ರಕ್ಷಣಾ ಸಚಿವಾಲಯ

ವೈಮಾನಿಕ ಸಮೀಕ್ಷೆ ಕೈಗೊಳ್ಳಲು ರಕ್ಷಣಾ ಸಚಿವಾಲಯ (ಎಂಒಡಿ) ನಿರಪೇಕ್ಷಣಾ ಪ್ರಮಾಣಪತ್ರ (ಎನ್ಒಸಿ) ಪಡೆಯಲು ಆನ್‌ಲೈನ್ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು

प्रविष्टि तिथि: 05 MAY 2020 4:23PM by PIB Bengaluru

ವೈಮಾನಿಕ ಸಮೀಕ್ಷೆ ಕೈಗೊಳ್ಳಲು ರಕ್ಷಣಾ ಸಚಿವಾಲಯ (ಎಂಒಡಿ) ನಿರಪೇಕ್ಷಣಾ ಪ್ರಮಾಣಪತ್ರ (ಎನ್ಒಸಿ) ಪಡೆಯಲು ಆನ್ಲೈನ್ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು

 

ರಕ್ಷಣಾ ಮಂತ್ರಿ ಶ್ರೀ ರಾಜನಾಥ್ ಸಿಂಗ್ ಅವರು ವೈಮಾನಿಕ ಸಮೀಕ್ಷೆಗಳನ್ನು ಕೈಗೊಳ್ಳಲು ಬೇಕಾದ ರಕ್ಷಣಾ ಸಚಿವಾಲಯ (ಎಂಒಡಿ) ನಿರಪೇಕ್ಷಣಾ ಪ್ರಮಾಣಪತ್ರ (ಎನ್ಒಸಿ) ವೆಬ್ ಪೋರ್ಟಲ್ www.modnoc.ncog.gov.in ಗೆ ಚಾಲನೆ ನೀಡಿದರು. ಈಗ 01.03.2020 ರಿಂದ ಪೋರ್ಟಲ್ನಲ್ಲಿ ಸಲ್ಲಿಸಲಾದ ಆನ್ಲೈನ್ ಅರ್ಜಿಗಳನ್ನು ಮಾತ್ರ ರಕ್ಷಣಾ ಸಚಿವಾಲಯದಿಂದ ಪ್ರಕ್ರಿಯೆಗೆ ಸ್ವೀಕರಿಸಲಾಗುತ್ತಿದೆ.

ಒಂಬತ್ತು ಅರ್ಜಿದಾರರು ಆನ್ಲೈನ್ ಅರ್ಜಿಗಳನ್ನು ಸಲ್ಲಿಸಲು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ವೈಮಾನಿಕ ಸಮೀಕ್ಷೆಗಳನ್ನು ಕೈಗೊಳ್ಳಲು ಆಸಕ್ತಿ ಹೊಂದಿರುವ ಮತ್ತು ರಕ್ಷಣಾ ಸಚಿವಾಲಯದಿಂದ ನಿರಪೇಕ್ಷಣಾ ಪ್ರಮಾಣಪತ್ರ (ಎನ್ಒಸಿ) ಅಗತ್ಯವಿರುವವರೆಲ್ಲರೂ ಸಂಪೂರ್ಣ ಆನ್ಲೈನ್ ಸೌಲಭ್ಯವನ್ನು ಬಳಸಿಕೊಳ್ಳಲು ಕೋರಲಾಗಿದೆ.

***


(रिलीज़ आईडी: 1621527) आगंतुक पटल : 186
इस विज्ञप्ति को इन भाषाओं में पढ़ें: Punjabi , English , Urdu , हिन्दी , Bengali , Manipuri , Tamil , Telugu , Malayalam