ಗೃಹ ವ್ಯವಹಾರಗಳ ಸಚಿವಾಲಯ
ಭಾರತಕ್ಕೆ ಭೇಟಿ ನೀಡಲು ಬಹು ಪ್ರವೇಶದ ಹಕ್ಕು ಹೊಂದಿರುವ ಒಸಿಐ ಕಾರ್ಡುದಾರರ ಜೀವಿತಾವಧಿಯ ವೀಸಾ ಸೌಲಭ್ಯವನ್ನು, ಭಾರತದಿಂದ/ ಭಾರತಕ್ಕೆಅಂತರರಾಷ್ಟ್ರೀಯ ವಿಮಾನಯಾನ ನಿಷೇಧವನ್ನು ಹಿಂತೆಗೆದುಕೊಳ್ಳುವವರೆಗೆ ಸ್ಥಗಿತಗೊಳಿಸಲಾಗಿದೆ
Posted On:
05 MAY 2020 7:54PM by PIB Bengaluru
ಭಾರತಕ್ಕೆ ಭೇಟಿ ನೀಡಲು ಬಹು ಪ್ರವೇಶದ ಹಕ್ಕು ಹೊಂದಿರುವ ಒಸಿಐ ಕಾರ್ಡುದಾರರ ಜೀವಿತಾವಧಿಯ ವೀಸಾ ಸೌಲಭ್ಯವನ್ನು, ಭಾರತದಿಂದ/ ಭಾರತಕ್ಕೆಅಂತರರಾಷ್ಟ್ರೀಯ ವಿಮಾನಯಾನ ನಿಷೇಧವನ್ನು ಹಿಂತೆಗೆದುಕೊಳ್ಳುವವರೆಗೆ ಸ್ಥಗಿತಗೊಳಿಸಲಾಗಿದೆ
ಸಾಗರೋತ್ತರ ನಾಗರಿಕ (ಒಸಿಐ) ಕಾರ್ಡುದಾರರಾಗಿ ನೋಂದಾಯಿಸಲ್ಪಟ್ಟ ವ್ಯಕ್ತಿಗಳಿಗೆ ನೀಡಲಾಗುವ ಭಾರತಕ್ಕೆ ಭೇಟಿಯ ಬಹು ಪ್ರವೇಶದ ಜೀವಿತಾವಧಿಯ ವೀಸಾ ಸೌಲಭ್ಯದ ಹಕ್ಕನ್ನು ಭಾರತದಿಂದ / ಭಾರತಕ್ಕೆ ಪ್ರಯಾಣಿಕರ ಅಂತರರಾಷ್ಟ್ರೀಯ ವಿಮಾನ ಪ್ರಯಾಣದ ನಿಷೇಧವನ್ನು ಭಾರತ ಸರ್ಕಾರವು ತೆಗೆದುಹಾಕುವವರೆಗೆ ಸ್ಥಗಿತಗೊಳಿಸಿ ಎಂದು ಕೇಂದ್ರ ಗೃಹ ಸಚಿವಾಲಯ (ಎಂಎಚ್ಎ) ಆದೇಶ ಹೊರಡಿಸಿದೆ.
ಈ ಅವಧಿಯಲ್ಲಿ ಬಲವಾದ ಕಾರಣಗಳಿಗಾಗಿ ಭಾರತಕ್ಕೆ ಪ್ರಯಾಣಿಸಲು ಇಚ್ಛಿಸುವ ಒಸಿಐ ಕಾರ್ಡ್ ಹೊಂದಿರುವ ಯಾವುದೇ ವಿದೇಶಿ ಪ್ರಜೆಗಳು ಹತ್ತಿರದ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಬೇಕಾಗುತ್ತದೆ. ಇದಲ್ಲದೆ, ಒಸಿಐ ಕಾರ್ಡ್ ಹೊಂದಿರುವ ವ್ಯಕ್ತಿಗಳು ಈಗಾಗಲೇ ಭಾರತದಲ್ಲಿದ್ದರೆ, ಅವರು ಯಾವುದೇ ಸಮಯದವರೆಗೆ ಭಾರತದಲ್ಲಿ ಉಳಿಯಲು ಒಸಿಐ ಕಾರ್ಡ್ ಅರ್ಹವಾಗಿರುತ್ತದೆ.
ಅಧಿಕೃತ ಆದೇಶವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
***
(Release ID: 1621509)
Visitor Counter : 155