ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಡಾ. ಹರ್ಷವರ್ಧನ್ ಅವರು ಬಿಹಾರದ ಎ.ಇ.ಎಸ್. ನಿರ್ವಹಣೆ ಸಿದ್ಧತೆಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಪರಿಶೀಲಿಸಿದರು

Posted On: 01 MAY 2020 8:22PM by PIB Bengaluru

ಡಾ. ಹರ್ಷವರ್ಧನ್ ಅವರು ಬಿಹಾರದ ಎ.ಇ.ಎಸ್. ನಿರ್ವಹಣೆ ಸಿದ್ಧತೆಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಪರಿಶೀಲಿಸಿದರು

ಎಇಎಸ್ ನಿರ್ವಹಣೆಗಾಗಿ ಬಿಹಾರಕ್ಕೆ ಕೇಂದ್ರದ ಎಲ್ಲಾ ರೀತಿಯ ಬೆಂಬಲಗಳ ಭರವಸೆ

 

ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ಪ್ರಕರಣಗಳ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಬಿಹಾರ ರಾಜ್ಯ ಸರ್ಕಾರಕ್ಕೆ ಎಲ್ಲ ಬೆಂಬಲಗಳ ಭರವಸೆ ನೀಡಿದ್ದಾರೆ. ವಿಡಿಯೋ ಸಮ್ಮೇಳನ ಮೂಲಕ ಬಿಹಾರದ ಆರೋಗ್ಯ ಸಚಿವ ಶ್ರೀ ಮಂಗಲ್ ಪಾಂಡೆ ಅವರ ಎಇಎಸ್ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಸಚಿವರು ಈ ವಿಷಯ ತಿಳಿಸಿದರು, ಅಲ್ಲಿನ ಕಾರ್ಯಕರ್ತರಿಂದ ಪರಿಸ್ಥಿತಿಯ ತಳಮಟ್ಟದ ಮಾಹಿತಿಯನ್ನು ತೆಗೆದುಕೊಂಡರು. ಸಭೆಯಲ್ಲಿ ಶ್ರೀ ಅಶ್ವಿನಿ ಕುಮಾರ್ ಚೌಬೆ, ಎಂಒಎಸ್ (ಎಚ್‌ಎಫ್‌ಡಬ್ಲ್ಯು) ಅವರೂ ಕೂಡಾ ಉಪಸ್ಥಿತರಿದ್ದರು.

ಆರಂಭದಲ್ಲಿ, ಎಇಎಸ್‌ನಿಂದಾದ ಮಕ್ಕಳ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇಂದ್ರ ಆರೋಗ್ಯ ಸಚಿವರು, ಬಿಹಾರದಲ್ಲಿ ಎಇಎಸ್ ಕಾರಣದಿಂದಾಗಿ ಮೇ 15 ರಿಂದ ಜೂನ್ ತಿಂಗಳವರೆಗೆ ಬೇಸಿಗೆಯಲ್ಲಿ ಒಂದು ನಿರ್ದಿಷ್ಟ ಸಮಯದಲ್ಲಿ, ಚಿಕ್ಕ ಮಕ್ಕಳ ಸಾವಿನ ದರದಲ್ಲಿ ಯಾವಾಗಲೂ ಏರಿಕೆಯಾಗುತ್ತದೆ ಎಂದು ತಿಳಿದುಕೊಳ್ಳುವುದು ಬಹಳ ನೋವಿನ ಸಂಗತಿ”. ಎಂದು ಹೇಳಿದರು. ಅನೇಕ ಹಂತಗಳಲ್ಲಿ ಸರಿಯಾದ ವ್ಯವಸ್ಥೆಗಳಿಂದ, ಈ ಸಾವುಗಳನ್ನು ಸಮಯೋಚಿತ ಆರೈಕೆಯ ಮೂಲಕ ತಡೆಯಬಹುದು ಎಂದು ಅವರು ಹೇಳಿದ್ದಾರೆ. ಎಇಎಸ್ ಏಕಾಏಕಿ ಹೆಚ್ಚಳ ಕಂಡ 2014 ಮತ್ತು 2019 ರ ಹಿಂದಿನ ಎರಡು ಸಂದರ್ಭಗಳಲ್ಲಿ ಬಿಹಾರ ರಾಜ್ಯಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು. ಅವರು ಪರಿಸ್ಥಿತಿಯನ್ನು ಅವಲೋಕಿಸಲು ಸ್ವತಃ ರೋಗ ತಗುಲಿದ ಮಕ್ಕಳು ಮತ್ತು ಅವರ ಪೋಷಕರನ್ನು ಭೇಟಿಯಾಗಿದ್ದರು. “ಎಇಎಸ್ ವಿರುದ್ಧದ ಹೋರಾಟವು ಹಳೆಯದು ಮತ್ತು ಅದು ನಮಗೆ ಚೆನ್ನಾಗಿ ತಿಳಿದಿದೆ. ಪೂರ್ವಭಾವಿ ಮತ್ತು ಸಮಗ್ರ ಕ್ರಮಗಳನ್ನು ತೆಗೆದುಕೊಂಡು, ವ್ಯವಸ್ಥಿತ ವಿಧಾನವನ್ನು ತೆಗೆದುಕೊಳ್ಳುವ ಮೂಲಕ ಅದನ್ನು ತಡೆಗಟ್ಟುವ ವ್ಯವಸ್ಥೆ ಮಾಡಬೇಕು. ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಹೇಳಿದರು

"ಈ ಬಾರಿಯೂ ನಾವು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಎಇಎಸ್ ಪರಿಸ್ಥಿತಿಯನ್ನು ನಿರ್ವಹಿಸಲು ರಾಜ್ಯ ಆರೋಗ್ಯ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇವೆ" ಎಂದು ಡಾ. ಹರ್ಷವರ್ಧನ್ ಅವರು ಹೇಳಿದರು. ಪೀಡಿತ ಪ್ರದೇಶಗಳಲ್ಲಿ ಕಣ್ಗಾವಲು ಇರಿಸಿಕೊಳ್ಳಲು ಮತ್ತು ಸಮಯೋಚಿತ ತಡೆಗಟ್ಟುವ ಕ್ರಮವನ್ನು ಸೂಚಿಸಲು ತಜ್ಞರ ಸಮಿತಿಯನ್ನು ರಚಿಸುವಂತೆ ಅವರು ರಾಜ್ಯ ಅಧಿಕಾರಿಗಳಿಗೆ ತಿಳಿಸಿದರು.

ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಮೂಲಕ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ಒದಗಿಸುತ್ತೇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ. "ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸೇರಿದಂತೆ ಕೇಂದ್ರ ಸರ್ಕಾರದ ಇತರ ಸಚಿವಾಲಯಗಳು ಕೂಡ ತ್ವರಿತ ಮತ್ತು ದೀರ್ಘಕಾಲೀನ ಕ್ರಮಗಳ ಮೂಲಕ ಭಾಗವಹಿಸಿ ಸಂಪೂರ್ಣ ಬೆಂಬಲ ನೀಡುವಂತೆ ಕೋರಲಾಗುವುದು ಎಂದು ಸಚಿವರು ಹೇಳಿದರು.

ಬಿಹಾರ ರಾಜ್ಯಕ್ಕೆ ನೀಡುತ್ತಿರುವ ಬೆಂಬಲವನ್ನು ವಿವರಿಸಿದ ಡಾ. ಹರ್ಷವರ್ಧನ್, “ಪರಿಸ್ಥಿತಿಯನ್ನು ಪ್ರತಿದಿನ ಮೇಲ್ವಿಚಾರಣೆ ಮಾಡಲು ತಜ್ಞರ ಸಮಿತಿ ರೂಪಿಸುವ ಹೊರತಾಗಿ, ಉನ್ನತ ಮಟ್ಟದ ತಜ್ಞರ ತಂಡವನ್ನು ರಚಿಸುವ ಅವಶ್ಯಕತೆಯಿದೆ. ಎಇಎಸ್ ಮತ್ತು ಜಪಾನೀಸ್ ಎನ್ಸೆಫಾಲಿಟಿಸ್ ಪ್ರಕರಣಗಳನ್ನು ಒಳಗೊಂಡಿರುವಲ್ಲಿ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌ಸಿಡಿಸಿ), ನ್ಯಾಷನಲ್ ವೆಕ್ಟರ್ ಹರಡುವ ರೋಗ ನಿಯಂತ್ರಣ ಕಾರ್ಯಕ್ರಮ (ಎನ್‌ವಿಬಿಡಿಸಿಪಿ), ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ಏಮ್ಸ್, ಪಾಟ್ನಾ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಕ್ಕಳ ಆರೋಗ್ಯ ವಿಭಾಗದ ತಜ್ಞರು ಮಾರ್ಗದರ್ಶನ ನೀಡಲು ವ್ಯವಸ್ಥೆ ಮಾಡಲಾಗುವುದು ಮತ್ತು ರಾಜ್ಯವನ್ನು ನಿಟ್ಟಿನಲ್ಲಿ ಬೆಂಬಲಿಸುತ್ತೇವೆ ಎಂದು ಹೇಳಿದರು.

ಹೊಸ ಮಕ್ಕಳ ಐಸಿಯುಗಳ ಮೂಲಕ ಅಂತಹ ಕಾಯಿಲೆಗೆ ತಕ್ಷಣವೇ ಕಾರ್ಯನಿರ್ವಹಿಸುವಂತೆ ನಾವು ಖಚಿತಪಡಿಸಿಕೊಳ್ಳಬೇಕು; ಹತ್ತಿರದ ಜಿಲ್ಲೆಗಳಲ್ಲಿ ಕನಿಷ್ಠ 10 ಹಾಸಿಗೆಯ ಮಕ್ಕಳ ಐಸಿಯುಗಳೊಂದಿಗೆ ಸಾಕಷ್ಟು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು; ಹೆಚ್ಚಿನ ಮಕ್ಕಳು ಜ್ವರ, ರೋಗಗ್ರಸ್ತವಾಗುವಿಕೆಗಳು, ಬದಲಾದ ಸಂವೇದನಾಶೀಲತೆ ಮುಂತಾದ ಎಇಎಸ್ ರೋಗಲಕ್ಷಣಗಳನ್ನು ಪಡೆದಾಗ ರಾತ್ರಿ 10.00 ರಿಂದ ಬೆಳಿಗ್ಗೆ 08.00 ರವರೆಗೆ ಆಂಬ್ಯುಲೆನ್ಸ್ ಸೇವೆಗಳನ್ನು ಲಭ್ಯವಾಗುವಂತೆ ಮಾಡುವುದು; ವಿಶೇಷವಾಗಿ ಗರಿಷ್ಠ ಸಮಯದಲ್ಲಿ ಸವಾಲನ್ನು ತೆಗೆದುಕೊಳ್ಳಲು ವೈದ್ಯರು, ಅರೆವೈದ್ಯಕೀಯ ಮತ್ತು ಆರೋಗ್ಯ ಪಡೆಗಳನ್ನು ಸಿದ್ಧಪಡಿಸಿ; ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಹಾಗೂ ಪ್ರಸ್ತಾಪಿತ ಮತ್ತು ಭರವಸೆಯ ಸುಧಾರಣೆಗಳನ್ನು ಕೂಡಲೇ ಸ್ಥಾಪಿಸುವ ಕೆಲಸವನ್ನು ತ್ವರಿತಗೊಳಿಸಿ.ಎಂದು ರಾಜ್ಯವು ತಕ್ಷಣವೇ ತೆಗೆದುಕೊಳ್ಳಬೇಕಾದ ನಿರ್ದಿಷ್ಟ ಕ್ರಮಗಳ ಬಗ್ಗೆ ವಿವರಿಸುತ್ತಾ ಕೇಂದ್ರ ಆರೋಗ್ಯ ಸಚಿವರು ಹೇಳಿದರು.

ಕೊವಿಡ್ 19 ಏಕಾಏಕಿ ಪಸರಿಸುವ ಈ ಸಂದರ್ಭದಲ್ಲಿ ಸಂಭವಿಸಿದ ಎಇಎಸ್ ಪ್ರಕರಣಗಳು ವಿಕೋಪವಾಗದಂತೆ ನೋಡಿಕೊಳ್ಳಬೇಕೆಂದು ಡಾ. ಹರ್ಷವರ್ಧನ್ ಎಲ್ಲರಿಗೂ ಸೂಚಿಸಿದರು.

ಶ್ರೀಮತಿ ಪ್ರೀತಿ ಸೂದನ್, ಕಾರ್ಯದರ್ಶಿ (ಎಚ್‌ಎಫ್‌ಡಬ್ಲ್ಯು), ಶ್ರೀ ರಾಜೇಶ್ ಭೂಷಣ್, ಒಎಸ್‌ಡಿ (ಎಚ್‌ಎಫ್‌ಡಬ್ಲ್ಯು), ಶ್ರೀ ಸಂಜೀವ ಕುಮಾರ್, ವಿಶೇಷ ಕಾರ್ಯದರ್ಶಿ (ಆರೋಗ್ಯ), ಶ್ರೀಮತಿ ಎಂ.ಎಸ್. ವಂದನಾ ಗುರ್ನಾನಿ, ಎಎಸ್ ಮತ್ತು ಎಂಡಿ (ಎನ್‌ಎಚ್‌ಎಂ) ಜೊತೆಗೆ ಬಿಹಾರ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ), ಕಾರ್ಯದರ್ಶಿ-ಕಮ್-ಸಿಇಒ, ಬಿಹಾರ ಸರ್ಕಾರ, ಆರೋಗ್ಯ ಸುರಕ್ಷ ಸಮಿತಿ, ಬಿಹಾರ ಸರ್ಕಾರ, ಆರೋಗ್ಯ ಸೇವೆಗಳ ನಿರ್ದೇಶಕರು, ಬಿಹಾರ ಸರ್ಕಾರ, ನಿರ್ದೇಶಕರು, ದೆಹಲಿಯ ಎನ್‌ಸಿಡಿಸಿ, ಪಾಟ್ನಾದ ನಿರ್ದೇಶಕ ಏಮ್ಸ್, ಬಿಹಾರದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ/ ಜಿಲ್ಲಾಧಿಕಾರಿಗಳು ಮುಂತಾದವರು ಈ ಸಭೆಯಲ್ಲಿ ಭಾಗವಹಿಸಿದ್ದರು. ಬಿಹಾರ ಸರ್ಕಾರದ ಅಧೀನದಲ್ಲಿರುವ ಎಲ್ಲಾ ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರು, ಬಿಹಾರದ ಎಲ್ಲಾ ಜಿಲ್ಲೆಗಳ ರಾಜ್ಯ ಕಣ್ಗಾವಲು ಅಧಿಕಾರಿಗಳು ಮತ್ತು ಬಿಹಾರದ ಎಲ್ಲಾ ಜಿಲ್ಲೆಗಳ ಸಿಡಿಎಂಒಗಳು / ಸಿಎಮ್ಹೆಚ್ಒಗಳು ಜಾಲತಾಣದ ಕೊಂಡಿಯ ಸಂಪರ್ಕ ಮೂಲಕ ಸಭೆಯಲ್ಲಿ ಭಾಗವಹಿಸಿದರು.

***



(Release ID: 1620411) Visitor Counter : 192