ನಾಗರೀಕ ವಿಮಾನಯಾನ ಸಚಿವಾಲಯ

ಲೈಫ್‌ ಲೈನ್ ಉಡಾನ್ ಯೋಜನೆಯಡಿ 411 ವಿಮಾನಗಳು ಅಗತ್ಯ ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸುವ ಮೂಲಕ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಬೆಂಬಲ

Posted On: 29 APR 2020 8:30PM by PIB Bengaluru

ಲೈಫ್‌ ಲೈನ್ ಉಡಾನ್ ಯೋಜನೆಯಡಿ 411 ವಿಮಾನಗಳು ಅಗತ್ಯ ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸುವ ಮೂಲಕ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಬೆಂಬಲ

 

ಏರ್ ಇಂಡಿಯಾ, ಅಲೈಯನ್ಸ್ ಏರ್, ಐಎಎಫ್ ಮತ್ತು ಖಾಸಗಿ ಸರಕು ಸಾಗಾಟ ವಿಮಾನ/ ವಾಹಕಗಳಿಂದ ಲೈಫ್‌ಲೈನ್ ಉಡಾನ್ ಯೋಜನೆಯ ಅಡಿಯಲ್ಲಿ ಒಟ್ಟು 411 ವಿಮಾನಗಳನ್ನು ಅಗತ್ಯ ಸರಕು ಸಾಗಾಟಕ್ಕಾಗಿ ನಿರ್ವಹಿಸಲಾಗಿದೆ. ಕೊವಿಡ್-19 ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸಲು ಅಗತ್ಯ ವೈದ್ಯಕೀಯ ಸರಕುಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸಲು ದೇಶೀಯ ವಲಯದಲ್ಲಿ ಲೈಫ್‌ಲೈನ್ ಉಡಾನ್ವಿಮಾನಗಳ ಸೇವೆಯನ್ನು ಕೇಂದ್ರ ನಾಗರಿಕ ವಾಯುಯಾನ ಸಚಿವಾಲಯ ನಡೆಸುತ್ತಿದ್ದೆ. ಈ ಪೈಕಿ 237 ವಿಮಾನಗಳನ್ನು ಏರ್ ಇಂಡಿಯಾ ಮತ್ತು ಅಲೈಯನ್ಸ್ ಏರ್ ನಿರ್ವಹಿಸಿವೆ. ಇಲ್ಲಿಯವರೆಗೆ ಲೈಫ್‌ಲೈನ್ ಉಡಾನ್ ವಿಮಾನಗಳು 4,04,224 ಕಿ.ಮೀ. ಕ್ರಮಿಸಿಸುವ ಮೂಲಕ ಸುಮಾರು 776.73 ಟನ್‌ಗಳಷ್ಟು ಸರಕು ಸಾಗಾಟ ಮಾಡಿವೆ. ಏಪ್ರಿಲ್ 28,2020 ರಂದು ಸಾಗಿಸಲಾದ ಸರಕು ಹೊರೆ 28.05 ಟನ್ ಆಗಿದೆ.

ಪವನ್ ಹ್ಯಾನ್ಸ್ ಲಿಮಿಟೆಡ್ ಸೇರಿದಂತೆ ಹೆಲಿಕಾಪ್ಟರ್ ಸೇವೆಗಳು ಜಮ್ಮು ಮತ್ತು ಕಾಶ್ಮೀರ, ಲಡಾಖ್, ದ್ವೀಪಗಳು ಮತ್ತು ಈಶಾನ್ಯ ಪ್ರದೇಶದಲ್ಲಿ ನಿರ್ಣಾಯಕ ವೈದ್ಯಕೀಯ ಸರಕು ಮತ್ತು ರೋಗಿಗಳನ್ನು ಸಾಗಿಸುತ್ತಿವೆ. ಪವನ್ ಹ್ಯಾನ್ಸ್ ಏಪ್ರಿಲ್ 28 2020 ರವರೆಗೆ 2.0 ಟನ್ ಸರಕುಗಳನ್ನು 7,257 ಕಿ.ಮೀ ಸಾಗಿಸಿದೆ. ಈಶಾನ್ಯ ರಾಜ್ಯಗಳ ಪ್ರದೇಶ, ದ್ವೀಪ ಪ್ರದೇಶಗಳು ಮತ್ತು ಬೆಟ್ಟ ರಾಜ್ಯಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಏರ್ ಇಂಡಿಯಾ ಮತ್ತು ಐಎಎಫ್ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರ, ಲಡಾಕ್, ಈಶಾನ್ಯ ಮತ್ತು ಇತರ ದ್ವೀಪ ಪ್ರದೇಶಗಳ ಸರಕು ಸಾಗಾಟಕ್ಕೆ ಸಹಕರಿಸಿದವು.

ದೇಶೀಯ ಕಾರ್ಗೋ ಆಪರೇಟರ್‌ಗಳಾದ ಸ್ಪೈಸ್‌ಜೆಟ್, ಬ್ಲೂ ಡಾರ್ಟ್, ಇಂಡಿಗೊ ಮತ್ತು ವಿಸ್ಟಾರಾ ವಾಣಿಜ್ಯ ವಿಮಾನಯಾನದಲ್ಲಿ ಸರಕು ಹಾರಾಟ ನಡೆಸುತ್ತಿವೆ. ಸ್ಪೈಸ್ಜೆಟ್ ಮಾರ್ಚ್ 24 ರಿಂದ ಏಪ್ರಿಲ್ 28 ,2020 ರವರೆಗೆ 651 ಸರಕು ಹಾರಾಟ ಮೂಲಕ 11,34,204 ಕಿ.ಮೀ ದೂರ ಕ್ರಮಿಸಿ ಒಟ್ಟು 4,741 ಟನ್ ಸರಕುಗಳನ್ನು ಸಾಗಿಸಿದೆ. ಈ ಪೈಕಿ 233 ಅಂತಾರಾಷ್ಟ್ರೀಯ ಸರಕು ಹಾರಾಟಗಳಾಗಿವೆ. ಮಾರ್ಚ್ 25 ರಿಂದ 2020 ರ ಏಪ್ರಿಲ್ ಅವಧಿಯಲ್ಲಿ ಬ್ಲೂ ಡಾರ್ಟ್ 224 ಸರಕು ವಿಮಾನಗಳು 2,44,643 ಕಿ.ಮೀ ದೂರ ಕ್ರಮಿಸಿ ಮತ್ತು 3,742 ಟನ್ ಸರಕುಗಳನ್ನು ಸಾಗಿಸಿದವು. ಇವುಗಳಲ್ಲಿ 10 ಅಂತರರಾಷ್ಟ್ರೀಯ ಸರಕು ವಿಮಾನಯಾನಗಳಾಗಿವೆ. ಇಂಡಿಗೊ ಏಪ್ರಿಲ್ 3-28,2020ರ ಅವಧಿಯಲ್ಲಿ 96 ಸರಕು ವಿಮಾನಗಳಲ್ಲಿ 96,742 ಕಿ.ಮೀ ದೂರ ಕ್ರಮಿಸಿ, ಸುಮಾರು 246 ಟನ್ ಸರಕುಗಳನ್ನು ಸಾಗಿಸಿದೆ ಮತ್ತು 18 ಅಂತರರಾಷ್ಟ್ರೀಯ ವಿಮಾನಗಳನ್ನು ಒಳಗೊಂಡಿದೆ. ಸರ್ಕಾರಕ್ಕೆ ಉಚಿತವಾಗಿ ಸಾಗಿಸುವ ವೈದ್ಯಕೀಯ ಸರಬರಾಜುಗಳೂ ಇದರಲ್ಲಿ ಸೇರಿವೆ. ವಿಸ್ಟಾರಾ ವಿಮಾನವು ಏಪ್ರಿಲ್ 20-28,2020 ರ ಅವಧಿಯಲ್ಲಿ 20 ಸರಕುಗಳ ಹಾರಾಟ ವಿಮಾನ ಮೂಲಕ 20,466 ಕಿ.ಮೀ ದೂರ ಕ್ರಮಿಸಿ ಸುಮಾರು 113 ಟನ್ ಸರಕುಗಳನ್ನು ಸಾಗಿಸಿದೆ.

ಅಂತರರಾಷ್ಟ್ರೀಯ ವಲಯದಲ್ಲಿ, ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಕೋವಿಡ್ -19 ಪರಿಹಾರ ಸಾಮಗ್ರಿಗಳ ಸಾಗಣೆಗಾಗಿ ಪೂರ್ವ ಏಷ್ಯಾದೊಂದಿಗೆ ಸರಕು ವಾಯುಯಾನ ಸಂಪರ್ಕವನ್ನು ಸ್ಥಾಪಿಸಲಾಯಿತು. ಅಂತರರಾಷ್ಟ್ರೀಯ ವಲಯದ ಹಾರಾಟ ಮೂಲಕ ಏರ್ ಇಂಡಿಯಾ ತಂದ ವೈದ್ಯಕೀಯ ಸರಕುಗಳ ಪ್ರಮಾಣ 668 ಟನ್. ಆಗಿರುತ್ತದೆ.

ಜೊತೆಗೆ, ಏಪ್ರಿಲ್ 14 ರಿಂದ ಏಪ್ರಿಲ್ 28, 2020 ರವರೆಗೆ ಬ್ಲೂ ಡಾರ್ಟ್ ಗುವಾಂಗ್‌ವುದಿಂದ ಸುಮಾರು 109 ಟನ್ ವೈದ್ಯಕೀಯ ಸರಕು /ಸರಬರಾಜುಗಳನ್ನು ಸಾಗಿಸಿದೆ. ಏಪ್ರಿಲ್ 25, 2020 ರಂದು ಬ್ಲೂ ಡಾರ್ಟ್ ಶಾಂಘೈನಿಂದ 5 ಟನ್ ವೈದ್ಯಕೀಯ ಸರಕುಗಳನ್ನು ಸಾಗಿಸಿದೆ. ಸ್ಪೈಸ್‌ಜೆಟ್ 140 ಟನ್ ಗಳಷ್ಟು ಸಾಗಿಸಿದೆ, ಏಪ್ರಿಲ್ 28,2020 ರವರೆಗೆ ಶಾಂಘೈನಿಂದ ವೈದ್ಯಕೀಯ ಸರಬರಾಜು ಮತ್ತು ಏಪ್ರಿಲ್ 25 2020 ರವರೆಗೆ ಹಾಂಗ್ ಕಾಂಗ್ ಮತ್ತು ಸಿಂಗಾಪುರದಿಂದ 13 ಟನ್ ವೈದ್ಯಕೀಯ ಸರಬರಾಜು ಮಾಡಿದೆ.

***



(Release ID: 1619674) Visitor Counter : 154