ರಕ್ಷಣಾ ಸಚಿವಾಲಯ

ಭಾರತೀಯ ನೌಕಾಪಡೆ  “ಸಮುದ್ರ ಸೇತು” ಕಾರ್ಯಾಚರಣೆ ಆರಂಭಿಸಿದೆ

Posted On: 05 MAY 2020 7:18PM by PIB Bengaluru

ಭಾರತೀಯ ನೌಕಾಪಡೆ  “ಸಮುದ್ರ ಸೇತುಕಾರ್ಯಾಚರಣೆ ಆರಂಭಿಸಿದೆ

 

ಭಾರತೀಯ ನಾಗರಿಕರನ್ನು ವಿದೇಶದಿಂದ ಕರೆತರುವ ರಾಷ್ಟ್ರೀಯ ಪ್ರಯತ್ನದ ಭಾಗವಾಗಿ  ಭಾರತೀಯ ನೌಕಾಪಡೆ ಸಮುದ್ರ ಸೇತುಅಂದರೆ ಸಮುದ್ರಕ್ಕೆ ಸೇತುವೆಕಾರ್ಯಾಚರಣೆ ಆರಂಭಿಸಿದೆ. ಭಾರತೀಯ ನೌಕಾಪಡೆಯ ಹಡಗುಗಳಾದ ಜಲಶ್ವಾ ಮತ್ತು ಮಗರ್ ಅನ್ನು ಪ್ರಸ್ತುತ ಮಾಲ್ಡೀವ್ಸ್ ಗಣರಾಜ್ಯದ ಮಾಲೆ ಬಂದರಿಗೆ ಪ್ರಥಮ ಹಂತದಲ್ಲಿ 8 ಮೇ 2020 ರಿಂದ ಸ್ಥಳಾಂತರ ಕಾರ್ಯಾಚರಣೆಗೆ ನಿಗದಿಪಡಿಸಲಾಗಿದೆ.  

ವಿದೇಶದಲ್ಲಿರುವ ನಮ್ಮ ನಾಗರಿಕರಿಗೆ ಕೋವಿಡ್ – 19 ಹರಡುವಿಕೆಯಿಂದಾಗುವ ಪರಿಣಾಮಗಳ ಕುರಿತು ಸರ್ಕಾರ ತೀಕ್ಷ್ಣವಾಗಿ ಗಮನಿಸುತ್ತಿದೆ. ಸಮುದ್ರ ಮಾರ್ಗವಾಗಿ ಸ್ಥಳಾಂತರ ಕಾರ್ಯಾಚರಣೆಗೆ ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಭಾರತೀಯ ನೌಕಾಪಡೆಗೆ ನಿರ್ದೇಶಿಸಲಾಗಿದೆ.

ಮಾಲ್ಡೀವ್ಸ್ ಗಣರಾಜ್ಯದಲ್ಲಿರುವ ಭಾರತೀಯ ಸಂಸ್ಥೆ ನೌಕಾಪಡೆಯ ಹಡಗುಗಳಿಂದ ಸ್ಥಳಾಂತರಿಸಬಹುದಾದ ಭಾರತೀಯ ನಾಗರಿಕರ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ ಮತ್ತು ಅಗತ್ಯ ವೈದ್ಯಕೀಯ ತಪಾಸಣೆ ನಡೆಸಿದ ನಂತರ ಅವರ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲಾಗುವುದು. ಕೋವಿಡ್ ಸಂಬಂಧಿತ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾನದಂಡಗಳನ್ನು ಅನುಸರಿಸುವ ಮತ್ತು ನೌಕೆಯಲ್ಲಿ ವೈದ್ಯಕೀಯ ಸೌಲಭ್ಯವನ್ನು ಪೂರೈಸುವ ಮೂಲಕ ಮೊದಲ ಬಾರಿಗೆ ಒಟ್ಟು 1000  ಜನರನ್ನು ಸ್ಥಳಾಂತರಿಸುವ ಯೋಜನೆ ಹೊಂದಲಾಗಿದೆ.    

ಸ್ಥಳಾಂತರಿಸುವ ಕಾರ್ಯಾಚರಣೆಗೆಂದೇ ಸೂಕ್ತವಾಗುವಂತೆ ಹಡಗುಗಳನ್ನು ಒದಗಿಸಲಾಗಿದೆ. ಸಮುದ್ರ ಯಾನದಲ್ಲಿ ಸ್ಥಳಾಂತರಿಸುವ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು. ಕೋವಿಡ್ – 19 ಕ್ಕೆ ಸಂಬಂಧಿಸಿ ವಿಶಿಷ್ಟ ಸವಾಲುಗಳನ್ನು ಎದುರಿಸುವ ಹಿನ್ನೆಲೆಯಲ್ಲಿ ಕಠಿಣ ಶಿಷ್ಟಾಚಾರಗಳನ್ನು ಜಾರಿಗೊಳಿಸಲಾಗಿದೆ.  

ಸ್ಥಳಾಂತರಿಸುವ ಜನರನ್ನು ಕೇರಳದ ಕೊಚ್ಚಿಗೆ ತಲುಪಿಸಲಾಗುತ್ತಿದ್ದು ಅಲ್ಲಿನ ರಾಜ್ಯಾಡಳಿತಕ್ಕೆ ಅವರ ಆರೈಕೆಯ ಜವಾಬ್ದಾರಿ ವಹಿಸಲಾಗುವುದು. ರಕ್ಷಣಾ, ವಿದೆಶಾಂಗ ವ್ಯವಹಾರ, ಗೃಹ, ಆರೋಗ್ಯ ಸಚಿವಾಲಯಗಳೂ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಎಜನ್ಸಿಗಳೊಂದಿಗೆ ನಿಕಟ ಸಮನ್ವದೊಂದಿಗೆ ಈ ಕಾರ್ಯಾಚರಣೆಯನ್ನು ಮುನ್ನಡೆಸಲಾಗುತ್ತಿದೆ.  

***



(Release ID: 1621516) Visitor Counter : 207