PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 02 MAY 2020 6:29PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.pnghttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಕೋವಿಡ್-19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಇದುವರೆಗೆ, 9950 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 1061 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದಾಗಿ ನಮ್ಮ ಒಟ್ಟು ಚೇತರಿಕೆಯ ಪ್ರಮಾಣ ಶೇ. 26.65 ಕ್ಕೇರಿದೆ. ಈಗ ಒಟ್ಟು ದೃಢಪಟ್ಟ ಪ್ರಕರಣಗಳು 37,336. ಭಾರತದಲ್ಲಿ ನಿನ್ನೆಯಿಂದ 2293 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ವೈಯಕ್ತಿಕ ಸುರಕ್ಷಾ ಕಿಟ್ ಬಳಕೆಗೆ ಸಂಬಂಧಿಸಿದಂತೆ ಹೆಚ್ಚುವರಿ ಮಾರ್ಗಸೂಚಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಿನ್ನೆ ಹೊರಡಿಸಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620518

ಮೇ 4 ರಿಂದ ಅನ್ವಯವಾಗುವಂತೆ ಲಾಕ್ ಡೌನ್ ಮತ್ತೆ ಎರಡು ವಾರಗಳ ಅವಧಿಗೆ ವಿಸ್ತರಣೆ

ಸಮಗ್ರ ಪರಿಶೀಲನೆಯ ನಂತರ ಮತ್ತು ಲಾಕ್‌ಡೌನ್ ಕ್ರಮಗಳು ದೇಶದ ಕೋವಿಡ್-19 ಪರಿಸ್ಥಿತಿಯಲ್ಲಿ ಗಮನಾರ್ಹ ಲಾಭಗಳಿಗೆ ಕಾರಣವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಗೃಹ ವ್ಯವಹಾರಗಳ ಸಚಿವಾಲಯವು ಮೇ 4, 2020 ರಿಂದ ಜಾರಿಗೆ ಬರುವಂತೆ ಲಾಕ್‌ಡೌನ್ ಅನ್ನು ಇನ್ನೂ 2 ವಾರಗಳವರೆಗೆ ವಿಸ್ತರಿಸಿ. ವಿಪತ್ತು ನಿರ್ವಹಣಾ ಕಾಯ್ದೆ 2005 ಅಡಿಯಲ್ಲಿ ಇಂದು ಆದೇಶ ಹೊರಡಿಸಿದೆ. ದೇಶದ ಜಿಲ್ಲೆಗಳನ್ನು ಕೆಂಪು (ಹಾಟ್‌ಸ್ಪಾಟ್), ಹಸಿರು ಮತ್ತು ಕಿತ್ತಳೆ ವಲಯಗಳೆಂದು ವಿಂಗಡಿಸಿದ್ದು, ಅವಧಿಯಲ್ಲಿ ವಿವಿಧ ಚಟುವಟಿಕೆಗಳನ್ನು ನಿಯಂತ್ರಿಸಲು ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮಾರ್ಗಸೂಚಿಗಳಲ್ಲಿ ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಬರುವ ಜಿಲ್ಲೆಗಳಲ್ಲಿ ಸಾಕಷ್ಟು ಸಡಿಲಿಕೆ ನೀಡಲಾಗಿದೆ.

ಹೆಚ್ಚಿನ ವಿವರಗಳಿಗೆ:https://pib.gov.in/PressReleseDetail.aspx?PRID=1620234

ಎರಡು ವಾರಗಳ ಲಾಕ್ಡೌನ್ ಅವಧಿಯಲ್ಲಿ ಕಿತ್ತಳೆ ವಲಯಗಳ ವ್ಯಕ್ತಿಗಳು ಮತ್ತು ವಾಹನಗಳ ಸಂಚಾರ ಕುರಿತು ಸ್ಪಷ್ಟೀಕರಣ

ಕಿತ್ತಳೆ ವಲಯಗಳಲ್ಲಿ, ದೇಶಾದ್ಯಂತ ನಿಷೇಧಿಸಲಾದ ಚಟುವಟಿಕೆಗಳ ಜೊತೆಗೆ, ಅಂತರ-ಜಿಲ್ಲೆ ಮತ್ತು ಅಂತರ್-ಜಿಲ್ಲೆಯ ಬಸ್‌ಗಳ ಸಂಚಾರವನ್ನು ನಿಷೇಧಿಸಲಾಗಿದೆ. ನಿರ್ಬಂಧಗಳೊಂದಿಗೆ ಇತರ ಎರಡು ಚಟುವಟಿಕೆಗಳನ್ನು ಅನುಮತಿ ನೀಡಲಾಗಿದೆ:

  • ಒಬ್ಬ ಚಾಲಕ ಮತ್ತು ಇಬ್ಬರು ಪ್ರಯಾಣಿಕರೊಂದಿಗೆ ಟ್ಯಾಕ್ಸಿಗಳು ಮತ್ತು ಕ್ಯಾಬ್ ಗಳಿಗೆ ಅನುಮತಿ ನೀಡಲಾಗಿದೆ.
  • ವ್ಯಕ್ತಿಗಳು ಮತ್ತು ವಾಹನಗಳ ಅಂತರ-ಜಿಲ್ಲಾ ಸಂಚಾರಕ್ಕೆ ಅನುಮತಿ ನೀಡಲಾಗಿದೆ, ನಾಲ್ಕು ಚಕ್ರ ವಾಹನಗಳಲ್ಲಿ ಚಾಲಕನಲ್ಲದೆ ಇಬ್ಬರು ಪ್ರಯಾಣಿಕರಿಗೆ ಅನುಮತಿಸಲಾದ ಚಟುವಟಿಕೆಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ.

ಹೆಚ್ಚಿನ ವಿವರಗಳಿಗೆhttps://pib.gov.in/PressReleseDetail.aspx?PRID=1620417

ಪ್ರಯಾಣಿಕ ರೈಲು ಸೇವೆಗಳ ರದ್ದು ವಿಸ್ತರಣೆ

ಕೋವಿಡ್–19 ಹರಡುವಿಕೆ ನಿಗ್ರಹಕ್ಕೆ ಕೈಗೊಳ್ಳಲಾದ ಕ್ರಮಗಳನ್ನು ಮುಂದುವರಿಸಿರುವುದರ ಹಿನ್ನೆಲೆಯಲ್ಲಿ, ಭಾರತೀಯ ರೈಲ್ವೆಯ ಎಲ್ಲ ಪ್ರಯಾಣಿಕ ರೈಲು ಸೇವೆಗಳನ್ನು ರದ್ದುಗೊಳಿಸುವುದನ್ನು 17 ಮೇ 2020 ರ ವರೆಗೆ ವಿಸ್ತರಿಸಲಾಗಿದೆ. ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ವಿವಿಧ ಸ್ಥಳಗಳಲ್ಲಿ ಸಿಲುಕಿರುವ ಇತರ ವ್ಯಕ್ತಿಗಳನ್ನು ಅವರ ನಿಗದಿತ ಸ್ಥಳಕ್ಕೆ ತಲುಪಿಸಲು, ವಿಶೇಷ ಶ್ರಮಿಕ ರೈಲುಗಳು ರಾಜ್ಯ ಸರ್ಕಾರಗಳ ಅವಶ್ಯಕತೆಗೆ ತಕ್ಕಂತೆ ಕಾರ್ಯ ನಿರ್ವಹಿಸಲಿವೆ. ಪ್ರಸ್ತುತ ಜಾರಿಯಲ್ಲಿರುವ ಸರಕು ಸಾಗಾಣೆ ಮತ್ತು ಪಾರ್ಸೆಲ್ ರೈಲುಗಳ ಕಾರ್ಯಾಚರಣೆಗಳು ಮುಂದುವರೆಯಲಿವೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620437

ಕೃಷಿ ಕ್ಷೇತ್ರದ ಉತ್ತೇಜನಕ್ಕೆ ಮಾರ್ಗಗಳನ್ನು ಚರ್ಚಿಸಲು ಪ್ರಧಾನಿ ಮೋದಿಯವರಿಂದ ಸಭೆ

ಕೃಷಿ ಕ್ಷೇತ್ರದ ಸಮಸ್ಯೆಗಳು ಮತ್ತು ಅಗತ್ಯವಿರುವ ಸುಧಾರಣೆಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಭೆ ನಡೆಸಿದರು. ಕೃಷಿ ಮಾರುಕಟ್ಟೆ ಸುಧಾರಣೆಗಳು, ಮಾರುಕಟ್ಟೆ ಮಾಡಬಹುದಾದ ಹೆಚ್ಚುವರಿಗಳ ನಿರ್ವಹಣೆ, ರೈತರಿಗೆ ಸಾಂಸ್ಥಿಕ ಸಾಲದ ಲಭ್ಯತೆ ಮತ್ತು ಕೃಷಿ ವಲಯವನ್ನು ವಿವಿಧ ನಿರ್ಬಂಧಗಳಿಂದ ಮುಕ್ತಗೊಳಿಸಲು ಕಾನೂನಿನ ಬೆಂಬಲದ ಬಗ್ಗೆ ಹೆಚ್ಚು ಒತ್ತು ನೀಡಲಾಯಿತು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620416

ಶಿಕ್ಷಣ ಕ್ಷೇತ್ರದ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿಯವರಿಂದ ಸಭೆ

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಸಮಸ್ಯೆಗಳು ಮತ್ತು ಅಗತ್ಯ ಸುಧಾರಣೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಭೆ ನಡೆಸಿದರು. ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಆನ್‌ಲೈನ್ ತರಗತಿಗಳು, ಶಿಕ್ಷಣ ಪೋರ್ಟಲ್ ಮತ್ತು ಸಮರ್ಪಿತ ಶಿಕ್ಷಣ ಚಾನೆಲ್‌ಗಳಲ್ಲಿ ತರಗತಿವಾರು ಪ್ರಸಾರ ಮುಂತಾದ ತಂತ್ರಜ್ಞಾನದ ಬಳಕೆಯಿಂದ ಕಲಿಕೆ ಮತ್ತು ಹೊಂದಾಣಿಕೆಯನ್ನು ಹೆಚ್ಚಿಸಲು ವಿಶೇಷ ಒತ್ತು ನೀಡಲಾಯಿತು. ಬಹುಭಾಷಿಕ, 21 ನೇ ಶತಮಾನದ ಕೌಶಲ್ಯಗಳು, ಕ್ರೀಡೆ ಮತ್ತು ಕಲೆಯ ಸಂಯೋಜನೆ, ಪರಿಸರ ಸಮಸ್ಯೆಗಳು ಇತ್ಯಾದಿಗಳನ್ನು ಕೇಂದ್ರೀಕರಿಸಿದ ಹೊಸ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಸಾರ್ವತ್ರಿಕ ಪ್ರವೇಶವನ್ನು ಒದಗಿಸುವ, ಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ, ಶಿಕ್ಷಣದಲ್ಲಿ ಏಕರೂಪತೆಯನ್ನು ತರುವತ್ತ ಗಮನ ಹರಿಸಲಾಯಿತು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620303

ಹಸಿರು, ಕಿತ್ತಳೆ ಮತ್ತು ಕೆಂಪು ವಲಯಗಳಲ್ಲಿ ಸಿಎಟಿಯಿಂದ ಪ್ರಕರಣಗಳ ವಿಚಾರಣೆಗೆ ಹೊಸ ಮಾರ್ಗಸೂಚಿಗಳು

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620335

ಒಪ್ಪಂದದಲ್ಲಿ ಪರಸ್ಪರರ ನಡುವಿನ ಸಂಬಂಧವನ್ನು ಕಾಪಾಡಿಕೊಳ್ಳುವವರೆಗೂ ಆಸಕ್ತಿಯುಳ್ಳ ರಾಷ್ಟ್ರಗಳೊಂದಿಗೆ ಉಭಯತ್ರರ ಲಾಭದಾಯಕ ಸಹಭಾಗಿತ್ವಕ್ಕೆ ಭಾರತ ಮುಕ್ತವಾಗಿದೆ ಎಂದು ಶ್ರೀ ಪಿಯೂಷ್ ಗೋಯೆಲ್ ಅವರು ವಿದೇಶಿ ಮಿಷನ್ ಗೆ ಹೇಳಿದ್ದಾರೆ

ಒಪ್ಪಂದದಲ್ಲಿ ಪರಸ್ಪರರ ನಡುವಿನ ಸಂಬಂಧವನ್ನು ಕಾಪಾಡಿಕೊಳ್ಳುವವರೆಗೂ ಆಸಕ್ತಿಯುಳ್ಳ ರಾಷ್ಟ್ರಗಳೊಂದಿಗೆ ಉಭಯತ್ರರ ಲಾಭದಾಯಕ ಸಹಭಾಗಿತ್ವಕ್ಕೆ ಭಾರತ ಮುಕ್ತವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕ ಸಚಿವ ಶ್ರೀ ಪಿಯೂಷ್ ಗೋಯೆಲ್ ಅವರು ಹೇಳಿದ್ದಾರೆ. ನವದೆಹಲಿಯಲ್ಲಿ ವಿದೇಶಿ ಮಿಷನ್ ಗಳೊಂದಿಗೆ ವಿಡಿಯೊ ಕಾನ್ಫೆರೆನ್ಸ್ ಮೂಲಕ ಮಾತನಾಡಿದ ಅವರು ಭಾರತದೊಂದಿಗೆ ವ್ಯವಹರಿಸಲು ಯೋಜಿಸುತ್ತಿರುವ ಆಸಕ್ತ ರಾಷ್ಟ್ರಗಳನ್ನು ಸ್ವಾಗತಿಸಿದರು. ಯಾವುದೇ ಉಭಯ ಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕುವಾಗ ಭಾರತವು “ನ್ಯಾಯಯುತ ವ್ಯವಹಾರಗಳಿಗೆ ಮತ್ತು ಪರಸ್ಪರರ ವಾಣಿಜ್ಯ ಸಂಬಂಧಗಳಿಗೆ” ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ ಎಂದು ಸಚಿವರು ಹೇಳಿದರು. ಪ್ರಾದೇಶಿಕ ಆರ್ಥಿಕ ಸಮಗ್ರ ಸಹಭಾಗಿತ್ವದಲ್ಲಿ (ಆರ್ ಸಿ ಪಿ) ಭಾರತ ಭಾಗವಹಿಸದಿರಲು ಇದೇ ಕಾರಣವಾಗಿದೆ. ಉಭಯ (ಬಹುಪಕ್ಷೀಯ) ಒಪ್ಪಂದಗಳಿಗೆ ರೂಪು ರೇಷೆ ನೀಡಲು ಮತ್ತು ಡಿಜಿಟಲ್ ಸಂಪರ್ಕ ಬೆಳೆಸಲು ಇದು ಅತ್ಯುತ್ತಮ ಸಮಯವಾಗಿದೆ ಎಂದು ಅವರು ಸಲಹೆ ನೀಡಿದರು. ಕೊರೊನಾ ವೈರಾಣು ಹರಡುವಿಕೆ ವಿರುದ್ಧ ಜೊತೆಗೂಡಿ ಪ್ರಯತ್ನಗಳನ್ನು ಮಾಡಲು ಇತರ ದೇಶಗಳಿಗೂ ಸಚಿವರು ಮನವಿ ಮಾಡಿದರು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620452

ಬಿಹಾರದ ..ಎಸ್. ನಿರ್ವಹಣೆ ಸಿದ್ಧತೆಗಳನ್ನು ಡಾ. ಹರ್ಷವರ್ಧನ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಪರಿಶೀಲಿಸಿದರು

ಕೋವಿಡ್- 19 ಸಮಯದಲ್ಲಿ ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ಪ್ರಕರಣಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಅದರ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಎಲ್ಲ ನೆರವು ನೀಡುವುದಾಗಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಬಿಹಾರ ರಾಜ್ಯ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620411

ಸುರಕ್ಷತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು, ಲಾಕ್ಡೌನ್ ಸಮಯದಲ್ಲಿ ಭಾರತೀಯ ರೈಲ್ವೆಯ ಹಿಂಬದಿ ಯೋಧರಿಂದ ಬಾಕಿ ಉಳಿದಿರುವ ಪ್ರಮುಖ ನಿರ್ವಹಣಾ ಕಾರ್ಯಗಳ ಕೆಲಸ

ಲಾಕ್‌ಡೌನ್ ಸಮಯದಲ್ಲಿ ಭಾರತೀಯ ರೈಲ್ವೆಯ ಹಿಂಬದಿ ಯೋಧರು ಯಾರ್ಡ್ ಪುನರ್ರಚನೆ, ಕ್ರಾಸ್‌ಒವರ್ ನವೀಕರಣ, ಸೇತುವೆಗಳ ರಿಪೇರಿ ಮುಂತಾದ ದೀರ್ಘಾವಧಿಯ ಬಾಕಿ ಇರುವ ನಿರ್ವಹಣಾ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಪಾರ್ಸೆಲ್ ರೈಲುಗಳು ಮತ್ತು ಸರಕು ಸಾಗಣೆ ರೈಲುಗಳ ಮೂಲಕ ಎಲ್ಲಾ ಅಗತ್ಯ ಸರಕುಗಳ ಸರಬರಾಜು ಸರಪಳಿಗಳನ್ನು ಖಾತರಿಪಡಿಸುವುದರ ಹೊರತಾಗಿಯೂ, ಕೋವಿಡ್-19 ಕಾರಣದಿಂದಾಗಿ ಪ್ರಯಾಣಿಕರ ರೈಲು ಸೇವೆಗಳನ್ನು ಸ್ಥಗಿತಗೊಳಿಸಿರುವ ಲಾಕ್ ಡೌನ್ ಅವಧಿಯಲ್ಲಿ ಭಾರತೀಯ ರೈಲ್ವೆ ದೀರ್ಘಾವಧಿಯ ಬಾಕಿ ಉಳಿದಿರುವ ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620395

ಮುಂಚೂಣಿ ಯೋಧರಿಂದ ಕೊರೊನಾ ಯೋಧರಿಗೆ ಗೌರವ ಸಲ್ಲಿಕೆ ಮತ್ತು ಹೋರಾಟಕ್ಕೆ ಬೆಂಬಲ ಮುಂದುವರೆಸಲು ಪಣ

ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್, ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್. ಬಹದೂರಿಯಾ ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಇದರಲ್ಲಿ ಕೊರೊನಾ ಯೋಧರ ಪ್ರಯತ್ನಗಳಿಗೆ ಗೌರವ ಸಲ್ಲಿಸಿದರು ಮತ್ತು ಮುಂದಿನ ದಿನಗಳಲ್ಲಿಯೂ ಅವರಿಗೆ ಬೆಂಬಲವನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದರು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620530

ಥೈಲ್ಯಾಂಡ್ ಪ್ರಧಾನಮಂತ್ರಿ ಜನರಲ್ (ನಿವೃತ್ತ) ಪ್ರಯೂತ್ ಚಾನ್ ಚಾ ಅವರೊಂದಿಗೆ ಪ್ರದಾನಿ ನರೇಂದ್ರ ಮೋದಿ ದೂರವಾಣಿ ಮಾತುಕತೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಥೈಲ್ಯಾಂಡ್ ಪ್ರಧಾನಿ ಜನರಲ್ (ನಿವೃತ್ತ) ಪ್ರಯೂತ್ ಚಾನ್-ಒ-ಚಾ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು.ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸಲು ತಮ್ಮ ದೇಶಗಳಲ್ಲಿ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಉಭಯ ನಾಯಕರು ಮಾಹಿತಿಯನ್ನು ಹಂಚಿಕೊಂಡರು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620303

ದೇಶಾದ್ಯಂತದ ಜನರಿಗೆ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಲು ಲೈಫ್ಲೈನ್ ಉಡಾನ್ ಅಡಿಯಲ್ಲಿ 422 ವಿಮಾನಗಳ ಕಾರ್ಯನಿರ್ವಹಣೆ

ಏರ್ ಇಂಡಿಯಾ, ಅಲೈಯನ್ಸ್ ಏರ್, ಐಎಎಫ್ ಮತ್ತು ಖಾಸಗಿ ವಾಹಕಗಳು ಲೈಫ್‌ಲೈನ್ ಉಡಾನ್ ಅಡಿಯಲ್ಲಿ 422 ವಿಮಾನಗಳನ್ನು ಕಾರ್ಯಾಚರಿಸಿವೆ. ಈ ಪೈಕಿ 244 ವಿಮಾನಗಳನ್ನು ಏರ್ ಇಂಡಿಯಾ ಮತ್ತು ಅಲೈಯನ್ಸ್ ಏರ್ ನಿರ್ವಹಿಸಿವೆ. ಇಲ್ಲಿಯವರೆಗೆ ಸಾಗಾಟ ಮಾಡಲಾಗಿರುವ ಸರಕು ಸುಮಾರು 790.22 ಟನ್. ಇಲ್ಲಿಯವರೆಗೆ ಲೈಫ್‌ಲೈನ್ ಉಡಾನ್ ವಿಮಾನಗಳು ಕ್ರಮಿಸಿರುವ ವೈಮಾನಿಕ ದೂರ 4,13,538 ಕಿ.ಮೀ. ಕೋವಿಡ್-19 ವಿರುದ್ಧದ ಭಾರತದ ಸಮರವನ್ನುಬೆಂಬಲಿಸಲು ಅಗತ್ಯ ವೈದ್ಯಕೀಯ ಸರಕುಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸಲು ‘ಲೈಫ್‌ಲೈನ್ ಉಡಾನ್’ ವಿಮಾನಗಳನ್ನು ನಾಗರಿಕ ವಿಮಾನಯಾನ ಸಚಿವಾಲಯವು ಕಾರ್ಯಾಚರಿಸುತ್ತಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620525

ಕೋವಿಡ್-19 ಹಿನ್ನೆಲೆಯಲ್ಲಿ 49 ಕಿರು ಅರಣ್ಯ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದ ಸರ್ಕಾರ

ಬುಡಕಟ್ಟು ಜನಾಂಗದವರ ಜೀವನೋಪಾಯದ ಮೇಲೆ ಉತ್ತಮ ಪರಿಣಾಮ ಬೀರುವ ನಿರ್ಧಾರವೊಂದಲ್ಲಿ ಕೇಂದ್ರ ಸರ್ಕಾರವು ಇಂದು 49 ಕಿರು ಅರಣ್ಯ ಉತ್ಪಾದನೆಗಳ (ಎಂಎಫ್‌ಪಿ) ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಪರಿಷ್ಕರಿಸಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620414

 

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ

    • ಛತ್ತೀಸಗಢ: ಉಳಿದಲ್ಲೇ ಉಳಿದಿರುವ ವಲಸಿಗರು, ವಿದ್ಯಾರ್ಥಿಗಳು, ಪ್ರವಾಸಿಗರು ಮೊದಲಾದವರು ನೋಂದಾಯಿಸಿಕೊಳ್ಳಲು ಛತ್ತೀಸಗಢ ಆಡಳಿತ ಪೊರ್ಟಲ್ ಅಭಿವೃದ್ಧಿಪಡಿಸಿದೆ. ಇದನ್ನು ಛತ್ತೀಸಗಢ ಆಡಳಿತದ ಅಂತರ್ಜಾಲ ತಾಣ http://Chandigarh.gov.in ದಿಂದ ಅಥವಾ ಸಂಪರ್ಕ http://admser.chd.nic.in/migrant ಮೂಲಕ ಪ್ರವೇಶಿಸಬಹುದು. ಉಳಿದಲ್ಲೇ ಇರುವ ವ್ಯಕ್ತಿ ಕೆಲವು ಮೂಲಭೂತ ವಿವರಗಳನ್ನು ಭರ್ತಿ ಮಾಡಿ, ಅವರ ಮೊಬೈಲ್ ಗೆ ಓಟಿಪಿ ಬಂದ ಬಳಿಕ ಸಲ್ಲಿಸಬೇಕು. ಸ್ವಯಂ ಸಲ್ಲಿಕೆ ಮಾಡಲಾಗದವರ ಅನುಕೂಲಕ್ಕಾಗಿ ಆಡಳಿತದ ಕಾಲ್ ಸೆಂಟರ್ ಸಹಾಯವಾಣಿ ಸಂಖ್ಯೆ 1800-180-2067 ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಲ್ಲಿಗೆ ಅವರು ಕರೆ ಮಾಡಿ (ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ) ಮಾಹಿತಿ ಸಲ್ಲಿಸಬಹುದು. 50,500 ಅರ್ಹ ಕುಟುಂಬಗಳಿಗೆ ಪಿಎಂಜಿಕೆಎವೈ ಅಡಿಯಲ್ಲಿ ಗೋಧಿ ಮತ್ತು ಬೇಳೆಯನ್ನು ಈಗಾಗಲೇ ವಿತರಿಸಲಾಗಿದೆ, ಮೂಲಕ ಕೇಂದ್ರಾಡಳಿತ ಪ್ರದೇಶ ಚಂಡೀಗಢದಲ್ಲಿ ಅರ್ಹ ಕುಟುಂಬಗಳ ಶೇ.80 ಗುರಿ ಸಾಧನೆ ಮಾಡಲಾಗಿದೆ.
    • ಪಂಜಾಬ್: ಕೋವಿಡ್ -19 ಮತ್ತೆ ಹಬ್ಬದಂತೆ ತಡೆಯಲು ಪಂಜಾಬ್ ಸರ್ಕಾರ ತಾಂತ್ರಿಕ ಬೆಂಬಲ ಮತ್ತು ತಜ್ಞತೆಗಾಗಿ ಇಸ್ರೇಲ್ ಬೆಂಬಲ ಕೋರಿದೆ. ನಿಟ್ಟಿನಲ್ಲಿ ಇನ್ವೆಸ್ಟ್ ಪಂಜಾಬ್, ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯೊಂದಿಗೆ ವಿಶೇಷ ವೆಬಿನರ್ ವ್ಯವಸ್ಥೆ ಮಾಡಿತ್ತು. ಇದರಲ್ಲಿ ಕೋವಿಡ್ 19 ನಿರ್ವಹಣೆಯಲ್ಲಿ ಇಸ್ರೇಲಿನ ತಂತ್ರಜ್ಞಾನ ಮುಂದವರಿಕೆಗಳ ಬಗ್ಗೆ ಗಮನ ಹರಿಸಲಾಯಿತು. ಪಂಜಾಬ್ ಸರ್ಕಾರ ಸಿಬ್ಬಂದಿಯ ಅಡಚಣೆ ತಪ್ಪಿಸಲು ಪೆಟ್ರೋಲ್ ಪಂಪ್ ಮ್ಯಾನೇಜರ್/ಆಪರೇಟರ್ ಗಳಿಗೆ ನಿರ್ದಿಷ್ಟ ಸಮಯದಲ್ಲಿ ಮತ್ತು ಪಾಳಿಯಲ್ಲಿ ಮಾತ್ರ ಅಗತ್ಯ ಸಿಬ್ಬಂದಿಯನ್ನು ಮಾತ್ರ ನಿಯುಕ್ತಿಗೊಳಿಸಲು ಸೂಚಿಸಿದೆ.
    • ಹರಿಯಾಣ: ಹರಿಯಾಣ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಆರೋಗ್ಯ ಇಲಾಖೆಯೊಂದಿಗೆ ನಾಗರಿಕರಿಗೆ ಎಲ್ಲ 87 ಪುರಸಭೆಗಳ ವ್ಯಾಪ್ತಿಯಲ್ಲಿ ಲಾಕ್ ಡೌನ್ ಅವಧಿಯಲ್ಲಿ ಅಗತ್ಯ ಸೇವೆ ಒದಗಿಸುವ ಭರವಸೆ ನೀಡಿದೆ. ಎಲ್ಲ ಪುರಸಭೆಗಳೂ ಶೇ.100ರಷ್ಟು ಮನೆ ಮನೆ ಬಾಗಿಲಿಂದ ತ್ಯಾಜ್ಯ ತೆಗೆದುಕೊಂಡು ಹೋಗುವುದನ್ನು ಖಾತ್ರಿಪಡಿಸಿದ್ದು, ಕಾರ್ಯದಲ್ಲಿ ತೊಡಗಿರುವ ಜನರು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದೂ ಸೂಚಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಹರಿಯಾಣದಲ್ಲಿನ ಕೈಗಾರಿಕಾ ಘಟಕಗಳು ತಮ್ಮ ಕಾರ್ಯಾಚರಣೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಕುಸಿದ ಆರ್ಥಿಕ ಚಟುವಟಿಕೆಯಿಂದಾಗಿ ತಮ್ಮ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಅನುಕೂಲವಾಗುವಂತೆ, ಹರಿಯಾಣ ಸರ್ಕಾರವು "ಹರಿಯಾಣ ಎಂ.ಎಸ್.ಎಂ. ಪುನರುಜ್ಜೀವನ ಬಡ್ಡಿ ಪ್ರಯೋಜನ ಯೋಜನೆ" ಯನ್ನು ರೂಪಿಸಿದೆ. ಇದು ಎಂ.ಎಸ್.ಎಂ.. ಘಟಕಗಳಿಗೆ ಆರ್ಥಿಕ ನೆರವು ಒದಗಿಸಲು, ಮೂಲಕ ಅವರು ಖಾಯಂ/ಗುತ್ತಿಗೆ ಸಿಬ್ಬಂದಿ ಮತ್ತು ಕಾರ್ಮಿಕರು ಸೇರಿದಂತೆ ಎಲ್ಲ ನೌಕರರಿಗೆ ವೇತನ ಪಾವತಿಸಲು ಮತ್ತು ತಮ್ಮ ಅಗತ್ಯ ವೆಚ್ಚ ಭರಿಸಲು ಅನುಕೂಲವಾಗಲಿದೆ.
    • ಹಿಮಾಚಲ ಪ್ರದೇಶ: ಕರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಜನರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ರಾಜ್ಯ ಆಯುರ್ವೇದ ಇಲಾಖೆ ಸಿದ್ಧಪಡಿಸಿರುವ ಆಯುರ್ವೇದ ಔಷಧಿ ಅಂದರೆ ಮಧುಯಸ್ಯಾಡಿ ಕಷಾಯಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದರು. ಆಯುರ್ವೇದದ ಉತ್ಪನ್ನ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ ಮತ್ತು ಇದನ್ನು ಎಲ್ಲ ಕೊರೊನಾ ಯೋಧರಿಗೆ ಅಂದರೆ ರಾಜ್ಯದ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ಪೊಲೀಸ್, ಹಿರಿಯ ನಾಗರಿಕರು ಮತ್ತು ಕೊರೊನಾದಿಂದ ಚೇತರಿಸಿಕೊಂಡವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಮಧ್ಯೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಮುಖ್ಯ ವೈದ್ಯಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿಯವರು ಇತರ ರಾಜ್ಯಗಳಿಂದ ಹಿಮಾಚಲ ಪ್ರದೇಶಕ್ಕೆ ಪ್ರವೇಶಿಸುವ ಜನರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಸಕ್ರಿಯ ಪ್ರಕರಣ ಪತ್ತೆ ಅಭಿಯಾನದ ಮಾದರಿಯಲ್ಲಿ ವಿಶೇಷ ಅಭಿಯಾನವನ್ನು ಪ್ರಾರಂಭಿಸಲಾಗುವುದು ಮತ್ತು ವ್ಯಕ್ತಿಗಳನ್ನು ಮನೆಯಲ್ಲ ಪ್ರತ್ಯೇಕವಾಗಿ ಇರಿಸಬೇಕು ಎಂದು ಹೇಳಿದರು.
    • ಕೇರಳ: ಲಾಕ್ಡೌನ್ ಶಿಷ್ಟಾಚಾರಗಳನ್ನು ಗಾಳಿಗೆ ತೂರಿ ಗ್ರಾಹಕರು ಮಳಿಗೆಗಳಿಗೆ ಹೋಗಬಹುದಾದ್ದರಿಂದ ರಾಜ್ಯದಲ್ಲಿ ಈಗ ಮದ್ಯದಂಗಡಿಗಳನ್ನು ತೆರೆಯದಿರಲು ರಾಜ್ಯ ನಿರ್ಧರಿಸಿದೆ. ಹಸಿರು ವಲಯಗಳಲ್ಲಿ ಯಾವುದೇ ಬಸ್ ಸೇವೆ ಇರುವುದಿಲ್ಲ. ಕೇಂದ್ರದ ನಿರ್ದೇಶನದಂತೆ ರಾಜ್ಯದ ಕೋವಿಡ್ ವಲಯಗಳನ್ನು ಪುನರ್ರಚಿಸಲಾಗಿದೆ. ಮತ್ತೈದು ತಡೆರಹಿತ ವಿಶೇಷ ರೈಲುಗಳು ರಾಂಚಿ, ಭುವನೇಶ್ವರ ಮತ್ತು ಪಟ್ನಾಗೆ ವಲಸೆ ಕಾರ್ಮಿಕರನ್ನು ತಲುಪಿಸಲು ಇಂದು ಕೇರಳದಿಂದ ತೆರಳಿವೆ. ಮಧ್ಯೆ ಮತ್ತೆ ಮೂರು ಕೇರಳಿಗರು ಕೊಲ್ಲಿ ರಾಷ್ಟ್ರಗಳಲ್ಲಿ ಸಾವನ್ನಪ್ಪಿದ್ದು, ವಿದೇಶದಲ್ಲಿ ಮೃತಪಟ್ಟ ಕೇರಳಿಗರ ಸಂಖ್ಯೆ 70 ದಾಟಿದೆ. ರಾಜ್ಯದಲ್ಲಿ ಒಟ್ಟು ದೃಢಪಟ್ಟ ಪ್ರಕರಣಗಳು 497, ಸಕ್ರಿಯ ಪ್ರಕರಣಗಳು 102.
    • ತಮಿಳುನಾಡು: 176 ಹೊಸ ಪ್ರಕರಣಗಳು ನಿನ್ನೆ ದಾಖಲಾಗಿದ್ದು, ಚೆನ್ನೈ ತಮಿಳುನಾಡಿನ ಹಾಟ್ ಸ್ಪಾಟ್ ಆಗಿಯೇ ಉಳಿದಿದೆ. ರಾಜ್ಯದಲ್ಲಿ ಕೋವಿಡ್ 19 ಸಂಖ್ಯೆ 2526 ತಲುಪಿದೆ. ರಾಜ್ಯ ಸರ್ಕಾರ ಹಿರಿಯ ಐಎಎಸ್ ಅಧಿಕಾರಿ ಜೆ ರಾಧಾಕೃಷ್ಣನ್ ಅವರನ್ನು ಚೆನ್ನೈ ಪ್ರಯತ್ನಗಳ ಮೇಲೆ ಗಮನ ಹರಿಸಲು ವಿಶೇಷ ನೋಡಲ್ ಅಧಿಕಾರಿಯಾಗಿ ನೇಮಿಸಿದೆ. ಚೆನ್ನೈನ ಎಂಎಂಸಿಯಲ್ಲಿ ರಕ್ತದ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಚೆನ್ನೈ ಒಳಚರಂಡಿಗಳಿಂದ ಸಂಗ್ರಹಿಸಲಾದ ಮೆಟ್ರೋ ನೀರಿನ ಪರೀಕ್ಷೆಗಳು ಆರ್.ಎನ್.. ಸೋಂಕು ಇರುವುದನ್ನು ತೋರಿಸಿದೆ. ಚೆನ್ನೈನಲ್ಲಿ 1083 ಪ್ರಕರಣಗಳಿದ್ದು, 1182 ಸಕ್ರಿಯ ಪ್ರಕರಣಗಳಾಗಿವೆ.
    • ಕರ್ನಾಟಕ: ಇಂದು ಈವರೆಗೆ 9 ಹೊಸ ಪ್ರಕರಣಗಳು ದೃಢಪಟ್ಟಿವೆ. ತುಮಕೂರು ಮತ್ತು ವಿಜಯಪುರದಲ್ಲಿ ತಲಾ 2, ಬೆಳಗಾವಿ, ಬೆಂಗಳೂರು, ಚಿಕ್ಕಬಳ್ಳಾಪುರ, ಬೀದರ್, ಬಾಗಲಕೋಟೆಯಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. ದಾವಣಗೆರೆ, ಬೀದರ್ ಮತ್ತು ಬೆಂಗಳೂರಿನಲ್ಲಿ ಇಂದು ತಲಾ ಒಬ್ಬರಂತು ಮೂವರು ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 225 ಜನರು ಬಿಡುಗಡೆಯಾಗಿದ್ದಾರೆ. ಒಟ್ಟು ಪ್ರಕರಣಗಳು 598, ಮೃತಪಟ್ಟವರು 25.
    • ಆಂಧ್ರಪ್ರದೇಶ: ರಾಜ್ಯ ಶ್ರೀಕಾಕುಲಂ ಮತ್ತು ಪ್ರಕಾಶಂ ಜಿಲ್ಲೆಗಳಲ್ಲಿ ತಲಾ ಒಂದರಂತೆ ಕೋವಿಡ್ ಪರೀಕ್ಷೆಗೆ ಮತ್ತೆರೆಡು ಹೊಸ ಪ್ರಯೋಗಾಲಯಗಳನ್ನು ಸೇರ್ಪಡೆ ಮಾಡಿದೆ. ಒಟ್ಟು ಪ್ರಯೋಗಾಲಯಗಳ ಸಂಖ್ಯೆ ಈಗ 10ಆಗಿದೆ. ಗುಜರಾತ್ ನಿಂದ ಆಂಧ್ರಪ್ರದೇಶಕ್ಕೆ ಆಗಮಿಸಿದ ಉಳಿದಲ್ಲೇ ಉಳಿದಿದ್ದ ಮೀನುಗಾರರನ್ನು ಪರೀಕ್ಷಿಸಲಾಗಿದ್ದು, ಯಾರಲ್ಲಿ ಸೋಂಕು ಇಲ್ಲವೋ ಅವರನ್ನು ಮಾತ್ರ ಮನೆಗೆ ಕಳುಹಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 62 ಹೊಸ ಪ್ರಕರಣಗಳು ದಾಖಲಾಗಿದ್ದು, 38 ಜನರು ಬಿಡುಗಡೆಯಾಗಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 1525 ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1051, ಗುಣವಾದವರು 441, ಸಾವು 33, ಸೋಂಕಿತರ ಜಿಲ್ಲೆಗಳಲ್ಲಿ ಕರ್ನೂಲ್ 436, ಗುಂಟೂರ್ 308, ಕೃಷ್ಣ 258, ನೆಲ್ಲೂರು 90, ಚಿತ್ತೂರು 80 ಪ್ರಕರಣ ಹೊಂದಿವೆ.
    • ತೆಲಂಗಾಣ: ತೀವ್ರ ಬಾಧಿತವಾಗಿರುವ ಸಣ್ಣ, ಮಧ್ಯಮ ಉದ್ದಿಮೆಗಳ ಉಳಿವಿಗಾಗಿ ನೇರ ಹಣಕಾಸು ನೆರವು ನೀಡುವಂತೆ ಕೇಂದ್ರವನ್ನು ಕೇಳಿದೆ. ಲಾಕ್ ಡೌನ್ ಮಾನದಂಡಗಳನ್ನು ಸಡಿಲಿಸುವುದರೊಂದಿಗೆ ವಿವಿಧ ಕೈಗಾರಿಕೆಗಳನ್ನು ನಿಧಾನವಾಗಿ ತೆರೆಯುತ್ತಿರುವಾಗ ವಲಸೆ ಕಾರ್ಮಿಕರ ಮನೆಯತ್ತ ಪಯಣ ರಾಜ್ಯ ಸರ್ಕಾರವನ್ನು ಸಿಲುಕಿಸಿದೆ. ಇಲ್ಲಿಯವರೆಗೆ ಒಟ್ಟು ವರದಿಯಾದ ಸೋಂಕಿತ ಪ್ರಕರಣಗಳು 1044, ಸಕ್ರಿಯ ಪ್ರಕರಣಗಳು 552, ಚೇತರಿಸಿಕೊಂಡವರು 464 ಮತ್ತು ಸಾವು 28.
    • ಅರುಣಾಚಲ ಪ್ರದೇಶ: ದೆಹಲಿಯಿಂದ ಏರ್ ಇಂಡಿಯಾ ಸರಕು ಸಾಗಣೆ ವಿಮಾನದ ಮೂಲಕ ಗುವಾಹತಿಗೆ ಕೋವಿಡ್ 19 ವಿರುದ್ಧ ಹೋರಾಟ ನಡೆಸಲು 1 ಟನ್ ಪಿಪಿಇಗಳು, ವಿಟಿಎಂ ಕಿಟ್ ಮತ್ತು ಔಷಧ ಆಗಮಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
    • ಅಸ್ಸಾಂ: ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ತಮ್ಮ ಜೀವವನ್ನು ಅಪಾಯದಲ್ಲಿಟ್ಟುಕೊಂಡು ಕೋವಿಡ್ 19 ಬಗ್ಗೆ ಸುದ್ದ ನೀಡುತ್ತಾ ಸಮಾಜಕ್ಕೆ ಮಾಧ್ಯಮಗಳು ನೀಡುತ್ತಿರುವ ನಿಸ್ವಾರ್ಥ ಸೇವೆಗೆ ಧನ್ಯವಾದ ಅರ್ಪಿಸಿದ್ದಾರೆ.
    • ಮಣಿಪುರ: ಸಿಆರ್‌.ಪಿಎಫ್ ಫೀಲ್ಡ್ ಬೆಟಾಲಿಯನ್ಗಳು ಈವರೆಗೆ 15,840 ಜನರಿಗೆ ಸುರಕ್ಷತಾ ಸಾಧನಗಳಾದ (ಕೈಗವಸುಗಳು, ಮುಖವಾಡಗಳು ಮತ್ತು ಪಿಪಿಇ) ವಿತರಿಸಿದೆ; 9,187 ಜನರಿಗೆ ಸ್ಯಾನಿಟೈಜರ್, ಸಾಬೂನು ಮತ್ತು ಇತರ ನೈರ್ಮಲ್ಯ ವಸ್ತುಗಳು ಮತ್ತು 8,430 ಜನರಿಗೆ ಆಹಾರ ಪದಾರ್ಥಗಳು, ಪಡಿತರ ಮತ್ತು ಕಾಂಡಿಮೆಂಟ್ಸ್ ವಿತರಿಸಿವೆ.
    • ಮೇಘಾಲಯ: ..ಎಫ್. ಹೆಲಿಕಾಪ್ಟರ್ ಗಳು ಕೊರೊನಾ ಯೋಧರಿಗೆ ಕೃತಜ್ಞತೆ ಅರ್ಪಿಸಲು ನಾಳೆ ಬೆಳಗ್ಗೆ 10.30ಕ್ಕೆ ನಾಗರಿಕ ಆಸ್ಪತ್ರೆಗಳ ಮೇಲೆ ಪುಷ್ಪವೃಷ್ಟಿಗರೆಯಲಿವೆ.
    • ಮಿಜೋರಾಂ: ಮುಖ್ಯಮಂತ್ರಿ ಮಂತ್ರಿ ಪರಿಷತ್ತಿನೊಂದಿಗೆ ಸಭೆ ನಡೆಸಿ, ರಾಜ್ಯ ಸರ್ಕಾರ ಕೋವಿಡ್ ಬಿಕ್ಕಟ್ಟಿನ ವೇಳೆ ಜಾರಿಗೆ ತಂದಿರುವ ಕ್ರಮಗಳ ಕುರಿತಂತೆ ಪರಿಶೀಲನೆ ನಡೆಸಿದರು.
    • ನಾಗಾಲ್ಯಾಂಡ್: ಆರೋಗ್ಯ ಸಚಿವರು ಕೋವಿಡ್ 19 ಮಾದರಿಗಳ ಪ್ರಾಥಮಿಕ ತಪಾಸಣೆ ಮಾಡುವ ಟ್ರೂನಾಟ್ ಯಂತ್ರವನ್ನು ಕೊಕೋಕ್ ಚುಂಗ್ ಜಿಲ್ಲಾ ಆಸ್ಪತ್ರೆಯಲ್ಲ ಉದ್ಘಾಟಿಸಿದರು.
    • ಸಿಕ್ಕಿಂ: ದೂರದ ಪ್ರದೇಶಗಳನ್ನು ಸಂಪರ್ಕಿಸಲು ಮತ್ತು ವ್ಯವಸ್ಥಿತ ಅಭಿವೃದ್ಧಿಗೆ ಸಹಾಯ ಮಾಡಲು ರಾಜ್ಯವು ತನ್ನದೇ ಆದ ಸ್ವತಂತ್ರ ಬಿಎಸ್‌.ಎನ್ಎಲ್ ನಿಯಂತ್ರಣ ಕೇಂದ್ರವನ್ನು ಪಡೆಯಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
    • ತ್ರಿಪುರಾ: ರಾಜ್ಯದ ಒಟ್ಟು ಕೋವಿಡ್ 19 ಪ್ರಕರಣಗಳು 4, ಇಬ್ಬರು ಬಿಡುಗಡೆಯಾಗಿದ್ದು, 2 ಸಕ್ರಿಯ ಪ್ರಕರಣ ಇವೆ.
    • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ 1003 ಹೊಸ ಪ್ರಕರಣಗಳು ಒಂದೇ ದಿನದಲ್ಲಿ ದಾಖಲಾಗಿದ್ದು, ಮುಂಬೈ ಒಂದರಲ್ಲೇ 741 ಪ್ರಕರಣ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಒಂದೇ ದಿನ ಅತಿ ಹೆಚ್ಚು 26 ಸಾವು ಸಂಭವಿಸಿದ್ದು ಒಟ್ಟು ಸಾವಿನ ಸಂಖ್ಯೆ 485ಕ್ಕೆ ಏರಿದೆ. ಒಟ್ಟು ಸೋಂಕಿತ ಪ್ರಕರಣಗಳು ಮಹಾರಾಷ್ಟ್ರದಲ್ಲೀಗ 11,506 ತಲುಪಿದೆ. ಮುಂಬೈನಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆಯೇ 7625, ಮಹತ್ವದ ಕ್ರಮದಲ್ಲಿ ಮಹಾರಾಷ್ಟ್ರ ಸರ್ಕಾರ ಈಗ ಎಲ್ಲ ಬಡವರಿಗೆ ವಿಮಾ ಯೋಜನೆ ಮಹಾತ್ಮಾ ಜ್ಯೋತಿಬಾ ಪುಲೆ ಜನ್ ಆರೋಗ್ಯ ಯೋಜನೆ (ಎಂಜೆಪಿಜೆಎವೈ) ಘೋಷಿಸಿದೆ, ಎಲ್ಲ ಜನರಿಗೂ ಪಡಿತರ ಚೀಟಿ ಮತ್ತು ನಿವಾಸಿ ಪ್ರಮಾಣಪತ್ರವನ್ನು ರಾಜ್ಯ ನೀಡುತ್ತಿದೆ. ಒಟ್ಟಾರೆ 1000 ಚಿಕಿತ್ಸೆಗಳು ವರ್ಷದಲ್ಲಿ 1.5 ಲಕ್ಷ ರೂ. ವೆಚ್ಚದಲ್ಲಿ ರಾಜ್ಯದಲ್ಲಿ 900 ಪಟ್ಟಿ ಮಾಡಲಾದ ಆಸ್ಪತ್ರೆಗಳಲ್ಲಿ ದೊರಕಲಿದೆ.
    • ಗುಜರಾತ್: ಗುಜರಾತ್ ನಲ್ಲಿ ಮತ್ತೆ 302 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಕೋವಿಡ್ ರೋಗಿಗಳ ಸಂಖ್ಯೆ 4,721ಕ್ಕೆ ಏರಿದೆ. ಪೈಕಿ 735 ಜನರು ಚೇತರಿಸಿಕೊಂಡಿದ್ದರೆ, 236ಜನರು ಸಾವಿಗೀಡಾಗಿದ್ದಾರೆ. ಹೆಚ್ಚುತ್ತಿರುವ ಪ್ರಕರಣಗಳು ಗುಜರಾತ್ 9 ಜಿಲ್ಲೆಗಳನ್ನು ಕೆಂಪು ವಲಯಕ್ಕೆ ತಂದಿವೆ. ಇದರಲ್ಲಿ ಅಹಮದಾಬಾದ್, ಸೂರತ್, ವಡೋದರಾ ಮತ್ತು ಗಾಂಧೀನಗರ ಸೇರಿದೆ.
    • ರಾಜಾಸ್ಥಾನ: ರಾಜ್ಯದಲ್ಲಿ ಶನಿವಾರ 12 ಹೊಸ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 2678 ಆಗಿದೆ. ಪೈಕಿ 1116 ಜನರು ಚೇತರಿಸಿಕೊಂಡಿದ್ದರೆ, 65 ಜನರು ಸಾವಿಗೀಡಾಗಿದ್ದಾರೆ.
    • ಮಧ್ಯಪ್ರದೇಶ: 90 ಹೊಸ ಪ್ರಕರಣಗಳೊಂದಿಗೆ ಕೊರೊನಾ ಒಟ್ಟು ಸಂಖ್ಯೆ ಮಧ್ಯಪ್ರದೇಶದಲ್ಲಿ 2719 ತಲುಪಿದೆ. ಪೈಕಿ 524 ಜನರು ಗುಣಮುಖರಾಗಿದ್ದು, 145 ಜನರು ಸಾವಿಗೀಡಾಗಿದ್ದಾರೆ.
    • ಛತ್ತೀಸಗಢ: ಛತ್ತೀಸಗಢದಲ್ಲಿ ದಿನಾಂಕದವರೆಗೆ 7 ಸಕ್ರಿಯ ಕೋವಿಡ್ 19 ಪ್ರಕರಣವಿದ್ದು, ಇಲ್ಲಿ 43 ಜನರಲ್ಲಿ ಸೋಂಕಿತ್ತು. ಪೈಕಿ 36 ಜನರು ಗುಣಮುಖರಾಗಿದ್ದಾರೆ.
    • ಗೋವಾ: ಗೋವಾದಲ್ಲಿ ಕೋವಿಡ್ 19 7 ಪ್ರಕರಣ ವರದಿಯಾಗಿದ್ದು, ಈಗ ಸಕ್ರಿಯ ಪ್ರಕರಣಗಳಿಲ್ಲ.

 

ಪಿ ಐ ಬಿ ವಾಸ್ತವ ಪರೀಶೀಲನೆ

***

 



(Release ID: 1620510) Visitor Counter : 206