ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಇಪಿಎಫ್ಒ ದಿಂದ ಪಿಂಚಣಿದಾರರಿಗೆ 764 ಕೋಟಿ ರೂ. ಬಿಡುಗಡೆ
Posted On:
05 MAY 2020 2:23PM by PIB Bengaluru
ಇಪಿಎಫ್ಒ ದಿಂದ ಪಿಂಚಣಿದಾರರಿಗೆ 764 ಕೋಟಿ ರೂ. ಬಿಡುಗಡೆ
ಇಪಿಎಫ್ಒ ತನ್ನ ಪಿಂಚಣಿ ಯೋಜನೆ ಅಡಿ 65 ಲಕ್ಷ ಪಿಂಚಣಿದಾರರನ್ನು ಹೊಂದಿದೆ. ರಾಷ್ಟ್ರವ್ಯಾಪಿ ಕೋವಿಡ್-19 ಲಾಕ್ ಡೌನ್ ನಿಂದಾಗಿ ಪಿಂಚಣಿದಾರರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಇಪಿಎಫ್ಒದ ಎಲ್ಲಾ 135 ಪ್ರಾದೇಶಿಕ ಕಚೇರಿಗಳಲ್ಲಿ ಏಪ್ರಿಲ್ 2020ರ ಪಿಂಚಣಿ ಪಾವತಿ ಪ್ರಕ್ರಿಯೆಯನ್ನು ಮುಂಚಿತವಾಗಿಯೇ ಪೂರ್ಣಗೊಳಿಸಿದೆ.
ಭಾರತದಾದ್ಯಂತ ಪಿಂಚಣಿ ಪಾವತಿಸುವ ಬ್ಯಾಂಕ್ ಗಳ ಎಲ್ಲ ನೋಡಲ್ ಶಾಖೆಗಳಿಗೆ 764 ಕೋಟಿ ರೂ.ಗಳನ್ನು ಕಳುಹಿಸಲು ಇಪಿಎಫ್ಒ ಅಧಿಕಾರಿಗಳು ಮತ್ತು ಸಿಬ್ಬಂದಿ ಎಲ್ಲ ಅಡೆತಡೆಗಳನ್ನು ಮೀರಿ ಕೆಲಸ ಮಾಡಿದ್ದಾರೆ.
ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ಪಿಂಚಣಿದಾರರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲು ಇಪಿಎಫ್ಒ ಸಕಾಲದಲ್ಲಿ ಪಿಂಚಣಿ ಪಾವತಿಸುವುದು ಅತ್ಯಗತ್ಯ ಎಂದು ಮನಗಂಡು ಅದಕ್ಕೆ ಅಗ್ರ ಆದ್ಯತೆಯನ್ನು ನೀಡಿತ್ತು.
***
(Release ID: 1621534)
Visitor Counter : 226
Read this release in:
Punjabi
,
English
,
Assamese
,
Gujarati
,
Urdu
,
Hindi
,
Marathi
,
Bengali
,
Odia
,
Tamil
,
Telugu