ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಸರಕು ಸಾಗಾಣೆ ನಿರ್ವಹಣಾ ವ್ಯವಸ್ಥೆ ಮತ್ತು ಸರಬರಾಜು ಸರಪಳಿಗೆ ರೈತರಿಗೆ ಸಂಪರ್ಕ ಕಲ್ಪಿಸಲು ಕಿಸಾನ್ ಸಭಾ ಆಪ್

Posted On: 01 MAY 2020 6:02PM by PIB Bengaluru

ಸರಕು ಸಾಗಾಣೆ ನಿರ್ವಹಣಾ ವ್ಯವಸ್ಥೆ ಮತ್ತು ಸರಬರಾಜು ಸರಪಳಿಗೆ ರೈತರಿಗೆ ಸಂಪರ್ಕ ಕಲ್ಪಿಸಲು ಸಿ ಎಸ್ ಐ ಆರ್ ನಿಂದ ಕಿಸಾನ್ ಸಭಾ ಆಪ್

ರೈತರು, ಮಂಡಿ ವಿತರಕರು, ಸಾಗಾಣೆದಾರರು, ಮಂಡಿ ಮಂಡಳಿ ಸದಸ್ಯರು, ಸೇವೆ ಒದಗಿಸುವವರು ಮತ್ತು ಗ್ರಾಹಕರ ಯೋಗಕ್ಷೇಮಕ್ಕಾಗಿ, ಕಿಸಾನ್ ಸಭಾ 6 ಪ್ರಮುಖ ಮಾಡ್ಯೂಲ್ ಗಳನ್ನು ಹೊಂದಿದೆ
 

ಕೋವಿಡ್ – 19 ಇಂದಿನ ಪರಿಸ್ಥಿತಿಯಲ್ಲಿ, ರೈತರು ತಮ್ಮ ಉತ್ಪನ್ನಗಳು ಮಾರುಕಟ್ಟೆ ತಲುಪಲು, ಬೀಜ/ಗೊಬ್ಬರ ಸಂಗ್ರಹಣೆ ಇತ್ಯಾದಿಗಳಿಗಾಗಿ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ. ಉತ್ಪನ್ನಗಳನ್ನು ಸೂಕ್ತ ಸಮಯಕ್ಕೆ ತಲುಪಿಸಲು ಮತ್ತು ಸೂಕ್ತ ಬೆಲೆಯಲ್ಲಿ ಒದಗಿಸಲು ಅನುಕೂಲವಾಗುವಂತೆ ಒಂದು ಸದೃಢ ಸರಬರಾಜು ಸರಪಳಿ ನಿರ್ವಹಣೆ ತಕ್ಷಣದ ಅವಶ್ಯಕತೆಯಿದೆ.    

ಸಿ ಎಸ್ ಐ ಆರ್ – ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (ಸಿ ಎಸ್ ಐ ಆರ್- ಸಿ ಆರ್ ಆರ್ ಐ) ನವದೆಹಲಿ ಕಿಸಾನ್ ಸಭಾ ಆಪ್ ನ್ನು ಅಭಿವೃದ್ಧಿ ಪಡಿಸಿದೆ. ರೈತರನ್ನು ಸರಬರಾಜು ಸರಪಳಿ ಮತ್ತು ರೈಲು ಸಾಗಾಣೆ ನಿರ್ವಹಣಾ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಲು ಇಂದು ಡಾ. ತ್ರಿಲೋಚನ ಮಹಾಪಾತ್ರ, ಮಹಾ ನಿರ್ದೇಶಕರು ಸಿ ಎಸ್ ಐ ಆರ್ ಮತ್ತು ಕಾರ್ಯದರ್ಶಿಗಳು ಡಿ ಎ ಆರ್ ಇ ಅವರು ಸಿ ಎಸ್ ಐ ಆರ್ – ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (ಸಿ ಎಸ್ ಐ ಆರ್- ಸಿ ಆರ್ ಆರ್ ಐ) ನವದೆಹಲಿ ಅಭಿವೃದ್ಧಿಪಡಿಸಿದ ಕಿಸಾನ್ ಸಭಾ ಆಪ್ ನ್ನು ಬಿಡುಗಡೆಗೊಳಿಸಿದರು. ರೈತರಿಗೆ, ಸಾಗಾಣೆದಾರರಿಗೆ ಮತ್ತು ಕೃಷಿ ಉದ್ಯಮದಲ್ಲಿ ತೊಡಗಿರುವ ಇತರ ಸಂಸ್ಥೆಗಳಿಗೆ ಪರಿಹಾರ ರೂಪದಲ್ಲಿ ಈ ಪೋರ್ಟಲ್ ನ್ನು ಅಭಿವೃದ್ಧಿಪಡಿಸಿದ್ದಕ್ಕೆ ಡಾ. ಮಹಾಪಾತ್ರ ಅವರು ಸಿ ಎಸ್ ಐ ಆರ್ ನ್ನು ಅಭಿನಂದಿಸಿದ್ದಾರೆ ಮತ್ತು ಐಸಿಎಆರ್, ಸಿ ಎಸ್ ಐ ಆರ್ ನೊಂದಿಗೆ ಜೊತೆಗೂಡಿ ಕೃಷಿ ವಿಜ್ಞಾನ ಕೇಂದ್ರಗಳ ಕೆವಿಕೆ ಜಾಲಗಳನ್ನು ಅನುಷ್ಠಾನಕ್ಕೆ ತರಲು ಸಂಪರ್ಕಗಳನ್ನು ಬಳಸಿಕೊಂಡು ಒಗ್ಗೂಡಿ ಕಾರ್ಯನಿರ್ವಹಿಸಬಹುದು ಎಂದರು. 

ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಸಿ ಎಸ್ ಐ ಆರ್ ಮಹಾನಿರ್ದೇಶಕರು ಮತ್ತು ಡಿ ಎಸ್ ಐ ಆರ್  ಕಾರ್ಯದರ್ಶಿಗಳಾದ ಡಾ. ಶೇಖರ್ ಸಿ ಮಂಡೆ ಅವರು “ಆಪ್ ಅಭಿವೃದ್ಧಿ ಮತ್ತು ಉದ್ಘಾಟನೆಯನ್ನು ದೇಶ ಎದುರಿಸುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ  ರೈತರಿಗೆ ಬೆಂಬಲ ಒದಗಿಸಲು ಸಿ ಎಸ್ ಐ ಆರ್ ಬದ್ಧತೆಯನ್ನು ಹೊಂದಿದೆ ಎಂದು ಪುನರುಚ್ಛರಿಸಿದರು. ನಾವು ಐ ಸಿ ಎ ಆರ್, ಉದ್ಯಮಗಳು, ಎಂ ಎಸ್ ಎಂ ಇ ಗಳು, ಸಾಗಾಣೆದಾರರು ಮತ್ತು ರೈತ ಸಮುದಾಯ ಹಾಗೂ ಎಲ್ಲ ಪಾಲುದಾರರೊಂದಿಗೆ ಈ ಉಪಕ್ರಮದಲ್ಲಿ ಸಹಭಾಗಿತ್ವವನ್ನು ಹೊಂದುವುದಕ್ಕೆ ಎದುರು ನೋಡುತ್ತಿದ್ದೇವೆ” ಎಂದು ನುಡಿದರು.   

ಉದ್ಯಮ ಪ್ರತಿನಿಧಿಗಳು, ರೈತರು, ಸಿ ಎಸ್ ಐ ಆರ್ – ಸಿ ಆರ್ ಐ ಐ ತಂಡಗಳು ಮತ್ತು ಸಿ ಎಸ್ ಐ ಆರ್ ನ ಇತರ ಹಿರಿಯ ವಿಜ್ಞಾನಿಗಳು ಈ ಆಪ್ ನ ಉದ್ಘಾಟನೆಯನ್ನು ದೂರದಿಂದಲೇ ವೀಕ್ಷಿಸಿದರು. ಒಟ್ಟಾರೆ ಕೃಷಿ ಮಾರುಕಟ್ಟೆ ಸೂಕ್ತ ರೀತಿಯಲ್ಲಿ ಸಂಘಟಿತವಾಗದ ಕಾರಣ ಮತ್ತು ಉತ್ಪನ್ನಗಳು ವ್ಯರ್ಥವಾಗುವುದು ಅಥವಾ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವುದರಿಂದ ಒಂದು ಪ್ರಮುಖ ಅಧ್ಯಯನವನ್ನು ಕೈಗೊಳ್ಳಲಾಯಿತು ಮತ್ತು 500ಕ್ಕೂ ಹೆಚ್ಚು ರೈತರನ್ನು ಸಂದರ್ಶಿಸಲಾಯಿತು. ಪ್ರಸ್ತುತ ಪರಿಸ್ಥಿತಿಯಿಂದ ಎದುರಾಗುತ್ತಿರುವ ವಿವಿಧ ಸಮಸ್ಯೆಗಳು ಮತ್ತು ಅಂತರಗಳನ್ನು ಅರ್ಥಮಾಡಿಕೊಳ್ಳಲು, ವಿತರಕರು, ಸಾಗಾಣೆದಾರರು ಮತ್ತು ರೈತರೊಂದಿಗೆ 6 ದಿನಗಳ ಸುದೀರ್ಘ ಸಮೀಕ್ಷೆಯನ್ನು ಏಷ್ಯಾದಲ್ಲಿಯೇ ಅತಿ ದೊಡ್ಡ ಮಂಡಿಯಾದ ಆಜಾದ್ ಪುರ್ ಮಂಡಿಯಲ್ಲಿ ನಡೆಸಲಾಯಿತು ಎಂಬುದನ್ನು ಸಿ ಎಸ್ ಐ ಆರ್ – ಸಿ ಆರ್ ಆರ್ ಐ ನ ನಿರ್ದೇಶಕರಾದ ಡಾ. ಸಿ ಸತೀಶ್ ಚಂದ್ರ ಅವರು ಎತ್ತಿ ತೋರಿದರು. ಈ ಅಧ್ಯಯನದ ಮತ್ತು ಪ್ರಸ್ತುತ ಎದುರಿಸುತ್ತಿರುವ ಬಿಕ್ಕಟ್ಟಿನ ಪರಿಸ್ಥಿತಿಯ ಆಧಾರದ ಮೇಲೆ, ಈ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

Ø ರೈತರು, ಸಾಗಾಣೆದಾರರು, ಸೇವೆಗಳನ್ನು ಒದಗಿಸುವವರು (ಕೀಟ ನಾಶಕಗಳು,/ರಸ ಗೊಬ್ಬರ/ವಿತರಕರು, ಶೀತಲೀಕರಣ ಘಟಕ ಮತ್ತು ಗೋದಾಮುಗಳ ಮಾಲೀಕರು), ಮಂಡಿ ವಿತರಕರು, ಗ್ರಾಹಕರು (ದೊಡ್ಡ ಚಿಲ್ಲರೆ ಮಳಿಗೆಗಳು, ಆನ್ ಲೈನ್ ಮಳಿಗೆಗಳು, ಸಾಂಸ್ಥಿಕ ಖರೀದಾರರು) ಮತ್ತು ಇತರ ಸಂಬಂಧಿತ ಸಂಸ್ಥೆಗಳನ್ನು ಸಮಯಕ್ಕನುಗುಣವಾಗಿ ಮತ್ತು ಪರಿಣಾಮಕಾರಿ ಪರಿಹಾರಕ್ಕಾಗಿ ಈ ಪೋರ್ಟಲ್ ಸಂಪರ್ಕ ಒದಗಿಸುತ್ತದೆ. 

Ø ತನ್ನ ಬೆಳೆಗಳಿಗೆ ಹೆಚ್ಚು ಬೆಲೆಯನ್ನು ಅಪೇಕ್ಷಿಸುವ ರೈತರಾಗಲಿ ಅಥವಾ ರೈತರೊಂದಿಗೆ ಸಂಪರ್ಕ ಹೊಂದಲು ಪ್ರಯತ್ನಿಸುವ ಮಂಡಿ ವ್ಯಾಪಾರಿಗಳಾಗಿರಬಹುದು ಅಥವಾ ಮಂಡಿಗಳಿಂದ ಖಾಲಿ ಹಿಂದಿರುಗುವ  ಟ್ರಕ್ ಗಳಾಗಿರಬಹುದು ಹೀಗೆ ಕೃಷಿಗೆ ಸಂಬಂಧಿಸಿದ ಪ್ರತಿ ಘಟಕಕ್ಕೂ ಈ ಪೋರ್ಟಲ್ ಏಕಮಾತ್ರ ಸಂಪರ್ಕದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

Ø ಕೃಷಿ ಸೇವೆಗಳ ವಲಯದಲ್ಲಿ ಕಾರ್ಯನಿರ್ವಹಿಸುವ ಜನರಿಗೆ ಅಂದರೆ ರಸಗೊಬ್ಬರ/ಕೀಟನಾಶಕಗಳ ವಿತರಕರು ಮುಂತಾದವರು ತಮ್ಮ ಸೇವೆಗಳನ್ನು ಒದಗಿಸಲು ಹೆಚ್ಚಿನ ರೈತರನ್ನು ಸಂಪರ್ಕಿಸಲು ಸಹ ಕಿಸಾನ್ ಸಭಾ ಸಹಾಯ ಮಾಡುತ್ತದೆ. 

Ø ಶೀತಲೀಕರಣ ಘಟಕ (ಗಳು) ಅಥವಾ ಗೋದಾಮು (ಗಳು) ಗೆ ಸಂಬಂಧಿಸಿದವರಿಗೂ ಸಹ ಇದು ಉಪಯುಕ್ತ ಎಂದು ಸಾಬೀತಾಗಿದೆ.  ರೈತರಿಂದ ನೇರವಾಗಿ ಖರೀದಿ ಮಾಡಲು ಬಯಸುವವರಿಗೂ ಸಹ ಕಿಸಾನ್ ಸಭಾ ವೇದಿಕೆಯನ್ನು ಒದಗಿಸುತ್ತದೆ.   

Ø ರೈತರು/ ಮಂಡಿ ವ್ಯಾಪಾರಸ್ಥರು/ಸಾಗಾಣೆದಾರರು/ಮಂಡಿ ಮಂಡಳಿಯ ಸದಸ್ಯರು/ಸೇವೆ ಒದಗಿಸುವವರು/ಗ್ರಾಹಕರ ಕ್ಷೇಮಾಭಿವೃದ್ಧಿಗಾಗಿ ಕಿಸಾನ್ ಸಭಾ 6 ಪ್ರಮುಖ ಮಾಡ್ಯೂಲ್ ಗಳನ್ನು ಹೊಂದಿದೆ

ರೈತರಿಗೆ ಸೂಕ್ತ ಬೆಲೆಯ ಮತ್ತು ಸೂಕ್ತ ಸಮಯಕ್ಕೆ ಸಾಗಾಣೆ ಸಹಾಯ ನೀಡುವ ಹಾಗೂ ಮಧ್ಯವರ್ತಿಗಳ ಹಾವಳಿಯಿಲ್ಲದೆ ಅವರ ಲಾಭವನ್ನು ಹೆಚ್ಚಿಸುವ ಹಾಗೂ ಸಾಂಸ್ಥಿಕ ಖರೀದಿದಾರರೊಂದಿಗೆ ನೇರ ಸಂಪರ್ಕ ಒದಗಿಸುವ ಗುರಿಯನ್ನು ಕಿಸಾನ್ ಸಭಾ ಹೊಂದಿದೆ. ಹತ್ತಿರದ ಮಂಡಿಗಳಿಗೆ ಹೋಲಿಸಿದಲ್ಲಿ ಕಡಿಮೆ ಬೆಲೆಯಲ್ಲಿ ಸರಕು ಸಾಗಾಣೆ ವಾಹನ ಕಾಯ್ದಿರಿಸುವುದರಿಂದ ಉತ್ಪನ್ನಗಳಿಗೆ ಅತ್ಯುತ್ತಮ ಮಾರುಕಟ್ಟೆ ದರ ಒದಗಿಸಲೂ ಮತ್ತು ಇದರಿಂದ ರೈತರು ಗರುಷ್ಠ ಲಾಭ ಪಡೆಯಲು ಸಹ ಇದು ಸಹಾಯ ಮಾಡುತ್ತದೆ

https://ci4.googleusercontent.com/proxy/2OTkykezubYFKwWE_fac_BvLNnV4GoAQDHYGWxe5wvL12jw1qWyAmBKjEgncTENi9fe78xSvwoM0doCRIIqtSPhdXagmbvmDJGW4vdr-hUNZOXzPkKHI=s0-d-e1-ft#https://static.pib.gov.in/WriteReadData/userfiles/image/image001GM14.jpg https://ci4.googleusercontent.com/proxy/OMnefpi8nP8HLlR6GXxRF5BYDEM9qiuzuy8tkSQS-6-blY_OPDTX5twkr8sITrfp34u7CHoMi5lr3PuHeHPBCqXebjCq3EH5jRKmjJDo2mp5palbFDG_=s0-d-e1-ft#https://static.pib.gov.in/WriteReadData/userfiles/image/image002P690.gif

https://ci5.googleusercontent.com/proxy/NkbDxUVzsN6CFJBNcsQ1aPoLEntnWqKAGBehUVqQOhEnLAz1ssxAOVrHlMQqE9J4ciH8XATGcBRbaCszQ3CwJ6idKSjrhLtGK_OGLVtBkKvHr3lZ3cyc=s0-d-e1-ft#https://static.pib.gov.in/WriteReadData/userfiles/image/image003XRTD.jpg https://ci6.googleusercontent.com/proxy/LtX4L7hShSxW091VMs--uHTH9x9tEkOu6emDrsWLmr5HITIzrDzn_YodF0L8hrYDzclWAW1dY9AaRjb6GL_pR-Mn4lLBClXr0A_ksT0eF0L9OBQWoeGX=s0-d-e1-ft#https://static.pib.gov.in/WriteReadData/userfiles/image/image00482OQ.jpg

 

[ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ನಿರ್ದೇಶಕರು, ಸಿಎಸ್ಐಆರ್ – ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ, ದೆಹಲಿ –ಮಥುರಾ ರಸ್ತೆ, ನವದೆಹಲಿ 110025

ದೂರವಾಣಿ : +91-11-26848917 (ನಿರ್ದೇಶಕರು)

director.crri[at]nic[dot]in]

***



(Release ID: 1620459) Visitor Counter : 273