ನಾಗರೀಕ ವಿಮಾನಯಾನ ಸಚಿವಾಲಯ

ಲೈಫ್‌ಲೈನ್ ಉಡಾನ್ ಯೋಜನೆಯಡಿಯಲ್ಲಿ 430 ವಿಮಾನಗಳ ಕಾರ್ಯನಿರ್ವಹಣೆ

Posted On: 03 MAY 2020 4:47PM by PIB Bengaluru

ಲೈಫ್‌ಲೈನ್ ಉಡಾನ್ ಯೋಜನೆಯಡಿಯಲ್ಲಿ 430 ವಿಮಾನಗಳ ಕಾರ್ಯನಿರ್ವಹಣೆ

 

ಏರ್ ಇಂಡಿಯಾ, ಅಲೈಯನ್ಸ್ ಏರ್, ಐಎಎಫ್ ಮತ್ತು ಖಾಸಗಿ ಸರಕು ವಿಮಾನ ವಾಹಕಗಳು ಲೈಫ್‌ಲೈನ್ ಉಡಾನ್ ಅಡಿಯಲ್ಲಿ 430 ವಿಮಾನಗಳನ್ನು ನಿರ್ವಹಿಸಿವೆ. ಈ ಪೈಕಿ 252 ವಿಮಾನಗಳನ್ನು ಏರ್ ಇಂಡಿಯಾ ಮತ್ತು ಅಲೈಯನ್ಸ್ ಏರ್ ನಿರ್ವಹಿಸಿವೆ. ಇಲ್ಲಿಯವರೆಗೆ ಸಾಗಿಸಿದ ಸರಕು ಸುಮಾರು 795.86 ಟನ್. ಇಲ್ಲಿಯವರೆಗೆ ಲೈಫ್‌ಲೈನ್ ಉಡಾನ್ ವಿಮಾನಗಳು ಆವರಿಸಿರುವ ವೈಮಾನಿಕ ದೂರವು 4,21,790 ಕಿ.ಮೀ.ಗಿಂತ ಹೆಚ್ಚಾಗಿದೆ. ಕೊವಿಡ್-19 ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸಲು ತುರ್ತು ಸೇವೆಗಾಗಿ ದೇಶದ ವೈದ್ಯಕೀಯ ವಸ್ತುಗಳನ್ನು ಉಪಕರಣಗಳನ್ನು ಮತ್ತು ರೋಗಿಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸಲು ಲೈಫ್‌ಲೈನ್ ಉಡಾನ್ವಿಮಾನಗಳನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ನಿರ್ವಹಿಸುತ್ತಿದೆ.

ಪವನ್ ಹ್ಯಾನ್ಸ್ ಲಿಮಿಟೆಡ್ ಸೇರಿದಂತೆ ಹೆಲಿಕಾಪ್ಟರ್ ಸೇವೆಗಳು ಜಮ್ಮು ಮತ್ತು ಕಾಶ್ಮೀರ, ಲಡಾಖ್, ದ್ವೀಪಗಳು ಮತ್ತು ಈಶಾನ್ಯ ರಾಜ್ಯಗಳ ಪ್ರದೇಶದಲ್ಲಿ ನಿರ್ಣಾಯಕ ವೈದ್ಯಕೀಯ ಸರಕು ಮತ್ತು ರೋಗಿಗಳನ್ನು ಸಾಗಿಸುತ್ತಿವೆ. ಪವನ್ ಹ್ಯಾನ್ಸ್ 2 ಮೇ 2020 ರವರೆಗೆ 7,729 ಕಿ.ಮೀ ದೂರವನ್ನು ಕ್ರಮಿಸಿ 2.27 ಟನ್ ಸರಕುಗಳನ್ನು ಸಾಗಿಸಿದೆ. ಈಶಾನ್ಯ ರಾಜ್ಯಗಳ ಪ್ರದೇಶ, ದ್ವೀಪ ಪ್ರದೇಶಗಳು ಮತ್ತು ಬೆಟ್ಟ ರಾಜ್ಯಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಏರ್ ಇಂಡಿಯಾ ಮತ್ತು ಐ..ಎಫ್ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರ, ಲಡಾಕ್, ಈಶಾನ್ಯ ರಾಜ್ಯಗಳ ಮತ್ತು ಇತರ ದ್ವೀಪ ಪ್ರದೇಶಗಳಿಗೆ ಸಾಗಾಟ ಮಾಡಲು ಸಹಕರಿಸಿದವು.

ದೇಶೀಯ ಕಾರ್ಗೋ ಆಪರೇಟರ್‌ಗಳಾದ ಸ್ಪೈಸ್‌ಜೆಟ್, ಬ್ಲೂ ಡಾರ್ಟ್, ಇಂಡಿಗೊ ಮತ್ತು ವಿಸ್ಟಾರ ವಿಮಾನಗಳು ವಾಣಿಜ್ಯ ಆಧಾರದ ಮೇಲೆ ಸರಕು ಹಾರಾಟವನ್ನು ನಡೆಸುತ್ತಿವೆ. ಸ್ಪೈಸ್‌ ಜೆಟ್ ಮಾರ್ಚ್ 24 ರಿಂದ ಮೇ 2, 2020 ರವರೆಗೆ 760 ಸರಕು ವಿಮಾನಗಳ ಮೂಲಕ 13,09,310 ಕಿ.ಮೀ ದೂರ ಕ್ರಮಿಸಿ 5,519 ಟನ್ ಸರಕುಗಳನ್ನು ಸಾಗಿಸಿದೆ. ಇವುಗಳಲ್ಲಿ 279 ಅಂತರರಾಷ್ಟ್ರೀಯ ಸರಕು ವಿಮಾನಗಳು. ಬ್ಲೂ ಡಾರ್ಟ್ 253 ಸರಕು ವಿಮಾನಗಳನ್ನು 2,76,768 ಕಿ.ಮೀ ದೂರ ಕ್ರಮಿಸಲು ಬಳಸಿದೆ ಮತ್ತು ಮಾರ್ಚ್ 25 ರಿಂದ ಮೇ 2, 2020 ರವರೆಗೆ 4,364 ಟನ್ ಸರಕುಗಳನ್ನು ಸಾಗಿಸಿದೆ. ಇವುಗಳಲ್ಲಿ 12 ಅಂತರರಾಷ್ಟ್ರೀಯ ಸರಕು ವಿಮಾನ ಸೇವೆಗಳು. ಇಂಡಿಗೊ ಏಪ್ರಿಲ್ 3 ರಿಂದ ಮೇ 2, 2020 ರವರೆಗೆ 87 ಸರಕು ಹಾರಾಟಗಳ ಮೂಲಕ 1,43,604 ಕಿ.ಮೀ ದೂರ ಕ್ರಮಿಸಿದೆ ಮತ್ತು ಸುಮಾರು 423 ಟನ್ ಸರಕುಗಳನ್ನು ಸಾಗಿಸಿದೆ, ಇವುಗಳಲ್ಲಿ 32 ಅಂತರರಾಷ್ಟ್ರೀಯ ವಿಮಾನ ಸೇವೆಗಳೂ ಒಳಗೊಂಡಿದೆ. ಸರ್ಕಾರಕ್ಕೆ ಉಚಿತವಾಗಿ ಸಾಗಿಸುವ ವೈದ್ಯಕೀಯ ಸರಬರಾಜುಗಳೂ ಈ ಸೇವೆಗಳಲ್ಲಿ ಸೇರಿವೆ. ಏಪ್ರಿಲ್ 19 ರಿಂದ ಮೇ 2, 2020 ರವರೆಗೆ 28 ವಿಸ್ಟಾರ ತನ್ನ ಸರಕು ವಿಮಾನಗಳ ಮೂಲಕ 28,590 ಕಿ.ಮೀ ದೂರ ಕ್ರಮಿಸಿ ಮತ್ತು ಸುಮಾರು 139 ಟನ್ ಸರಕುಗಳನ್ನು ಸಾಗಿಸಿದೆ.

ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಕೋವಿಡ್ -19 ಪರಿಹಾರ ಸಾಮಗ್ರಿಗಳ ಸಾಗಣೆಗೆ ಪೂರ್ವ ಏಷ್ಯಾದೊಂದಿಗೆ ಸರಕು ವಾಯು ಸಂಪರ್ಕವನ್ನು ಸ್ಥಾಪಿಸಲಾಯಿತು. ಪೂರ್ವ ಏಷ್ಯಾದಿಂದ ಏರ್ ಇಂಡಿಯಾ 899 ಟನ್ ವೈದ್ಯಕೀಯ ಸರಕುಗಳನ್ನು ಸಾಗಿಸಿ ತಂದಿತು.

ಮೇಲಿನವುಗಳ ಜೊತೆಗೆ, ಏಪ್ರಿಲ್ 14 ರಿಂದ ಮೇ 14, 2020ರವರೆಗೆ ಬ್ಲೂ ಡಾರ್ಟ್ ಗುವಾಂಗ್‌ವು ಮತ್ತು ಶಾಂಘೈನಿಂದ ಸುಮಾರು 114 ಟನ್ ವೈದ್ಯಕೀಯ ಸರಬರಾಜುಗಳನ್ನು ವಾಯುಯಾನ ಮೂಲಕ ಸಾಗಾಟ ಮಾಡಿದೆ. ಸ್ಪೈಸ್‌ ಜೆಟ್ ಮೇ 2, 2020 ರವರೆಗೆ ಶಾಂಘೈ ಮತ್ತು ಗುವಾಂಗ್‌ವುನಿಂದ 204 ಟನ್ ವೈದ್ಯಕೀಯ ಸರಬರಾಜುಗಳನ್ನು ಮತ್ತು ಹಾಂಗ್ ಕಾಂಗ್ ಮತ್ತು ಸಿಂಗಾಪುರದಿಂದ 16 ಟನ್ ವೈದ್ಯಕೀಯ ಸರಬರಾಜುಗಳನ್ನು ವಾಯುಯಾನ ಮೂಲಕ ಸಾಗಾಟ ಮಾಡಿದೆ.

***



(Release ID: 1620768) Visitor Counter : 208