ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಹೊಸ ಮಾಹಿತಿ

Posted On: 01 MAY 2020 5:37PM by PIB Bengaluru

ಕೋವಿಡ್-19 ಹೊಸ ಮಾಹಿತಿ

 

ಶ್ರೇಣೀಕೃತ, ಹತೋಟಿಯಲ್ಲಿಡುವ ಮತ್ತು ಸಕ್ರಿಯ ವಿಧಾನದ ಮೂಲಕ, ಕೋವಿಡ್-19 ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ . ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ರವರು ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ನಿರ್ವಹಣೆಗಾಗಿ ಮತ್ತು ಕೋವಿಡ್-19 ಕ್ಕಾಗಿ ರಾಜ್ಯದ ಪರಿಸ್ಥಿತಿಯ ಮೌಲ್ಯಮಾಪನ ಮಾಡಲು ಮತ್ತು ಪರಿಶೀಲಿಸಲು ಇಂದು ಬಿಹಾರದ ಆರೋಗ್ಯ ಸಚಿವರಾದ ಶ್ರೀ ಮಂಗಲ್ ಪಾಂಡೆ, ಕೇಂದ್ರ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆಯವರ ಸಮ್ಮುಖದಲ್ಲಿ ಚರ್ಚೆ ನಡೆಸಿದರು.

ದೇಶದ ಎಲ್ಲಾ ಜಿಲ್ಲೆಗಳನ್ನು ಹಸಿರು, ಕಿತ್ತಳೆ ಮತ್ತು ಕೆಂಪು ವಲಯಗಳಾಗಿ ವಿಂಗಡಿಸಲಾಗಿದೆ. ಸೋಂಕಿನ ಪ್ರಕರಣಗಳು ಇರುವ ಜಿಲ್ಲೆಗಳು, ಅಂದರೆ ಕೆಂಪು ಮತ್ತು ಕಿತ್ತಳೆ ವಲಯಗಳಲ್ಲಿ ಕೇಂದ್ರೀಕೃತ ಪ್ರಯತ್ನಗಳ ಮೂಲಕ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಮತ್ತು ಜಿಲ್ಲಾಡಳಿತದ ಪರಿಣಾಮಕಾರಿ ಮತ್ತು ಕಠಿಣವಾದ ನಿಯಂತ್ರಣದ ಕ್ರಮಗಳ ಮೂಲಕ ಪ್ರಸರಣ ಸರಪಳಿಯನ್ನು ಮುರಿಯಬಲ್ಲವು ಎಂಬುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ.

ಸೋಂಕಿನ ಪ್ರಕರಣಗಳ ಭೌಗೋಳಿಕ ಪ್ರಸರಣ ಮತ್ತು ಸಂಪರ್ಕಗಳು; ಉತ್ತಮವಾಗಿ ಗುರುತಿಸಲಾದ ಪರಿಧಿಯನ್ನು ಹೊಂದಿರುವ ಪ್ರದೇಶಗಳು ಮತ್ತು ಜಾರಿಗೊಳಿಸುವಿಕೆಯ ಮಾಹಿತಿ, ಸೋಂಕಿನ ಪ್ರಕರಣಗಳು ಮತ್ತು ಸಂಪರ್ಕಗಳ ಮಾಹಿತಿಯನ್ನು ಗಣನೆಗೆ ತೆಗೆದುಕೊಂಡು ನಿಯಂತ್ರಣ ವಲಯಗಳನ್ನು ರೂಪಿಸಬೇಕು;.

ನಿಯಂತ್ರಣ ವಲಯಗಳು ವಸತಿ ಪ್ರದೇಶಗಳು / ಮೊಹಲ್ಲಾಗಳು / ಮುನಿಸಿಪಲ್ ವಾರ್ಡ್ಗಳು ಅಥವಾ ಪೊಲೀಸ್ ಠಾಣೆ ಪ್ರದೇಶ / ಪುರಸಭೆ ವಲಯಗಳು / ಪಟ್ಟಣಗಳು ಇತ್ಯಾದಿಗಳು ಇರಬಹುದು ಎಂದು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಗ್ರಾಮೀಣ ಪ್ರದೇಶಗಳ ಸಂದರ್ಭದಲ್ಲಿ, ವಲಯಗಳು ಗ್ರಾಮ / ಗ್ರಾಮದ ಸಮೂಹಗಳಾಗಿರಬಹುದು ಅಥವಾ ಪೊಲೀಸ್ ಠಾಣೆಗಳ ಗುಂಪು / ಗ್ರಾಮ ಪಂಚಾಯಿತಿಗಳು / ಬ್ಲಾಕ್ ಇತ್ಯಾದಿಗಳಾಗಿರಬಹುದು.

ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳುಬಫರ್ ವಲಯಗಳು ಮತ್ತು ನಿಯಂತ್ರಣ ವಲಯಗಳನ್ನು ಸ್ಪಷ್ಟವಾಗಿ ಗುರುತಿಸಬೇಕಾಗಿದೆ. ನಿಯಂತ್ರಣ ವಲಯಗಳಲ್ಲಿ, ಕಟ್ಟುನಿಟ್ಟಾದ ಗಡಿಯ ನಿಯಂತ್ರಣ, ಇದಕ್ಕಾಗಿ ರಚಿಸಲಾದ ವಿಶೇಷ ತಂಡಗಳಿಂದ ಮನೆಯಿಂದ ಮನೆಗೆ ಸಕ್ರಿಯ ಹುಡುಕಾಟ, ಮಾದರಿ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಪ್ರಕರಣಗಳ ಪರೀಕ್ಷೆ, ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ದೃಢಪಡಿಸಿದ ಎಲ್ಲಾ ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆ ಬಫರ್ ವಲಯಗಳ ಪ್ರಕರಣ, ಆರೋಗ್ಯ ಸೌಲಭ್ಯಗಳಲ್ಲಿನ ಐಎಲ್ಐ / ಎಸ್ ಆರ್ ಪ್ರಕರಣಗಳ ಮೇಲ್ವಿಚಾರಣೆಯ ಮೂಲಕ ಪ್ರಕರಣಗಳಿಗೆ ವ್ಯಾಪಕ ಕಣ್ಗಾವಲು ಮಾಡಬೇಕಾಗಿದೆ.

ಈವರೆಗೆ ಒಟ್ಟು 8,888 ಜನರನ್ನು ಗುಣಪಡಿಸಲಾಗಿದೆ. ಇದು ನಮ್ಮ ಒಟ್ಟು ಚೇತರಿಕೆ ಪ್ರಮಾಣವು 25.37% ಆಗಿದೆ. ದೃಢಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 35,043 ಆಗಿದೆ. ನಿನ್ನೆಯಿಂದ, ಭಾರತದಲ್ಲಿ ಕೋವಿಡ್-19 ದೃಢಪಡಿಸಿದ ಪ್ರಕರಣಗಳ ಸಂಖ್ಯೆಯಲ್ಲಿ 1,993 ಹೆಚ್ಚಳ ಕಂಡುಬಂದಿದೆ.

ಸೋಂಕಿನ ಪ್ರಸರಣದ ಸರಪಳಿಯನ್ನು ಮುರಿಯಲು, ಸಾಬೂನು ಮತ್ತು ನೀರಿನಿಂದ ಕೈ ತೊಳೆಯುವುದು ಅಥವಾ ಸ್ಯಾನಿಟೈಜರ್ ಬಳಸುವುದು, ಟೇಬಲ್-ಟಾಪ್ಸ್, ಚೇರ್ ಹ್ಯಾಂಡಲ್ಸ್, ಕೀಬೋರ್ಡ್, ಮೌಸ್, ಮೌಸ್ ಪ್ಯಾಡ್, ಮುಂತಾದ ಪದೇ ಪದೇ ಸ್ಪರ್ಶಿಸುವ ಎಲ್ಲಾ ಮೇಲ್ಭಾಗಗಳನ್ನು ಸೋಂಕುರಹಿತ ಮತ್ತು ನಿಯಮಿತವಾಗಿ ಸ್ವಚ್ಛಗೊಳಿಸುವುದು; ಪ್ರತಿಯೊಬ್ಬರೂ ಮುಖಗವಸು ಅಥವಾ ಮುಖದ ಹೊದಿಕೆಯನ್ನು ಸೂಕ್ತವಾಗಿ ಧರಿಸಬೇಕು; ಅಪಾಯದ ಸ್ವಯಂ ಮೌಲ್ಯಮಾಪನಕ್ಕಾಗಿ ಕೊರೊನಾ ಟ್ರ್ಯಾಕರ್ ಅಪ್ಲಿಕೇಶನ್ "ಆರೋಗ್ಯ ಸೆತು" ವನ್ನು ಡೌನ್ಲೋಡ್ ಮಾಡಿಕೊಳ್ಳುವುದು; ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಮುಂತಾದ ಕ್ರಮಗಳನ್ನು ಅನುಸರಿಸುವುದು ಮುಖ್ಯ ಎಂದು ಪುನರುಚ್ಚರಿಸಲಾಗಿದೆ.

ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in, ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***



(Release ID: 1620242) Visitor Counter : 229