಗದೆ ತೊಂದರೆ ಅನುಭವಿಸದಂತೆ ನೋಡಿಕೊಳ್ಳಲಿದೆ.

· 80 ಕೋಟಿ ವ್ಯಕ್ತಿಗಳು ಅಂದರೆ ಭಾರತದ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ.

· ಪ್ರತಿಯೊಬ್ಬ ವ್ಯಕ್ತಿಗೂ ತಾನು ಪಡೆಯಲು ಅರ್ಹತೆ ಇರುವ ಆಹಾರಧಾನ್ಯಕ್ಕಿಂತ ಎರಡುಪಟ್ಟು ಹೆಚ್ಚುವರಿಯಾಗಿ ಮುಂದಿನ ಮೂರು ತಿಂಗಳ ಕಾಲ ವಿತರಿಸಲಾಗುವುದು.

· ಹೆಚ್ಚುವರಿ ಆಹಾರಧಾನ್ಯ ಉಚಿತವಾಗಿ ನೀಡಲಾಗುತ್ತಿದೆ.

ಸಾಂಕ್ರಾಮಿಕದಿಂದ ತೊಂದರೆಗೀಡಾಗಿರುವ ದೇಶದ ಎಲ್ಲ ದುರ್ಬಲ ವರ್ಗದ ಜನರಿಗೆ ಯೋಜನೆಯಡಿ ಸುಮಾರು 120 ಲಕ್ಷ ಮೆಟ್ರಿಕ್ ಟನ್(ಎಂಎಂಟಿ) ಆಹಾರ ಧಾನ್ಯ ವಿತರಿಸಲಾಗಿದೆ. ಸರ್ಕಾರ, ಎನ್ಎಫ್ಎಸ್ಎ ಅಡಿಯಲ್ಲಿ ಎಲ್ಲ ಆದ್ಯತಾ ಕುಟುಂಬಗಳಿಗೆ(ಪಿಪಿಎಚ್) 2020 ಏಪ್ರಿಲ್, ಮೇ ಮತ್ತು ಜೂನ್ ಮೂರು ತಿಂಗಳ ಅವಧಿಯಲ್ಲಿ ಸಾಮಾನ್ಯ ಹಂಚಿಕೆಗಿಂತ ದುಪ್ಪಟ್ಟು ಆಹಾರಧಾನ್ಯಗಳನ್ನು ಜೊತೆಗೆ ಅಂತ್ಯೋದಯ ಅನ್ನ ಯೋಜನೆ(ಎಎವೈ) ಅಡಿಯಲ್ಲಿ ಪ್ರತಿ ತಿಂಗಳು, ಪ್ರತಿ ಕಾರ್ಡ್ ಗೆ ಇರುವ 35 ಕೆಜಿ ಸಾಮಾನ್ಯ ಕೋಟಾಕ್ಕಿಂತ ತಿಂಗಳಿಗೆ 5 ಕೆಜಿ ಹೆಚ್ಚುವರಿಯಾಗಿ ನೀಡುತ್ತಿದೆ. ಯೋಜನೆಗೆ ರಾಜ್ಯ ಸರ್ಕಾರಗಳಿಂದ ಭಾರೀ ಅತ್ಯುತ್ಸಾಹದ ಸ್ಪಂದನೆ ವ್ಯಕ್ತವಾಗುತ್ತಿದ್ದು, 06.05.2020 ವರೆಗೆ 69.28 ಲಕ್ಷ ಮೆಟ್ರಿಕ್ ಟನ್ ಈಗಾಗಲೇ ಎತ್ತುವಳಿ ಮಾಡಲಾಗಿದೆ.

ಯೋಜನೆ ಅಡಿ ಆಹಾರಧಾನ್ಯಗಳ ವೆಚ್ಚ, ಅವುಗಳ ಖರೀದಿ ವೆಚ್ಚ, ದಾಸ್ತಾನು ಮತ್ತು ಸಾಗಾಣೆ ಹಾಗೂ ಉದ್ದೇಶಿತ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿ(ಎಫ್ ಪಿಎಸ್)ಗಳಿಗೆ ವಿತರಿಸಲು ನೀಡುವ ಕೇಂದ್ರದ ವರೆಗೆ ತಲುಪಿಸುವ ಎಲ್ಲ ವೆಚ್ಚ ಸೇರಿ ಒಟ್ಟು 46,000 ಕೋಟಿ ರೂ. ವ್ಯಯವಾಗಲಿದ್ದು, ಅದನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದೆ. ಒಟ್ಟು ವೆಚ್ಚದಲ್ಲಿ ರೈತರಿಗೆ ಆಹಾರಧಾನ್ಯ ಖರೀದಿಗೆ ಪಾವತಿಸಿರುವ ಮೊತ್ತದಿಂದ ಎಫ್ ಪಿಎಸ್ ಮಳಿಗೆ ಮಾಲಿಕರಿಗೆ ನೀಡುವ ಪಾವತಿ ಕಮಿಷನ್ ಸೇರಿ, ಭಾರತ ಸರ್ಕಾರಕ್ಕೆ ಒಂದು ಕೆಜಿ ಅಕ್ಕಿಗೆ 39 ರೂ. ಮತ್ತು ಒಂದು ಕೆಜಿ ಗೋಧಿಗೆ 28 ರೂ. ವೆಚ್ಚ ತಗುಲಲಿದೆ. ಇಡೀ ಆಹಾರ ಪೂರೈಕೆ ಯೋಜನೆಯನ್ನು ಭಾರತ ಸರ್ಕಾರ ಜಾರಿಗೊಳಿಸುತ್ತಿದ್ದು, ರಾಜ್ಯ ಸರ್ಕಾರಗಳಿಗೆ ಯಾವುದೇ ರೀತಿಯ ಆರ್ಥಿಕ ಹೊರೆಯನ್ನು ಹೊರಿಸುತ್ತಿಲ್ಲ.

ಪಿಎಂಜಿಕೆಎವೈ ಅಡಿಯಲ್ಲಿ ಆಹಾರಧಾನ್ಯಗಳ ಎತ್ತುವಳಿ ಸ್ಥಿತಿಗತಿ

ಒಟ್ಟಾರೆ ಆಹಾರಧಾನ್ಯಗಳ ಎತ್ತುವಳಿ ಉತ್ತೇಜನಕಾರಿಯಾಗಿದ್ದರೂ ಯೋಜನೆಯಡಿ ರಾಜ್ಯಗಳಿಂದ ಎತ್ತುವಳಿ ವಿಧಾನದಲ್ಲಿ ಸ್ವಲ್ಪ ವ್ಯತ್ಯಯ ಇದೆ. ಎತ್ತುವಳಿ ಸ್ಥಿತಿಗತಿ ಕುರಿತ ಸಂಕ್ಷಿಪ್ತ ವಿವರ ಹೀಗಿದೆ:

ಮೂರು ತಿಂಗಳಿಗೆ ಆಹಾರಧಾನ್ಯಗಳನ್ನು ಸಂಪೂರ್ಣವಾಗಿ ಎತ್ತುವಳಿ ಮಾಡಿರುವ ರಾಜ್ಯಗಳು: 05

ಎರಡು ತಿಂಗಳ ಕೋಟಾ ಆಹಾರಧಾನ್ಯ ಎತ್ತುವಳಿ ಪೂರ್ಣಗೊಳಿಸಿರುವ ರಾಜ್ಯಗಳು: 18

ಒಂದು ತಿಂಗಳ ಕೋಟಾ ಆಹಾರಧಾನ್ಯ ಎತ್ತುವಳಿ ಪೂರ್ಣಗೊಳಿಸಿರುವ ರಾಜ್ಯಗಳು: 14

ಪಿಎಂಜಿಕೆಎವೈ ಅಡಿಯಲ್ಲಿ ಆಹಾರಧಾನ್ಯಗಳ ಎತ್ತುವಳಿ ಕುರಿತ ರಾಜ್ಯವಾರು ಪ್ರಗತಿ:

  1. ಎತ್ತುವಳಿ ಮುಕ್ತಾಯಗೊಳಿಸಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು.

  1. ಎರಡು ತಿಂಗಳಿಗಾಗಿ ಆಹಾರಧಾನ್ಯ ಎತ್ತುವಳಿ ಮಾಡಿರುವ ರಾಜ್ಯಗಳುಕೇಂದ್ರಾಡಳಿತ ಪ್ರದೇಶಗಳು

                    

  1. ಒಂದು ತಿಂಗಳಿಗೆ ಆಹಾರಧಾನ್ಯ ಎತ್ತುವಳಿ ಮಾಡಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು

     

ಆದಷ್ಟು ಶೀಘ್ರ ಆಹಾರಧಾನ್ಯಗಳ ದಾಸ್ತಾನು ಎತ್ತುವಳಿ ಪ್ರಕ್ರಿಯೆ ಪೂರ್ಣಗೊಳಿಸಲು ಭಾರತೀಯ ಆಹಾರ ನಿಗಮ(ಎಫ್ ಸಿ ) ರಾಜ್ಯಗಳಿಗೆ ಎಲ್ಲ ರೀತಿಯ ನೆರವು ವಿಸ್ತರಿಸಿದೆ.

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಲಿಂಕ್ ಅನ್ನು ಕ್ಲಿಕ್ ಮಾಡಿ

***



(Release ID: 1621642) Visitor Counter : 271