ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸಮನ್ವಯದ ಜಾಗತಿಕ ಡಿಜಿಟಲ್ ಪ್ರತಿಸ್ಪಂದನೆಗೆ ಕರೆ ನೀಡಿದ ಜಿ-20 ರಾಷ್ಟ್ರಗಳ ಡಿಜಿಟಲ್ ಸಚಿವರ ಶೃಂಗಸಭೆ

Posted On: 30 APR 2020 9:37PM by PIB Bengaluru

ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸಮನ್ವಯದ ಜಾಗತಿಕ ಡಿಜಿಟಲ್ ಪ್ರತಿಸ್ಪಂದನೆಗೆ ಕರೆ ನೀಡಿದ ಜಿ-20 ರಾಷ್ಟ್ರಗಳ ಡಿಜಿಟಲ್ ಸಚಿವರ ಶೃಂಗಸಭೆ

ಸಮಗ್ರ ಹಾಗೂ ಸುಸ್ಥಿರ ಆರ್ಥಿಕತೆ ಮತ್ತು ಸಮಾಜದತ್ತ ಹೆಚ್ಚಿನ ಗಮನಹರಿಸುವ ಜವಾಬ್ದಾರಿಯನ್ನು ಜಿ-20 ರಾಷ್ಟ್ರಗಳು ವಹಿಸಿಕೊಳ್ಳಬೇಕೆಂದು ಭಾರತ ಪ್ರತಿಪಾದನೆ
 

ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸಮನ್ವಯಿತ ಜಾಗತಿಕ ಡಿಜಿಟಲ್ ಪ್ರತಿಸ್ಪಂದನೆಗೆ ಜಿ20 ರಾಷ್ಟ್ರಗಳ ಡಿಜಿಟಲ್ ಆರ್ಥಿಕತೆ ಕಾರ್ಯಪಡೆ ಕೋವಿಡ್-19 ಸಚಿವರ ಶೃಂಗಸಭೆ ಕರೆ ನೀಡಿದೆ. ಸಂವಹನ ಮೂಲಸೌಕರ್ಯ ಬಲವರ್ಧನೆ ಕ್ರಮಗಳ ಅಳವಡಿಕೆ ಮತ್ತು ಸಂಪರ್ಕಜಾಲ, ಸುರಕ್ಷಿತ ರೀತಿಯಲ್ಲಿ ವೈಯಕ್ತಿಕವಲ್ಲದ ದತ್ತಾಂಶ ವಿನಿಮಯ, ಆರೋಗ್ಯ ರಕ್ಷಣೆಗೆ ಡಿಜಿಟಲ್ ಪರಿಹಾರಗಳ ಬಳಕೆ, ಜಾಗತಿಕ ಸೈಬರ್ ಭದ್ರತೆ ಮತ್ತು ವಾಣಿಜ್ಯ ವ್ಯವಹಾರ ಮರು ಸ್ಥಿತಿಸ್ಥಾಪಕತ್ವ ಬಲವರ್ಧನೆ ಕ್ರಮಗಳನ್ನು ಕೈಗೊಳ್ಳುವುದು ಇದರಲ್ಲಿ ಸೇರಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಎದುರಾಗಿರುವ ಸವಾಲುಗಳ ಬಗ್ಗೆ ಚರ್ಚಿಸಲು ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜಾಗತಿಕ ಸಮನ್ವಯದ ಕ್ರಮಗಳ ಬಗ್ಗೆ ಚರ್ಚಿಸಲು ಇಂದು ಜಿ-20 ರಾಷ್ಟ್ರಗಳ ಡಿಜಿಟಲ್ ಆರ್ಥಿಕ ಸಚಿವರ ಅಸಮಾನ್ಯ ವಸ್ತುಶಃ ಸಭೆ(ವರ್ಚ್ಯುಯಲ್ ಮೀಟಿಂಗ್) ನಡೆಯಿತು. ಕೇಂದ್ರ ಕಾನೂನು ಮತ್ತು ನ್ಯಾಯ ಸಂಪರ್ಕ ಮತ್ತು ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ರವಿಶಂಕರ್ ಪ್ರಸಾದ್ ಭಾರತವನ್ನು ಪ್ರತಿನಿಧಿಸಿದ್ದರು. ಈ ಸಭೆಯಲ್ಲಿ ಜಿ-20 ರಾಷ್ಟ್ರಗಳ ಸದಸ್ಯರ 19 ಡಿಜಿಟಲ್ ಸಚಿವರು, ಆಹ್ವಾನಿತ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಭಾಗವಹಿಸಿದ್ದವು.

ಸಭೆಯಲ್ಲಿ ಸಾಂಕ್ರಾಮಿಕ ರೋಗವನ್ನು ತಡೆಯಲು ಮತ್ತು ಜನರನ್ನು ರಕ್ಷಿಸಲು ಡಿಜಿಟಲ್ ವಿಧಾನದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಜಿ-20 ರಾಷ್ಟ್ರಗಳ ಡಿಜಿಟಲ್ ಸಚಿವರು ಒಪ್ಪಿದರು. ಕೇಂದ್ರ ಸಚಿವ ಶ್ರೀ ರವಿಶಂಕರ ಪ್ರಸಾದ್ ಅವರು, ಪ್ರಸ್ತುತ ಜಗತ್ತು ಎದುರಿಸುತ್ತಿರುವ ಬಿಕ್ಕಟ್ಟಿನಿಂದ ಹೊರಬರಲು ಸಮಗ್ರ ಮತ್ತು ಸುಸ್ಥಿರ ಆರ್ಥಿಕತೆ ಮತ್ತು ಸಮಾಜ ನಿರ್ಮಾಣಕ್ಕೆ ಎಲ್ಲರೂ ಗಂಭೀರ ಗಮನಹರಿಸುವ ಅಗತ್ಯವಿದೆ, ಆ ಸಂಪೂರ್ಣ ಜವಾಬ್ದಾರಿ ಜಿ-20 ರಾಷ್ಟ್ರಗಳ ಮೇಲಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸೋಂಕು ಹರಡದಂತೆ ಭಾರತ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ಇಡೀ ವಿಶ್ವಕ್ಕೆ ಭಾರತ ಮಾರ್ಗಸೂಚಿಯನ್ನು ಹಾಕಿಕೊಟ್ಟಿದೆ ಎಂದು ಹೇಳಿದರು. ಇದೇ ವೇಳೆ ಕೋವಿಡ್-19 ವಿರುದ್ಧ ಹೋರಾಟ ಮುಂದುವರಿಸುತ್ತಾ ಆರ್ಥಿಕ ಪುನಶ್ಚೇತನಕ್ಕೆ ಪ್ರಾಮುಖ್ಯತೆ ನೀಡುವ ಅಗತ್ಯತೆ ಇದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.

ಜನರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರುವಂತಹ, ನಾನಾ ವಲಯವನ್ನು ಚುರುಕುಗೊಳಿಸುವಂತಹ ಮತ್ತು ಪೂರೈಕೆ ಸರಣಿ ಬಲವರ್ಧನೆಗೊಳಿಸುವಂತಹ ಹಾಗೂ ಸೈಬರ್ ಸುರಕ್ಷಿತ ಜಗತ್ತಿನ ನಿರ್ಮಾಣದ ಡಿಜಿಟಲ್ ಅಪ್ಲಿಕೇಶನ್ ಗಳನ್ನು ಮುಂದಿನ ಹಂತದಲ್ಲಿ ಅಭಿವೃದ್ಧಿಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಸದ್ಯದ ಸ್ಥಿತಿಗತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ದುಡಿಯುವ ಶಕ್ತಿಯನ್ನು ಹಂಚಿಕೆ ಮಾಡುವುದು ಮತ್ತು ಜಾಗತಿಕ ಪೂರೈಕೆ ಸರಣಿ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಸಂಬಂಧಿಸಿದಂತೆ ಪರಿಹಾರವನ್ನು ಕಂಡುಕೊಳ್ಳುವ ಹೆಚ್ಚಿನ ಸಹಭಾಗಿತ್ವ ಎಲ್ಲ ಸಂಬಂಧಿಸಿದವರ ನಡುವೆ ಅಗತ್ಯವಿದೆ ಎಂದು ಜಿ-20 ರಾಷ್ಟ್ರಗಳ ಸಚಿವರಿಗೆ ವಿವರಿಸಿದರು. ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸಮಗ್ರ ಡಿಜಿಟಲ್ ಕ್ರಿಯಾಯೋಜನೆಯನ್ನು ರೂಪಿಸುವಂತೆ ಅವರು ಜಿ-20 ರಾಷ್ಟ್ರಗಳಿಗೆ ಕರೆ ನೀಡಿದರು. ಜಾಗತಿಕ, ವಾಣಿಜ್ಯ ಚಟುವಟಿಕೆಗಳ ಮುಂದುವರಿಕೆ ಕಾಯ್ದುಕೊಳ್ಳುವಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉದ್ಯಮದ ಗಂಭೀರ ಪಾತ್ರವನ್ನು ಉಲ್ಲೇಖಿಸಿದ ಅವರು, ನಿರಾಶ್ರಿತಗೊಂಡಿರುವ ಜಾಗತಿಕ ಪೂರೈಕೆ ಸರಣಿಗೆ ಭಾರತ ಆಕರ್ಷಣೀಯ ತಾಣವಾಗಿದೆ ಎಂದು ಆಹ್ವಾನ ನೀಡಿದರು.

***



(Release ID: 1619953) Visitor Counter : 191