ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ

ಕೋಲ್ಡ್ ಚೈನ್ ಯೋಜನೆಗಳ ಪ್ರವರ್ತಕರೊಂದಿಗೆ ಶ್ರೀಮತಿ ಹರ್ ಸಿಮ್ರತ್ ಕೌರ್ ಬಾದಲ್ ವಿಡಿಯೋ ಕಾನ್ಫರೆನ್ಸ್

Posted On: 04 MAY 2020 6:47PM by PIB Bengaluru

ಕೋಲ್ಡ್ ಚೈನ್ ಯೋಜನೆಗಳ ಪ್ರವರ್ತಕರೊಂದಿಗೆ ಶ್ರೀಮತಿ ಹರ್ ಸಿಮ್ರತ್ ಕೌರ್ ಬಾದಲ್ ವಿಡಿಯೋ ಕಾನ್ಫರೆನ್ಸ್

 

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾದ ಶ್ರೀಮತಿ ಹರ್ ಸಿಮ್ರತ್ ಕೌರ್ ಬಾದಲ್ ರವರು, ಮಹಾರಾಷ್ಟ್ರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಬೆಂಬಲದೊಂದಿಗೆ ಪೂರ್ಣಗೊಂಡ ಸಮಗ್ರ ಕೋಲ್ಡ್ ಚೈನ್ ಯೋಜನೆಗಳ ಪ್ರವರ್ತಕರೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು. ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ರಾಜ್ಯ ಸಚಿವರಾದ ಶ್ರೀ ರಾಮೇಶ್ವರ ತೆಲಿ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

ವಿಡಿಯೋ ಕಾನ್ಫರೆನ್ಸ್ ನಲ್ಲಿ 38 ಕೋಲ್ಡ್ ಚೈನ್ ಯೋಜನೆಗಳ ಪ್ರವರ್ತಕರು ಭಾಗವಹಿಸಿದ್ದರು. ಪ್ರವರ್ತಕರು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರೊಂದಿಗೆ ಮಾತುಕತೆ ನಡೆಸಿದರು ಮತ್ತು ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ತಮ್ಮ ಅನುಭವ / ಸಮಸ್ಯೆಗಳನ್ನು ಹಂಚಿಕೊಂಡರು. ಇದಲ್ಲದೆ, ಲಾಕ್ಡೌನ್ ಅವಧಿಯಲ್ಲಿ ಕೋಲ್ಡ್ ಚೈನ್ ಯೋಜನೆಗಳನ್ನು ನಡೆಸುವಲ್ಲಿ ಎದುರಾದ ಸವಾಲುಗಳನ್ನು ಪ್ರವರ್ತಕರು ಹಂಚಿಕೊಂಡರು.

ಈಗಿರುವ ಆಹಾರ ಉತ್ಪನ್ನಗಳ ಪೂರೈಕೆ ಸರಪಳಿಗೆ ಗಂಭೀರ ಸವಾಲನ್ನು ಒಡ್ಡಿರುವ ಕೋವಿಡ್-19 ಬಿಕ್ಕಟ್ಟನ್ನು ನಿಭಾಯಿಸಲು ಇಂಟಿಗ್ರೇಟೆಡ್ ಕೋಲ್ಡ್ ಚೈನ್ ನೆಟ್ವರ್ಕ್ಸಾಮೂಹಿಕ ಸಾಮರ್ಥ್ಯವನ್ನು ಬಳಸುವ ಅಗತ್ಯವನ್ನು ಶ್ರೀಮತಿ ಹರ್ ಸಿಮ್ರತ್ ಕೌರ್ ಬಾದಲ್ ಒತ್ತಿ ಹೇಳಿದರು,

ಶೈತ್ಯೀಕರಣಗೊಂಡ ತರಕಾರಿಗಳ ದಾಸ್ತಾನು ಮತ್ತು ಸಂಸ್ಕರಿಸಿದ ಡೈರಿ ಉತ್ಪನ್ನಗಳು ತಮ್ಮ ಸಾಂಪ್ರದಾಯಿಕ ಮಾರುಕಟ್ಟೆಗಳಾದ ರೆಸ್ಟೋರೆಂಟ್ಗಳು, ಔತಣಕೂಟಗಳು, ಹೋಟೆಲ್ಗಳು ಇತ್ಯಾದಿಗಳಲ್ಲಿ ಲಾಕ್ಡೌನ್ ಮಧ್ಯೆ ಮಾರಾಟವಾಗದೇ ಪೇರಿಕೆಯಾಗುತ್ತಿರುವ ಮತ್ತು ಉತ್ಪನ್ನಗಳನ್ನು ರಫ್ತು ಮಾಡುವಲ್ಲಿನ ತೊಂದರೆಗಳ ಕುರಿತು ಅವರು ಚರ್ಚಿಸಿದರು.

1/3 ರಷ್ಟು ಅಥವಾ ಅರ್ಧದಷ್ಟು ಕಾರ್ಮಿಕರೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತಿರುವುದರಿಂದ ಹೆಚ್ಚಿನ ಕೆಲಸದ ಸಮಯ ಬೇಕಾಗುತ್ತದೆ ಎಂದು ಪ್ರವರ್ತಕರು ತಿಳಿಸಿದರು. ಇದು ಉತ್ಪಾದನೆಯ ವೆಚ್ಚವನ್ನು ಹೆಚ್ಚಿಸಿ ಉತ್ಪನ್ನದ ಬೆಲೆಯನ್ನು ಕಡಿಮೆ ಮಾಡಿದೆ.

ವಿಡಿಯೋ ಕಾನ್ಫರೆನ್ಸಿನಲ್ಲಿ ಕೆಳಗಿನ ಪ್ರಮುಖ ವಿಷಯಗಳ ಬಗ್ಗೆ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರು ಚರ್ಚಿಸಿದರು :

  1. ಕಚ್ಚಾ ವಸ್ತುಗಳ ಲಭ್ಯತೆ ಮತ್ತು ಅದರ ಅಧಿಕ ವೆಚ್ಚ
  2. ಕಾರ್ಯಾಚರಣೆಗಳ ಮೇಲೆ ಲಾಕ್ಡೌನ್ ಪರಿಣಾಮ
  3. ಕಾರ್ಮಿಕರು ಮತ್ತು ಸಾಗಾಣಿಕೆ ಸಮಸ್ಯೆಗಳು
  4. ದಾಸ್ತಾನಿನ ಅಧಿಕ ವೆಚ್ಚಗಳು
  5. ರೈತರಿಗೆ ಪಾವತಿ ಮಾಡಬೇಕಾಗಿರುವುದರಿಂದ ದ್ರವ್ಯತೆ ಬಿಕ್ಕಟ್ಟು

***


(Release ID: 1621106) Visitor Counter : 233