ಬುಡಕಟ್ಟು ವ್ಯವಹಾರಗಳ ಸಚಿವಾಲಯ

ಕೊವಿಡ್ 19 ಗಮನದಲ್ಲಿಟ್ಟುಕೊಂಡು ಸಣ್ಣ ಅರಣ್ಯಗಳ 49 ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಿದ ಸರ್ಕಾರ

Posted On: 01 MAY 2020 7:03PM by PIB Bengaluru

ಕೊವಿಡ್ 19 ಗಮನದಲ್ಲಿಟ್ಟುಕೊಂಡು ಸಣ್ಣ ಅರಣ್ಯಗಳ 49 ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಿದ ಸರ್ಕಾರ

ರಾಜ್ಯಗಳಲ್ಲಿ ಪರಿಷ್ಕೃತ ಕನಿಷ್ಠ ಬೆಂಬಲ ಬೆಲೆ ಅನುಷ್ಠಾನ ಕಾರ್ಯಗಳನ್ನು ಟ್ರೈಫೈಡ್ ಮೇಲ್ವಿಚಾರಣೆ ಮಾಡಲಿದೆ

 

ಬುಡಕಟ್ಟು ಜನಾಂಗದವರ ಜೀವನೋಪಾಯದ ಮೇಲೆ ಉತ್ತಮ ಪರಿಣಾಮ ಬೀರುವ ಸಲುವಾಗಿ,ಕೇಂದ್ರ ಸರ್ಕಾರವು ಇಂದು ಸಣ್ಣ ಅರಣ್ಯ ಉತ್ಪಾದನೆ (ಎಂಎಫ್‌ಪಿ)ಯ 49 ಬುಡಕಟ್ಟು ವಸ್ತುಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಪರಿಷ್ಕರಿಸಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ನವದೆಹಲಿಯಲ್ಲಿ ಹೊರಡಿಸಿರುವ ಆದೇಶದಲ್ಲಿ ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ರಚಿಸಲಾದ ಬೆಲೆ ನಿಗಧಿಪಡಿಸುವ ಕೋಶದಿಂದ ಸಣ್ಣ ಅರಣ್ಯ ಉತ್ಪಾದನೆ(ಎಂಎಫ್‌ಪಿ)ಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯನ್ನು ಪ್ರತಿ 3 ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಆದಾಗ್ಯೂ, ಕೊವಿಡ್-19 ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಅಸಾಧಾರಣ ಮತ್ತು ಕಷ್ಟಕರ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು, ಬುಡಕಟ್ಟು ಜನಾಂಗದವರ ಸಣ್ಣ ಅರಣ್ಯ ಉತ್ಪಾದನೆ(ಎಂಎಫ್‌ಪಿ)ಗಳ ಕನಿಷ್ಠ ಸಂಗ್ರಹಕಾರರಿಗೆ ಅಗತ್ಯವಾದ ಬೆಂಬಲವನ್ನು ನೀಡುವ ತ್ವರಿತ ಯೋಜನೆಯನ್ನು ಪರಿಷ್ಕರಣೆ ಮಾಡಲಾಗಿದೆ. ಪ್ರಾಧಿಕಾರವು ಬುಡಕಟ್ಟು ಉತ್ಪಾದನೆ(ಎಂಎಫ್‌ಪಿ)ಗಳ ಬೆಲೆ ಕೋಶದೊಂದಿಗೆ ಸರಿಯಾದ ಸಮಾಲೋಚನೆ ನಡೆಸಿದ ನಂತರ ಪರಿಷ್ಕರಣೆ ಮಾಡಲಾಗಿದೆ. ತನ್ನ ಯೋಜನೆಯ ವ್ಯಾಪ್ತಿಯಲ್ಲಿರುವ ಸಣ್ಣ ಅರಣ್ಯ ಉತ್ಪಾದನೆ(ಎಂಎಫ್‌ಪಿ) ವಸ್ತುಗಳಿಗೆ ಸಂಬಂಧಿಸಿದಂತೆ. ಆನಂತರ, ಯೋಜನೆಯ ಮಾರ್ಗಸೂಚಿಗಳಲ್ಲಿ ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನು ಸಡಿಲಿಸಲು ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪರಿಷ್ಕರಣೆ ಮಾಡಲು ಈ ಮೂಲಕ ನಿರ್ಧರಿಸಲಾಗಿದೆ.

ಸಣ್ಣ ಅರಣ್ಯ ಉತ್ಪಾದನೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳದ ವಿವರಗಳಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

ಸಣ್ಣ ಅರಣ್ಯ ಉತ್ಪನ್ನಗಳ ವಿವಿಧ ವಸ್ತುಗಳ ಹೆಚ್ಚಳವು 16% ರಿಂದ 66% ವರೆಗೆ ಇರುತ್ತದೆ.

ಸಣ್ಣ ಬುಡಕಟ್ಟು ಉತ್ಪಾದನೆಯನ್ನು ಸಂಗ್ರಹಿಸಲು ತ್ವರಿತ ಮತ್ತು ಅಗತ್ಯವಾದ ಆವೇಗವನ್ನು ಕನಿಷ್ಠ 20 ರಾಜ್ಯಗಳಲ್ಲಿ ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.


ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

***



(Release ID: 1620414) Visitor Counter : 173