ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಕೋವಿಡ್ -19 ನಿರ್ವಹಣೆಗಾಗಿ ಹಗಲುರಾತ್ರಿ ಶ್ರಮಿಸುತ್ತಿರುವ ವಿಶಾಖಪಟ್ಟಣಂ ಸ್ಮಾರ್ಟ್ ಸಿಟಿ ಕಾರ್ಯಾಚರಣೆ ಕೇಂದ್ರ

Posted On: 01 MAY 2020 3:44PM by PIB Bengaluru

ಕೋವಿಡ್ -19 ನಿರ್ವಹಣೆಗಾಗಿ ಹಗಲುರಾತ್ರಿ ಶ್ರಮಿಸುತ್ತಿರುವ ವಿಶಾಖಪಟ್ಟಣಂ ಸ್ಮಾರ್ಟ್ ಸಿಟಿ ಕಾರ್ಯಾಚರಣೆ ಕೇಂದ್ರ

ಕಾರ್ಯಾಚರಣೆ ಕೇಂದ್ರವು ಮಾಹಿತಿ ಸಂಗ್ರಹ (ಟ್ರ್ಯಾಕಿಂಗ್), ಮೇಲ್ವಿಚಾರಣೆ ಮತ್ತು ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ

 

ಕೋವಿಡ್ 19 ನಿರ್ವಹಿಸಲು ವಿಶಾಖಪಟ್ಟಣದ ಸ್ಮಾರ್ಟ್ ಸಿಟಿ ಕಾರ್ಯಾಚರಣೆ ಕೇಂದ್ರವು 24x7 ಅನ್ನು ಹಗಲುರಾತ್ರಿ ಎಂದು ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಕೇಂದ್ರದಲ್ಲಿ ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ:

  • ನಗರದ 90 ಸ್ಥಳಗಳಲ್ಲಿ ಸ್ಥಾಪಿಸಲಾದ ಸಾರ್ವಜನಿಕ ಪ್ರಕಟಣೆ ವ್ಯವಸ್ಥೆಗಳ ಮೂಲಕ ಕೋವಿಡ್ 19 ಗೆ ಸಂಬಂಧಿಸಿದ ಎಚ್ಚರಿಕೆಯ ಕ್ರಮಗಳು ಮತ್ತು ಮಾಹಿತಿಯ ಪ್ರಕಟಣೆ.
  • ಕೋವಿಡ್-19 ಮಾಹಿತಿಯನ್ನು ನಗರದಾದ್ಯಂತ 10 ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಲಾದ ಡಿಜಿಟಲ್ ಸೈನ್‌ಬೋರ್ಡ್‌ಗಳ ಮೂಲಕ (ವೇರಿಯಬಲ್ ಮೆಸೇಜ್ ಡಿಸ್ಪ್ಲೇ) ಪ್ರಸಾರ ಮಾಡಲಾಗಿದೆ.
  • ನಗರದಾದ್ಯಂತ 500 ಕ್ಯಾಮೆರಾಗಳ ಕಣ್ಗಾವಲು ವ್ಯವಸ್ಥೆಯನ್ನು ಪ್ರಮುಖ ಪ್ರದೇಶಗಳು ಮತ್ತು ಪ್ರಮುಖ ಜಂಕ್ಷನ್‌ಗಳಲ್ಲಿ ಸ್ಥಾಪಿಸಲಾಗಿದೆ ಹಾಗೂ ಮೇಲ್ವಿಚಾರಣೆ ಮಾಡಲಾಗುತ್ತದೆ.
  • ವಿದೇಶದಿಂದ ಮರಳಿದ ನಾಗರಿಕರ ಮಾಹಿತಿ / ವಿವರಗಳನ್ನು ಕೋವಿಡ್ ಹೆಲ್ತ್ ಡೆಸ್ಕ್ / ಸಂಪರ್ಕ ಕೇಂದ್ರವು ಸಿಒಸಿ ಕುರುಹುಗಳ ಮೂಲಕ ದಿನನಿತ್ಯದ ಆಧಾರದ ಮೇಲೆ ಮುಖ್ಯ ಆರೋಗ್ಯ ಆಧಿಕಾರಿ ಮತ್ತು ಜಿಲ್ಲಾ ಆರೋಗ್ಯ ಆಧಿಕಾರಿಗಳೊಂದಿಗೆ ಸಮನ್ವಯ ಮಾಡಿ ಮೇಲ್ವಿಚಾರಣೆ ಮಾಡುತ್ತದೆ. ಕಾಲಕಾಲಕ್ಕೆ ಸಾರ್ವಜನಿಕ ಆರೋಗ್ಯ, ನಗರ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಂತಹ ಸಾಲಿನ ಇಲಾಖೆಗಳೊಂದಿಗೆ ಸಮನ್ವಯಗೊಳಿಸಲು ಸಹಾಯವಾಣಿ / ಸಂಪರ್ಕ ಕೇಂದ್ರವು 24x7 ಕ್ರಿಯಾತ್ಮಕವಾಗಿದೆ. ತುರ್ತು ಕರೆಗಳಿಗೆ ಉತ್ತರಿಸಲು ಸಿಒಸಿಯಲ್ಲಿ ನಿಶುಲ್ಕ (ಟೋಲ್ ಫ್ರೀ) ಸಂಖ್ಯೆಯಿದೆ. ಅದಕ್ಕೆ ಅನುಗುಣವಾಗಿ ಲೈನ್ ಇಲಾಖೆಗಳೊಂದಿಗೆ ಸಂಪರ್ಕ ಮಾಡುತ್ತದೆ.
  • ವಿದೇಶದಿಂದ ಮರಳಿದವರನ್ನು ಪತ್ತೆಹಚ್ಚಲು ಮತ್ತು ನಕ್ಷೆ ಮಾಡಲು ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ. ಮೊಬೈಲ್ ಅಪ್ಲಿಕೇಶನ್‌ನ ಮೂಲಕ ಪಡೆದ ಮಾಹಿತಿಯ ಆಧಾರದ ಮೇಲೆ, ಕ್ಲಸ್ಟರ್ ಮ್ಯಾಪಿಂಗ್ ಮತ್ತು ಹೆಚ್ಚಿನ ಅಪಾಯದ ಬಣ್ಣ ಕೋಡಿಂಗ್ ನಕ್ಷೆಯನ್ನು ಡಿಜಿಟಲೀಕರಣಗೊಳಿಸಲಾಯಿತು, ಇದರಲ್ಲಿ ವರ್ಗವಾರು ಕ್ಲಸ್ಟರ್‌ಗಳು ರೂಪುಗೊಂಡವು, ಅಂದರೆ 0-14, 15- 28 ಮತ್ತು 28 ದಿನಗಳಿಗಿಂತ ಹೆಚ್ಚಿನ ಸಮಯವನ್ನು ಸಿಒಸಿಯಲ್ಲಿ ಜಿಐಎಸ್ ಬಳಸಿ ಗುರುತಿಸಲಾಗಿದೆ. ಜಿಲ್ಲಾಡಳಿತದ ಮೇಲಿನ ವಿಶ್ಲೇಷಣೆಯ ಆಧಾರದ ಮೇಲೆ ವೈದ್ಯಕೀಯ ಮಾದರಿಗಳನ್ನು ಸಹ ಸಂಗ್ರಹಿಸಲಾಗಿದೆ.
  • ಗುರುತಿಸಲಾದ ಸಕಾರಾತ್ಮಕ ಪ್ರದೇಶಗಳಲ್ಲಿ ಕ್ಷೇತ್ರ ಮಟ್ಟದ ಎ.ಎನ್.ಎಮ್./ ಆಶಾ/ ಸ್ವಯಂಸೇವಕರ ಮೂಲಕ ಧಾರಕ ಕ್ಲಸ್ಟರ್‌ನ ಸಮೀಕ್ಷೆಗಾಗಿ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
  • ವಿಶಾಖಪಟ್ಟಣಂನಲ್ಲಿ ರೂಪುಗೊಂಡ 20 ಕ್ಷಿಪ್ರ ಪ್ರತಿಕ್ರಿಯೆ ತಂಡಗಳು (ಆರ್‌.ಆರ್‌.ಟಿ) ಮತ್ತು ಈ ತಂಡಗಳನ್ನು ಆಯಾ ತಂಡ ಆಂಬ್ಯುಲೆನ್ಸ್ ಗಳಲ್ಲಿ ನಿಗದಿಪಡಿಸಿದ ಮೊಬೈಲ್ ಟ್ಯಾಬ್‌ಗಳ ಮೂಲಕ ಟ್ರ್ಯಾಕ್ ಮಾಡಲಾಗುತ್ತಿದೆ.
  • ಕ್ಷಿಪ್ರ ಪ್ರತಿಕ್ರಿಯೆ ತಂಡಗಳ (ಆರ್‌.ಆರ್‌.ಟಿ) ಅರ್ಜಿಯನ್ನು ಅಭಿವೃದ್ಧಿಪಡಿಸಲಾಗಿದೆ, ಅದರಲ್ಲಿ ಆಯಾ ತಂಡಗಳ ಎಲ್ಲಾ ವೈದ್ಯರು ಕ್ಷೇತ್ರದಿಂದ ನೇರವಾಗಿ ಹಾಜರಾದ ಸೋಂಕಿನ ಶಂಕಿತರು / ನಾಗರಿಕರ ವಿವರಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಸಿಒಸಿ ಮತ್ತು ಸಂಬಂಧಿತ ಸಮಿತಿಗಳು ಇದನ್ನು ನೈಜ/ಅದೇ ಸಮಯದಲ್ಲಿ ಮೇಲ್ವಿಚಾರಣೆ ಮಾಡುತ್ತವೆ.
  • ರೋಗಲಕ್ಷಣದ ನಾಗರಿಕರಿಗಾಗಿ ಮಾದರಿ ಸಂಗ್ರಹಕ್ಕಾಗಿ 4 ಮೊಬೈಲ್ ತಂಡಗಳನ್ನು ರಚಿಸಲಾಗಿದೆ. ಮೊಬೈಲ್ ಟ್ಯಾಬ್ ಆಧಾರಿತ ಟ್ರ್ಯಾಕಿಂಗ್ ಮೂಲಕ ತಂಡಗಳನ್ನು ಸಿಒಸಿ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸಂಬಂಧಪಟ್ಟ ವೈದ್ಯರು ನೈಜ/ಅದೇ ಸಮಯದ ಆಧಾರದ ಮೇಲೆ ಮೊಬೈಲ್ ಅರ್ಜಿಯ ಮೂಲಕ ನಾಗರಿಕರ ವಿವರಗಳನ್ನು ಸಲ್ಲಿಸುತ್ತಾರೆ.
  • ಸ್ವಯಂಸೇವಕರ ತಂಡ ಪ್ರತಿ ಮನೆ ಬಾಗಿಲಿಗೆ ಹೋಗಿ ಸಮೀಕ್ಷೆಯನ್ನು ಮೇಲ್ವಿಚಾರಣೆ ಮಾಡುತ್ತದೆ. ಮತ್ತು ವರದಿಗಳನ್ನು ಸಂಬಂಧಪಟ್ಟ ಸಮಿತಿಯ ಮುಂದೆ ನಿಯಮಿತವಾಗಿ ಸಲ್ಲಿಸಲಾಗುತ್ತದೆ.
  • ಸಾರ್ವಜನಿಕ ಆರೋಗ್ಯ ವಿಭಾಗದಿಂದ ಧಾರಕ ಪ್ರದೇಶಗಳಲ್ಲಿ ಬ್ಲೀಚಿಂಗ್ ಮತ್ತು ಇತರ ನೈರ್ಮಲ್ಯ ಚಟುವಟಿಕೆಗಳಂತಹ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
  • ಅಗತ್ಯ ಕಿರಾಣಿ ವಸ್ತುಗಳ ಮತ್ತು ದಿನಸಿ ಮಾರಾಟಗಾರರ ವಿವರಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ ಮಾಡಲಾಯಿತು. ಅಗತ್ಯ ದಿನಸಿ ಮತ್ತು ದೈನಂದಿನ ಕಿರಾಣಿ ವಸ್ತುಗಳ ಸಮಸ್ಯೆಗಳಿಗೆ ಸಂಬಂಧಿಸಿದ ಯಾವುದೇ ಕುಂದುಕೊರತೆಗಳ ಪರಿಹಾರಗಳಿಗೆ ಮೀಸಲಾದ ಸಹಾಯವಾಣಿ ಸಂಖ್ಯೆಗಳು 0891- 2869106, 0891- 2869110.
  • ಟ್ವಿಟರ್/ ಫೇಸ್‌ಬುಕ್‌ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಎಚ್ಚರಿಕೆಯ ಸಂದೇಶಗಳು / ಮಾಹಿತಿಯನ್ನು ಪ್ರಕಟಿಸಲಾಗಿದೆ.

***



(Release ID: 1620431) Visitor Counter : 206