ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಮೇ 31ರಂದು ನಿಗದಿಯಾಗಿದ್ದ 2020ನೇ ಸಾಲಿನ ನಾಗರಿಕ ಸೇವೆಗಳ (ಪ್ರಿಲಿಮಿನರಿ) ಪರೀಕ್ಷೆ ಮುಂದೂಡಿಕೆ

Posted On: 04 MAY 2020 3:29PM by PIB Bengaluru

ಮೇ 31ರಂದು ನಿಗದಿಯಾಗಿದ್ದ 2020ನೇ ಸಾಲಿನ ನಾಗರಿಕ ಸೇವೆಗಳ (ಪ್ರಿಲಿಮಿನರಿ) ಪರೀಕ್ಷೆ ಮುಂದೂಡಿಕೆ

 

ಕೋವಿಡ್-19ನಿಂದಾಗಿ ರಾಷ್ಟ್ರವ್ಯಾಪಿ ಜಾರಿಯಲ್ಲಿರುವ ಎರಡನೇ ಹಂತದ ಲಾಕ್ ಡೌನ್ ನಂತರದ ಸ್ಥಿತಿಗತಿ ಕುರಿತು ಕೇಂದ್ರ ಲೋಕಸೇವಾ ಆಯೋಗ ಇಂದು ನಡೆದ ವಿಶೇಷ ಸಭೆಯಲ್ಲಿ ಪರಾಮರ್ಶೆ ನಡೆಸಿತು. ಕೆಲವೊಂದು ನಿರ್ಬಂಧಗಳನ್ನು ಮುಂದುವರಿಸಿರುವುದನ್ನು ಪರಿಗಣಿಸಿದ ಆಯೋಗ ಪ್ರಸ್ತುತ ಯಾವುದೇ ಪರೀಕ್ಷೆಗಳನ್ನು ಮತ್ತು ಸಂದರ್ಶನಗಳನ್ನು ಪುನರಾರಂಭಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದೆ.

ಆದ್ದರಿಂದ 2020ರ ಮೇ 31ರಂದು ನಿಗದಿಯಾಗಿದ್ದ 2020ನೇ ಸಾಲಿನ ನಾಗರಿಕ ಸೇವೆಗಳ(ಪ್ರಿಲಿಮಿನರಿ) ಪರೀಕ್ಷೆ ಮುಂದೂಡಲಾಗಿದೆ. ಈ ಪರೀಕ್ಷೆ ಭಾರತೀಯ ಅರಣ್ಯ ಸೇವಾ ಪರೀಕ್ಷೆಗೆ ಪೂರ್ವಭಾವಿ ತಯಾರಿ ಪರೀಕ್ಷೆ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ನಿಗದಿಯಾಗಿರುವ ಭಾರತೀಯ ಅರಣ್ಯ ಸೇವೆಗಳ ಪರೀಕ್ಷೆಯನ್ನು ಸಹ ಮುಂದೂಡಲಾಗಿದೆ. ಪರಿಸ್ಥಿತಿಯನ್ನು 2020ರ ಮೇ 20ರಂದು ಮತ್ತೊಮ್ಮೆ ಪುನರಾವಲೋಕಿಸಿ, ಮುಂದಿನ ದಿನಗಳಲ್ಲಿ ಈ ಪರೀಕ್ಷೆಗಳ ಹೊಸ ದಿನಾಂಕಗಳನ್ನು ಯುಪಿಎಸ್ ಸಿ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು.

ಆಯೋಗ ಈಗಾಗಲೇ ಈ ಕೆಳಗಿನ ಪರೀಕ್ಷೆ ಸಂದರ್ಶನಗಳನ್ನು ಮುಂದೂಡಿದೆ ಅವುಗಳೆಂದರೆ:

ಎ) 2019ರ ನಾಗರಿಕ ಸೇವಾ ಪರೀಕ್ಷೆಗಳ ಉಳಿದ ಅಭ್ಯರ್ಥಿಗಳ ವೈಯಕ್ತಿಕ ಸಂದರ್ಶನ;

ಬಿ) ಭಾರತೀಯ ಆರ್ಥಿಕ ಸೇವೆಗಳು/ ಭಾರತೀಯ ಸಾಂಖ್ಯಿಕ ಸೇವೆಗಳ ಪರೀಕ್ಷೆ 2020 ಅಧಿಸೂಚನೆ; ಸಿ) ಕಂಬೈನ್ಡ್ ವೈದ್ಯಕೀಯ ಸೇವೆಗಳ ಪರೀಕ್ಷೆ 2020 ಅಧಿಸೂಚನೆ;

ಡಿ) ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಪರೀಕ್ಷೆ 2020 ಅಧಿಸೂಚನೆ ಮತ್ತು ಇ) ಎನ್ ಡಿ ಎ ಮತ್ತು ನೌಕಾ ಅಕಾಡೆಮಿ ಪರೀಕ್ಷೆ 2020.

ಈಗ ಮುಂದೂಡಲ್ಪಟ್ಟಿರುವ ಪರೀಕ್ಷೆಗಳು/ಸಂದರ್ಶನಗಳ ದಿನಾಂಕ ನಿರ್ಧಾರವಾದ ಕೂಡಲೇ ಅವುಗಳನ್ನು ವಿದ್ಯಾರ್ಥಿಗಳಿಗೆ ಕನಿಷ್ಠ 30 ದಿನಗಳ ಮುಂಚೆ ತಿಳಿಸಲಾಗುವುದು.

***


(Release ID: 1620970) Visitor Counter : 270