ರೈಲ್ವೇ ಸಚಿವಾಲಯ

2000 ಸಂಖ್ಯೆ ದಾಟಿದ ಪಾರ್ಸೆಲ್ ರೈಲುಗಳು

Posted On: 06 MAY 2020 5:16PM by PIB Bengaluru

ಪಾರ್ಸೆಲ್ ರೈಲುಗಳಿಂದ ರೈಲ್ವೆಗೆ ಆದಾಯ; ಲಾಕ್‌ಡೌನ್ ಅವಧಿಯಲ್ಲಿ 54,292 ಟನ್ ಸರಕು ಲೋಡ್ ಮಾಡಿ 19.77 ಕೋಟಿ ರೂ. ಗಳಿಕೆ

ಪಾರ್ಸೆಲ್ ರೈಲುಗಳ ಒಟ್ಟು ಸಂಖ್ಯೆ 2000 ದಾಟಿದೆ; 05.05.2020 ರವರೆಗೆ ಒಟ್ಟು 2,067 ರೈಲುಗಳ ಸಂಚಾರ, ಈ ಪೈಕಿ 1,988 ರೈಲುಗಳು ಸಮಯ ನಿಗದಿಪಡಿಸಿದ ರೈಲುಗಳಾಗಿವೆ

ರೈಲ್ವೆ ಹಾಗು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ಇತ್ತೀಚೆಗೆ -ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ಕಂಪನಿಗಳನ್ನು ರೈಲ್ವೆಗೆ ಸನಿಹ ತರುವ ಸಭೆ ನಡೆಸಿದರು

ಲಾಕ್ ಡೌನ್ ಸಮಯದಲ್ಲಿ ಸರಬರಾಜು ಸರಪಳಿಗೆ ಪೂರಕವಾಗಿ ಸಣ್ಣ ಪಾರ್ಸಲ್ ಗಾತ್ರಗಳಲ್ಲಿ ಅಗತ್ಯ ವಸ್ತುಗಳನ್ನು ತ್ವರಿತವಾಗಿ ಸಾಗಿಸಲು ಭಾರತೀಯ ರೈಲ್ವೆ ಪಾರ್ಸಲ್ ವ್ಯಾನ್ಗಳನ್ನು ಲಭ್ಯಗೊಳಿಸಿದೆ

 

ಕೋವಿಡ್ 19 ಹಿನ್ನೆಲೆಯಲ್ಲಿ ಉಂಟಾದ ಲಾಕ್ಡೌನ್ ಸಮಯದಲ್ಲಿ ಅಗತ್ಯ ಸಾಮಗ್ರಿಗಳಾದ ವೈದ್ಯಕೀಯ ಸರಬರಾಜು, ವೈದ್ಯಕೀಯ ಉಪಕರಣಗಳು, ಆಹಾರ ಇತ್ಯಾದಿಗಳನ್ನು ಸಣ್ಣ ಪಾರ್ಸಲ್ ಗಾತ್ರಗಳಲ್ಲಿ ಸಾಗಿಸುವುದು ಬಹಳ ಮುಖ್ಯವಾಗಿದೆ. ಮಹತ್ವದ ಅಗತ್ಯವನ್ನು ಪೂರೈಸುವ ಸಲುವಾಗಿ, ಭಾರತೀಯ ರೈಲ್ವೆಯು ರೈಲ್ವೆ ಪಾರ್ಸಲ್ ವ್ಯಾನ್ಗಳನ್ನು -ಕಾಮರ್ಸ್ ಘಟಕಗಳು ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಇತರ ಗ್ರಾಹಕರಿಂದ ತ್ವರಿತ ಸಾಮೂಹಿಕ ಸಾಗಣೆಗೆ ಲಭ್ಯವಾಗುವಂತೆ ಮಾಡಿದೆ. ಅಗತ್ಯ ವಸ್ತುಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರೈಲ್ವೆ ವೇಳಾಪಟ್ಟಿ ನಿಗದಿತ ಪಾರ್ಸಲ್ ವಿಶೇಷ ರೈಲುಗಳನ್ನು ಆಯ್ದ ಮಾರ್ಗಗಳಲ್ಲಿ ಓಡಿಸಲು ನಿರ್ಧರಿಸಿದೆ.

ಪಾರ್ಸಲ್ ವಿಶೇಷ ರೈಲುಗಳ ಮಾರ್ಗಗಳನ್ನು ವಲಯ ರೈಲ್ವೆಯು ನಿಯಮಿತವಾಗಿ ಗುರುತಿಸುತ್ತಿದೆ ಮತ್ತು ತಿಳಿಸುತ್ತಿದೆ. ಪ್ರಸ್ತುತ ರೈಲುಗಳನ್ನು ಎಂಭತ್ತೆರಡು (82) ಮಾರ್ಗಗಳಲ್ಲಿ ನಡೆಸಲಾಗುತ್ತಿದೆ. ಮಾರ್ಗಗಳನ್ನು ಸೇರಿಸಲು ಗುರುತಿಸಲಾಗಿದೆ:

i) ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ನಡುವೆ ನಿಯಮಿತ ಸಂಪರ್ಕ.

ii) ರಾಜ್ಯ-ರಾಜಧಾನಿಗಳು / ಪ್ರಮುಖ ನಗರಗಳಿಂದ ರಾಜ್ಯದ ಎಲ್ಲಾ ಭಾಗಗಳಿಗೆ ಸಂಪರ್ಕ.

iii) ದೇಶದ ಈಶಾನ್ಯ ಭಾಗಕ್ಕೆ ಸಂಪರ್ಕವನ್ನು ಖಚಿತಪಡಿಸುವುದು.

iv) ಹೆಚ್ಚುವರಿ ಹಾಲು ಮತ್ತು ಡೈರಿ ಉತ್ಪನ್ನಗಳ ಪ್ರದೇಶಗಳಿಂದ (ಗುಜರಾತ್, ಆಂಧ್ರಪ್ರದೇಶ) ಅವುಗಳನ್ನು ಹೆಚ್ಚಿನ ಬೇಡಿಕೆಯ ಪ್ರದೇಶಗಳಿಗೆ ಸರಬರಾಜು ಮಾಡುವುದು.

v) ಉತ್ಪಾದಿಸುವ ಪ್ರದೇಶಗಳಿಂದ ದೇಶದ ಇತರ ಭಾಗಗಳಿಗೆ ಇತರ ಅಗತ್ಯ ವಸ್ತುಗಳ (ಕೃಷಿಗೆ ಬೇಕಾದ ಸಾಮಾಗ್ರಿಗಳು, ಔಷಧಿಗಳು, ವೈದ್ಯಕೀಯ ಉಪಕರಣಗಳು, ಇತ್ಯಾದಿ) ಸರಬರಾಜು ಮಾಡುವುದು.

ರೈಲ್ವೆಯ ಪಾರ್ಸಲ್ ರೈಲುಗಳ ಹೆಚ್ಚುವರಿ ಓಡಾಟವನ್ನು, ದೇಶದಲ್ಲಿ ಸರಕು ಸಾಗಣೆ ಕಾರ್ಯಾಚರಣೆಯನ್ನು ಹೆಚ್ಚಿಸಲು, ವೇಗವಾಗಿ, ಗ್ರಾಹಕ ಸ್ನೇಹಿಯಾಗಿಮಾಡಲು ಮತ್ತು ಲಾಭದಾಯಕವಾಗಿರಿಸುವ ಪ್ರಯತ್ನಗಳೆಂದು ಪರಿಗಣಿಸಬಹುದು.

ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ಇತ್ತೀಚೆಗೆ ಇಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ (ಸಾಗಾಣಿಕೆ) ಕಂಪನಿಗಳನ್ನು ರೈಲ್ವೆಗೆ ಸನಿಹ ತರುವ ಸಭೆ ನಡೆಸಿದರು.

5.5.2020 ರಂದು 66 ಪಾರ್ಸಲ್ ವಿಶೇಷ ರೈಲುಗಳು ಕಾರ್ಯನಿರ್ವಹಿಸಿದರು, ಅವುಗಳಲ್ಲಿ 65 ವೇಳಾಪಟ್ಟಿ ನಿಗದಿತ ರೈಲುಗಳು. 1,936 ಟನ್ ಸಾಮಗ್ರಿಗಳನ್ನು ಸಾಗಿಸಲಾಗಿದ್ದು, ರೈಲ್ವೆಗೆ 57.14 ಲಕ್ಷ ರೂ.ಗಳಷ್ಟು ಆದಾಯವನ್ನು ತಂದಿತು.

5.5.2020ರವರೆಗೆ ಚಲಿಸಿರುವ ಒಟ್ಟು ರೈಲುಗಳ ಸಂಖ್ಯೆ 2,067 ಆಗಿದ್ದು, ಪೈಕಿ 1,988 ರೈಲುಗಳು ವೇಳಾಪಟ್ಟಿ ನಿಗದಿತ ರೈಲುಗಳಾಗಿವೆ. 54,292 ಟನ್ ಸರಕುಗಳನ್ನು ಸಾಗಿಸಲಾಗಿದೆ, ಮತ್ತು ಆದಾಯವು 19.77 ಕೋಟಿ ರೂ.ಗಳಷ್ಟಾಗಿದೆ.

***



(Release ID: 1621638) Visitor Counter : 179