PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 28 APR 2020 6:52PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.pnghttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

 

ಕೋವಿಡ್ -19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಅಪ್ ಡೇಟ್

ಇದುವರೆಗೆ ಕೋವಿಡ್- 19 ತಗಲಿದವರಲ್ಲಿ 6,848  ಮಂದಿ ಗುಣಮುಖರಾಗಿದ್ದಾರೆ. ಗುಣಮುಖ ದರ 23.3 % ಆಗಿದೆ. ಇದುವರೆಗೆ ಭಾರತದಲ್ಲಿ ಒಟ್ಟು 29,435 ಜನರಿಗೆ ಕೋವಿಡ್ -19 ಸೋಂಕು ದೃಢೀಕರಣಗೊಂಡಿದೆ. ಈ ಮೊದಲು ಪ್ರಕರಣಗಳು ಇದ್ದ 17 ಜಿಲ್ಲೆಗಳಲ್ಲಿ ಈಗ ಕಳೆದ 28 ದಿನಗಳಿಂದ ಯಾವುದೇ ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿಲ್ಲ. ಅತ್ಯಂತ ಮಂದ/ ರೋಗ ಲಕ್ಷಣ ಪೂರ್ವ ರೋಗಿಗಳಿಗೆ ಗೃಹ ಪ್ರತ್ಯೇಕತೆ ( ಹೋಂ ಐಸೋಲೇಶನ್ ) ಗೆ ಸಂಬಂಧಿಸಿ ಮಾರ್ಗದರ್ಶಿಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿದೆ. ಸ್ವಯಂ ಪ್ರತ್ಯೇಕತೆಗೆ ಸಂಬಂಧಿಸಿ ತಮ್ಮ ನಿವಾಸದಲ್ಲಿ ಅವಶ್ಯ ಸೌಲಭ್ಯಗಳನ್ನು ಹೊಂದಿದ್ದರೆ ಅವರಿಗೆ ಮನೆಯಲ್ಲಿಯೇ ಪ್ರತ್ಯೇಕತೆಗೆ ಅವಕಾಶ ಕೊಡಬಹುದಾಗಿದೆ. ಕೋವಿಡ್ -19 ಕ್ಕೆ ಸಂಬಂಧಿಸಿ ಪ್ಲಾಸ್ಮಾ ಚಿಕಿತ್ಸೆಗೆ , ಐ.ಸಿ.ಎಂ.ಆರ್. ಈಗಾಗಲೇ ಕೋವಿಡ್ -19 ಕ್ಕೆ ಪ್ಲಾಸ್ಮಾ ಚಿಕಿತ್ಸೆಯೂ ಸೇರಿದಂತೆ ನಿರ್ದಿಷ್ಟವಾದ ಅನುಮೋದಿಸಲ್ಪಟ್ತ ಚಿಕಿತ್ಸಾ ವಿಧಾನ ಇಲ್ಲವೆಂದು ಹೇಳಿದೆ. ಇದು ಪ್ರಯೋಗ ಮಾಡಲಾಗುತ್ತಿರುವ  ಹಲವು ಚಿಕಿತ್ಸಾ ವಿಧಾನಗಳಲ್ಲಿ ಒಂದು. ಆದಾಗ್ಯೂ ಇದೊಂದು ಚಿಕಿತ್ಸೆ ಎಂದು ಹೇಳಲು ಯಾವ ಸಾಕ್ಷ್ಯಾಧಾರವೂ ಇದುವರೆಗೆ ಲಭ್ಯವಿಲ್ಲ. ಇಷ್ಟಾಗಿಯೂ ಐ.ಸಿ.ಎಂ.ಆರ್. ತನ್ನ ಅಧ್ಯಯನವನ್ನು ಪೂರ್ಣಗೊಳಿಸುವವರೆಗೆ  ಮತ್ತು ದೃಢವಾದ ವೈಜ್ಞಾನಿಕ ಸಾಕ್ಷಾಧಾರ ಲಭ್ಯ ಆಗುವವರೆಗೆ ಅದನ್ನು ಸಂಶೋಧನೆಗಾಗಿ ಮತ್ತು ಪರೀಕ್ಷಾ ಉದ್ದೇಶಕ್ಕಾಗಿ ಮಾತ್ರವೇ ಬಳಸಬಹುದಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618839

ಭಾರತದ ಕೋವಿಡ್ -19 ತಕ್ಷಣದ ಪ್ರತಿಕ್ರಿಯೆಗಾಗಿ 1.5 ಬಿಲಿಯನ್ ಡಾಲರ್ ಸಾಲಕ್ಕೆ .ಡಿ.ಬಿ. ಜೊತೆ ಭಾರತದ ಅಂಕಿತ

ನೊವೆಲ್ ಕೊರೊನಾ ವೈರಸ್ ರೋಗ ( ಕೋವಿಡ್ -19) ಜಾಗತಿಕ ಸಾಂಕ್ರಾಮಿಕಕ್ಕೆ ಸರಕಾರದ ಪ್ರತಿಕ್ರಿಯೆಯನ್ನು  ಬೆಂಬಲಿಸಿ ಡಾಲರ್ 1.5 ಬಿಲಿಯನ್ ಸಾಲಕ್ಕೆ ಭಾರತ ಸರಕಾರ ಮತ್ತು ಏಶ್ಯನ್ ಅಭಿವೃದ್ದಿ ಬ್ಯಾಂಕು ಅಂಕಿತ ಹಾಕಿದವು. ತಕ್ಷಣದ ಆದ್ಯತೆಗಳಾದ ರೋಗ ನಿಯಂತ್ರಣ ಮತ್ತು ತಡೆ , ಬಡವರಿಗೆ ಮತ್ತು ಸಮಾಜದಲ್ಲಿ ಆರ್ಥಿಕವಾಗಿ ಅಪಾಯಕ್ಕೆ ಸಿಲುಕುವ ವರ್ಗದ ಸಾಮಾಜಿಕ ರಕ್ಷಣೆಗಾಗಿ , ವಿಶೇಷವಾಗಿ ಮಹಿಳೆಯರು ಮತ್ತು ಸವಲತ್ತುಗಳಿಲ್ಲದ  ಗುಂಪುಗಳನ್ನು ಆದ್ಯತೆಯನ್ನಾಗಿ ಪರಿಗಣಿಸಿ ಸಾಲ ನೆರವು ಒದಗಿದೆ. ಎ.ಡಿ.ಬಿ.ನಿರ್ದೇಶಕರ ಮಂಡಳಿಯು ಸಾಲವನ್ನು ಸರಕಾರಕ್ಕೆ  ಬಜೆಟ್ ಬೆಂಬಲ ಒದಗಿಸುವುದಕ್ಕಾಗಿ , ಮತ್ತು ಜಾಗತಿಕ ಸಾಂಕ್ರಾಮಿಕದ ಪ್ರತಿಕೂಲ ಆರೋಗ್ಯ ಹಾಗು ಸಮಾಜೋ –ಆರ್ಥಿಕ ಪರಿಣಾಮವನ್ನು ನಿವಾರಿಸುವುದಕ್ಕಾಗಿ ಅನುಮೋದಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618955

ಕೇಂದ್ರೀಯ ಸಂಗ್ರಹದಡಿಯಲ್ಲಿ ಗೋಧಿ ಖರೀದಿ ಪ್ರಕ್ರಿಯೆಗೆ ವೇಗ

ದೇಶದ ಎಲ್ಲಾ ಪ್ರಮುಖ ಖರೀದಿ ರಾಜ್ಯಗಳಲ್ಲಿ ಗೋಧಿ ಖರೀದಿ ಪ್ರಕ್ರಿಯೆ ತ್ವರಿತಗತಿಯಿಂದ ನಡೆಯುತ್ತಿದೆ. 26.04.2020 ವರೆಗೆ ಕೇಂದ್ರೀಯ ಸಂಚಯನ / ಸಂಗ್ರಹ ಅಡಿಯಲ್ಲಿ 88.61 ಲಕ್ಷ ಮೆಟ್ರಿಕ್ ಟನ್ (ಎಲ್.ಎಂ.ಟಿ.) ಗೋಧಿಯನ್ನು ಈಗಾಗಲೇ ಖರೀದಿಸಲಾಗಿದೆ. ಇದರಲ್ಲಿ ಪ್ರಮುಖ ಕೊಡುಗೆ ಬಂದಿರುವುದು ಪಂಜಾಬ್ ನಿಂದ,  ಅಲ್ಲಿ 48.27 ಎಲ್.ಎಂ.ಟಿ ಸಂಗ್ರಹವಾಗಿದೆ, ಆ ಬಳಿಕದ ಸ್ಥಾನ ಹರ್ಯಾಣಾದ್ದು. ಇಲ್ಲಿ 19.07 ಎಲ್.ಎಂ.ಟಿ.ಖರೀದಿಯಾಗಿದೆ. ಈಗಿನ ವೇಗದಲ್ಲಿ ಖರೀದಿ ಸಾಗಿದರೆ ಹಂಗಾಮಿಗೆ ನಿಗದಿ ಮಾಡಲಾಗಿರುವ 400 ಎಲ್.ಎಂ.ಟಿ. ಯ ಗುರಿ ಸಾಧನೆಯಾಗುವ ನಿರೀಕ್ಷೆ ಇದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1619008

ಲಾಕ್ ಡೌನ್ ನಡುವೆಯೂ ದೇಶಾದ್ಯಂತ ಬಿರುಸಾಗಿ ಸಾಗಿದ  ಗೋಧಿ ಫಸಲು ಕೊಯಿಲು

ಲಾಕ್ ಡೌನ್ ನಡುವೆಯೂ ದೇಶಾದ್ಯಂತ ಗೋಧಿ ಪಸಲಿನ ಕೊಯಿಲು ಬಿರುಸಾಗಿ ಸಾಗಿದೆ.2020 ಖಾರೀಫ್ ನಲ್ಲಿ  ಬೆಳೆ ಕೊಯಿಲು ಮತ್ತು ಅದನ್ನು ಬೇರ್ಪಡಿಸುವುದಕ್ಕೆ ಸಂಬಂಧಿಸಿದ ಎಸ್.ಒ.ಪಿ.ಗಳನ್ನು  ಕೃಷಿಕರು ಮತ್ತು ಕಾರ್ಮಿಕರು ಪಾಲಿಸುತ್ತಿದ್ದಾರೆ. ಭಾರತ ಸರಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯು ಕೃಷಿಕರ ಮತ್ತು ಕೃಷಿ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಮತ್ತು ಕೊರೊನಾವೈರಸ್ ಹರಡುವಿಕೆ ನಿಯಂತ್ರಣಕ್ಕಾಗಿ ಎಸ್.ಒ.ಪಿ.ಗಳನ್ನು ರಾಜ್ಯಗಳಿಗೆ ಕಳುಹಿಸಿದೆ. 

ವಿವರಗಳಿಗೆ: https://pib.gov.in/PressReleseDetail.aspx?PRID=1619083

ಲಾಕ್ ಡೌನ್ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ ರಸಗೊಬ್ಬರ ಮಾರಾಟ

ರಾಷ್ಟ್ರ ಮಟ್ಟದಲ್ಲಿ ಕೋವಿಡ್ -19  ಲಾಕ್ ಡೌನ್ ಜಾರಿಯಲ್ಲಿದ್ದಾಗಲೂ ಕೃಷಿಕ ಸಮುದಾಯಕ್ಕೆ ದಾಖಲೆ ಪ್ರಮಾಣದಲ್ಲಿ ರಸಗೊಬ್ಬರ  ಮಾರಾಟ ಆಗಿದೆ. 2020ರ ಏಪ್ರಿಲ್ 1 ರಿಂದ 22 ನಡುವೆ ರೈತರಿಗೆ ರಸಗೊಬ್ಬರಗಳ ಪಿ.ಒ.ಪಿ. ಮಾರಾಟ 10.63 ಲಕ್ಷ  ಎಂ.ಟಿ. ಆಗಿದ್ದು, ಇದು ಕಳೆದ ವರ್ಷದಲ್ಲಿ ಇದೇ ಅವಧಿಯಲ್ಲಿ  ಮಾರಾಟವಾದ 8.02 ಲಕ್ಷ ಎಂ.ಟಿ.ಗಿಂತ 32 ಶೇಕಡಾ ಹೆಚ್ಚಿನದಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್ -19 ಕ್ಕೆ ಸಂಬಂಧಿಸಿ  ವ್ಯಾಪಕವಾದ ಸಂಚಾರ ನಿರ್ಬಂಧಗಳಿದ್ದಾಗ್ಯೂ ,ದೇಶದಲ್ಲಿ  ರಸಗೊಬ್ಬರಗಳ ಇಲಾಖೆ, ರೈಲ್ವೇ, ರಾಜ್ಯಗಳು ಮತ್ತು ಬಂದರುಗಳು , ಉತ್ಪಾದನೆ ಮತ್ತು ರಸಗೊಬ್ಬರ ಪೂರೈಕೆ ಸರಪಳಿ ಯಾವುದೇ ಅಡೆ ತಡೆಗಳಿಲ್ಲದೆ ಸಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1619162

ಕೋವಿಡ್ -19 ಕ್ಕೆ ಬಲಿಯಾದರೆ ಬಂದರು ಸಿಬ್ಬಂದಿ/ ಕಾರ್ಮಿಕರಿಗೆ 50 ಲಕ್ಷ ರೂಪಾಯಿ ಪರಿಹಾರ ಘೋಷಣೆ

ಕೋವಿಡ್ -19 ರಿಂದಾಗಿ ಬಂದರಿನ ಸಿಬ್ಬಂದಿಗಳಾಗಲೀ, ಅಥವಾ ಗುತ್ತಿಗೆ ಕಾರ್ಮಿಕರಾಗಲೀ ಮೃತಪಟ್ಟರೆ ಅವರನ್ನು ಅವಲಂಬಿತರಿಗೆ ಅಥವಾ ಕಾನೂನು ಬದ್ದ ಉತ್ತರಾಧಿಕಾರಿಗೆ 50 ಲಕ್ಷ ರೂ. ಪರಿಹಾರ/ ಎಕ್ಸ್ ಗ್ರೇಷಿಯಾ ನೀಡಲು  ಎಲ್ಲಾ ಪ್ರಮುಖ ಬಂದರುಗಳು ಕ್ರಮಕೈಗೊಳ್ಳಬಹುದು ಎಂದು  ಶಿಪ್ಪಿಂಗ್ ಸಚಿವಾಲಯವು ನಿರ್ಧಾರ ಕೈಗೊಂಡಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1619079

ಲಾಕ್ ಡೌನ್ ಅವಧಿಯಲ್ಲಿ ಪಿ.ಎಂ.ಜಿ.ಕೆ.ವೈ. ಅಡಿಯಲ್ಲಿ 7.40 ಲಕ್ಷ ಕೋವಿಡ್ -19 ಕ್ಲೇಮುಗಳ ಸಹಿತ 13 ಲಕ್ಷ  ಕ್ಲೇಮುಗಳನ್ನು ಇತ್ಯರ್ಥ ಮಾಡಿದ .ಪಿ.ಎಫ್..

ಲಾಕ್ ಡೌನ್ ಅವಧಿಯಲ್ಲಿ ಇ.ಪಿ.ಎಫ್.ವಿತರಣೆಯ ತ್ವರಿತಗತಿಯನ್ನು ಕಾಯ್ದುಕೊಂಡಿರುವ  ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಸಂಘಟನೆ (ಇ.ಪಿ.ಎಫ್.ಒ.) ಯು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ (ಪಿ.ಎಂ.ಜಿ.ಕೆ.ವೈ.) ಪ್ಯಾಕೇಜಿನಡಿ 7.40 ಲಕ್ಷ ಕೋವಿಡ್ -19 ಕ್ಲೇಮುಗಳ ಸಹಿತ 12.91 ಲಕ್ಷ  ಕ್ಲೇಮುಗಳನ್ನು ಇತ್ಯರ್ಥ ಮಾಡಿದೆ.ಇದರಲ್ಲಿ ಪಿ.ಎಂ.ಜಿ.ಕೆ.ವೈ. ಪ್ಯಾಕೇಜಿನ ಕೋವಿಡ್ ಕ್ಲೇಮಿನ 2367.65 ಕೋ.ರೂ. ಸಹಿತ ಒಟ್ಟು ಮೊತ್ತ 4684.52 ಕೋ.ರೂ,ಗಳನ್ನು ಅದು ವಿತರಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1619018

ಕೋವಿಡ್ -19 ಅವಧಿಯಲ್ಲಿ ಸಾರ್ವಜನಿಕ ಜೀವನವನ್ನು ಸುಲಭಗೊಳಿಸಲು ಅವಶ್ಯಕ ಸಾಮಗ್ರಿಗಳನ್ನು ಹೊತ್ತ ಟ್ರಕ್ಕುಗಳು/ಲಾರಿಗಳಿಗೆ ಅಂತಾರಾಜ್ಯ ಗಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ತುರ್ತು ಕ್ರಮಕ್ಕೆ ಶ್ರೀ ಗಡ್ಕರಿ  ಕರೆ

ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಗಡಿಗಳಲ್ಲಿ ತಡೆಹಿಡಿಯಲ್ಪಟ್ಟಿರುವ ಅವಶ್ಯಕ ಸಾಮಗ್ರಿಗಳನ್ನು ಹೇರಿದ ಲಾರಿಗಳು ಮತ್ತು ಟ್ರಕ್ಕುಗಳ ಸಂಚಾರಕ್ಕೆ ಅತ್ಯಂತ ತ್ವರಿತವಾಗಿ ಅವಕಾಶ ಮಾಡಿಕೊಡಬೇಕು ಎಂದು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ  ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ಎಂ. ಎಸ್.ಎಂ.ಇ. ಎಸ್.  ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ಮನವಿ ಮಾಡಿದ್ದಾರೆ. ಸಂಚಾರ ತಡೆ ತೆರವಿನಿಂದ ದೇಶದ ವಿವಿಧ ಭಾಗಗಳಿಗೆ ಅವಶ್ಯಕ ಸಾಮಗ್ರಿಗಳ ಸಾಗಾಟ ಸರಾಗವಾಗುತ್ತದೆ ಎಂದವರು ಹೇಳಿದ್ದಾರೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ರಸ್ತೆ ಸಾರಿಗೆ ಸಚಿವರ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಶ್ರೀ ಗಡ್ಕರಿ ಅವರು ಇಂತಹ ವಿಷಯಗಳಲ್ಲಿ ಸಚಿವರು ಮಧ್ಯಪ್ರವೇಶ ಮಾಡಬೇಕು ಎಂದು ವಿನಂತಿಸಿದರಲ್ಲದೆ ಸ್ಥಳೀಯ/ ಜಿಲ್ಲಾ ಆಡಳಿತಗಳೊಂದಿಗೆ ಇವುಗಳ ಪರಿಹಾರವನ್ನು ಖಾತ್ರಿಗೊಳಿಸಬೇಕು ಎಂದರು. ಕಾರ್ಖಾನೆಗಳಿಗೆ ಕಾರ್ಮಿಕರ ಸಾಗಾಣಿಕೆ ಇತ್ಯಾದಿಗಳಿಗೆ ಆರೋಗ್ಯ ಶಿಷ್ಟಾಚಾರ ಪಾಲನೆಯ ನಂತರವಷ್ಟೇ ಅವಕಾಶ ಮಾಡಿಕೊಡಬಹುದು ಎಂದವರು ಹೇಳಿದರು. ಕಾರ್ಮಿಕರಿಗೆ ಆಶ್ರಯ ಮತ್ತು ಆಹಾರ ಒದಗಿಸುವಿಕೆಯನ್ನು ಸಾಮಾಜಿಕ ಅಂತರ ಪಾಲನೆ ಮತ್ತು ಸ್ವಚ್ಚತೆ ಪಾಲನೆಯ ಮಾನದಂಡಗಳನ್ನು ಅನುಸರಿಸಿ ಖಾತ್ರಿಪಡಿಸಬೇಕು ಎಂದರು. 

ವಿವರಗಳಿಗೆ: https://pib.gov.in/PressReleseDetail.aspx?PRID=1618930

ಪ್ರಧಾನ ಮಂತ್ರಿ ಮತ್ತು ಇಂಡೋನೇಶಿಯಾ ಅಧ್ಯಕ್ಷರ ನಡುವೆ ದೂರವಾಣಿ ಸಂಭಾಷಣೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ದೂರವಾಣಿ ಮೂಲಕ ಇಂಡೋನೇಶಿಯಾ ಅಧ್ಯಕ್ಷ ಗೌರವಾನ್ವಿತ ಜೋಕೋ ವಿಡೋಡೋ ಅವರ ಜೊತೆ ಮಾತನಾಡಿದರು. ಇಬ್ಬರು ನಾಯಕರೂ ವಲಯ ಮತ್ತು ಜಗತ್ತಿನೆಡೆ ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಹರಡುತ್ತಿರುವ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು. ಇಂಡೋನೇಶಿಯಾದ ಅಧ್ಯಕ್ಷರು ಭಾರತ ಸರಕಾರವು ಇಂಡೋನೇಶಿಯಾಕ್ಕೆ ಔಷಧಿ ಉತ್ಪನ್ನ ಪೂರೈಕೆ ನಿಟ್ಟಿನಲ್ಲಿ ಒದಗಿಸಿದ ಸೌಲಭ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಧಾನ ಮಂತ್ರಿ ಅವರು ಉಭಯ ದೇಶಗಳ ನಡುವೆ ನಡೆಯುವ ವ್ಯಾಪಾರದಲ್ಲಿ ವೈದ್ಯಕೀಯ ಉತ್ಪನ್ನಗಳು ಮತ್ತು ಇತರ  ಸಾಮಗ್ರಿಗಳ ಪೂರೈಕೆಯಲ್ಲಿ ಅವ್ಯವಸ್ಥೆಯಾಗದಂತೆ ನೋಡಿಕೊಳ್ಳಲು ಸಾಧ್ಯ ಇರುವ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1618981

ಕೋವಿಡ್ -19 ತಡೆಗಾಗಿ ಡಿ.ಪಿ.ಎಸ್.ಯು. ಮತ್ತು .ಎಫ್.ಬಿ.ಗಳ ಕೊಡುಗೆಯನ್ನು ಪರಾಮರ್ಶಿಸಿದ ರಕ್ಷಣಾ ಸಚಿವರಿಂದ ಲಾಕ್ ಡೌನ್ ಬಳಿಕ ಇವುಗಳ ಕಾರ್ಯಾಚರಣಾ ಯೋಜನೆಯ ಪರಿಶೀಲನೆ

ಕೋವಿಡ್ -19  ವಿರುದ್ದದ ಹೋರಾಟದಲ್ಲಿ ಡಿ.ಪಿ.ಎಸ್.ಯು.ಗಳು ಹೊಸ ಉತ್ಪನ್ನಗಳನ್ನು ತಯಾರಿಸುವಲ್ಲಿ ತೋರಿದ ಅನ್ವೇಷಣಾ ಕೌಶಲ್ಯಗಳಿಗೆ ಸಚಿವರಾದ ರಾಜ ನಾಥ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳೀಯಾಡಳಿತಗಳಿಗೆ ಹಲವಾರು ವಿಧದಲ್ಲಿ ಅವುಗಳು ನೆರವಾಗಿರುವ ಬಗ್ಗೆಯೂ ಅವರು ಶ್ಲಾಘನೆ  ವ್ಯಕ್ತಪಡಿಸಿದರು. ಲಾಕ್ ಡೌನ್ ಮುಕ್ತಾಯಗೊಂಡ ಬಳಿಕ  ಕಾರ್ಯಾಚರಣೆಗಳನ್ನು ಪುನರಾರಂಭ ಮಾಡಲು ಮತ್ತು ನಷ್ಟವಾದ  ಕೆಲಸದ ದಿನಗಳನ್ನು ಸರಿತೂಗಿಸಲು  ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ತುರ್ತು ಯೋಜನೆ ತಯಾರಿಸುವಂತೆ ನಿರ್ದೇಶನ ನೀಡಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1619059

ಸಿ.ಎಸ್.ಸಿ.ಗಳ  ಮೂಲಕ ಆಧಾರ್ ಸಕಾಲಿಕಗೊಳಿಸುವ ಸೌಲಭ್ಯ ಒದಗಿಸಿದ ಯು..ಡಿ...

ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವವರೆಗೆ  ದೊಡ್ಡ ಸಮಾಧಾನ ದೊರಕಿದೆ. ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯು.ಐ.ಡಿ.ಎ.ಐ.) ಮಾಹಿತಿ ತಂತ್ರಜ್ಞಾನ ಮತ್ತು ಇಲೆಕ್ಟ್ರಾನಿಕ್ಸ್ ಸಚಿವಾಲಯದ ಅಡಿಯಲ್ಲಿ ಇರುವ ಎಸ್.ಪಿ.ವಿ.ಯಾದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಆಧಾರ್ ಸಕಾಲಿಕಗೊಳಿಸುವ ಸೌಲಭ್ಯವನ್ನು ಒದಗಿಸಿದೆ. 20,000 ಸಿ.ಎಸ್.ಸಿ.ಗಳು ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಗಳಾಗಿ (ಬಿ.ಸಿ.ಗಳು) ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂ.ಇ.ಐ.ಟಿ.ವೈ. ಮತ್ತು ಕಾನೂನು ಹಾಗು ನ್ಯಾಯಾಂಗ ಸಚಿವರಾದ ಶ್ರೀ ರವಿ ಶಂಕರ ಪ್ರಸಾದ್ ಟ್ವೀಟೊಂದರಲ್ಲಿ ವಿಷಯ ತಿಳಿಸಿದ್ದಾರೆ. ಈಗ ಸುಮಾರು 20,000 ಸಿ.ಎಸ್.ಸಿ.ಗಳು ನಾಗರಿಕರಿಗೆ ಸೇವೆಯನ್ನು ಒದಗಿಸಬಲ್ಲವು.

ವಿವರಗಳಿಗೆ: https://pib.gov.in/PressReleseDetail.aspx?PRID=1619033

ಭಾರತೀಯ ಬಂದರುಗಳಲ್ಲಿ ಸಿಬ್ಬಂದಿ ಬದಲಾವಣೆಗೆ ಸಂಬಂಧಿಸಿ ವಿವಿಧ ಸಂಘಟನೆಗಳ ಜೊತೆ ಶ್ರೀ ಮನ್ ಸುಖ್ ಮಾಂಡವೀಯ ಸಂವಾದ

ಭಾರತೀಯ ಬಂದರುಗಳಲ್ಲಿ ಸಿಬ್ಬಂದಿ ಬದಲಾವಣೆಗೆ ಸಂಬಂಧಿಸಿ ಶಿಪ್ ಲೈನರ್ ಗಳು  (ಹಡಗು ನಿರ್ವಾಹಕರು) , ಶಿಪ್ಪಿಂಗ್ ಕಂಪೆನಿಗಳು, ನಾವಿಕ ಸಂಘಟನೆಗಳು, ಸಮುದ್ರ ಯಾನಿಗಳ ಸಂಘಟನೆಗಳ ಜೊತೆ ಕೇಂದ್ರ ಶಿಪ್ಪಿಂಗ್ ಸಹಾಯಕ ಸಚಿವ (ಪ್ರಭಾರ) ರಾದ ಶ್ರೀ ಮನ್ ಸುಖ್ ಮಾಂಡವೀಯ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು . ಕೆಲಸ ಮಾಡುತ್ತಿರುವ ಭಾರತೀಯ ಸಮುದ್ರಯಾನಿಗಳ ಪರಿಸ್ಥಿತಿ ಹಾಗು ಅಂತಾರಾಷ್ಟೀಯ ನೀರಿನಲ್ಲಿ ಸಿಲುಕಿ ಹಾಕಿಕೊಂಡಿರುವ  ಭಾರತೀಯರ ಕ್ಲಿಷ್ಟಕರ ಪರಿಸ್ಥಿತಿಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು.   

ವಿವರಗಳಿಗೆ: https://pib.gov.in/PressReleseDetail.aspx?PRID=1619075

ಕೋವಿಡ್ -19  ರಿಂದಾಗಿ ಉದ್ಭವಿಸಿರುವ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವರು ದೇಶಾದ್ಯಂತ ಪೋಷಕರ ಜೊತೆ ವೆಬಿನಾರ್ ಮೂಲಕ ಸಂವಾದ ನಡೆಸಿದರು

ಸಚಿವರು ತಮ್ಮ ವೆಬಿನಾರ್ ಸಂವಾದದಲ್ಲಿ ಸಚಿವಾಲಯವು ಆನ್ ಲೈನ್ ಶಿಕ್ಷಣಕ್ಕಾಗಿ ಹಮ್ಮಿಕೊಂಡಿರುವ ವಿವಿಧ ಯೋಜನೆಗಳು ಮತ್ತು ಪ್ರಚಾರಾಂದೋಲನಗಳ ಬಗ್ಗೆ ಎಲ್ಲಾ ಪೋಷಕರಿಗೂ ತಿಳಿಸಿದರು. ಸಚಿವಾಲಯವು ತನ್ನ ವಿದ್ಯಾರ್ಥಿಗಳ  ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಕಾಳಜಿ ಹೊಂದಿದೆ, ಮತ್ತು ಅದಕ್ಕಾಗಿಯೇ ದೇಶದ  33 ಕೋಟಿ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ವಿವಿಧ ಯೋಜನೆಗಳನ್ನು  ಸಮರೋಪಾದಿಯಲ್ಲಿ ಅನುಷ್ಟಾನಕ್ಕೆ ತಂದಿದ್ದೇವೆ  ಎಂದರು.

ವಿವರಗಳಿಗೆ: https://pib.gov.in/PressReleseDetail.aspx?PRID=1619016

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರಿಂದ ಸ್ವಾಮಿತ್ವಯೋಜನೆಯ ಮಾರ್ಗದರ್ಶಿಗಳ ಬಿಡುಗಡೆ

ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಆದಾಯ ಸಂಗ್ರಹ ಮತ್ತು ಯೋಜನೆಗಳನ್ನು ಪರಸ್ಪರ ಒಗ್ಗೂಡಿಸಿಕೊಂಡು ಹೋಗಲು  ಸಹಾಯ ಮಾಡಲಿದೆ ಮತ್ತು ಆಸ್ತಿ ಹಕ್ಕುಗಳ ಬಗ್ಗೆ ಸ್ಪಷ್ಟತೆಯನ್ನು ಖಾತ್ರಿಪಡಿಸಲಿದೆ. ಯೋಜನೆಯು ಉತ್ತಮ ಗುಣಮಟ್ಟದ ಗ್ರಾಮ ಪಂಚಾಯತ್ ಅಭಿವೃದ್ದಿ ಯೋಜನೆಗಳನ್ನು ಡ್ರೋನ್ ಸರ್ವೇ ತಂತ್ರಜ್ಞಾನ ರೂಪಿಸಿ ತಯಾರಿಸಲು ಸಹಾಯ ಮಾಡಲಿದೆ. ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಸಂದರ್ಭದಲ್ಲಿ ಇ-ಗ್ರಾಮ ಸ್ವರಾಜ್ ಗೆ ಸಂಬಂಧಿಸಿದ  ಗುಣಮಟ್ಟ ಕಾರ್ಯಾಚರಣಾ ಪ್ರಕ್ರಿಯೆಗಳನ್ನು (ಎಸ್.ಒ.ಪಿ.) ಬಿಡುಗಡೆ ಮಾಡಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1618735

ದೇಶಾದ್ಯಂತ ಅವಶ್ಯಕ ಮತ್ತು ವೈದ್ಯಕೀಯ ಪೂರೈಕೆಗಳನ್ನು ಖಾತ್ರಿಪಡಿಸಲು 403 ಲೈಫ್ ಲೈನ್ ಉಡಾನ್ ವಿಮಾನಗಳನ್ನು ನಿರ್ವಹಿಸಲಾಗುತ್ತಿದೆ

ಏರಿಂಡಿಯಾ, ಅಲಯೆನ್ಸ್ ಏರ್, ಐ.ಎ.ಎಫ್., ಮತ್ತು ಖಾಸಗಿ ಕ್ಯಾರಿಯರ್ ಗಳ 403 ವಿಮಾನಗಳು ಲೈಫ್ ಲೈನ್ ಉಡಾನ್ ಅಡಿಯಲ್ಲಿ ದೇಶೀಯ ವಲಯದಲ್ಲಿ ಕಾರ್ಯಾಚರಿಸುತ್ತಿವೆ. ಇದರಲ್ಲಿ ಏರಿಂಡಿಯಾ ಮತ್ತು ಅಲಯೆನ್ಸ್ ಏರ್ 235 ವಿಮಾನಗಳನ್ನು ನಿರ್ವಹಿಸಿದೆ. ಲೈಫ್ ಲೈನ್ ಉಡಾನ್ ವಿಮಾನಗಳು ಅವಶ್ಯಕ ಸಾಮಗ್ರಿಗಳು ಮತ್ತು ವೈದ್ಯಕೀಯ ಸಲಕರಣೆಗಳನ್ನು ಪೂರೈಸಲು 3,97, 632 ಕಿಲೋ ಮೀಟರ್ ದೂರವನ್ನು ಕ್ರಮಿಸಿವೆ , 2020 ಏಪ್ರಿಲ್ 27 ರವರೆಗೆ ಸುಮಾರು 748.68 ಟನ್ ಸರಕನ್ನು ದೇಶಾದ್ಯಂತ ಹೊತ್ತೊಯ್ದಿವೆ. ಲೈಫ್ ಲೈನ್ ಉಡಾನ್ ವಿಮಾನಗಳನ್ನು ಎಂ.ಒ.ಸಿ.ಎ.ನಿಭಾಯಿಸುತ್ತಿದೆ. ಭಾರತವು ಕೋವಿಡ್ -19 ವಿರುದ್ದ ನಡೆಸುತ್ತಿರುವ ಯುದ್ದವನ್ನು ಬೆಂಬಲಿಸಿ ದೇಶದ ದುರ್ಗಮ , ದೂರ ಪ್ರದೇಶಗಳಿಗೆ ಅವಶ್ಯಕ ವೈದ್ಯಕೀಯ ಸರಕುಗಳನ್ನು ಸಾಗಿಸಲು ಇದನ್ನು ನಿರ್ವಹಿಸಲಾಗುತ್ತಿದೆ. ಖಾಸಗಿ ಆಪರೇಟರುಗಳಾದ ಸ್ಪೈಸ್ ಜೆಟ್ , ಬ್ಲ್ಯೂ ಡಾರ್ಟ್ , ಇಂಡಿಗೋ ಮತ್ತು ವಿಸ್ತಾರಾಗಳು ಸರಕು ವಿಮಾನಗಳನ್ನು ವಾಣಿಜ್ಯಿಕ ಆಧಾರದಲ್ಲಿ ನಿರ್ವಹಿಸುತ್ತಿವೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618927

ಸ್ವಯಂನ ಆರು ಕೋರ್ಸುಗಳು 2019 30 ಅತ್ಯುತ್ತಮ ಆನ್ ಲೈನ್ ಕೋರ್ಸುಗಳೆಂದು ಕ್ಲಾಸ್ ಕೇಂದ್ರೀಯ ಪಟ್ಟಿಯಲ್ಲಿ ಪರಿಗಣಿಸಲ್ಪಟ್ಟಿವೆ

ಕ್ಲಾಸ್ ಸೆಂಟ್ರಲ್ ( ಅತ್ಯುನ್ನತ ವಿಶ್ವವಿದ್ಯಾನಿಲಯಗಳಾದ ಸ್ಟ್ಯಾನ್ ಫೋರ್ಡ್ , ಎಂ.ಐ.ಟಿ, ಹಾರ್ವರ್ಡ್ , ಇತ್ಯಾದಿಗಳಿಂದ ಎಂ.ಒ.ಒ.ಸಿ. ಅಗ್ರಿಗೇಟರ್ ಆಗಿರುವ ಉಚಿತ ಆನ್ ಲೈನ್ ಕೋರ್ಸ್ ವ್ಯವಸ್ಥೆ ) ಯು 2019 ಅತ್ಯುತ್ತಮ ಆನ್ ಲೈನ್ ಕೋರ್ಸುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 6 ಕೋರ್ಸುಗಳು ಸ್ವಯಂ(ಎಸ್.ಡಬ್ಲ್ಯು. ಎ.ವೈ.ಎ.ಎಂ.) ನವಾಗಿವೆ. 

ವಿವರಗಳಿಗೆ: https://pib.gov.in/PressReleseDetail.aspx?PRID=1619005

ಕೇಂದ್ರ ಸರಕಾರಿ ಸಿಬ್ಬಂದಿಗಳಿಗೆ ಭತ್ತೆಗಳಲ್ಲಿ ಕಡಿತ ಸುದ್ದಿಯಲ್ಲಿ ಹುರುಳಿಲ್ಲ, ಪಿ..ಬಿ. ಯಿಂದ ವಸ್ತು ಸ್ಥಿತಿ ಶೋಧದಲ್ಲಿ ಸುಳ್ಳು ಸುದ್ದಿ ಬಯಲು

ವಿವರಗಳಿಗೆ: https://pib.gov.in/PressReleseDetail.aspx?PRID=1618805

ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ನಡುವೆಯೂ ಯಾವುದೇ ಅಡೆ ತಡೆ ಇಲ್ಲದೆ ..ಎಸ್. ಅಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ಆನ್ ಲೈನ್ ಮೂಲಕ ಮುಂದುವರೆಸುತ್ತಿರುವುದಕ್ಕೆ ಎಲ್.ಬಿ.ಎಸ್.ಎನ್...ಗೆ ಡಾ, ಜಿತೇಂದ್ರ ಸಿಂಗ್ ಶ್ಲಾಘನೆ

ಅಕಾಡೆಮಿಯು ತಂತ್ರಜ್ಞಾನದ ನವೀನ ಬಳಕೆಯೊಂದಿಗೆ ಮತ್ತು ಕಲಿಕಾ ನಿರ್ವಹಣಾ ವ್ಯವಸ್ಥೆಯೊಂದಿಗೆ ತನ್ನ ತರಬೇತಿಯನ್ನು ಮರುಶೋಧಿಸಿಕೊಂಡಿದೆ ಮತ್ತು ಎಲ್ಲಾ ತರಬೇತಿಯಲ್ಲಿರುವ ಅಧಿಕಾರಿಗಳಿಗೆ ಮಾಹಿತಿ ಮತ್ತು ಅಸೈನ್ ಮೆಂಟ್ ಗಳನ್ನು ಅದರದ್ದೇ ಆದ ಗ್ಯಾನ್ ಪೊರ್ಟಲ್ ಮೂಲಕ ನಿರ್ವಹಿಸುತ್ತಿದೆ. ಇದು ಅಂತರ್ಜಾಲ ರೇಡಿಯೋ ಸೌಲಭ್ಯವನ್ನು ಕೂಡಾ ಪ್ರಯತ್ನಗಳಿಗೆ  ಪೂರಕವಾಗಿ ಹೊಂದಿದೆ. 

ವಿವರಗಳಿಗೆ: https://pib.gov.in/PressReleseDetail.aspx?PRID=1618805

ವಾರಾಣಸಿ ಸ್ಮಾರ್ಟ್ ಸಿಟಿಯಿಂದ ಕೋವಿಡ್ -19  ಹರಡುವಿಕೆ ನಿಯಂತ್ರಣಕ್ಕೆ ಸೂಕ್ಷ್ಮ ಪ್ರದೇಶಗಳಲ್ಲಿ ಕ್ರಿಮಿನಾಶಗೊಳಿಸುವುದಕ್ಕಾಗಿ ಡ್ರೋನ್ ಗಳ ಬಳಕೆ

ವಾರಾಣಸಿ ಸ್ಮಾರ್ಟ್ ಸಿಟಿಯು ಚೆನೈ ಮೂಲದ ಗರುಡ ಏರೋಸ್ಪೇಸ್ ಪ್ರೈವೇಟ್  ಲಿಮಿಟೆಡ್ ಕಂಪೆನಿಯನ್ನು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ವಾರಾಣಸಿ ನಗರದ ಆಯ್ದ ಪ್ರದೇಶಗಳಲ್ಲಿ ಸ್ಯಾನಿಟೈಸರ್ ಸಿಂಪರಣೆ ಮಾಡುವುದಕ್ಕಾಗಿ ಬಳಸಿಕೊಂಡಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618733

ಕೋವಿಡ್ -19  ಮಾದರಿ ಸಂಗ್ರಹಣೆಗೆ ಅಗರ್ತಾಲಾ ಸ್ಮಾರ್ಟ್ ಸಿಟಿಯಿಂದ ಮೊಬೈಲ್ ಕಿಯೋಸ್ಕ್ ಬಳಕೆ

ಅಗರ್ತಾಲಾ ಸ್ಮಾರ್ಟ್ ಸಿಟಿಯು ಸಂಚಾರಿ ಕೋವಿಡ್ -19 ಮಾದರಿ ಸಂಗ್ರಹಣ ಕಿಯೋಸ್ಕ್ ನ್ನು ವಿನ್ಯಾಸಗೊಳಿಸಿದ್ದು ಅದನ್ನು ನಗರದ ಮುಖ್ಯ ವೈದ್ಯಕೀಯ ಅಧಿಕಾರಿಗೆ ಹಸ್ತಾಂತರಿಸಿತು. ಈ ಕಿಯೋಸ್ಕ್  ಮಾದರಿ ಸಂಗ್ರಹಿಸುವ ವೈದ್ಯರಿಗೆ ರಕ್ಷಣೆಯನ್ನು ಖಾತ್ರಿಗೊಳಿಸುತ್ತದೆ ಮತ್ತು ವೈಯಕ್ತಿಕ ರಕ್ಷಣಾ ಸಲಕರಣೆ (ಪಿ.ಪಿ.ಇ.) ಹಾಳಾಗುವುದನ್ನು ತಡೆಯುತ್ತದೆ.  ಕೋವಿಡ್ -19 ವಿರುದ್ದ ಹೋರಾಟದಲ್ಲಿ ಅಗರ್ತಾಲಾದಿಂದ ಇದು ಪ್ರಮುಖ ಕ್ರಮವಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618971

 

ಪಿ.ಐ.ಬಿ. ಕ್ಷೇತ್ರ ಕಾರ್ಯಾಲಯಗಳಿಂದ ಮಾಹಿತಿ

 

  • ಚಂಡೀಗಢ: ಚಂಡೀಗಢದಲ್ಲಿ ಕರ್ಫ್ಯೂ ಬಳಿಕದ ಅವಧಿಯಲ್ಲಿ ಆಡಳಿತವು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ ಶಿಫಾರಸುಗಳನ್ನು ಮಾಡಲು ಹಣಕಾಸು ಕಾರ್ಯದರ್ಶಿ. ಶ್ರೀ..ಕೆ.ಸಿನ್ಹಾ ಅಧ್ಯಕ್ಷತೆಯಲ್ಲಿ ಸಮೊತಿಯೊಂದನ್ನು ಚಂಡೀಗಢ ಆಡಳಿತವು ರಚಿಸಿದೆ. ಸಮಿತಿಯ ಶಿಫಾರಸುಗಳು ಸಾರ್ವಜನಿಕ ಸಾರಿಗೆ, ಶಾಲೆ-ಕಾಲೇಜುಗಳ ಆರಂಭ, ಆತಿಥ್ಯ ಉದ್ಯಮದ ಪುನರಾರಂಭ, ಕೈಗಾರಿಕೆಗಳು/ಕಾರ್ಖಾನೆಗಳು/ ಅಂಗಡಿಗಳು, ಅಂತಾರಾಜ್ಯ ಸಂಚಾರ, ಕಚೇರಿಗಳ ಕಾರ್ಯನಿರ್ವಹಣೆ ಇತ್ಯಾದಿ ವಿಷಯಗಳನ್ನು ಕುರಿತಂತೆ ಸಮಿತಿ ಶಿಫಾರಸುಗಳನ್ನು ಮಾಡಬಹುದಾಗಿದೆ.
  • ಪಂಜಾಬ್: ಮಂಡಿಗಳಿಗೆ ಭೇಟಿ ನೀಡಿ ಅಲ್ಲಿ  ನಡೆಯುತ್ತಿರುವ ಖರೀದಿ ಕಾರ್ಯಾಚರಣೆಗಳನ್ನು ಪರಾಮರ್ಶಿಸಿ ಏಪ್ರಿಲ್ 30 ರೊಳಗೆ ವಿವರವಾದ  ವರದಿ ಕೊಡಲು ಮುಖ್ಯಮಂತ್ರಿಯವರು ಆರು ಮಂದಿ ..ಎಸ್. ಅಧಿಕಾರಿಗಳನ್ನು ನಿಯೋಜನೆ ಮಾಡಿದ್ದಾರೆ. ಕರ್ಫ್ಯೂ ಪಾಸ್ ವ್ಯವಸ್ಥೆ, ಮಂಡಿಗಳಿಗೆ ಬಂದಿರುವ ಗೋಧಿಯ  ಗ್ರಾಮವಾರು  ಪ್ರಮಾಣ, ಗೋಧಿಯ ಗುಣಮಟ್ಟ್ದ ಪರಿಶೀಲನೆ, ಮತ್ತು ಕೋವಿಡ್ -19 ಶಿಷ್ಟಾಚಾರದ ಪಾಲನೆಯಂತಹ ಪ್ರಮುಖ ವಿಷಯಗಳನ್ನು ಪರಿಶೀಲಿಸುವ ಕೆಲಸವನ್ನು ಅವರಿಗೆ ವಹಿಸಲಾಗಿದೆ. ನಾಂದೇಡ್ ನಲ್ಲಿ ಬಾಕಿಯಾಗಿರುವ ಯಾತ್ರಿಕರು ಮತ್ತು ರಾಜಸ್ಥಾನದ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ತಮ್ಮ ಮನೆಗಳಿಗೆ ತೆರಳುವ ಪ್ರಕ್ರಿಯೆ ಮುಂದುವರೆದಿದೆ. ಪಂಜಾಬ್ ಸರಕಾರವು ದಿಲ್ಲಿ ಸರಕಾರವನ್ನು ಸಂಪರ್ಕಿಸಿ ಲಾಕ್ ಡೌನ್ ನಲ್ಲಿ ರಾಷ್ಟ್ರದ ರಾಜಧಾನಿಯ ಮಜ್ ನುಕಾ ಟಿಲಾ ಗುರುದ್ವಾರಾದಲ್ಲಿ ಸಿಲುಕಿ ಹಾಕಿಕೊಂಡಿರುವ 250 ಸಿಕ್ ಯಾತ್ರಿಕರ ಸುರಕ್ಷಿತ ಮರಳುವಿಕೆಗೆ ಅನುಕೂಲಗಳನ್ನು ಮಾಡಿಕೊಡಬೇಕೆಂದು ಕೋರಿದೆ.
  • ರಿಯಾ: ಎನ್.ಡಿ.., ಇಂಜಿನಿಯರಿಂಗ್ ಕಾಲೇಜುಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಸೇರ್ಪಡೆಗಾಗಿರುವ ಸಂಯುಕ್ತ ರಕ್ಷಣಾ ಸೇವೆಗಳು, ಜೆ... ಮತ್ತು ನೀಟ್ ಪರೀಕ್ಷೆಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳಿಗೆ ಸಂಬಂಧಿಸಿ ಇರುವ ಅನಿಶ್ಚಿತತೆ ಕೊನೆಗಾಣಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರು ಭಾರತ ಸರಕಾರವನ್ನು ಕೋರಿದ್ದಾರೆ. ಕೋವಿಡ್ -19 ಲಾಕ್ ಡೌನ್ ಹಿನ್ನೆಲೆಯಲ್ಲಿ ಹರ್ಯಾಣಾ ಪೊಲೀಸರು ವ್ಯಾಟ್ಸಾಪ್ ನಲ್ಲಿ ಅಥವಾ -ಮೈಲ್ ಗಳಲ್ಲಿ ಸಂಶಯಾಸ್ಪದ ಕೊಂಡಿಗಳಿಗೆ ಯಾವುದೇ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದು ನಾಗರಿಕರಿಗೆ ಸಲಹಾ ಸೂಚಿಯನ್ನು ಬಿಡುಗಡೆ ಮಾಡಿದ್ದಾರೆ. ಇಂತಹ ಕೊಂಡಿಗಳು ಅವರ ಬ್ಯಾಂಕ್ ಖಾತೆಗಳಿಂದ ಹಣವನ್ನು ಹೊರಗೆ ಕಳುಹಿಸುವ ಅಪಾಯವಿದೆ ಎಂದವರು ಎಚ್ಚರಿಸಿದ್ದಾರೆ.
  • ಹಿಮಾಚಲ ಪ್ರದೇಶ: ರಾಜ್ಯ ಸರಕಾರ ಆರಂಭಿಸಿದ  ಸಿ.ಎಂ. ಎಚ್.ಪಿ. ಆವಶ್ಯಕ ವೈದ್ಯಕೀಯ ಸಹಾಯವಾಣಿ ರಾಜ್ಯಾದ್ಯಂತ ಜನತೆಗೆ ಸಂಕಷ್ಟದ ಸಮಯದಲ್ಲಿ ವರವಾಗಿ ಬಂದಿದೆ. ಸಿರ್ಮೌರ್ ಜಿಲ್ಲೆಯ 1500 ಕ್ಕೂ ಅಧಿಕ ರೋಗಿಗಳಿಗೆ ಔಷಧಿಗಳನ್ನು ಮನೆಗೆ ಪೂರೈಸಲಾಗಿದೆ.
  • ಕೇರಳ: ಕೋವಿಡ್ ವಿರುದ್ದದ ಹೋರಾಟಕ್ಕೆ ಹಣ ಹೊಂದಿಸಲು  ರಾಜ್ಯ ಸರಕಾರಿ ಸಿಬ್ಬಂದಿಗಳ ವೇತನದಲ್ಲಿ ಕಡಿತ ಮಾಡುವ ರಾಜ್ಯ ಸರಕಾರದ ಆದೇಶಕ್ಕೆ ಕೇರಳ ಹೈಕೋರ್ಟು ತಡೆ ನೀಡಿದೆ. ರಾಜ್ಯದಲ್ಲಿ ಪ್ರಮುಖ ಉದ್ಯಮಗಳು ಮತ್ತು ಕಾರ್ಖಾನೆಗಳು ನಿಧಾನವಾಗಿ ಪುನರಾರಂಭಗೊಳ್ಳುತಿವೆ. ಪಿ.ಎಸ್.ಯು.ಗಳಾದ ಫ್ಯಾಕ್ಟ್, ಕೊಚ್ಚಿ ಶುದ್ದೀಕರಣಾಗಾರ, ಎಚ್.ಎಂ.ಟಿ. . ಕೊಚ್ಚಿನ್ ಶಿಪ್ ಯಾರ್ಡ್, ಮತ್ತು ಎಚ್.ಎಲ್.ಎಲ್. ಗಳು ಕಡಿಮೆ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ಪುನರಾರಂಭ ಮಾಡಿವೆ. ನಿನ್ನೆಯವರೆಗೆ ದೃಢೀಕೃತ  ಪ್ರಕರಣಗಳು 481, ಅಕ್ಟಿವ್ ಪ್ರಕರಣಗಳು 123., ಗುಣಮುಖರಾದವರು’;355.
  • ತಮಿಳುನಾಡು: ಹೆಚ್ಚುವರಿ ಹಣಕಾಸಿಗೆ ಮುಖ್ಯಮಂತ್ರಿ ಕೋರಿಕೆ, ಕೇಂದ್ರ ಸರಕಾರದಿಂದ ಪರೀಕ್ಷಾ ಕಿಟ್ ಗಳು . ಚೆನ್ನೈಯಲ್ಲಿ ಇನ್ನಿಬ್ಬರು ಪೊಲೀಸರು ಪಾಸಿಟಿವ್, ಚೆನ್ನೈ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿದ್ದ ಮಾನಸಿಕ ಅಸ್ವಸ್ಥ ಕೋವಿಡ್ -19 ರೋಗಿ ಆಸ್ಪತ್ರೆಯಿಂದ ಪರಾರಿಯಾಗಿ ಮನೆಗೆ ತಲುಪಿದ್ದು, ಆತನನ್ನು ಪೊಲೀಸರ ಸಹಾಯದಿಂದ ವಾಪಾಸು ಕರೆತರಲಾಯಿತು. ನಿನ್ನೆಯವರೆಗೆ  ಒಟ್ಟು ಪ್ರಕರಣಗಳು: 1937, ಆಕ್ಟಿವ್ ಪ್ರಕರಣಗಳು : 809, ಸಾವುಗಳು : 24, ಗುಣಮುಖರಾಗಿ ಬಿಡುಗಡೆಗೊಂಡವರು : 1101. ಗರಿಷ್ಟ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾದ ಸ್ಥಳ ಚೆನೈ, 570
  • ಕರ್ನಾಟಕ: ಇಂದು 8 ಹೊಸ ಪ್ರಕರಣಗಳು ದೃಢೀಕರಿಸಲ್ಪಟ್ಟಿವೆ. ಒಟ್ಟು ಪ್ರಕರಣಗಳು 520, ಕಲಬುರ್ಗಿ 6, ಬೆಂಗಳೂರು ಮತ್ತು ಗದಗ ತಲಾ 1, ಇದುವರೆಗೆ  20  ಮಂದಿ ಮೃತಪಟ್ಟಿದ್ದಾರೆ. 198 ಮಂದಿ ಬಿಡುಗಡೆಯಾಗಿದ್ದಾರೆ. ಶೂನ್ಯ ಕೋವಿಡ್ ಪ್ರಕರಣಗಳಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆಯಾಗಿದೆ.
  • ಆಂಧ್ರ ಪ್ರದೇಶ: ಕಳೆದ 24 ಗಂಟೆಗಳಲ್ಲಿ 82 ಹೊಸ ಪ್ರಕರಣಗಳು ವರದಿಯಾಗಿವೆ. ಈಗ ಒಟ್ಟು ಪ್ರಕರಣಗಳ ಸಂಖ್ಯೆ 1259 .ಆಕ್ಟಿವ್ ಪ್ರಕರಣಗಳು: 970, ಗುಣಮುಖರಾದವರು 258, ಸಾವುಗಳು: 31. ಕಳೆದ ಮೂರು ದಿನಗಳಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ. ರಾಜ್ಯವು  ಜಗನ್ನನಾ ವಿದ್ಯಾ ದೀವೆನಾಯೋಜನೆ ಅಡಿಯಲ್ಲಿ ಸುಮಾರು 14 ಲಕ್ಷ ವಿದ್ಯಾರ್ಥಿಗಳಿಗೆ 100% ಶುಲ್ಕ ಮರುಪಾವತಿಗಾಗಿ 4000 ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ಬಿಡುಗಡೆ ಮಾಡಿದೆ. ಗುಜರಾತಿನಲ್ಲಿ ಬಾಕಿಯಾಗಿರುವ ಸುಮಾರು 5,000 ಮೀನುಗಾರರನ್ನು ರಾಜ್ಯಕ್ಕೆ ಕರೆತರಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಖಾರೀಫ್ ಅವಧಿಯಲ್ಲಿ ರೈತರಿಗೆ  ನೀಡುವುದಕ್ಕಾಗಿ 56 ಲಕ್ಷ ಕ್ರೆಡಿಟ್ ಕಾರ್ಡ್ ಮತ್ತು 56 ಲಕ್ಷ ಡೆಬಿಟ್ ಕಾರ್ಡುಗಳಿಗಾಗಿ ರಾಜ್ಯ ಸರಕಾರ ಆದೇಶ ಸಲ್ಲಿಸಿದೆ. ಪಾಸಿಟಿವ್ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳೆಂದರೆ ಕರ್ನೂಲು (332) , ಗುಂಟೂರು (254 ),  ಕೃಷ್ಣಾ (223) 
  • ತೆಲಂಗಾಣ: ರಾಜ್ಯ ಸರಕಾರವು 21 ಜಿಲ್ಲೆಗಳನ್ನು ಕೋವಿಡ್ ಮುಕ್ತ ಎಂದು ಘೋಷಿಸುವ ನಿರೀಕ್ಷೆ ಇದೆ. ಲಾಕ್ ಡೌನ್ ಮುಕ್ತಾಯದ ಬಳಿಕ ವಲಸೆ ಕಾರ್ಮಿಕರ ಕೊರತೆ ರಾಜ್ಯದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ರಾಜ್ಯವು ಸುಮಾರು 7 ಲಕ್ಷ ವಲಸೆ ಕಾರ್ಮಿಕರನ್ನು ಅವಲಂಬಿಸಿದೆ. ಒಟ್ಟು ಪ್ರಕರಣಗಳು: 1003, ಆಕ್ಟಿವ್ ಪ್ರಕರಣಗಳು ; 646.
  • ಅರುಣಾಚಲ ಪ್ರದೇಶ: ರಾಜ್ಯದಲ್ಲಿ ಮನೆಯಿಂದ ಮನೆಗೆ ತರಕಾರಿಗಳನ್ನು ಮಾರಾಟ ಮಾಡುವುದಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕೃಷಿಕರಿಂದ ನೇರವಾಗಿ ತರಕಾರಿಗಳನ್ನು ಖರೀದಿಸುವ ಕೆಲಸ ಕೊಡಲಾಗಿದೆ.
  • ಅಸ್ಸಾಂ: ಮರ್ಕಜ್ ನಲ್ಲಿ ಭಾಗವಸಿದ್ದ ವ್ಯಕ್ತಿಯ ಎರಡನೆ ಸ್ತರದ ಸಂಪರ್ಕ ವ್ಯಕ್ತಿಯಾದ (ಸೆಕೆಂಡರಿ ಕಾಂಟ್ಯಾಕ್ಟ್ ) ಬೋಂಗಿಯಾಗಾಂ ಜಿಲ್ಲೆಯ ಸಾಲ್ಮಾರಾದ 16 ವರ್ಷದ ಹುಡುಗಿಯೊಬ್ಬಳು ಕೋವಿಡ್ -19 ಪಾಸಿಟಿವ್ ಆಗಿದ್ದಾರೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಸರ್ಮಾ ಟ್ವೀಟ್ ಮಾಡಿದ್ದಾರೆ.
  • ಮಣಿಪುರ: ರಾಜ್ಯದಲ್ಲಿ ಕೋವಿಡ್ -19 ರಿಂದಾಗಿ ಔಷಧಿ ವ್ಯಸನಕ್ಕೀಡಾಗಿ ಬಾಧೆ ಪಡುತ್ತಿರುವ ಜನರನ್ನು ರಕ್ಷಿಸುವುದಕ್ಕಾಗಿ ಇನ್ನಷ್ಟು ಆಶ್ರಯ ತಾಣಗಳನ್ನು ನಿರ್ಮಿಸಲಾಗುತ್ತದೆ.
  • ಮಣಿಪುರ: ಗ್ರಾಮ ಕಾರ್ಯ ಪಡೆಯ ಸ್ವಯಂ ಸೇವಕರನ್ನು ಬಿಡುಗಡೆ ಮಾಡಲು ಅಂತಾರಾಜ್ಯ  ಮತ್ತು ಅಂತಾರಾಷ್ಟ್ರೀಯ ಗಡಿಗಳಲ್ಲಿ ಇನ್ನಷ್ಟು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವಂತೆ  ಪ್ರಮುಖ ವಿಪಕ್ಷವಾದ ಝೋರಾಂ ಪೀಪಲ್ಸ್ ಮೂವ್ ಮೆಂಟ್ , ರಾಜ್ಯ ಸರಕಾರವನ್ನು ಆಗ್ರಹಿಸಿದೆ.
  • ನಾಗಾಲ್ಯಾಂಡ್: ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಕೊಹಿಮಾ ಮಾರುಕಟ್ಟೆಯಲ್ಲಿ ಭಾರೀ ಜನದಟ್ಟಣೆ ಕಂಡು ಬಂದಿತು. ಅಂಗಡಿಗಳನ್ನು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ.
  • ಸಿಕ್ಕಿಂ: ರಾಜ್ಯದಿಂದ ಹೊರಗೆ ಸಿಕ್ಕಿ ಬಿದ್ದಿರುವ ಜನರ ದತ್ತಾಂಶಗಳನ್ನು ಸಂಗ್ರಹಿಸುವ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಆರಂಭಿಸಿದೆ ಎಂಬುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ.
  • ತ್ರಿಪುರಾ: ಅಗರ್ತಾಲಾದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನಿಂದ ಥರ್ಮಲ್ ಸ್ಕ್ಯಾನರ್ ಗಳನ್ನು ಬಳಕೆ ಮಾಡಲಾಗುತ್ತಿದೆ.

 

ಪಿ.ಐ.ಬಿ. ವಾಸ್ತವ ಪರಿಶೀಲನೆ

 

***



(Release ID: 1619177) Visitor Counter : 262