ಪ್ರಧಾನ ಮಂತ್ರಿಯವರ ಕಛೇರಿ

ಕೃಷಿ ಕ್ಷೇತ್ರದ ಉತ್ತೇಜನಕ್ಕೆ ಮಾರ್ಗಗಳನ್ನು ಚರ್ಚಿಸಲು ಪ್ರಧಾನಿ ಮೋದಿಯವರಿಂದ ಸಭೆ

Posted On: 02 MAY 2020 3:37PM by PIB Bengaluru

ಕೃಷಿ ಕ್ಷೇತ್ರದ ಉತ್ತೇಜನಕ್ಕೆ ಮಾರ್ಗಗಳನ್ನು ಚರ್ಚಿಸಲು ಪ್ರಧಾನಿ ಮೋದಿಯವರಿಂದ ಸಭೆ

 

ಕೃಷಿ ಕ್ಷೇತ್ರದ ಸಮಸ್ಯೆಗಳು ಮತ್ತು ಅಗತ್ಯವಿರುವ ಸುಧಾರಣೆಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಭೆ ನಡೆಸಿದರು. ಕೃಷಿ ಮಾರುಕಟ್ಟೆ ಸುಧಾರಣೆಗಳು, ಮಾರುಕಟ್ಟೆ ಮಾಡಬಹುದಾದ ಹೆಚ್ಚುವರಿಗಳ ನಿರ್ವಹಣೆ, ರೈತರಿಗೆ ಸಾಂಸ್ಥಿಕ ಸಾಲದ ಲಭ್ಯತೆ ಮತ್ತು ಕೃಷಿ ವಲಯವನ್ನು ವಿವಿಧ ನಿರ್ಬಂಧಗಳಿಂದ ಮುಕ್ತಗೊಳಿಸಲು ಕಾನೂನಿನ ಬೆಂಬಲದ ಬಗ್ಗೆ ಹೆಚ್ಚು ಒತ್ತು ನೀಡಲಾಯಿತು.

ಅಸ್ತಿತ್ವದಲ್ಲಿರುವ ಮಾರುಕಟ್ಟೆ ವ್ಯವಸ್ಥೆಗೆ ಕಾರ್ಯತಂತ್ರದ ಕ್ರಮಗಳು ಮತ್ತು ತ್ವರಿತ ಕೃಷಿ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಸೂಕ್ತ ಸುಧಾರಣೆಗಳನ್ನು ತರುವತ್ತ ಸಭೆಯಲ್ಲಿ ಗಮನ ಹರಿಸಲಾಯಿತು. ಕೃಷಿ ಮೂಲಸೌಕರ್ಯವನ್ನು ಬಲಪಡಿಸಲು ರಿಯಾಯಿತಿ ಸಾಲದ ಹರಿವು, ಪಿಎಂ-ಕಿಸಾನ್ ಫಲಾನುಭವಿಗಳಿಗೆ ವಿಶೇಷ ಕಿಸಾನ್ ಕ್ರೆಡಿಟ್ ಕಾರ್ಡ್ ಅಭಿಯಾನ ಮತ್ತು ರೈತರಿಗೆ ಉತ್ತಮ ಲಾಭವನ್ನು ಖಚಿತಪಡಿಸಿಕೊಳ್ಳಲು ಕೃಷಿ ಉತ್ಪನ್ನಗಳ ಅಂತರ ಮತ್ತು ಅಂತರ್-ರಾಜ್ಯ ವ್ಯಾಪಾರಕ್ಕೆ ಅನುಕೂಲ ಕಲ್ಪಿಸುವುದು ಸಭೆಯಲ್ಲಿ ಚರ್ಚೆಯಾದ ಕೆಲವು ಪ್ರಮುಖ ಕ್ಷೇತ್ರಗಳಾಗಿವೆ. -ಕಾಮರ್ಸ್ ಅನ್ನು ಸಕ್ರಿಯಗೊಳಿಸಲು -ನ್ಯಾಮ್ ಅನ್ನು ಪ್ರಮುಖ ವೇದಿಕೆಯಾಗಿ ಅಭಿವೃದ್ಧಿಪಡಿಸುವುದು ಚರ್ಚೆಯ ಪ್ರಮುಖ ವಿಷಯಗಳಲ್ಲಿ ಒಂದಾಗಿತ್ತು.

ಕೃಷಿ ಆರ್ಥಿಕತೆಯಲ್ಲಿ ಬಂಡವಾಳ ಮತ್ತು ತಂತ್ರಜ್ಞಾನವನ್ನು ಪೂರೈಸುವ ಹಾಗೂ ಕೃಷಿಗೆ ಹೊಸ ಮಾರ್ಗಗಳನ್ನು ಸುಗಮಗೊಳಿಸಲು ದೇಶದಲ್ಲಿ ಏಕರೂಪದ ಶಾಸನಬದ್ಧ ಚೌಕಟ್ಟಿನ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆಯಿತು. ಬೆಳೆಗಳಲ್ಲಿನ ಜೈವಿಕ-ತಾಂತ್ರಿಕ ಬೆಳವಣಿಗೆಗಳ ಸಾಧಕ-ಬಾಧಕಗಳನ್ನು ಅಥವಾ ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ಉತ್ಪಾದಕ ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆಯೂ ಚರ್ಚೆ ನಡೆಯಿತು. ಮಾದರಿ ಭೂ ಗುತ್ತಿಗೆ ಕಾಯ್ದೆಯ ಸವಾಲುಗಳು ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರ ಹಿತಾಸಕ್ತಿಯನ್ನು ಕಾಪಾಡುವುದು ಹೇಗೆ ಎಂಬುದರ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ಅಗತ್ಯ ಸರಕುಗಳ ಕಾಯ್ದೆಯನ್ನು ಪ್ರಸ್ತುತ ಕಾಲಕ್ಕೆ ಹೊಂದಿಕೆಯಾಗುವಂತೆ ಮಾಡುವುದು ಏಕೆ ಸೂಕ್ತವಾಗಿದೆ ಎಂಬ ಬಗ್ಗೆಯೂ ಚರ್ಚಿಸಲಾಯಿತು, ಇದರಿಂದಾಗಿ ಉತ್ಪಾದನಾ-ನಂತರದ ಕೃಷಿ ಮೂಲಸೌಕರ್ಯದಲ್ಲಿ ದೊಡ್ಡ ಪ್ರಮಾಣದ ಖಾಸಗಿ ಹೂಡಿಕೆಗೆ ಉತ್ತೇಜನ ನೀಡಲಾಗುತ್ತದೆ ಮತ್ತು ಸರಕು ಉತ್ಪನ್ನ ಮಾರುಕಟ್ಟೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಬ್ರಾಂಡ್ ಇಂಡಿಯಾವನ್ನು ಅಭಿವೃದ್ಧಿಪಡಿಸುವುದು, ಸರಕು ನಿರ್ದಿಷ್ಟತೆಯ ನಿಗಮ/ಮಂಡಳಿಗಳ ರಚನೆ ಮತ್ತು ಕೃಷಿ-ಸಮೂಹಗಳು/ ಗುತ್ತಿಗೆ ಕೃಷಿಗೆ ಪ್ರೋತ್ಸಾಹ ಮುಂತಾದವು ಕೃಷಿ ಸರಕು ರಫ್ತು ಹೆಚ್ಚಿಸಲು ಉದ್ದೇಶಿಸಿರುವ ಕೆಲವು ಕ್ರಮಗಳಾಗಿವೆ.

ರೈತರ ಅನುಕೂಲಕ್ಕಾಗಿ ಸಂಪೂರ್ಣ ಮೌಲ್ಯ ಸರಪಳಿಯನ್ನು ಮುಕ್ತಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ತಂತ್ರಜ್ಞಾನದ ಬಳಕೆಯು ಕೃಷಿ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಕೊನೆಯ ತುದಿಯವರೆಗೆ ತನಕ ತಂತ್ರಜ್ಞಾನವನ್ನು ತಲುಪಿಸುವುದು ಮತ್ತು ನಮ್ಮ ರೈತರನ್ನು ಜಾಗತಿಕ ಮೌಲ್ಯ ಸರಪಳಿಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿಸುವ ಬಗ್ಗೆ ಪ್ರಧಾನಿಯವರು ಒತ್ತು ನೀಡಿದರು.

ಕೃಷಿ ಆರ್ಥಿಕತೆಯಲ್ಲಿ ಚೈತನ್ಯವನ್ನು ತರಲು, ಕೃಷಿ ವ್ಯಾಪಾರದಲ್ಲಿ ಪಾರದರ್ಶಕತೆ ಮತ್ತು ರೈತರಿಗೆ ಗರಿಷ್ಠ ಲಾಭವನ್ನು ತರಲು ಎಫ್ಪಿಒಗಳ ಪಾತ್ರವನ್ನು ಇನ್ನಷ್ಟು ಬಲಪಡಿಸಲು ನಿರ್ಧರಿಸಲಾಯಿತು. ಒಟ್ಟಾರೆಯಾಗಿ, ಉತ್ತಮ ಬೆಲೆ ಮತ್ತು ರೈತರಿಗೆ ಆಯ್ಕೆಯ ಸ್ವಾತಂತ್ರ್ಯ ನೀಡಲು ಅಸ್ತಿತ್ವದಲ್ಲಿರುವ ಮಾರುಕಟ್ಟೆ ನಿಯಂತ್ರಣ ಕಾನೂನುಗಳನ್ನು ಮರುಪರಿಶೀಲಿಸಲು ಒತ್ತು ನೀಡಲಾಯಿತು.

***



(Release ID: 1620416) Visitor Counter : 206