PIB Headquarters
ಕೋವಿಡ್-19: ಪಿ ಐ ಬಿ ದೈನಿಕ ವರದಿ
Posted On:
01 MAY 2020 7:00PM by PIB Bengaluru
ಕೋವಿಡ್-19: ಪಿ ಐ ಬಿ ದೈನಿಕ ವರದಿ
(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)
- ಇದುವರೆಗೆ ದೇಶದಲ್ಲಿ 35,043 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 8,888 ಮಂದಿ ಗುಣಮುಖರಾಗಿದ್ದಾರೆ. ಇದಿಂದಾಗಿ ಚೇತರಿಕೆಯ ಪ್ರಮಾಣ ಶೇ.25.37ಕ್ಕೇರಿದೆ.
- ನಿನ್ನೆಯಿಂದ 1,993 ಕೋವಿಡ್-19 ಪ್ರಕರಣಗಳು ಹೆಚ್ಚಾಗಿವೆ.
- ದೇಶದ ಎಲ್ಲಾ ಜಿಲ್ಲೆಗಳನ್ನು ಹಸಿರು, ಕಿತ್ತಳೆ ಮತ್ತು ಕೆಂಪು ವಲಯಗಳಾಗಿ ವಿಂಗಡಿಸಲಾಗಿದೆ.
- ವಿವಿಧ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಸಂಬಂಧ ಪ್ರಧಾನಮಂತ್ರಿಯವರು ಸರಣಿ ಸಬೆಗಳನ್ನು ನಡೆಸಿದರು.
- ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು ಮತ್ತಿತರ ಇತರೆಡೆ ಸಿಲುಕಿರುವ ಜನರ ಸಂಚಾರಕ್ಕೆ ವಿಶೇಷ ರೈಲುಗಳಿಗೆ ಗೃಹ ಸಚಿವಾಲಯದ ಅನುಮತಿ.
- ಇತರೆಡೆ ಸಿಲುಕಿರುವ ಜನರ ಸಂಚಾರಕ್ಕಾಗಿ ರೈಲ್ವೆಯಿಂದ ಶ್ರಮಿಕ್ ವಿಶೇಷ ರೈಲುಗಳ ಆರಂಭ.
- ದೇಶದಲ್ಲಿ ಸರಕು ಸಾಮಗ್ರಿಗಳ ಪೂರೈಕೆ ಸರಪಳಿಯನ್ನು ನಿರ್ವಹಿಸಲು ಟ್ರಕ್ ಗಳು/ ಸರಕು ವಾಹಕಗಳ ಮುಕ್ತ ಸಂಚಾರವನ್ನು ಖಾತ್ರಿಪಡಿಸಿಕೊಳ್ಳುವಂತೆ ಗೃಹ ಸಚಿವಾಲಯದಿಂದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ.
- ಏಪ್ರಿಲ್ 2020ರಲ್ಲಿ ಭಾರತೀಯ ಆಹಾರ ನಿಗಮವು 60 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಸಾಗಿಸಿದ್ದು, ಇದು ಮಾಸಿಕ ಸರಾಸರಿಯ ಎರಡು ಪಟ್ಟಿಗೂ ಹೆಚ್ಚಾಗಿದೆ.
ಕೋವಿಡ್ - 19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್
ಇದುವರೆಗೆ ಒಟ್ಟು 8,888 ಜನರು ಗುಣಮುಖರಾಗಿದ್ದಾರೆ. ಇದು ನಮ್ಮ ಒಟ್ಟು ಚೇತರಿಕೆ ದರವನ್ನು ಶೇ.25.37 ಕ್ಕೆ ತಲುಪಿಸಿದೆ. ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ ಈಗ 35,043. ಭಾರತದಲ್ಲಿ ನಿನ್ನೆಯಿಂದ COVID-19 ದೃಢಪಟ್ಟ ಪ್ರಕರಣಗಳ ಸಂಖ್ಯೆಯಲ್ಲಿ 1,993 ಹೆಚ್ಚಳ ಕಂಡುಬಂದಿದೆ. ಪ್ರಕರಣಗಳು ಕಂಡು ಬಂದಿರುವ ಜಿಲ್ಲೆಗಳು ಅಂದರೆ ಕೆಂಪು ಮತ್ತು ಕಿತ್ತಳೆ ವಲಯಗಳಲ್ಲಿ ಪ್ರಸರಣ ಸರಪಳಿಯನ್ನು ಮುರಿಯಲು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾಡಳಿತಗಳು ಪರಿಣಾಮಕಾರಿ ಮತ್ತು ಕಟ್ಟುನಿಟ್ಟಾದ ನಿಗ್ರಹ ಕ್ರಮಗಳ ಮೂಲಕ ಕೇಂದ್ರೀಕೃತ ಪ್ರಯತ್ನಗಳನ್ನು ಮಾಡಬೇಕಾದ ಅಗತ್ಯವಿದೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620059
ನಾಗರಿಕ ವಿಮಾನಯಾನ ಕ್ಷೇತ್ರದ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿಯವರಿಂದ ಪರಿಶೀಲನಾ ಸಭೆ
ಭಾರತದ ನಾಗರಿಕ ವಿಮಾನಯಾನ ಕ್ಷೇತ್ರವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸಹಾಯ ಮಾಡುವ ಕಾರ್ಯತಂತ್ರಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿಯವರು ಸಮಗ್ರ ಸಭೆ ನಡೆಸಿದರು. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮತ್ತು ವಿಮಾನಯಾನ ಸಂಸ್ಥೆಗಳಿಗೆ ವೆಚ್ಚವನ್ನು ಕಡಿಮೆ ಮಾಡಲು ಹಾರಾಟದ ಸಮಯವನ್ನು ಕಡಿಮೆ ಮಾಡುವ ಕುರಿತು ಮಿಲಿಟರಿ ವ್ಯವಹಾರಗಳ ಇಲಾಖೆಯ ಸಹಕಾರದೊಂದಿಗೆ ಭಾರತೀಯ ವಾಯು ಪ್ರದೇಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕೆಂದು ನಿರ್ಧರಿಸಲಾಯಿತು. ಹೆಚ್ಚಿನ ಆದಾಯವನ್ನು ಗಳಿಸಲು ಮತ್ತು ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ದಕ್ಷತೆಯನ್ನು ತರಲು, ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೂಲಕ ಪಿಪಿಪಿ ಆಧಾರದ ಮೇಲೆ ಇನ್ನೂ 6 ವಿಮಾನ ನಿಲ್ದಾಣಗಳನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸೂಚಿಸಲಾಯಿತು.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620077
ಇಂಧನ ವಲಯದ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಇಂಧನ ವಲಯದ ಬಗ್ಗೆ ವಿಸ್ತೃತ ಸಭೆ ನಡೆಸಿದರು ಮತ್ತು ಕೋವಿಡ್-19 ರ ಪರಿಣಾಮದ ಬಗ್ಗೆ ಮಾಹಿತಿ ಪಡೆದರು. ಇಂಧನ ಕ್ಷೇತ್ರದ ಸುಸ್ಥಿರತೆ, ಸ್ಥಿತಿಸ್ಥಾಪಕತ್ವ ಮತ್ತು ದಕ್ಷತೆಯನ್ನು ಹೆಚ್ಚಿಸಲು ವಿವಿಧ ದೀರ್ಘಕಾಲೀನ ಸುಧಾರಣೆಗಳ ಬಗ್ಗೆಯೂ ಅವರು ಚರ್ಚಿಸಿದರು. ಚರ್ಚೆಯಲ್ಲಿ ಸುಗಮ ವ್ಯವಹಾರ, ನವೀಕರಿಸಬಹುದಾದ ಪ್ರಸರಣ; ಕಲ್ಲಿದ್ದಲು ಪೂರೈಕೆಯಲ್ಲಿ ನಮ್ಯತೆ; ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಪಾತ್ರ; ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚಿಸುವ ಕುರಿತ ಕ್ರಮಗಳು ಸೇರಿದ್ದವು. ಆರ್ಥಿಕತೆಯನ್ನು ಮುನ್ನಡೆಸುವಲ್ಲಿ ಇಂಧನ ಕ್ಷೇತ್ರದ ಮಹತ್ವವನ್ನು ಪ್ರಧಾನಿಯವರು ಒತ್ತಿಹೇಳಿದರು. ಖಾಸಗಿ ಹೂಡಿಕೆಗಳನ್ನು ಆಕರ್ಷಿಸಲು ಒಪ್ಪಂದಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅಗತ್ಯವನ್ನು ಚರ್ಚಿಸಲಾಯಿತು.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620072
ರಕ್ಷಣೆ ಮತ್ತು ವೈಮಾಂತರಿಕ್ಷ ವಲಯದ ಉತ್ತೇಜನ ಕುರಿತು ಪ್ರಧಾನಿ ಮೋದಿಯವರಿಂದ ಸಭೆ
ಕೋವಿಡ್-19 ರ ಹಿನ್ನೆಲೆಯಲ್ಲಿ ಆರ್ಥಿಕತೆಗೆ ಉತ್ತೇಜನ ನೀಡಲು ಸಶಸ್ತ್ರ ಪಡೆಗಳ ಅಲ್ಪಾವಧಿ ಮತ್ತು ದೀರ್ಘಾವಧಿ ಅಗತ್ಯತೆಗಳನ್ನು ಪೂರೈಸುವ ಉಪಕ್ರಮಗಳ ಮೂಲಕ ಭಾರತದಲ್ಲಿ ಸದೃಢ ಮತ್ತು ಸ್ವಾವಲಂಬಿ ರಕ್ಷಣಾ ಉದ್ಯಮವನ್ನು ಖಚಿತಪಡಿಸಿಕೊಳ್ಳಲು ಸಂಭಾವ್ಯ ಸುಧಾರಣೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ನಡೆಸಿದರು. ಸಶಸ್ತ್ರ ಕಾರ್ಖಾನೆಗಳ ಕಾರ್ಯಚಟುವಟಿಕೆಯ ಸುಧಾರಣೆ, ಖರೀದಿ ಕಾರ್ಯವಿಧಾನಗಳನ್ನು ಸುಗಮಗೊಳಿಸುವುದು, ಕೇಂದ್ರೀಕೃತ ಸಂಪನ್ಮೂಲ ಹಂಚಿಕೆ, ಸಂಶೋಧನೆ ಮತ್ತು ಅಭಿವೃದ್ದಿ / ನಾವೀನ್ಯತೆಯನ್ನು ಉತ್ತೇಜಿಸುವುದು, ನಿರ್ಣಾಯಕ ರಕ್ಷಣಾ ತಂತ್ರಜ್ಞಾನಗಳಲ್ಲಿ ಹೂಡಿಕೆಯನ್ನು ಆಕರ್ಷಿಸುವುದು ಮತ್ತು ರಫ್ತು ಉತ್ತೇಜನಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1619955
ಕಲ್ಲಿದ್ದಲು ಮತ್ತು ಗಣಿಗಾರಿಕೆ ಕ್ಷೇತ್ರಗಳ ಉತ್ತೇಜನ ಕುರಿತು ಪ್ರಧಾನಿ ಮೋದಿಯವರಿಂದ ಸಭೆ
ಕೋವಿಡ್-19 ರ ಹಿನ್ನೆಲೆಯಲ್ಲಿ ಆರ್ಥಿಕತೆಗೆ ಉತ್ತೇಜನ ನೀಡಲು ಗಣಿ ಮತ್ತು ಕಲ್ಲಿದ್ದಲು ಕ್ಷೇತ್ರಗಳಲ್ಲಿನ ಸಂಭಾವ್ಯ ಆರ್ಥಿಕ ಸುಧಾರಣೆಗಳನ್ನು ಕುರಿತು ಪ್ರಧಾನಿ ನರೇಂದ್ರ ಮೋದಿಯವರು ವಿಸ್ತೃತ ಸಭೆ ನಡೆಸಿದರು. ದೇಶೀಯ ಮೂಲಗಳಿಂದ ಖನಿಜ ಸಂಪನ್ಮೂಲಗಳ ಸುಲಭ ಮತ್ತು ಸಮೃದ್ಧ ಲಭ್ಯತೆಯನ್ನು ಖಾತರಿಪಡಿಸುವುದು, ಪರಿಶೋಧನೆಯನ್ನು ಹೆಚ್ಚಿಸುವುದು, ಹೂಡಿಕೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಆಕರ್ಷಿಸುವುದು, ಪಾರದರ್ಶಕ ಮತ್ತು ಪರಿಣಾಮಕಾರಿ ಪ್ರಕ್ರಿಯೆಗಳ ಮೂಲಕ ಬೃಹತ್ ಪ್ರಮಾಣದ ಉದ್ಯೋಗ ಸೃಷ್ಟಿಯ ಬಗ್ಗೆ ಚರ್ಚೆ ನಡೆಸಲಾಯಿತು. ಹೆಚ್ಚುವರಿ ಘಟಕಗಳನ್ನು ಹರಾಜು ಮಾಡುವುದು, ಹರಾಜಿನಲ್ಲಿ ವ್ಯಾಪಕ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು, ಖನಿಜ ಸಂಪನ್ಮೂಲಗಳ ಉತ್ಪಾದನೆಯನ್ನು ಹೆಚ್ಚಿಸುವುದು, ಗಣಿಗಾರಿಕೆ ವೆಚ್ಚ ಮತ್ತು ಸಾರಿಗೆ ವೆಚ್ಚವನ್ನು ಕಡಿಮೆ ಮಾಡುವುದು, ಸುಗಮ ವ್ಯಾಪಾರವನ್ನು ಹೆಚ್ಚಿಸುವುದು ಮತ್ತು ಪರಿಸರ ಸುಸ್ಥಿರ ಅಭಿವೃದ್ಧಿಯೊಂದಿಗೆ ಇಂಗಾಲವನ್ನು ಕಡಿಮೆ ಮಾಡುವುದು ಸಹ ಚರ್ಚೆಯ ಪ್ರಮುಖ ಭಾಗವಾಗಿದ್ದವು.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1619954
ಕೋವಿಡ್-19 ಲಾಕ್ಡೌನ್ ನಿಂದಾಗಿ ದೇಶಾದ್ಯಂತ ಅಲ್ಲಲ್ಲಿ ಸಿಲುಕಿರುವ ಜನರ ಸಂಚಾರಕ್ಕಾಗಿ ವಿಶೇಷ ರೈಲುಗಳನ್ನು ಓಡಿಸಲಾಗುವುದು
ರೈಲ್ವೆ ಸಚಿವಾಲಯವು (ಎಂಒಆರ್) ವಿಶೇಷ ರೈಲುಗಳ ಮೂಲಕ ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳ ಸಂಚಾರಕ್ಕೆ ಅನುಮತಿ ನೀಡುವಂತೆ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620024
ಲಾಕ್‌ಡೌನ್ನಿಂದಾಗಿ ವಿವಿಧ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರರನ್ನು ಸ್ಥಳಾಂತರಿಸಲು ರೈಲ್ವೆಯಿಂದ ಶ್ರಮಿಕ್ ವಿಶೇಷ ರೈಲುಗಳು
ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯಂತೆ, ಲಾಕ್‌ಡೌನ್‌ನಿಂದಾಗಿ ವಿವಿಧ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳ ಸ್ಥಳಾಂತರಕ್ಕಾಗಿ "ಕಾರ್ಮಿಕರ ದಿನ" ವಾದ ಇಂದಿನಿಂದ "ಶ್ರಮಿಕ್ ವಿಶೇಷ" ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ, ಅಂತಹ ಸಿಕ್ಕಿಬಿದ್ದ ವ್ಯಕ್ತಿಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಪ್ರಮಾಣಿತ ಪ್ರೋಟೋಕಾಲ್‌ಗಳ ಪ್ರಕಾರ ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಕೋರಿಕೆಯ ಮೇರೆಗೆ ಈ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಈ “ಶ್ರಮಿಕ್ ವಿಶೇಷ” ಗಳ ಸಮನ್ವಯ ಮತ್ತು ಸುಗಮ ಕಾರ್ಯಾಚರಣೆಗಾಗಿ ರೈಲ್ವೆ ಮತ್ತು ರಾಜ್ಯ ಸರ್ಕಾರಗಳು ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸುತ್ತವೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620027
ದೇಶದಲ್ಲಿ ಸರಕು ಮತ್ತು ಸೇವೆಗಳ ಪೂರೈಕೆ ಸರಪಳಿಯನ್ನು ನಿರ್ವಹಿಸಲು ಅಗತ್ಯವಾದ ಟ್ರಕ್ಗಳು/ ಸರಕುಗಳ ವಾಹನಗಳ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳಿ: ರಾಜ್ಯಗಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಗೃಹ ಸಚಿವಾಲಯ ಸೂಚನೆ
ಲಾಕ್‌ಡೌನ್ ಕ್ರಮಗಳ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಖಾಲಿ ಟ್ರಕ್‌ಗಳು ಸೇರಿದಂತೆ ಟ್ರಕ್‌ಗಳು ಮತ್ತು ಸರಕು ಸಾಗಣೆಯ ಸಂಚಾರಕ್ಕೆ ಯಾವುದೇ ಪ್ರತ್ಯೇಕ ಪಾಸ್‌ಗಳು ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯವು (ಎಂಎಚ್‌ಎ) ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಪುನರುಚ್ಚರಿಸಿದೆ. ಲಾಕ್ ಡೌನ್ ಅವಧಿಯಲ್ಲಿ ದೇಶಾದ್ಯಂತ ಸರಕು ಮತ್ತು ಸೇವೆಗಳ ಪೂರೈಕೆ ಸರಪಳಿಯನ್ನು ನಿರ್ವಹಿಸಲು ಈ ಮುಕ್ತ ಸಂಚಾರ ಅತ್ಯಗತ್ಯ ಎಂದು ಒತ್ತಿಹೇಳಲಾಗಿದೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1619675
ಭಾರತ ಆಹಾರ ನಿಗಮದಿಂದ ಏಪ್ರಿಲ್, 2020 ರಲ್ಲಿ ಮಾಸಿಕ ಸರಾಸರಿ 30 ಲಕ್ಷ ಟನ್ ಗಿಂತ ಎರಡು ಪಟ್ಟು ಹೆಚ್ಚು ಅಂದರೆ 60 ಲಕ್ಷ ಟನ್ ಆಹಾರ ಧಾನ್ಯಗ ಸಾಗಾಟ
ಭಾರತೀಯ ಆಹಾರ ನಿಗಮ (ಎಫ್‌ಸಿಐ) 2020 ರ ಏಪ್ರಿಲ್ ತಿಂಗಳಲ್ಲಿ 60 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಸಾಗಾಟಮಾಡಿದೆ. ಈ ಮೊದಲು, ಮಾರ್ಚ್ 2014 ರಲ್ಲಿ ಸಾಧಿಸಿದ ಒಂದು ತಿಂಗಳ ಗರಿಷ್ಠ ಸಾಗಾಟ 38 ಲಕ್ಷ ಮೆಟ್ರಿಕ್ ಟನ್ ಗಿಂತಲೂ ಇದು ಶೇ.57% ರಷ್ಟು ಹೆಚ್ಚಾಗಿದೆ. ಇದು ಸಾಮಾನ್ಯ ಮಾಸಿಕ ಸರಾಸರಿ ಸಾಗಾಟ ಸುಮಾರು 30 ಲಕ್ಷ ಮೆಟ್ರಿಕ್ ಟನ್ ಗಿಂತ ಎರಡು ಪಟ್ಟು ಹೆಚ್ಚು. ಈ ಸೂಚಿತ ಪ್ರಮಾಣದಲ್ಲಿ ಕಾಶ್ಮೀರ ಕಣಿವೆ ಮತ್ತು ಲೇಹ್ / ಲಡಾಖ್‌ಗೆ ಸುಮಾರು ಒಂದು ಲಕ್ಷ ಮೆಟ್ರಿಕ್ ಟನ್ ರಸ್ತೆಯ ಮೂಲಕ ಮತ್ತು ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ ಮತ್ತು ಮೇಘಾಲಯಕ್ಕೆ ಸುಮಾರು 0.81 ಲಕ್ಷ ಮೆಟ್ರಿಕ್ ಟನ್ ರಸ್ತೆ ಮೂಲಕ ಸಾಗಾಟ ಮಾಡಲಾಯಿತು. ಸುಮಾರು 0.1 ಎಲ್‌ಎಮ್‌ಟಿ ದಾಸ್ತಾನುಗಳನ್ನು ಅಂಡಮಾನ್ ಮತ್ತು ಲಕ್ಷದ್ವೀಪ ದ್ವೀಪಗಳಿಗೆ ಸಮುದ್ರದ ಮೂಲಕ ಸಾಗಿಸಲಾಯಿತು. ಕೋವಿಡ್ -19 ರ ನಡುವೆಯೂ, ಎಫ್‌ಸಿಐ 2020 ರ ಏಪ್ರಿಲ್ ತಿಂಗಳಲ್ಲಿ ಸುಮಾರು 58 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ವಿವಿಧ ರಾಜ್ಯಗಳಲ್ಲಿ ಇಳಿಸಿದೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1619979
ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ಇ-ನ್ಯಾಮ್ ವೇದಿಕೆಯೊಂದಿಗೆ 7 ರಾಜ್ಯಗಳ 200 ಹೊಸ ಮಾರುಕಟ್ಟೆಗಳು ಸಂಯೋಜನೆ
2020 ರ ಮೇ ವೇಳೆಗೆ ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ಇ-ನ್ಯಾಮ್ ವೇದಿಕೆಯಲ್ಲಿ ಸುಮಾರು ಒಂದು ಸಾವಿರ ಮಾರುಕಟ್ಟೆಗಳು ಸೇರಲಿವೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಹೇಳಿದ್ದಾರೆ. ಇಂದು ಕೃಷಿ ಭವನದಲ್ಲಿ ನಡೆದ 7 ರಾಜ್ಯಗಳ 200 ಹೊಸ ಮಾರುಕಟ್ಟೆಗಳನ್ನು ಇ-ನ್ಯಾಮ್ ವೇದಿಕೆಗೆ ಸೇರಿಸುವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಕರ್ನೂಲ್ ಮತ್ತು ಹುಬ್ಬಳ್ಳಿಯ ಮಾರುಕಟ್ಟೆಗಳ ನಡುವೆ ವಿಡಿಯೋ ಕಾನ್ಫರೆನ್ಸ್ ಮೂಲಕ ನೆಲಗಡಲೆ ಮತ್ತು ಮೆಕ್ಕೆ ಜೋಳದ ನೇರ ವ್ಯಾಪಾರಕ್ಕೂ ಸಚಿವರು ಸಾಕ್ಷಿಯಾದರು.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620050
ಭಾರತವನ್ನು ಆದ್ಯತೆಯ ತಾಣವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಗೆ ಶ್ರೀ ಪಿಯೂಷ್ ಗೋಯಲ್ ಕರೆ ನೀಡಿದ್ದಾರೆ
ತಮ್ಮ ದೇಶಗಳಲ್ಲಿ ಅಸ್ತಿತ್ವದಲ್ಲಿರುವ ಭಾರತೀಯ ವ್ಯಾಪಾರ ಮತ್ತು ರಫ್ತಿಗೆ ಇರುವ ಅವಕಾಶಗಳನ್ನು ಗುರುತಿಸುವಲ್ಲಿ ಮತ್ತು ಭಾರತವನ್ನು ಆದ್ಯತೆಯ ತಾಣವನ್ನಾಗಿ, ಹೂಡಿಕೆಗೆ ವಿಶ್ವಾಸಾರ್ಹ ತಾಣವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಗೆ ಕರೆ ನೀಡಿದ್ದಾರೆ. ಅವರು ನಿನ್ನೆ ಸಂಜೆ ವಿದೇಶಾಂಗ ಸಚಿವ ಶ್ರೀ ಎಸ್. ಜೈಶಂಕರ್ ಅವರೊಡನೆ ವಿವಿಧ ಭೌಗೋಳಿಕ ಪ್ರದೇಶಗಳಿಂದ 131 ಮಿಷನ್ ಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡುತ್ತಿದ್ದರು, ನಮ್ಮ ಕೈಗಾರಿಕೆಗಳನ್ನು ಸುಧಾರಿಸಲು ಹೊಸ ಸುಧಾರಣೆಗಳನ್ನು ತರಲು ಈ ಕೋವಿಡ್-19 ಪರಿಸ್ಥಿತಿಯನ್ನು ಅವಕಾಶವನ್ನಾಗಿ ಪರಿವರ್ತಿಸಲು ಎಲ್ಲರೂ ಕೆಲಸ ಮಾಡಬೇಕು ಎಂದು ಶ್ರೀ ಗೋಯಲ್ ಹೇಳಿದರು.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620062
ಸರಕು ಸಾಗಣೆ ಕಾರ್ಯಾಚರಣೆಯ ಸುಧಾರಣೆಗೆ ಲಾಜಿಸ್ಟಿಕ್ಸ್ ಉದ್ಯಮದ ನಾಯಕರೊಂದಿಗೆ ರೈಲ್ವೆ ಸಚಿವರ ಸಭೆ
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ರೈಲ್ವೆ ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದ ಸಚಿವರು, ಕೋವಿಡ್ ಬಿಕ್ಕಟ್ಟನ್ನು ರೈಲ್ವೆ ಬಹಳ ಕಾಳಜಿ ಮತ್ತು ಸಹಾನುಭೂತಿಯಿಂದ ನೋಡುತ್ತಿದೆ ಮತ್ತು ಈ ಅವಧಿಯಲ್ಲಿ ರೈಲ್ವೆಯು ದೇಶಾದ್ಯಂತ ಅಗತ್ಯ ವಸ್ತುಗಳನ್ನು ಸಾಗಿಸುವ ಮೂಲಕ ರಾಷ್ಟ್ರಕ್ಕೆ ಜೀವಸೆಲೆಯಾಗಿ ಕಾರ್ಯನಿರ್ವಹಿಸಿದೆ ಎಂದರು. "ಮುಖ್ಯ ಮಾರ್ಗಗಳಿಗೆ ಸಂಪರ್ಕವನ್ನು ಹೆಚ್ಚಿಸುವುದು, ದೀರ್ಘಾವಧಿಯ ಬಾಕಿ ಇರುವ ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸುವುದು, ಹಾನಿಗೊಳಗಾದ ಸೇತುವೆಗಳನ್ನು ಕಿತ್ತುಹಾಕುವುದು / ಸರಿಪಡಿಸುವುದು ಮತ್ತು ಅಸ್ತಿತ್ವದಲ್ಲಿರುವ ಮೂಲಸೌಕರ್ಯ ಸೌಲಭ್ಯಗಳನ್ನು ಸುಧಾರಿಸುವುದು ಮುಂತಾದ ನಮ್ಮ ದೀರ್ಘಾವಧಿಯ ಬಾಕಿ ಇರುವ ಕೆಲವು ಕೆಲಸಗಳನ್ನು ಪೂರ್ಣಗೊಳಿಸಲು ನಾವು ಈ ಸಮಯವನ್ನು ಬಳಸಿಕೊಂಡಿದ್ದೇವೆ" ಎಂದು ಶ್ರೀ ಗೋಯಲ್ ಹೇಳಿದರು.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620046
ಆದ್ಯತೆಯ ಮೇಲೆ ವೈದ್ಯಕೀಯ ಉಪಕರಣಗಳನ್ನು ಖರೀದಿ; ಮೇಕ್ ಇನ್ ಇಂಡಿಯಾಕ್ಕೆ ಒತ್ತು
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620047
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ (ಎನ್.ಟಿ.ಎ) ವಿವಿಧ ಪರೀಕ್ಷೆಗಳ ಆನ್ಲೈನ್ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ/ ಪರಿಷ್ಕರಣೆ
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ಅವರು, ವಿವಿಧ ಪರೀಕ್ಷೆಗಳಿಗೆ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸುವ ದಿನಾಂಕಗಳನ್ನು ವಿಸ್ತರಿಸಲು / ಪರಿಷ್ಕರಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ಸಲಹೆ ನೀಡಿದ್ದರು. ಅದರಂತೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ವಿವಿಧ ಪರೀಕ್ಷೆಗಳಿಗೆ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸುವ ದಿನಾಂಕಗಳನ್ನು ಮತ್ತಷ್ಟು ವಿಸ್ತರಿಸಿದೆ / ಪರಿಷ್ಕರಿಸಿದೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1619916
ವ್ಯವಹಾರಕ್ಕಾಗಿ ಇ.ಸಿ.ಆರ್ ಸಲ್ಲಿಕೆ ಸುಲಭಗೊಳಿಸಿದ ಇ.ಪಿ.ಎಫ್.ಒ
ಕೋವಿಡ್-19 ಸಾಂಕ್ರಾಮಿಕ ತಡೆಗೆ ಸರ್ಕಾರವು ಘೋಷಿಸಿರುವ ಲಾಕ್ಡೌನ್ ಮತ್ತು ಇತರ ಅಡಚಣೆಗಳ ಹಿನ್ನೆಲೆಯಲ್ಲಿ ವ್ಯವಹಾರಗಳು ಮತ್ತು ಉದ್ಯಮಗಳ ಕಾರ್ಯಚಟುವಟಿಕೆಗಳ ಸಾಮಾನ್ಯ ಕಾರ್ಯನಿರ್ವಹಣೆ ಸಾಧ್ಯವಾಗುತ್ತಿಲ್ಲ ಮತ್ತು ನೌಕರರನ್ನು ಉಳಿಸಿಕೊಂಡಿದ್ದರೂ ಸಹ ತಮ್ಮ ಶಾಸನಬದ್ಧ ಬಾಕಿ ಪಾವತಿಸಲು ವ್ಯವಹಾರಗಳು ಮತ್ತು ಉದ್ಯಮಗಳು ನಗದು ಬಿಕ್ಕಟ್ಟನ್ನು ಎದುರಿಸುತ್ತಿವೆ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಇಪಿಎಫ್ ಮತ್ತು ಎಂಪಿ ಆಕ್ಟ್, 1952 ರ ಅಡಿಯಲ್ಲಿ ಅನುಸರಣೆ ಕಾರ್ಯವಿಧಾನವನ್ನು ಇನ್ನಷ್ಟು ಸುಲಭಗೊಳಿಸಲು, ಇ.ಸಿ.ಆರ್.ನಲ್ಲಿ ವರದಿ ಮಾಡಲಾದ ಶಾಸನಬದ್ಧ ಕೊಡುಗೆಗಳ ಪಾವತಿಯಿಂದ ಮಾಸಿಕ ಎಲೆಕ್ಟ್ರಾನಿಕ್-ಚಲನ್ ಕಮ್ ರಿಟರ್ನ್ (ಇಸಿಆರ್) ಸಲ್ಲಿಸುವಿಕೆಯನ್ನು ಬೇರ್ಪಡಿಸಲಾಗಿದೆ. ಕೊಡುಗೆಗಳನ್ನು ಏಕಕಾಲದಲ್ಲಿ ಪಾವತಿಸುವ ಅಗತ್ಯವಿಲ್ಲದೇ ಇಸಿಆರ್ ಅನ್ನು ಈಗ ಉದ್ಯೋಗದಾತರು ಸಲ್ಲಿಸಬಹುದು ಮತ್ತು ಇಸಿಆರ್ ಸಲ್ಲಿಸಿದ ನಂತರ ಉದ್ಯೋಗದಾತನು ನಂತರ ಪಾವತಿಸಬಹುದು. ಮೇಲಿನ ಬದಲಾವಣೆಯು ಉದ್ಯೋಗದಾತರಿಗೆ ಮತ್ತು ಕಾಯಿದೆ ಮತ್ತು ಯೋಜನೆಗಳ ವ್ಯಾಪ್ತಿಗೆ ಬರುವ ನೌಕರರಿಗೆ ಅನುಕೂಲವಾಗಲಿದೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1619928
ಆಯುರಕ್ಷಾ- ಅಖಿಲ ಭಾರತ ಆಯುರ್ವೇದ ಸಂಸ್ಥೆಯಿಂದ ಕೊರೋನಾ ಸೆ ಜಂಗ್- ದೆಹಲಿ ಪೊಲೀಸ್ ಕೆ ಸಂಗ್
ಆಯುಷ್ ಸಚಿವಾಲಯದ ಅಖಿಲ ಭಾರತ ಆಯುರ್ವೇದ ಸಂಸ್ಥೆ (ಎಐಐಎ) ಮತ್ತು ದೆಹಲಿ ಪೊಲೀಸ್ ಇಂದು ನವದೆಹಲಿಯಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿಗಾಗಿ ಆಯುರಕ್ಷಾ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಆಯುರಕ್ಷಾ “ಕೊರೋನಾ ಸೆ ಜಂಗ್- ದೆಹಲಿ ಪೊಲೀಸ್ ಕೆ ಸಂಗ್” ಎಂಬ ಜಂಟಿ ಕಾರ್ಯಕ್ರಮವು ಸರಳ ಮತ್ತು ಸಮಯ ಪರೀಕ್ಷಿತ ಆಯುರ್ವೇದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕ್ರಮಗಳ ಮೂಲಕ ಕೊರೋನದ ವಿರುದ್ಧ ಹೋರಾಡುವ ಗುರಿಯನ್ನು ಹೊಂದಿದೆ. ಆಯುಷ್ ಸಚಿವಾಲಯ ಹೊರಡಿಸಿದ ಸಲಹೆಯಂತೆ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1619678
ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿಯ ಬಳಕೆಗಾಗಿ ಕೇಂದ್ರೀಯ ಭಂಡಾರ ಸಿದ್ಧಪಡಿಸಿದ 4900 ಸುರಕ್ಷತಾ ಕಿಟ್ಗಳು ಡಾ. ಜಿತೇಂದ್ರ ಸಿಂಗ್ ಅವರಿಂದ ಹಸ್ತಾಂತರ
ಡಾ. ಜಿತೇಂದ್ರ ಸಿಂಗ್ ಅವರು ವೈದ್ಯಕೀಯ ಸಮುದಾಯ ಮತ್ತು ಪೊಲೀಸ್ ಪಡೆಯ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು. ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿಗೆ ಮೆಚ್ಚುಗೆಯ ಸೂಚಿಸುವ ಸಂಕೇತವಾಗಿ ಸ್ಯಾನಿಟೈಜರ್, ಹ್ಯಾಂಡ್ ವಾಶ್ ಇತ್ಯಾದಿಗಳನ್ನು ಒಳಗೊಂಡ ಕೇಂದ್ರೀಯ ಭಂಡಾರ ಅವರು ಸಿದ್ಧಪಡಿಸಿದ 4900 ರಕ್ಷಣಾತ್ಮಕ ಕಿಟ್‌ಗಳನ್ನು ಹಸ್ತಾಂತರಿಸಿದರು. ಕಿಟ್‌ಗಳನ್ನು ಆರೋಗ್ಯ ಸಚಿವಾಲಯ ಮತ್ತು ದೆಹಲಿ ಪೊಲೀಸ್ ಪ್ರತಿನಿಧಿಗಳಿಗೆ ಇಂದು ಕಿರು ಕಾರ್ಯಕ್ರಮವೊಂದರಲ್ಲಿ ಹಸ್ತಾಂತರಿಸಲಾಯಿತು.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620053
ಕೋವಿಡ್-19 ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸಲು ಲೈಫ್ಲೈನ್ ಉಡಾನ್ ಯೋಜನೆಯಡಿಯಲ್ಲಿ 415 ವಿಮಾನಗಳ ಕಾರ್ಯಾಚರಣೆ
ಏರ್ ಇಂಡಿಯಾ, ಅಲೈಯನ್ಸ್ ಏರ್, ಐಎಎಫ್ ಮತ್ತು ಖಾಸಗಿ ವಾಹಕಗಳು ಲೈಫ್‌ಲೈನ್ ಉಡಾನ್ ಅಡಿಯಲ್ಲಿ 415 ವಿಮಾನಗಳನ್ನು ಕಾರ್ಯಾಚರಿಸಿವೆ. ಇದುವರೆಗೆ ಸುಮಾರು 779.86 ಟನ್ ಸರಕು ಸಾಗಾಟ ಮಾಡಿವೆ. ಲೈಫ್‌ಲೈನ್ ಉಡಾನ್ ವಿಮಾನಗಳು ಕ್ರಮಿಸಿರುವ ವೈಮಾನಿಕ ದೂರ 4,07,139 ಕಿ.ಮೀ ಮತ್ತು ಕೊವಿಡ್-19 ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸಲು ಅಗತ್ಯ ವೈದ್ಯಕೀಯ ಸರಕುಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ‘ಲೈಫ್‌ಲೈನ್ ಉಡಾನ್’ ವಿಮಾನಗಳ ಕಾರ್ಯಾಚರಣೆ ನಡೆಸುತ್ತಿದೆ. ಪವನ್ ಹನ್ಸ್ ಏಪ್ರಿಲ್ 29 ರವರೆಗೆ 7,257 ಕಿ.ಮೀ. ಕ್ರಮಿಸಿ 20 ಟನ್ ಸರಕುಗಳನ್ನುಸಾಗಿಸಿದೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1619934
ನೊವೆಲ್ ಕೊರೊನಾವೈರಸ್ ಅನ್ನು ವಿಭಜಿಸಲು ಮೈಕ್ರೊವೇವ್ ಸ್ಟೆರಿಲೈಸರ್ ಅಭಿವೃದ್ಧಿ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್) ನೆರವಿನ ಪುಣೆಯ ಡೀಮ್ಡ್ ವಿಶ್ವವಿದ್ಯಾಲಯ ಮುಂದುವರೆದ ರಕ್ಷಣಾ ತಂತ್ರಜ್ಞಾನ ಸಂಸ್ಥೆಯು ಕೋವಿಡ್-19 ವೈರಸ್ ವಿಭಜಿಸಿ ನಾಶ ಮಾಡಲು ‘ಅತುಲ್ಯ’ ಎಂಬ ಮೈಕ್ರೊವೇವ್ ಸ್ಟೆರಿಲೈಸರ್ ಅನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ 56 ರಿಂದ 60 ಡಿಗ್ರಿ ಸೆಲ್ಸಿಯಸ್ ತಾಪಮಾನದ ವ್ಯಾಪ್ತಿಯಲ್ಲಿ ವೈರಸ್ ವಿಭಜನೆಯಾಗುತ್ತದೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1619643
ಪ್ರವಾಸೋದ್ಯಮ ಸಚಿವಾಲಯವು "ದೇಖೋ ಅಪ್ನಾ ದೇಶ್" ಸರಣಿಯ 12 ನೇ ವೆಬಿನಾರ್ ಅನ್ನು "ಜವಾಬ್ದಾರಿಯುತ ಪ್ರವಾಸೋದ್ಯಮದಲ್ಲಿ ಅಸಾಧಾರಣ ಭಾರತೀಯ ಮಹಿಳೆಯರು" ಕುರಿತು ಆಯೋಜಿಸಿದೆ.
ಪ್ರವಾಸೋದ್ಯಮ ಸಚಿವಾಲಯದ ದೇಖೋ ಅಪ್ನಾ ದೇಶ್ ನ 12 ನೇ ಅಧಿವೇಶನವು 2020 ರ ಏಪ್ರಿಲ್ 30 ರಂದು, ‘ಜವಾಬ್ದಾರಿಯುತ ಪ್ರವಾಸೋದ್ಯಮದಲ್ಲಿ ಅಸಾಧಾರಣ ಭಾರತೀಯ ಮಹಿಳೆಯರು’ ಎಂಬ ಶೀರ್ಷಿಕೆಯೊಂದಿಗೆ ನಡೆಯಿತು. ಪ್ರವಾಸದ ಪರ್ಯಾಯ ಕಲ್ಪನೆಯನ್ನು ನೀಡಿದ ಭಾರತದ ಕೆಲವು ಅಸಾಧಾರಣ ಮಹಿಳೆಯರ ಪ್ರಬಲ ಮತ್ತು ವೈಯಕ್ತಿಕ ಯಶೋಗಾಥೆಗಳನ್ನು ಪ್ರಸ್ತುತಪಡಿಸಲಾಯಿತು.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620007
ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸಮನ್ವಯದ ಜಾಗತಿಕ ಡಿಜಿಟಲ್ ಪ್ರತಿಕ್ರಿಯೆಗೆ ಕರೆ ನೀಡಿದ ಜಿ-20 ರಾಷ್ಟ್ರಗಳ ಡಿಜಿಟಲ್ ಸಚಿವರ ಶೃಂಗಸಭೆ
ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸಮನ್ವಯಿತ ಜಾಗತಿಕ ಡಿಜಿಟಲ್ ಪ್ರತಿಕ್ರಿಯೆಗೆ ಜಿ20 ರಾಷ್ಟ್ರಗಳ ಡಿಜಿಟಲ್ ಆರ್ಥಿಕ ಕಾರ್ಯಪಡೆ ಕೋವಿಡ್-19 ಸಚಿವರ ಶೃಂಗಸಭೆ ಕರೆ ನೀಡಿದೆ. ಸಂವಹನ ಮೂಲಸೌಕರ್ಯ ಬಲವರ್ಧನೆ ಕ್ರಮಗಳ ಅಳವಡಿಕೆ ಮತ್ತು ಸಂಪರ್ಕಜಾಲ, ಸುರಕ್ಷಿತ ರೀತಿಯಲ್ಲಿ ವೈಯಕ್ತಿಕವಲ್ಲದ ದತ್ತಾಂಶ ವಿನಿಮಯ, ಆರೋಗ್ಯ ರಕ್ಷಣೆಗೆ ಡಿಜಿಟಲ್ ಪರಿಹಾರಗಳ ಬಳಕೆ, ಜಾಗತಿಕ ಸೈಬರ್ ಭದ್ರತೆ ಮತ್ತು ವಾಣಿಜ್ಯ ವ್ಯವಹಾರ ಮರು ಸ್ಥಿತಿಸ್ಥಾಪಕತ್ವ ಬಲವರ್ಧನೆ ಕ್ರಮಗಳನ್ನು ಕೈಗೊಳ್ಳುವುದು ಇದರಲ್ಲಿ ಸೇರಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಎದುರಾಗಿರುವ ಸವಾಲುಗಳ ಬಗ್ಗೆ ಚರ್ಚಿಸಲು ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜಾಗತಿಕ ಸಮನ್ವಯದ ಕ್ರಮಗಳ ಬಗ್ಗೆ ಚರ್ಚಿಸಲು ಜಿ-20 ರಾಷ್ಟ್ರಗಳ ಡಿಜಿಟಲ್ ಆರ್ಥಿಕ ಸಚಿವರ ವಿಶೇಷ ಸಭೆ ನಡೆಯಿತು. ಕೇಂದ್ರ ಕಾನೂನು ಮತ್ತು ನ್ಯಾಯ ಹಾಗೂ ಸಂಪರ್ಕ ಮತ್ತು ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ರವಿಶಂಕರ್ ಪ್ರಸಾದ್ ಭಾರತವನ್ನು ಪ್ರತಿನಿಧಿಸಿದ್ದರು.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1619788
ಆಯುಷ್ ವಲಯವು ಅಪಾರ ಸಾಮರ್ಥ್ಯವನ್ನು ಹೊಂದಿದ್ದು, ಭಾರತವು ಆರ್ಥಿಕ ಸೂಪರ್ ಪವರ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶ್ರೀ ನಿತಿನ್ ಗಡ್ಕರಿ ಹೇಳಿದ್ದಾರೆ
ಶತ ಶತಮಾನಗಳಿಂದ ಭಾರತದಲ್ಲಿ ಪ್ರಚಲಿತದಲ್ಲಿರುವ ಚಿಕಿತ್ಸೆ ಮತ್ತು ಗುಣಪಡಿಸುವ ಪರ್ಯಾಯ ವಿಧಾನಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿರುವುದರಿಂದ ಭಾರತದ ಆಯುಷ್ ಅಭ್ಯಾಸಗಳು ಭಾರತವನ್ನು ಆರ್ಥಿಕ ಸೂಪರ್ ಪವರ್ ಆಗಲು ಸಹಾಯ ಮಾಡುವ ದೊಡ್ಡ ಸಾಮರ್ಥ್ಯವನ್ನು ಹೊಂದಿವೆ ಎಂದು ಶ್ರೀ ನಿತಿನ್ ಗಡ್ಕರಿ ಹೇಳಿದ್ದಾರೆ. ಆಯುಷ್ ಕ್ಷೇತ್ರದಲ್ಲಿ ಮತ್ತಷ್ಟು ಬೆಳವಣಿಗೆಗೆ ಸಹಾಯ ಮಾಡುವ ಹೆಚ್ಚಿನ ಸಂಶೋಧನೆ ಮತ್ತು ನಾವೀನ್ಯತೆಗಾಗಿ ಅವರು ಕರೆ ನೀಡಿದರು, ಆಯುಷ್ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಗಡ್ಕರಿ ಮಾತನಾಡುತ್ತಿದ್ದರು. ಭಾರತೀಯ ಆಯುರ್ವೇದ, ಹೋಮಿಯೋಪತಿ, ಯೋಗ, ಸಿದ್ಧವನ್ನು ದೊಡ್ಡ ಮಟ್ಟದಲ್ಲಿ ಉತ್ತೇಜಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. ಭಾರತೀಯ ಆಯುರ್ವೇದ, ಯೋಗ, ಹೋಮಿಯೋಪತಿ, ಸಿದ್ಧಕ್ಕೆ ಇತರ ದೇಶಗಳಲ್ಲಿ ಅಪಾರ ಬೇಡಿಕೆಯಿದ್ದು, ಈಗಾಗಲೇ ಅಲ್ಲಿರುವ ಉದ್ಯಮಿಗಳು ಈ ಅವಕಾಶವನ್ನು ಬಳಸಿಕೊಂಡು ಅಲ್ಲಿ ಚಿಕಿತ್ಸಾಲಯಗಳು / ಮಳಿಗೆಗಳನ್ನು ತೆರೆಯುವಂತೆ ಅವರು ಹೇಳಿದರು.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1619618
ಲಾಕ್ ಡೌನ್ ನಡುವೆ ಐಐಪಿಎಯ "ಆನ್ಲೈನ್" ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ (ಐಐಪಿಎ) ನ ಸಾರ್ವಜನಿಕ ಆಡಳಿತದ (ಎಪಿಪಿಪಿಎ) 45 ನೇ ಮುಂದುವರೆದ ವೃತ್ತಿಪರ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ “ಆನ್‌ಲೈನ್” ಸಮಾವೇಶವನ್ನು ಉದ್ದೇಶಿಸಿ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಮಾತನಾಡಿದರು. ಈ ಸಮಾವೇಶದಲ್ಲಿ ಅಖಿಲ ಭಾರತ ಮತ್ತು ಕೇಂದ್ರ ಸೇವೆಗಳು ಮತ್ತು ಸಶಸ್ತ್ರ ಪಡೆಗಳ ಎಲ್ಲಾ ವಿಭಾಗಗಳ 45 ಗ್ರೂಪ್ ಎ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1619667
ಸಿಎಸ್ಐಆರ್ ಅಗ್ರ 25 ಡ್ರಗ್ಸ್ / ಡ್ರಗ್ ಅಭ್ಯರ್ಥಿಗಳನ್ನು ಪುನರಾವರ್ತನೆಗಾಗಿ ಗುರುತಿಸಿದೆ
ಸಿಎಸ್ಐಆರ್, ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ಅನೇಕ ರಂಗಗಳಲ್ಲಿ ಮುನ್ನಡೆಸುತ್ತಿದೆ, ಹೊಸ ಔಷಧಿಗಳ ಅಭಿವೃದ್ಧಿಗೆ ಸುಮಾರು ಒಂದು ದಶಕದ ಅಗತ್ಯವಿರುವುದರಿಂದ ಚಿಕಿತ್ಸೆಗೆ ತ್ವರಿತವಾಗಿ ನಿಯೋಜಿಸಬಹುದಾದ ಪುನರಾವರ್ತಿತ ಔಷಧಿಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಭಾರತದಲ್ಲಿ ಕೊರೊನಾವೈರಸ್ ರೋಗಿಗಳಿಗೆ ಔಷಧಿಗಳನ್ನು ಒದಗಿಸಲು, ಸಿಎಸ್ಐಆರ್ ಮರುಹಂಚಿಕೆಗಾಗಿ ಅಗ್ರ 25 ಔಷಧಗಳು / ಔಷಧಿ ಅಭ್ಯರ್ಥಿಗಳನ್ನು ಗುರುತಿಸಿದೆ.
ದಿನದ 24 ಗಂಟೆಯೂ ಕೋವಿಡ್-19 ನಿರ್ವಹಣೆಯಲ್ಲಿ ಕಾರ್ಯನಿರತವಾಗಿರುವ ವಿಶಾಖಪಟ್ಟಣ ಸ್ಮಾರ್ಟ್ ಸಿಟಿ ಕಾರ್ಯಾಚರಣೆ ಕೇಂದ್ರ
ಕಾರ್ಯಾಚರಣೆ ಕೇಂದ್ರವು ಟ್ರ್ಯಾಕಿಂಗ್, ಮೇಲ್ವಿಚಾರಣೆ ಮತ್ತು ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ನಿರ್ವಹಿಸುತ್ತಿದೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1620002
ಪಿಐಬಿ ಕ್ಷೇತ್ರ ಕಚೇರಿಗಳ ವರದಿ
- ಚಂಡೀಗಢ: ಪೊಲೀಸರು ಸೀಲ್ ಮಾಡಿರುವ ಪ್ರದೇಶಗಳಾದ ಚಂಡೀಗಢದ ಬಾಪು ಧಾಮ್ ಕಾಲೋನಿ ಮತ್ತು ಸೆಕ್ಟರ್ 30-ಬಿ, ದಿನಸಿ ಮಾರಾಟಕ್ಕೆ ಎರಡು ವಿಶೇಷ ಬಸ್ಸುಗಳನ್ನು ಒದಗಿಸಲಾಗಿದೆ. ವೈಯಕ್ತಿಕ ಅಂತರವನ್ನು ಕಾಪಾಡಿಕೊಂಡು ಖರೀದಿ ಮಾಡಲು ಸ್ಥಳೀಯರಿಗೆ ನಿರ್ದೇಶಿಸಲಾಗಿದೆ. 47,800 ಅರ್ಹ ಕುಟುಂಬಗಳಿಗೆ ಪಿಎಂಜಿಕೆಎ ಅಡಿಯಲ್ಲಿ ಗೋಧಿ ಮತ್ತು ದ್ವಿದಳ ಧಾನ್ಯಗಳನ್ನು ವಿತರಿಸಲಾಗಿದ್ದು, ಆ ಮೂಲಕ ಚಂಡೀಗಢ ಕೇಂದ್ರಾಡಳಿತ ಪ್ರದೇಶದಲ್ಲಿ ಈವರೆಗೆ ಶೇ. 75 ಗುರಿ ಸಾಧಿಸಲಾಗಿದೆ.
- ಪಂಜಾಬ್: ಭಾರತದ ಹೊರಗೆ ಉಳಿದಿರುವ ಮತ್ತು ರಾಜ್ಯಕ್ಕೆ ಮರಳಲು ಬಯಸುವ ಪಂಜಾಬಿಗಳಿಗೆ ಪಂಜಾಬ್ ಸರ್ಕಾರ, ಅಂಥ ಮಾಹಿತಿಯನ್ನು ಭರ್ತಿ ಮಾಡಲು #COVIDHELP ಎಂಬ ಡ್ಯಾಷ್ ಬೋರ್ಡ್ ಆನ್ ಲೈನ್ ಲಿಂಕ್ ಒದಗಿಸಿದೆ. ಯಾವುದೇ ಆಸಕ್ತ ವ್ಯಕ್ತಿ www.covidhelp.punjab.gov.in’ ಲಾಗ್ ಆನ್ ಮಾಡಿ ದತ್ತಾಂಶ ತುಂಬುವ ಅರ್ಜಿ ಪಡೆಯಬಹುದು. ಈಗಾಗಲೇ ತಾವು ಸೇರಿದ ಜಿಲ್ಲಾ ಸ್ಥಳೀಯ ಆಡಳಿತಕ್ಕೆ ಈ ಬಗ್ಗೆ ಮಾಹಿತಿ ನೀಡಿರುವವರು ಮತ್ತೆ ಅರ್ಜಿ ತುಂಬುವ ಅಗತ್ಯ ಇಲ್ಲ. ಪಂಜಾಬ್ ಸರ್ಕಾರ, ಕೋವಿಡ್ 19 ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮತ್ತು ಕಾರ್ಮಿಕರ ಲಭ್ಯತೆಯ ಆಧಾರದಲ್ಲಿ ಪ್ರತಿಷ್ಠಿತ ಶಹಪುರ್ಖಂಡಿ ಜಲಾಶಯ ಯೋಜನೆಯ ನಿರ್ಮಾಣ ಕಾಮಗಾರಿ ಪುನಾರಂಭ ಮಾಡಿದೆ.
- ಹರಿಯಾಣ: 33.80 ಲಕ್ಷಕ್ಕೂ ಹೆಚ್ಚು ಜನರು ಈಗಾಗಲೇ ಆರೋಗ್ಯ ಸೇತು ಆಪ್ ಅನ್ನು ಹರಿಯಾಣದಲ್ಲಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಈಗಾಗಲೇ 550ಕ್ಕೂ ಹೆಚ್ಚು ಸಂಚಾರಿ ಆರೋಗ್ಯ ತಂಡಗಳನ್ನು ಸಾರಿ, ಐಎಲ್ಐ ಇತ್ಯಾದಿ ಸ್ಥಿತಿಯ ಪರೀಕ್ಷೆಗಾಗಿ ರಚಿಸಲಾಗಿದೆ. ಕಂಟೈನ್ಮೆಂಟ್ ವಲಯಗಳು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಆರೋಗ್ಯ ಸ್ಥಿತಿಯ ಪರೀಕ್ಷೆಗಾಗಿ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಪಾನ್ ಮಸಾಲಾ, ಗುಟ್ಕಾ, ಅಗಿಯುವ ಬಬಲ್ ಗಮ್ ಇತ್ಯಾದಿಗಳ ಮಾರಾಟ ನಿರ್ಬಂಧಿಸುವ ಸಲುವಾಗಿ ಆಹಾರ ಮತ್ತು ಭದ್ರತೆ ಕಾಯಿದೆ 2006 ಅಡಿಯಲ್ಲಿ ಆದೇಶ ಹೊರಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ಮತ್ತು ಖೈನಿ ಇತ್ಯಾದಿ ಬಳಕೆಯನ್ನೂ ನಿರ್ಬಂಧಿಸಿ ನಿರ್ದೇಶಗಳನ್ನು ಹೊರಡಿಸಲಾಗಿದೆ.
- ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶಕ್ಕೆ ಇತರ ರಾಜ್ಯಗಳಿಂದ ವಾಪಸಾಗಿರುವವರು ಕಡ್ಡಾಯವಾಗಿ ಗೃಹದಲ್ಲಿ ಪ್ರತ್ಯೇಕೀಕರಣದಲ್ಲಿರುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಇದು ಕೇವಲ ಅವರಿಗಷ್ಟೇ ಅಲ್ಲದೆ ಅವರ ಕುಟುಂಬ ಮತ್ತು ಸಮಾಜಕ್ಕೂ ಪ್ರಯೋಜನಕಾರಿ ಎಂದು ತಿಳಿಸಿದ್ದಾರೆ. ಇತರ ರಾಜ್ಯಗಳಿಂದ ಬಂದಿರುವವರ ಮೇಲೆ ತೀವ್ರ ನಿಗಾ ಇಡುವಂತೆ ಮತ್ತು ಅವರು ಕಡ್ಡಾಯವಾಗಿ ಗೃಹ ಪ್ರತ್ಯೇಕೀಕರಣದಲ್ಲಿದ್ದು ನಿಯಮ ಪಾಲಿಸುವಂತೆ ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಪಿಆರ್.ಐ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಸೂಚಿಸಿದೆ.
- ಮಹಾರಾಷ್ಟ್ರ: ಕೋವಿಡ್ 19 ಪ್ರಕರಣ 10 ಸಾವಿರ ತಲುಪಿರುವ ದೇಶದ ಮೊದಲ ರಾಜ್ಯ ಮಹಾರಾಷ್ಟ್ರವಾಗಿದೆ. ಹೊಸದಾಗಿ 583 ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 10,498 ಆಗಿದೆ. ರಾಜ್ಯದಲ್ಲಿ 27 ಸಾವಿನ ಪ್ರಕರಣ ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 459ಕ್ಕೆ ಏರಿದೆ. 1,773 ಜನರು ಈವರೆಗೆ ಗುಣಮುಖರಾಗಿದ್ದಾರೆ. ಕೆಂಪು, ಕಿತ್ತಲೆ ಮತ್ತು ಹಸಿರು ಎಂಬ ಜಿಲ್ಲೆಗಳ ಪರಿಷ್ಕೃತ ವರ್ಗೀಕರಣದಲ್ಲಿ ಮಹಾರಾಷ್ಟ್ರದ 14 ಜಿಲ್ಲೆಗಳು ಕೆಂಪು ವಲಯದಲ್ಲಿವೆ. ಉಳಿದ ಜಿಲ್ಲೆಗಳ ಪೈಕಿ 16 ಕಿತ್ತಳೆ ಬಣ್ಣದ ವಲಯದಲ್ಲೂ ಉಳಿದ 6 ಹಸಿರು ವಲಯದಲ್ಲಿವೆ.
- ಗುಜರಾತ್: ಗುಜರಾತ್ ನಲ್ಲಿ 313 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಅವರಲ್ಲಿ 249ಮಂದಿ ಅಹಮದಾಬಾದ್ ನವರಾಗಿದ್ದಾರೆ. ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 4,395 ದಾಟಿದೆ. ಈ ಪೈಕಿ 613 ಜನರು ಚೇತರಿಸಿಕೊಂಡಿದ್ದು, 214ಜನರು ಮೃತಪಟ್ಟಿದ್ದಾರೆ. ಕೊರೊನಾ ವೈರಾಣು ಸ್ಫೋಟದ ಬಳಿಕ, ಗುಜರಾತ್ ಸರ್ಕಾರ ಇಂದು ತನ್ನ 60ನೇ ಸಂಸ್ಥಾಪನಾದಿನದ ಯಾವುದೇ ಆಚರಣೆಯನ್ನು ಆಯೋಜಿಸಿರಲಿಲ್ಲ. ವಿಡಿಯೋ ಸಂದೇಶದಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಜನರು ಮಾಸ್ಕ್ ಧರಿಸುವುದಾಗಿ ಮತ್ತು ವೈಯಕ್ತಿಕ ಅಂತರ ಕಾಪಾಡಿಕೊಳ್ಳುವುದನ್ನು ರೂಢಿಸಿಕೊಳ್ಳುವಂತೆ ಮತ್ತು ಕೈಗಳನ್ನು ಪದೇ ಪದೇ ತೊಳೆಯುವಂತೆ ಪ್ರತಿಜ್ಞೆ ಮಾಡುವಂತೆ ಮನವಿ ಮಾಡಿದ್ದಾರೆ.
- ರಾಜಾಸ್ಥಾನ್: 118 ಹೊಸ ಸೋಂಕಿನ ಪ್ರಕರಣಗಳೊಂದಿಗೆ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆ ರಾಜಾಸ್ಥಾನದಲ್ಲ 2,584 ತಲುಪಿದೆ. ಈಪೈಕಿ 836 ಜನರು ಗುಣಮುಖರಾಗಿದ್ದು, 58ಜನರು ಮಾರಕ ಕೊರೊನಾ ಸೆಣಸಿನಲ್ಲಿ ಮೃತಪಟ್ಟಿದ್ದಾರೆ. ರಾಜಾಸ್ಥಾನದ 8 ಜಿಲ್ಲೆಗಳು ಕೆಂಪು ವಲಯದಲ್ಲಿದ್ದರೆ, 19 ಕಿತ್ತಳೆವರ್ಣದಲ್ಲೂ 6 ಹಸಿರು ವಲಯದಲ್ಲೂ ಇವೆ.
- ಮಧ್ಯಪ್ರದೇಶ: ಕಳೆದ 24 ಗಂಟೆಗಳಲ್ಲಿ 99 ಹೊಸ ಪ್ರಕರಣ ದಾಖಲಾಗಿದ್ದು, ಒಟ್ಟು ಕೋವಿಡ್ ದೃಢಪಟ್ಟ ಪ್ರಕರಣಗಳ ಸಂಖ್ಯೆ ಮಧ್ಯಪ್ರದೇಶದಲ್ಲಿ 2660 ತಲುಪಿದೆ. ಈ ಪೈಕಿ 482 ಮಂದಿ ಗುಣಮುಖರಾಗಿದ್ದು, 137 ಜನರು ಸಾವಿಗೀಡಾಗಿದ್ದಾರೆ.
- ಛತ್ತೀಸಗಢ: ಛತ್ತೀಸಗಢದಲ್ಲಿ ಈ ದಿನಾಂಕದವರೆಗೆ ಕೇವಲ 4 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಈ ವರೆಗೆ ವರದಿಯಾಗಿರುವ 38 ಪ್ರಕರಣಗಳ ಪೈಕಿ 34 ಜನರು ಗುಣಮುಖರಾಗಿದ್ದಾರೆ.
- ಗೋವಾ: ಗೋವಾದಲ್ಲಿ 7 ಪ್ರಕರಣಗಳು ಮಾತ್ರ ವರದಿಯಾಗಿದ್ದು, ರಾಜ್ಯದಲ್ಲಿ ಒಂದೇ ಒಂದು ಸಕ್ರಿಯ ಪ್ರಕರಣ ಇರುವುದಿಲ್ಲ.
- ಕೇರಳ: ಕೇರಳದಲ್ಲಿ ಉಳಿದಿದ್ದ ವಲಸೆ ಕಾರ್ಮಿಕರನ್ನು ಹೊತ್ತ ಮೊದಲ ರೈಲು ಶುಕ್ರವಾರ ಒಡಿಶಾಗೆ ಪ್ರಯಾಣ ಬೆಳೆಸಿದೆ. ಇನ್ನೂ ಐದು ರೈಲುಗಳು ನಾಳೆ ಪ್ರಯಾಣ ಆರಂಭಿಸಲಿವೆ. ಕಣ್ಣೂರ್ ಮತ್ತು ಕೊಟ್ಟಾಯಂ ಇಂದು ಕೇಂದ್ರ ಪ್ರಕಟಿಸಿದ ಕೇರಳದ ಕೆಂಪು ವಲಯದಲ್ಲಿ ಹೊಸದಾಗಿ ಸ್ಥಾನ ಪಡೆದಿವೆ. ರಾಜ್ಯದಲ್ಲಿ ಕೇವಲ 2 ಜಿಲ್ಲೆಗಳು ಮಾತ್ರ ಕೆಂಪು ವಲಯದಲ್ಲಿವೆ. ಲಾಕ್ ಡೌನ್ ನಿರ್ಬಂಧಗಳನ್ನು ಮೇ.3ರ ಬಳಿಕ ಕೇಂದ್ರದ ನಿರ್ದೇಶದನ್ವಯ ಮಾರ್ಪಾಡು ಮಾಡಲಾಗುತ್ತದೆ. ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ವಿನಾಯಿತಿಗಳು ಇಂದಿನಿಂದ ಜಾರಿಗೆ ಬಂದಿವೆ. ಮೂವರು ಕೇರಳಿಗರು, ಇಬ್ಬರು ಕೊಲ್ಲಿ ರಾಷ್ಟ್ರದಲ್ಲಿ ಮತ್ತು ಒಬ್ಬ ನರ್ಸ್ ಯುಕೆಯಲ್ಲಿ ಮೃತಪಟ್ಟಿದ್ದು ಕೋವಿಡ್ ನಿಂದ ವಿದೇಶದಲ್ಲಿ ಮೃತಪಟ್ಟ ಕೇರಳಿಗರ ಸಂಖ್ಯೆ 70ಕ್ಕೆ ಏರಿದೆ.
- ತಮಿಳುನಾಡು: ಚೆನ್ನೈನಲ್ಲೀಗ ಮತ್ತೆ 31 ಕಂಟೈನ್ಮೆಂಟ್ ವಲಯಗಳಿದ್ದು, ಒಟ್ಟು ಸಂಖ್ಯೆ 233ಕ್ಕೆ ಏರಿದೆ. ರಾಯಪುರಂ 56 ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಪಾಂಡಿಚೇರಿಯ ಜಿಪ್ಮೇರ್ ನಲ್ಲಿ ಕಡಲೂರ್ ನ 64/ಎಫ್ ಮಹಿಳಾ ಕೋವಿಡ್ ರೋಗಿಯ ಇಬ್ಬರು ಸಂಬಂಧಿಕರಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟು ಪ್ರಕರಣಗಳ ಸಂಖ್ಯೆ ನಿನ್ನೆಯವರೆಗೆ 2,323 ಆಗಿದ್ದು, ಸಕ್ರಿಯ ಪ್ರಕರಣಗಳು 1035, ಸಾವು 27, ಗುಣವಾಗಿ ಬಿಡುಗಡೆಯಾದವರು 1258. ಚೆನ್ನೈನಲ್ಲಿ 906 ಗರಿಷ್ಠ ಪ್ರಕರಣ ದಾಖಲಾಗಿದೆ.
- ಕರ್ನಾಟಕ: ಇಂದು 11 ಹೊಸ ಪ್ರಕರಣಗಳು ಖಚಿತವಾಗಿವೆ. ಮಂಡ್ಯದಲ್ಲಿ 8 ಮತ್ತು ಬೆಳಗಾವಿಯಲ್ಲಿ 3. ಒಟ್ಟು ಪ್ರಕರಣಗಳ ಸಂಖ್ಯೆ 576. 235 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 22
- ಆಂಧ್ರಪ್ರದೇಶ: ರಾಜ್ಯದಲ್ಲಿ ರೂ.1421.20 ಕೋಟಿಯನ್ನು 58.22ಲಕ್ಷ ಜನರಿಗೆ ವೈ.ಎಸ್.ಆರ್. ಪಿಂಚಣಿ ಕನುಕ ಯೋಜನೆ ಅಡಿ ಬಯೋಮೆಟ್ರಿಕ್ ಬದಲಾಗಿ ಫಲಾನುಭವಿಗಳ ಚಿತ್ರವನ್ನು ಜಿಯೋ ಟ್ಯಾಂಗಿಗ್ ಮಾಡುವ ಮೂಲಕ ವಿತರಿಸಲು ಆರಂಭಿಸಲಾಗಿದೆ. 60 ಹೊಸ ಪ್ರಕರಣಗಳು, 82 ಬಿಡುಗಡೆ ಮತ್ತು 2 ಸಾವು (ಕರ್ನೂಲ್ ಮತ್ತು ನೆಲ್ಲೂರ್ ನಲ್ಲಿ ತಲಾ 1) ಕಳೆದ 24 ಗಂಟೆಯಲ್ಲಿ ವರದಿಯಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 1463ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು:1027, ಗುಣಮುಖ: 403, ಸಾವು:33. ಹೆಚ್ಚು ಸೋಂಕಿತ ಜಿಲ್ಲೆಗಳು ಕರ್ನೂಲ್ 411, ಗುಂಟೂರ್ 306, ಕೃಷ್ಣ 246
- ತೆಲಂಗಾಣ: ಕಳಪೆ ವೇತನದ ಬಗ್ಗೆ ಕೆಲ ದಿನಗಳ ಹಿಂದೆ ಪ್ರತಿಭಟನೆ ಮಾಡಿದ್ದ ಐಐಟಿ ಹೈದ್ರಾಬಾದ್ ನ ವಲಸೆ ಕಾರ್ಮಿಕರನ್ನು ಇಂದು ಲಿಂಗಂಪಲ್ಲಿಯಿಂದ ವಿಶೇಷ ರೈಲಿನಲ್ಲಿ ಜಾರ್ಖಂಡ್ ಗೆ ಕಳುಹಿಸಲಾಗಿದೆ. ರಾಜ್ಯ ಸರ್ಕಾರದ ಮನವಿಯ ಮೇರೆಗೆ ಕಾರ್ಮಿಕರನ್ನು ಹೊತ್ತು ಪ್ರಯಾಣಿಸಿದ ಪ್ರಥಮ ರೈಲು ಇದಾಗಿದೆ. ಆರೋಗ್ಯ ಮತ್ತು ಆಹಾರ ಸಂಸ್ಕರಣೆಯಂತಹ ಅಗತ್ಯ ವಲಯದಲ್ಲಿರುವವರನ್ನು ಹೊರತುಪಡಿಸಿ ರಾಜ್ಯದ ಅಂದಾಜು 2.3 ದಶಲಕ್ಷ ಎಂಎಸ್ಎಂಇಗಳು ಲಾಕ್ಡೌನ್ ಕಾರಣದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಇಲ್ಲಿಯವರೆಗೆ ಸೋಂಕಿತ ಪ್ರಕರಣಗಳ ಸಂಖ್ಯೆ 1038, ಸಕ್ರಿಯ ಪ್ರಕರಣಗಳು 568, ಚೇತರಿಸಿಕೊಂಡವರು 442, ಒಟ್ಟು ಸಾವು 28.
- ಅರುಣಾಚಲ ಪ್ರದೇಶ: ರಾಜ್ಯ ಸರ್ಕಾರದಿಂದ 27 ಬಸ್ ಗಳಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಇಟಾ ನಗರದಲ್ಲಿ ಉಳಿದಿದ್ದ 300ಕ್ಕೂ ಹೆಚ್ಚು ಜನರನ್ನು ಮರಳಿ ಅವರವರ ಜಿಲ್ಲೆಗಳಿಗೆ ಕರೆತರಲಾಗಿದೆ.
- ಅಸ್ಸಾಂ: ಅಸ್ಸಾಂನಲ್ಲಿ ಮತ್ತೆ 3 ರೋಗಿಗಳು 1 ಗೋಲಾಘಾಟ್, ಮತ್ತು ಮೋರಿಗಾವ್ ನಲ್ಲಿ ಇಬ್ಬರು ಬಿಡುಗಡೆಯಾಗಿದ್ದಾರೆ, ನಾಗಾಲ್ಯಾಂಡ್ ನ ರೋಗಿಯೊಬ್ಬರು ಗುವಾಹಟಿಯಲ್ಲಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ 9 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವ ಹಿಮಂತ ಬಿಶ್ವ ಶರ್ಮ ಟ್ವೀಟ್ ಮಾಡಿದ್ದಾರೆ.
- ಮಣಿಪುರ: ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ದೇಣಿಗೆಯಾಗಿ ಬಂದಿರುವ 11.33 ಕೋಟಿ ರೂ. ಪೈಕಿ 7.07 ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ.
- ಮೇಘಾಲಯ: ಮೇಘಾಲಯದಲ್ಲಿ ಅಂತರ ಜಿಲ್ಲಾ ಖಾಸಗಿ ವಾಹನಗಳ ಸಂಚಾರ ಒಂದು ಹಸಿರು ವಲಯದಿಂದ ಮತ್ತೊಂದಕ್ಕೆ ಸಂಬಂಧಿತ ಜಿಲ್ಲಾಧಿಕಾರಿ ಅಥವಾ ಅಧಿಕೃತ ಅಧಿಕಾರಿ ನೀಡಿದ ಅರ್ಹ ಪಾಸ್ ಹೊಂದಿದ್ದಲ್ಲಿ ಅನುಮತಿಸಲಾಗಿದೆ. ಪ್ರವೇಶ ಮತ್ತು ನಿರ್ಗಮನದ ಬಿಂದುಗಳಲ್ಲಿ ತಪಾಸಣೆ ಶಿಷ್ಟಾಚಾರವನ್ನು ಕಡ್ಡಾಯವಾಗಿ ಪಾಲಿಸಬೇಕು. ಮುಖ್ಯಮಂತ್ರಿ ಕೋನರಾಡ್ ಸಂಗ್ಮಾ ಟ್ವೀಟ್ ಮಾಡಿದ್ದು, ಎರಡು ಸೋಂಕಿನ ಪ್ರಕರಣಗಳಿಗಾಗಿ, ಶಿಲ್ಲಾಂಘ್ ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದವರಿಗೆ 14 ದಿನಗಳ ಪ್ರತ್ಯೇಕೀಕರಣದ ನಂತರ ಸತತ ಎರಡು ಬಾರಿ ಸೋಂಕಿಲ್ಲ ಎಂಬ ವರದಿ ಬಂದಿದೆ ಎಂದು ತಿಳಿಸಿದ್ದಾರೆ. ಅವರನ್ನು ಗುಣಮುಖರಾದವರೆಂದು ವರ್ಗೀಕರಣ ಮಾಡಲಾಗಿದೆ ಎಂದರು.
- ನಾಗಾಲ್ಯಾಂಡ್: ಎಲ್ಲ ಶೈಕ್ಷಣಿಕ ಸಂಸ್ಥೆಗಳು ಮುಂದಿನ ಆದೇಶದವರೆಗೆ ಮುಚ್ಚಿರುತ್ತವೆ ಎಂದು ಮುಖ್ಯ ಕಾರ್ಯದರ್ಶಿ ಮುನರುಚ್ಚರಿಸಿದ್ದಾರೆ. ತಮ್ಮ ಕಾರ್ಯಕ್ರಮಗಳಲ್ಲಿ ಶಾಲಾ ಪಠ್ಯವನ್ನು ಪ್ರಸಾರ ಮಾಡಲು ಒಪ್ಪಿದ ಡಿಡಿಕೆ ಮತ್ತು ಆಕಾಶವಾಣಿಗೆ ಧನ್ಯವಾದ ಅರ್ಪಿಸಿದ್ದಾರೆ.
- ಸಿಕ್ಕಿಂ: ಸರ್ಕಾರ ಜಾನುವಾರು (ಸಂಸ್ಕರಿಸಿದ ಮಾಂಸ ಸೇರಿದಂತೆ), ಕೋಳಿ ಮತ್ತು ಅದರ ಉತ್ಪನ್ನ (ಸಂಸ್ಕರಿಸಿದ ಮಾಂಸ) ಮತ್ತು ಮೀನು ಇತ್ಯಾದಿಗಳ ರಾಜ್ಯ ಪ್ರವೇಶವನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಿದೆ.
- ತ್ರಿಪುರಾ: ತ್ರಿಪುರಾದ ದಮಚೇರಾ ಬ್ಲಾಕ್ ಪ್ರದೇಶದಲ್ಲಿ ಪಿಎಂಜಿಕೆವೈ ಭಾಗವಾಗಿ 3314 ರೈತರು ಪಿಎಂ ಕಿಸಾನ್ ಅಡಿ ಪ್ರಯೋಜನ ಪಡೆದಿದ್ದಾರೆ.
ಪಿ ಐ ಬಿ ವಾಸ್ತವ ಪರೀಶೀಲನೆ
***
(Release ID: 1620200)
Visitor Counter : 269
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam