ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಸಾರ್ವಜನಿಕರ ಜೀವನ ಸುಗಮಗೊಳಿಸಲು ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್‌/ ಲಾರಿಗಳ ಅಂತರ-ರಾಜ್ಯ ಗಡಿ ಸಂಚಾರಕ್ಕೆ ಅನುಕೂಲವಾಗುವಂತೆ ತುರ್ತು ಕ್ರಮ ಕೈಗೊಳ್ಳಲು ಶ್ರೀ ನಿತಿನ್ ಗಡ್ಕರಿ ಕರೆ

Posted On: 28 APR 2020 4:05PM by PIB Bengaluru

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಸಾರ್ವಜನಿಕರ ಜೀವನ ಸುಗಮಗೊಳಿಸಲು ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್‌/ ಲಾರಿಗಳ ಅಂತರ-ರಾಜ್ಯ ಗಡಿ ಸಂಚಾರಕ್ಕೆ ಅನುಕೂಲವಾಗುವಂತೆ ತುರ್ತು ಕ್ರಮ ಕೈಗೊಳ್ಳಲು ಶ್ರೀ ನಿತಿನ್ ಗಡ್ಕರಿ ಕರೆ

ರೂ. 25000 ಕೋಟಿ ಮೌಲ್ಯದ ಮೀಸಲು ಸಹಾಯ ಹಣವನ್ನು ಬಳಸಿಕೊಂಡು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ರಸ್ತೆ ನಿರ್ಮಾಣದ ವೇಗವನ್ನು ತೀವ್ರಗೊಳಿಸಲು ವಿನಂತಿಸಲಾಗಿದೆ

ಸಾರಿಗೆ ಸೌಲಭ್ಯಗಳು ಬೆನ್ನೆಲುಬಾಗಿ ಕಾರ್ಯನಿರ್ವಹಿಸುವ ಆರ್ಥಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ
ಪೂರ್ವನಿರ್ಧಾರಗಳನ್ನು ಚುರುಕುಗೊಳಿಸುವಂತೆ ಶ್ರೀ ನಿತಿನ್ ಗಡ್ಕರಿ ಹೇಳಿಕೆ

ಪ್ರಸ್ತುತ ಹಂತಕ್ಕಿಂತ 2-3 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆಯೋಜನೆ: ಶ್ರೀ ನಿತಿನ್ ಗಡ್ಕರಿ
ಗ್ರಾಮೀಣ ಪ್ರದೇಶಗಳಲ್ಲಿ ಆಪ್ ಆಧಾರಿತ ದ್ವಿಚಕ್ರ ಟ್ಯಾಕ್ಸಿ ಕಾರ್ಯಾಚರಣೆಗೆ ಶ್ರೀ ನಿತಿನ್ ಗಡ್ಕರಿ ಸೂಚನೆ

 

ದೇಶದ ವಿವಿಧ ಭಾಗಗಳಿಗೆ ಅಗತ್ಯ ವಸ್ತುಗಳ ಸುಗಮ ಸಾಗಾಟ-ಚಲನೆಗಾಗಿ ಅಂತರ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಗಡಿಗಳಲ್ಲಿ ಟ್ರಕ್ ಮತ್ತು ಲಾರಿಗಳ ದಿಗ್ಬಂಧನವನ್ನು ಸಾಧ್ಯವಾದಷ್ಟು ಬೇಗ ತೆರವುಗೊಳಿಸಲಾಗುತ್ತದೆ, ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಲು ಘೋಷಿಸಿದ ಲಾಕ್‌ಡೌನ್ ಸಂದರ್ಭದಲ್ಲಿ ಸಾರ್ವಜನಿಕರ ಜೀವನವನ್ನು ಸುಲಭಗೊಳಿಸಲು ಟ್ರಕ್/ ಲಾರಿ ಸಂಚಾರಕ್ಕೆ ಅನುಕೂಲವಾಗುವ ಮೂಲಕ ತುರ್ತು ಗಮನ ಹರಿಸಬೇಕಾಗಿದೆ, ಈ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮತ್ತು ಎಂಎಸ್‌ಎಂಇಎಸ್ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗೆಳಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ವಿಡಿಯೋ ಸಂವಾದ ಮೂಲಕ ನಡೆದ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ರಸ್ತೆ ಸಾರಿಗೆ ಸಚಿವರ ಸಭೆಯಲ್ಲಿ ಮಾತನಾಡಿದ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಇಂತಹ ವಿಷಯಗಳಲ್ಲಿ ಮಧ್ಯಪ್ರವೇಶಿಸಿ ಸ್ಥಳೀಯ/ ಜಿಲ್ಲಾಡಳಿತದ ಮೂಲಕ ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಅದೇ ಸಮಯದಲ್ಲಿ, ಆರೋಗ್ಯ ಸಲಹೆಗಾರರ ಮತ್ತು ಇತರ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಬೇಕು. ಚಾಲಕ/ ಕ್ಲೀನರ್‌ಗಳು ಮತ್ತು ಡಾಭಾಗಳಲ್ಲೂ ಕೂಡಾ ಸಾಮಾಜಿಕ ಅಂತರ, ಮುಖಕವಚಗಳನ್ನು ಧರಿಸುವುದು, ಸ್ಯಾನಿಟೈಜರ್‌ಗಳ ಬಳಕೆ, ಅನುಸರಿಸ ಬೇಕು ಎಂದು ಸಚಿವ ಶ್ರೀ ಗಡ್ಕರಿ ಅವರು ಹೇಳಿದ್ದಾರೆ.

ಕಾರ್ಖಾನೆಗಳಿಗೆ ಕಾರ್ಮಿಕರ ಸಾಗಣೆ ಸಂದರ್ಭದಲ್ಲಿ ಕನಿಷ್ಠ ಒಂದು ಮೀಟರ್ ದೂರವನ್ನು ಕಾಪಾಡಿಕೊಳ್ಳುವುದು, ಮುಖಕವಚಗಳನ್ನು ಧರಿಸುವುದು, ಸ್ಯಾನಿಟೈಜರ್‌ಗಳ ಬಳಕೆ ಮುಂತಾದ ಆರೋಗ್ಯ ಪ್ರೋಟೋಕಾಲ್‌ಗಳನ್ನು ಸರಿಯಾಗಿ ಪಾಲಿಬೇಕು. ಕಾರ್ಮಿಕರಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸುವುದನ್ನು ಖಾತ್ರಿಪಡಿಸಿಕೊಳ್ಳಬಹುದು. ಸಾಮಾಜಿಕ ಅಂತರ ಮತ್ತು ನೈರ್ಮಲ್ಯದ ನಿಯಮಗಳನ್ನು ಸಂಪೂರ್ಣವಾಗಿ ಗಮನಿಸಿ ಪಾಲಿಸಬೇಕು ಎಂದು ಸಚಿವ ಶ್ರೀ ಗಡ್ಕರಿ ಹೇಳಿದರು

 

ಸಲಹೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವ ಶ್ರೀ ಗಡ್ಕರಿ ಅವರು, ಸಾರಿಗೆ ಸಮಸ್ಯೆಗಳನ್ನು ಪರಿಹರಿಸಲು ತಮ್ಮ ಸಚಿವಾಲಯವು ಸಹಾಯವಾಣಿಯನ್ನು ಪ್ರಾರಂಭಿಸುತ್ತದೆ ಎಂಬ ಮಾಹಿತಿ ನೀಡಿದರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಖಾತೆ ಸಚಿವ ಜನರಲ್ (ನಿವೃತ್ತ) ವಿ ಕೆ ಸಿಂಗ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಾರಿಗೆ ಮತ್ತು ಪಿಡಬ್ಲ್ಯುಡಿ ಮಂತ್ರಿಗಳು/ ಡಿವೈ ಸಿಎಂಗಳಲ್ಲದೆ, ಮಿಜೋರಾಂ, ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶದ ಮುಖ್ಯಮಂತ್ರಿಗಳು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ, ಸಚಿವಾಲಯದ ಹಿರಿಯ ಅಧಿಕಾರಿಗಳು, ಎನ್‌ಎಚ್‌ಎಐ, ಎನ್‌ಎಚ್‌ಐಡಿಸಿಎಲ್, ಇತ್ಯಾದಿ ಅಧಿಕಾರಿಗಳು ಕೂಡಾ ಉಪಸ್ಥಿತರಿದ್ದರು.

ರಸ್ತೆ/ ಹೆದ್ದಾರಿ ಮೂಲಸೌಕರ್ಯಗಳ ಅಭಿವೃದ್ಧಿಗೆ ತಾವು ಹೆಚ್ಚಿನ ಆದ್ಯತೆ ನೀಡಿದ್ದೇವೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವನ್ನು ಪ್ರಸ್ತುತ ವೇಗಕ್ಕಿಂತ 2 ರಿಂದ 3 ಪಟ್ಟು ಹೆಚ್ಚಿಸಲು ಯೋಜಿಸುತ್ತಿದ್ದೇವೆ ಎಂದು ಕೇಂದ್ರ ಸಚಿವ ಸಚಿವ ಶ್ರೀ ಗಡ್ಕರಿ ಮಾಹಿತಿ ನೀಡಿದರು. ಬಳಕೆಯಾಗದ ರೂ. 25000 ಕೋಟಿ ಹಣವನ್ನು ಬಳಸಿಕೊಳ್ಳುವಂತೆ ಹಾಗೂ ಅಭಿವೃದ್ಧಿಯ ವೇಗಕ್ಕೆ ವಿಳಂಬವಾಗುವುದರಿಂದ ಭೂಸ್ವಾಧೀನವನ್ನು ತ್ವರಿತಗೊಳಿಸಲು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸಚಿವ ಶ್ರೀ ಗಡ್ಕರಿ ಒತ್ತಾಯಿಸಿದರು.

ಭಾರತವನ್ನು ಆರ್ಥಿಕ ಸೂಪರ್ ಪವರ್ ಮತ್ತು 5 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡಲು ತ್ವರಿತ ಆರ್ಥಿಕ ಅಭಿವೃದ್ಧಿಗೆ ಇದು ನಿರ್ಣಾಯಕವಾಗಿದೆ ಎಂದು ಸಚಿವ ಶ್ರೀ ಗಡ್ಕರಿ ಹೇಳಿದರು. ಸಾರಿಗೆ ಸೌಲಭ್ಯಗಳು/ ಮೂಲಸೌಕರ್ಯಗಳು ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತವೆ. ಯೋಜನೆಗಳು ರೆಡ್-ಟೇಪ್ಗೆ ಬಲಿಯಾಗದಂತೆ ನೋಡಿಕೊಳ್ಳುವ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ರಾಜ್ಯಗಳ ಸಚಿವರು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಸಚಿವ ಶ್ರೀ ಗಡ್ಕರಿ ಅವರು ಹೇಳಿದರು.

ರಾಜ್ಯ ಸಾರಿಗೆ ಸಚಿವರು ಆ್ಯಪ್ ಆಧಾರಿತ ದ್ವಿಚಕ್ರ ವಾಹನಗಳ ಟ್ಯಾಕ್ಸಿಗಳನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಳಸಲು ಪ್ರೋತ್ಸಾಹಿಸಬೇಕು. ಇದು ಕೃಷಿ ಸಮುದಾಯಗಳಿಗೆ ಸುಗಮ ಸಂಚಾರ – ಸಾಗಾಟ-ಚಲನೆಗೆ ಸಹಾಯ ಮಾಡುತ್ತದೆ. ಇದು ಹೊಸ ಉದ್ಯೋಗಾವಕಾಶಗಳನ್ನು ಸಹ ಒದಗಿಸುತ್ತದೆ. ಅವರು ತಮ್ಮ ವಾನಗಳನ್ನು ಎಲ್‌ಎನ್‌ಜಿ/ ಸಿಎನ್‌ಜಿ/ ಇ-ವಾಹನ/ ಆಧಾರಿತ ಸಾರ್ವಜನಿಕ ಸಾರಿಗೆಯಾಗಿ ವರ್ಗಾಯಿಸಲು ಪ್ರಯತ್ನಿಸಬಹುದು, ಆದರೆ ಇದು ಇಂಧನ ಬಿಲ್‌ಗಳಲ್ಲಿ ಸಾಕಷ್ಟು ಉಳಿತಾಯವನ್ನು ತರುತ್ತದೆ ಮತ್ತು ಪರಿಸರವನ್ನು ಕಡಿಮೆ/ ಶೂನ್ಯ ಮಾಲಿನ್ಯಗೊಳಿಸುವ ಇಂಧನ ಬಳಕೆಯ ವಾಹನವಾಗಿರಲು ಸಹಾಯ ಮಾಡುತ್ತದೆ ದು ಸಚಿವ ಶ್ರೀ ಗಡ್ಕರಿ ಅವರು ಹೇಳಿದರು.

ರಾಜ್ಯಗಳು ಮತ್ತು ಕೇಂದ್ರಗಳ ನಡುವೆ ಹೆಚ್ಚಿನ ಸಮನ್ವಯಕ್ಕಾಗಿ ಕರೆ ನೀಡಿದ, ಜನರಲ್ (ನಿವೃತ್ತ) ವಿ ಕೆ ಸಿಂಗ್ ಅವರು “ಇದು ವೇಗವಾಗಿ ಯೋಜನೆ ಅನುಷ್ಠಾನಕ್ಕೆ ಸಹಾಯ ಮಾಡುತ್ತದೆ. ಉದಾಹರಣೆಗೆ, ಒಂದು ಕೇಂದ್ರ ಏಜೆನ್ಸಿಯಿಂದ ಇನ್ನೊಂದಕ್ಕೆ ಕೆಲಸಗಳನ್ನು ಸ್ಥಳಾಂತರಿಸುತ್ತಿದ್ದರೆ ಪ್ರತ್ಯೇಕ ನೋಂದಣಿ/ ಶುಲ್ಕಗಳನ್ನು ಒತ್ತಾಯಿಸಬಾರದು ಮತ್ತು ಇಂತಹ ಪದ್ಧತಿಗಳನ್ನು ವಿತರಿಸಬೇಕು ಎಂದು ಹೇಳಿದರು.

ವಿವಿಧ ಮುಖ್ಯಮಂತ್ರಿಗಳು/ ಉಪ ಮುಖ್ಯಮಂತ್ರಿಗಳು/ ಮಂತ್ರಿಗಳು/ ಕೇಂದ್ರಾಡಳಿತ ಪ್ರದೇಶಗಳ ಮಂತ್ರಿಗಳು ಸಚಿವ ಶ್ರೀ ಗಡ್ಕರಿ ವ್ಯಕ್ತಪಡಿಸಿದ ಭಾವನೆಗಳಿಗೆ ತಮ್ಮ ಸಹಮತ ಸೂಚಿಸಿದರು, ಮತ್ತು ತಮ್ಮ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆಳಲ್ಲಿನ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ತ್ವರಿತಗೊಳಿಸಬೇಕೆಂದು ವಿನಂತಿಸಿದರು. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಾಕಿ ಇರುವ ನಿರ್ದಿಷ್ಟ ಯೋಜನೆಗಳ ಉಲ್ಲೇಖ ಮಾಡಿ, ಈ ನಿಟ್ಟಿನಲ್ಲಿ ಅವರು ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು. ಸಚಿವ ಶ್ರೀ ಗಡ್ಕರಿ ಮತ್ತು ಜನರಲ್ (ನಿವೃತ್ತ) ಶ್ರೀ ವಿ ಕೆ ಸಿಂಗ್ ಅವರ ನೇತೃತ್ವದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಾಡುತ್ತಿರುವ ಕಾರ್ಯಗಳನ್ನು ಭಾಗವಹಿಸಿದವರು ಪ್ರಶಂಸೆ ಮಾಡಿದರು.

ಲಾಕ್‌ಡೌನ್ ಅವಧಿಯಲ್ಲಿ ನಡೆಯುತ್ತಿರುವ ವಿಷಯಗಳನ್ನು ತೋರಿಸುವ ದೃಶ್ಯಪ್ರಸ್ತುತಿಯನ್ನು ಈ ಸಂದರ್ಭದಲ್ಲಿ ಮಾಡಲಾಯಿತು. ರೂ.5,89,648 ಕೋಟಿ ಮೌಲ್ಯದ 49,238 ಕಿ.ಮೀ ವ್ಯಾಪ್ತಿಯ 1315 ಯೋಜನೆಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದರು. ಈ ಪೈಕಿ 30,301 ಕಿ.ಮೀ ವ್ಯಾಪ್ತಿಯ 819 ಯೋಜನೆಗಳು ಸುಮಾರು ರೂ.3,06,250 ಕೋಟಿಯ ಯೋಜನಾ ಅನುಷ್ಠಾನವನ್ನು ಬಾಕಿ ಇರುವ ಭೂಸ್ವಾಧೀನ, ಪರಿಸರ ತೆರವು ಮುಂತಾದ ರಾಜ್ಯ-ನಿರ್ದಿಷ್ಟ ಸಮಸ್ಯೆಗಳು ವಿಳಂಬಗೊಳಿಸುತ್ತಿರುವ ಮಾಹಿತಿಯನ್ನು ವಿವರಿಸಿದರು. ಭಾಗವಹಿಸಿದ ರಾಜ್ಯಗಳಿಗೆ ಹೆದ್ದಾರಿ ಕ್ಷೇತ್ರದ ಕಾರ್ಯಯೋಜನೆಗಳ ಮುಂದೆ ಇರುವ ತೊಂದರೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಖಚಿತವಾದ ಕ್ರಮಗಳನ್ನು ಆದಷ್ಟ ಬೇಗನೆ ತೆಗೆದುಕೊಳ್ಳುವಂತೆ ಈ ಸಂದರ್ಭದಲ್ಲಿ ಸೂಚಿಸಲಾಯಿತು.

***



(Release ID: 1619321) Visitor Counter : 211