ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಕೊವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ವಿವಿಧ ಟ್ರೇಡ್ ಯೂನಿಯನ್ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಕೇಂದ್ರ ಕಾರ್ಮಿಕ ಸಚಿವರ ಸಂವಾದ

Posted On: 06 MAY 2020 6:24PM by PIB Bengaluru

ಕೊವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ವಿವಿಧ ಟ್ರೇಡ್ ಯೂನಿಯನ್ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ

ಕೇಂದ್ರ ಕಾರ್ಮಿಕ ಸಚಿವರ ಸಂವಾದ

 

ಕಾರ್ಮಿಕರ ಮೇಲೆ ಮತ್ತು ಆರ್ಥಿಕತೆಯ ಮೇಲೆ ಮಹಾಮಾರಿ ಕೊವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಸಮಕಾಲೀನ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಮತ್ತು ಅದರ ಪರಿಣಾಮವನ್ನು ಕಡಿಮೆ ಮಾಡಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ (ಸ್ವ/ನಿ) ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ ಅವರು ನವದೆಹಲಿಯಲ್ಲಿ ಕೇಂದ್ರ ಟ್ರೇಡ್ ಯೂನಿಯನ್ ಸಂಸ್ಥೆಗಳೊಂದಿಗೆ (ಸಿ.ಟಿ.ಯು.ಒ.) ವೆಬ್ನಾರ್ ನಡೆಸಿದರು. ವೆಬ್ನಾರ್ ನಲ್ಲಿ ಪ್ರಸ್ತಾವವಾದ ವಿಷಯಗಳೆಂದರೆ - (i) ಕೊವಿಡ್-19ರಿಂದ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರ ಹಿತಾಸಕ್ತಿ ಸಂರಕ್ಷಣೆ, (ii) ಉದ್ಯೋಗವನ್ನು ಸೃಷ್ಠಿಸುವ ಕ್ರಮಗಳು, (iii) ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು (iv) ಕಾರ್ಮಿಕ ಕಾನೂನುಗಳ ಅಡಿಯಲ್ಲಿ ತಮ್ಮ ಶಾಸನಬದ್ದ ಹೊಣೆಗಾರಿಕೆಗಳನ್ನು ಪೂರ್ತಿಗೊಳಿಸಲು ಎಂ.ಎಸ್‌.ಎಂ.ಇ. ಅನುಸರಿಸಬೇಕಾದ ಹಾಗೂ ಮುಂದಿನ ಪರಿಸ್ಥಿತಿಯನ್ನು ಸುಧಾರಿಸುವ ಕ್ರಮಗಳು. ಈ ವೆಬ್ನಾರ್‌ನಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಹಿರಿಯ ಅಧಿಕಾರಿಗಳು, ಎಲ್ಲಾ ಸಿ.ಟಿ.ಯು.ಒ.ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಕೊವಿಡ್-19 ಅವಧಿಯಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಕೈಗೊಂಡ ವಿವಿಧ ಕ್ರಮಗಳ ಬಗ್ಗೆ ಸಚಿವರು ಮಾಹಿತಿ ನೀಡಿದರು. ಕೊವಿಡ್-19 ಕಾರಣದಿಂದಾಗಿ ವಿಧಿಸಲಾದ ರಾಷ್ಟ್ರೀಯ ಲಾಕ್‌ಡೌನ್‌ನಿಂದಾಗಿ ಕಾರ್ಮಿಕರಿಗೆ ಎದುರಾದ ಹಾಗೂ ಮುಂದೆ ಎದುರಾಗುವ ಸವಾಲುಗಳಿಗೆ ಪರಿಹಾರವನ್ನು ಕಂಡುಹಿಡಿಯುವ ಅವಶ್ಯಕತೆಯಿದೆ ಎಂದು ಸಚಿವರು ಎಲ್ಲರಿಗೂ ತಿಳಿಸಿದರು. ಕಾರ್ಮಿಕರ ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ಮತ್ತು ಅವರ ಸಮಗ್ರ ಕಲ್ಯಾಣವನ್ನು ಸುಧಾರಿಸಲು ತೆಗೆದುಕೊಳ್ಳಬಹುದಾದ ನೂತನ ಕ್ರಮವಿಧಾನಗಳನ್ನು ಸೂಚಿಸುವಂತೆ ಅವರು ಕಾರ್ಮಿಕ ಸಂಘಟನೆ / ಸಂಸ್ಥೆಗಳಿಗೆ ಸಚಿವರು ತಿಳಿಸಿದರು.

ಈ ಕೆಳಗಿನ ಸಲಹೆಗಳನ್ನು ಕೇಂದ್ರ ಕಾರ್ಮಿಕ ಸಂಘಗಳ ಪ್ರತಿನಿಧಿಗಳು ನೀಡಿದ್ದಾರೆ:

 1. ದೇಶದ ವಿವಿಧ ಭಾಗಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಸಾಗಿಸಲು ಹೆಚ್ಚಿನ ರೈಲುಗಳನ್ನು ಒದಗಿಸುವುದು. ಈ ಕಾರ್ಮಿಕರಿಗೆ ಅವರ ಕುಟುಂಬಗಳನ್ನು ನಡೆಸಲು ಅಗತ್ಯ ಹಣಕಾಸಿನ ನೆರವು ಸಹ ನೀಡಬಹುದು ಮತ್ತು ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಕೆಲಸಕ್ಕೆ ಮರಳಲು ಅವರಿಗೆ ಅನುಕೂಲ ಮಾಡಿಕೊಡಬೇಕು
 2. ವಲಸೆ ಕಾರ್ಮಿಕರು / ಅಸಂಘಟಿತ ಕಾರ್ಮಿಕರಿಗಾಗಿ ರಾಷ್ಟ್ರೀಯ ನೋಂದಣಿ ವ್ಯವಸ್ಥೆ ರಚಿಸುವ ಮೂಲಕ ವಲಸೆ ಕಾರ್ಮಿಕರಿಗೆ ಉದ್ಯೋಗ ಮತ್ತು ಇತರ ನೆರವು ಪಡೆಯಲು ಸಹಾಯ ಮಾಡಲು ವರ್ಗಾವಣೆಯ ಮತ್ತು ಡೇಟಾ ವರ್ಗಾವಣೆಯ ಸೌಲಭ್ಯಗಳನ್ನು ರೂಪಿಸುವುದು
 3. ಬಡ್ಡಿ ಮನ್ನಾ / ಸಾಲಗಳ ಪುನರ್ ರಚನೆ, ಸಬ್ಸಿಡಿ ವಿದ್ಯುತ್ ಒದಗಿಸುವುದು ಮುಂತಾದ ಕ್ರಮಗಳ ಮೂಲಕ ಎಂ.ಎಸ್‌.ಎಂ.ಇ.ಗಳನ್ನು ವಿಶೇಷವಾಗಿ ಸಣ್ಣ ಮತ್ತು ಸಣ್ಣ ಕೈಗಾರಿಕೆಗಳು. ಬೆಂಬಲಿಸುವುದು. ಈ ಕೈಗಾರಿಕೆಗಳಿಗೆ ಕಚ್ಚಾ ಸಾಮಗ್ರಿಗಳ ಸರಿಯಾದ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಅವಶ್ಯಕತೆಯಿದೆ;
 1. ಲಾಕ್‌ಡೌನ್‌ನಿಂದ ತೀವ್ರವಾಗಿ ಪರಿಣಾಮ ಬೀರಿದ ಹೋಟೆಲ್‌ಗಳು, ಸಿನೆಮಾ, ಕ್ರೀಡೆ, ವಾಹನಗಳಂತಹ ಕ್ಷೇತ್ರಗಳಿಗೆ ಪುಶ್ಚೇತನಕ್ಕಾಗಿ ಸರ್ಕಾರ ಕಾರ್ಯತಂತ್ರಗಳನ್ನು ರೂಪಿಸುವ ಅಗತ್ಯವಿದೆ;
 2. ಸಣ್ಣ ಮತ್ತು ಸಣ್ಣ ಕೈಗಾರಿಕೆಗಳ ವೇತನ ಘಟಕದಲ್ಲಿ ಸಬ್ಸಿಡಿ ನೀಡುವುದರಿಂದ ಈ ಉದ್ಯೋಗದಾತರು ತಮ್ಮ ಎಲ್ಲಾ ಕಾರ್ಮಿಕರಿಗೆ ಲಾಕ್‌ಡೌನ್ ಅವಧಿಯ ಸಂಪೂರ್ಣ ವೇತನವನ್ನು ಪಾವತಿಸಲು ಸಾಧ್ಯವಾಗುತ್ತದೆ.
 3. ಸಾಂಕ್ರಾಮಿಕ ಪೀಡಿತರನ್ನು ಶುಶ್ರೂಷೆಗಾಗಿ ತಲುಪುವಲ್ಲಿ ಶ್ಲಾಘನೀಯ ಕೆಲಸವನ್ನು ಮಾಡುತ್ತಿರುವ ಆಶಾ / ಅಂಗನವಾಡಿ ಸ್ವಯಂಸೇವಕರಿಗೆ ಸರಿಯಾದ ಆರ್ಥಿಕ ಪ್ರೋತ್ಸಾಹಿಸ ಸಿಗಬೇಕಾಗಿದೆ.
 4. ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ನಗದು ಸಹಾಯವನ್ನು ನೀಡಬೇಕು.
 5. ಈ ಸಮಯದಲ್ಲಿ ಕಾರ್ಮಿಕರಿಗೆ ಕೆಲಸದ ಸಮಯವನ್ನು ಹೆಚ್ಚಿಸಬಾರದು
 6. ವೇತನ ಸರಿಯಾಗಿ ಪಾವತಿ ಮತ್ತು ಸಂಬಳವನ್ನು ಕಡಿತಗೊಳಿಸದಿರುವ ಬಗ್ಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹೊರಡಿಸಿರುವ ಕಾರ್ಮಿಕ ಕಾನೂನುಗಳು ಮತ್ತು ಸಲಹೆಗಳ ಕಟ್ಟುನಿಟ್ಟಿನ ಅನುಷ್ಠಾನಗೊಳಿಸಬೇಕು
 7. ಅಸಂಘಟಿತ ಕಾರ್ಮಿಕರು ಮತ್ತು ದೈನಂದಿನ ಕೂಲಿಯವರಿಗೆ ಹಣಕಾಸು ನೆರವು, ಉಚಿತ ಪಡಿತರ ಮತ್ತು ವೈದ್ಯಕೀಯ ಸೌಲಭ್ಯಗಳು
 8. ರೈತರಿಗೆ ವೇತನವನ್ನು ಪಾವತಿಸಲು ಅನುಕೂಲವಾಗುವಂತೆ, ಕೃಷಿ ಉತ್ಪನ್ನಗಳನ್ನು ಸರ್ಕಾರವು ಖರೀದಿಸಿ ಸಂಗ್ರಹಿಸಬೇಕು
 9. ತಮ್ಮ ಮನೆಗೆ ಹಿಂದಿರುಗುವ ಅನ್ಯ ರಾಜ್ಯಗಳ ವಲಸೆ ಕಾರ್ಮಿಕರಿಂದ ರೈಲು ಪ್ರಯಾಣ ಶುಲ್ಕ ಪಡೆಯಬಾರದು

ಸಿ.ಟಿ.ಯು.ಒ.ಗಳ ಸದಸ್ಯರು ನೀಡಿದ ಸಲಹೆಗಳನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಕಾರ್ಯದರ್ಶಿ ಸ್ವಾಗತಿಸಿದರು. ವಲಸೆ ಕಾರ್ಮಿಕರಿಂದ ಯಾವುದೇ ರೈಲು ಶುಲ್ಕವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ವಿವಿಧ ರಾಜ್ಯಗಳಲ್ಲಿನ ವಲಸೆ ಕಾರ್ಮಿಕರ ಸ್ಥಿತಿಗತಿಗಳನ್ನು ಮೇಲ್ವಿಚಾರಣೆ ಮಾಡಲು ಡೇಟಾಬೇಸ್ ಅನ್ನು ರಾಜ್ಯಗಳ ಸಮನ್ವಯದಿಂದ ಸಂಗ್ರಹಿಸಲಾಗುತ್ತಿದೆ ಎಂದು ಅವರು ಹೇಳಿದರು. ಕೊವಿಡ್-19 ಕಾರಣದಿಂದಾಗಿ ಸೃಷ್ಠಿಯಾದ ಆಹಾರ, ಕಾರ್ಮಿಕರಿಗೆ ವೇತನ ಪಾವತಿ ಇತ್ಯಾದಿ ಸಮಸ್ಯೆಗಳು ಅಥವಾ ಕಾರ್ಮಿಕರ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಹಾಯವಾಣಿ / ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.

ಈಗ ಉದ್ಯಮವನ್ನು ಪುನರುಜ್ಜೀವನಗೊಳಿಸುವ ಮತ್ತು ಕ್ರಮೇಣ ಆರ್ಥಿಕತೆಯನ್ನು ತೆರೆಯು ವ್ಯವಹಾರಗಳತ್ತ ಗಮನ ಹರಿಸಬೇಕು, ಇದರಿಂದ ಸಾಕಷ್ಟು ಉದ್ಯೋಗಾವಕಾಶಗಳಿವೆ. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಕೆಲಸ ಪುನರಾರಂಭಿಸಲು ಕಾರ್ಮಿಕರಲ್ಲಿ ವಿಶ್ವಾಸ ಮೂಡಿಸುವಂತೆ ಕೇಂದ್ರ ಕಾರ್ಮಿಕ ಕಾರ್ಯದರ್ಶಿ ಅವರು ಸಿ.ಟಿ.ಯು.ಒ.ಗಳ ಪ್ರತಿನಿಧಿಗಳಿಗೆ ವಿನಂತಿಸಿದರು. ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾದಾಗ ನಿಮ್ಮ ಅಗತ್ಯಕ್ಕೆ ಸರ್ಕಾರದ ಕಡೆಯಿಂದ ಸಹಾಯ ಬೇಕಾದಲ್ಲಿ, ಈ ನಿಟ್ಟಿನಲ್ಲಿ ಎಲ್ಲ ಸಹಾಯವನ್ನು ನೀಡಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.

ದೇಶದ ಉದ್ಯೋಗದಾತ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಪ್ರತ್ಯೇಕ ವೆಬ್ನಾರ್ ಮೇ 8, 2020 ರಂದು ನಡೆಯಲಿದೆ.

***(Release ID: 1621639) Visitor Counter : 367