ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಡಾ. ಹರ್ಷ್ ವರ್ಧನ್ ಅವರು ಕೋವಿಡ್ -19 ಮೀಸಲು ಆಸ್ಪತ್ರೆ, ಏಮ್ಸ್ ಟ್ರೌಮಾ ಸೆಂಟರ್ ಗೆ ಭೇಟಿ

Posted On: 26 APR 2020 7:24PM by PIB Bengaluru

ಡಾ. ಹರ್ಷ್ ವರ್ಧನ್ ಅವರು ಕೋವಿಡ್ -19 ಮೀಸಲು ಆಸ್ಪತ್ರೆ, ಏಮ್ಸ್ ಟ್ರೌಮಾ ಸೆಂಟರ್ ಗೆ ಭೇಟಿ ನೀಡಿ, ಸನ್ನದ್ಧತೆ ಪರಿಶೀಲಿಸಿದರು

" ಪರೀಕ್ಷಾ ಕಾಲಘಟ್ಟದಲ್ಲಿ ನಮ್ಮ ಆರೋಗ್ಯ ಯೋಧರಲ್ಲಿ ಹೆಚ್ಚಿನ ಸಂತಸ ಮತ್ತು ಸ್ಥೈರ್ಯ ತುಂಬಿರುವುದು ಹೃದಯಸ್ಪರ್ಶಿಯಾಗಿದೆ": ಡಾ. ಹರ್ಷ್ ವರ್ಧನ್

ಕೊವಿಡ್ ರೋಗಿಗಳ ಸತತ 24 ಗಂಟೆಗಳ ಆರೋಗ್ಯ ಪರಿಶೀಲನೆಯ ಮೇಲ್ವಿಚಾರಣೆಗಾಗಿ ಏಮ್ಸ್ ಆಸ್ಪತ್ರೆ ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನ ಬಳಸುತ್ತಿರುವುದು ಬಹಳ ಸಂತೋಷದ ವಿಷಯ”: ಡಾ. ಹರ್ಷ್ ವರ್ಧನ್

"ಲಾಕ್ ಡೌನ್ ಮತ್ತು ಸಾಮಾಜಿಕ ಅಂತರ: ಕೊವಿಡ್-19 ವಿರುದ್ಧದ ಪರಿಣಾಮಕಾರಿ ಸಾಮಾಜಿಕ ಲಸಿಕೆ"

 

 ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಅವರು ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಜೈ ಪ್ರಕಾಶ್ ನಾರಾಯಣ್ ಅಪೆಕ್ಸ್ ಟ್ರಾಮಾ ಸೆಂಟರ್ (ಜೆ.ಪಿ.ಎನ್..ಟಿ.ಸಿ) ಗೆ ಭೇಟಿ ನೀಡಿ ಕೊವಿಡ್-19 ಅನ್ನು ಜಯಿಸಲು ಮಾಡಿರುವ ಪೂರ್ವ ಸನ್ನದ್ಧತೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದರುಕೊವಿಡ್-19ಕ್ಕೆ ಮೀಸಲಾದ ಆಸ್ಪತ್ರೆಯಲ್ಲಿ ಕೇವಲ ಕೊವಿಡ್-19 ರೋಗಿಗಳಿಗೆ ಚಿಕಿತ್ಸೆ ಮತ್ತು ಸಹಾಯವನ್ನು ನೀಡಲಾಗುತ್ತಿದೆ.

"ಏಮ್ಸ್ ಜೆ.ಪಿ.ಎನ್..ಟಿ.ಸಿ ಕೇಂದ್ರವು 250 ಹಾಸಿಗೆ ಪ್ರತ್ಯೇಕ ವಾರ್ಡ್ಗಳನ್ನು ಒಳಗೊಂಡಿರುವ ಮೀಸಲಾದ ಕೊವಿಡ್-19 ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ, ಕೊವಿಡ್-19 ದೃಢಪಡಿಸಿದ ರೋಗಿಗಳಿಗೆ ಪ್ರತ್ಯೇಕವಾಗಿ ಮತ್ತು ಸುಧಾರಿತ ವೈದ್ಯಕೀಯ ನೆರವು ಅಗತ್ಯವಿರುವ ರೋಗಿಗಳಿಗೆ ತ್ವರಿತ ಆರೈಕೆಯನ್ನು ನೀಡಲು ಮಾತ್ರ ಇದನ್ನು ಉಪಯೋಗಿಸಲಾಗುತ್ತದೆ." ಎಂದು ಸಚಿವ ಡಾ. ಹರ್ಷ್ ವರ್ಧನ್ ಹೇಳಿದ್ದಾರೆ. "ಏಮ್ಸ್ ಜೆ.ಪಿ.ಎನ್..ಟಿ.ಸಿ. ಬರ್ನ್ & ಪ್ಲಾಸ್ಟಿಕ್ ಸರ್ಜರಿ ಬ್ಲಾಕ್ ಅನ್ನು ಕೋವಿಡ್ ಶಂಕಿತ ಒಳರೋಗಿಗಳಿಗಾಗಿ ಸ್ಕ್ರೀನಿಂಗ್ ಮತ್ತು ಟ್ರೇಜ್ ಪ್ರದೇಶವಾಗಿ ಪರಿವರ್ತಿಸಲಾಗುತ್ತಿದೆ" ಎಂದು ಸಚಿವರು ಮಾಹಿತಿ ನೀಡಿದರುಭೇಟಿಯ ಸಮಯದಲ್ಲಿ, ಅವರು ಅತ್ಯಾಧುನಿಕ ಕಟ್ಟಡದಲ್ಲಿರುವ ತುರ್ತು ವಾರ್ಡ್, ಡಾಫಿಂಗ್ ಪ್ರದೇಶ, ಖಾಸಗಿ ವಾರ್ಡ್, .ಸಿ.ಯು, ಎಚ್‌.ಡಿ.ಯು, ಸ್..ಆರ್. ವಾರ್ಡ್ ಮತ್ತು .ಎಲ್. ವಾರ್ಡ್ಗಳಿಗೆ ಭೇಟಿ ನೀಡಿದರುಆಸ್ಪತ್ರೆಯ ವಾಶ್ರೂಮ್ಗಳಲ್ಲಿ ನಿರ್ವಹಿಸುತ್ತಿರುವ ನೈರ್ಮಲ್ಯವನ್ನೂ ಪರಿಶೀಲಿಸಿದರು.

ಆಸ್ಪತ್ರೆಯಲ್ಲಿದ್ದಾಗ, ಸಚಿವರು ಕೆಲವು ಕೊವಿಡ್-19 ಪೀಡಿತ ರೋಗಿಗಳೊಂದಿಗೆ ಮೊಬೈಲ್ ಫೋನ್ -ವಿಡಿಯೋ ಕರೆ ಮಾಡುವ ಮೂಲಕ ಸಂವಹನ ನಡೆಸಿದರು, ಮತ್ತು ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು ಸಂದರ್ಭದಲ್ಲಿ ಕೊವಿಡ್-19 ಪೀಡಿತ ರೋಗಿಗಳು ರೋಬೋಟ್ಗಳ ಸಹಾಯದಿಂದ ಸಂವಾದ ನಡೆಸಿದರು. ಏಮ್ಸ್ ನಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಕೊವಿಡ್-19 ಪೀಡಿತ ರೋಗಿಗಳ ಪ್ರತಿಕ್ರಿಯೆಯನ್ನು ಸಚಿವರು ಕೋರಿದರು, ಹಾಗೂ ಇದರಿಂದಾಗಿ ಅಗತ್ಯ ಸುಧಾರಣೆಗಳನ್ನು ಮಾಡಲು ಸಾಧ್ಯ..

ಕೊವಿಡ್-19 ಆಸ್ಪತ್ರೆಯ ವಿವಿಧ ವಾರ್ಡ್ಗಳು ಮತ್ತು ಸೌಲಭ್ಯಗಳ ವಿವರವಾದ ಪರಿಶೀಲನೆಯ ನಂತರ, ಸಚಿವ ಡಾ. ಹರ್ಷ್ ವರ್ಧನ್ ಅವರು ಮೀಸಲಾದ ಕೊವಿಡ್-19 ಸಿಒವಿಐಡಿ ಆಸ್ಪತ್ರೆಯ ಕಾರ್ಯಚಟುವಟಿಕೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಕೊವಿಡ್-19 ದೃಢಪಡಿಸಿದ ಮತ್ತು ಶಂಕಿತ ರೋಗಿಗಳ ಯೋಗಕ್ಷೇಮದ 24 ಗಂಟೆಗಳ ಮೇಲ್ವಿಚಾರಣೆಯನ್ನು ಖಾತರಿಪಡಿಸಿದ್ದಕ್ಕಾಗಿ ಏಮ್ಸ್ ಜೆಪಿಎನ್ಎಟಿಸಿಯನ್ನು ಸಚಿವರು ಶ್ಲಾಘಿಸಿದರು. "24 ಗಂಟೆಗಳ ಕೊವಿಡ್ ರೋಗಿಗಳ ಆರೋಗ್ಯ ಮೇಲ್ವಿಚಾರಣೆ ಮಾಡಲು ಏಮ್ಸ್ ಇತ್ತೀಚಿನ ಡಿಜಿಟಲ್ ತಂತ್ರಜ್ಞಾನ ಬಳಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ" ಎಂದು ಹೇಳಿದರು. ಕಳೆದ ಕೆಲವು ದಿನಗಳಲ್ಲಿ, ನಾನು ಕೊವಿಡ್-19 ಏಮ್ಸ್ ಜ್ಹಜ್ಜರ್, ಲೋಕ ನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆ (ಎಲ್.ಎನ್.ಜೆ.ಪಿ.ಎನ್.ಹೆಚ್.), ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ (ಆರ್.ಎಮ್.ಎಲ್.), ಸಫ್ದರ್ಜಂಗ್ ಆಸ್ಪತ್ರೆ (ಎಸ್‌.ಜೆ.ಹೆಚ್), ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಈಗ ದೆಹಲಿಯ ಏಮ್ಸ್-ಜೆಪಿಎನ್ಎಟಿಸಿಯ  ಹೀಗೆ ಎಲ್ಲಾ ಕಡೆಯ ಸುಸಜ್ಜಿತ ಸನ್ನದ್ಧತೆಗಳನ್ನು ಸ್ವತಃ ಪರಿಶೀಲಿಸಿದ್ದೇನೆ

ದೇಶದಲ್ಲಿ ಕೊವಿಡ್-19 ಏಕಾಏಕಿ ಪಸರಿಸುವ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಸಚಿವರು, “ಭಾರತದಲ್ಲಿ ಕೊವಿಡ್ ರೋಗಿಗಳ ಮರಣ / ಸಾವಿನ ಪ್ರಮಾಣ 3.1% ಆಗಿದೆ, ಇದು ಜಾಗತಿಕ ಮಟ್ಟದಲ್ಲಿ 7% ಕ್ಕೆ ಹೋಲಿಸಿದರೆ ಬಹಳ ಕಡಿಮೆ.  ಇದಲ್ಲದೆ, ಇಲ್ಲಿಯವರೆಗೆ 5,913 ಜನರನ್ನು ಗುಣಪಡಿಸಲಾಗಿದೆ, ಇದರ ಪರಿಣಾಮವಾಗಿ ಚೇತರಿಕೆ ಪ್ರಮಾಣ ಸುಮಾರು 22% ರಷ್ಟಕ್ಕೆ ಏರಿದೆ, ಇದು ಹೆಚ್ಚಿನ ದೇಶಗಳಿಗಿಂತ ತುಲನಾತ್ಮಕವಾಗಿ ಬಹಳ ಉತ್ತಮವಾಗಿದೆ. ದೇಶದ ದ್ವಿಗುಣಗೊಳಿಸುವ ದರವು ನಿಯಮಿತ ಸುಧಾರಣೆಯನ್ನು ತೋರಿಸುತ್ತಿದೆ ಮತ್ತು 3 ದಿನಗಳ ಅವಧಿಯಲ್ಲಿ 9.5 ದಿನಗಳು ಮತ್ತು 7 ದಿನಗಳ ಅವಧಿಯಲ್ಲಿ 9.3 ದಿನಗಳು ಮತ್ತು 14 ದಿನಗಳ ಅವಧಿಯಲ್ಲಿ 8.1 ದಿನಗಳನ್ನು ನಾವು ಕಾಣಬಹುದಾಗಿದೆ. ದೇಶದ ಒಂದು ಸಕಾರಾತ್ಮಕ ಲಾಕ್ಡೌನ್ಪರಿಣಾಮಗಳಾಗಿ, ನಾವು ಸೂಚಕಗಳನ್ನು ಕ್ಲಸ್ಟರ್ ನಿರ್ವಹಣೆ ಮತ್ತು ಧಾರಕ ತಂತ್ರಗಳನ್ನು ತೆಗೆದುಕೊಳ್ಳಬಹುದುಎಂದು ಸಚಿವರು ಹೇಳಿದರು.

ದೇಶದ ಕೊವಿಡ್ ಪರಿಸ್ಥಿತಿಯ ಬಗ್ಗೆ ಮುಂದುವರಿಸುತ್ತಾ ಸಚಿವರು, “ಇಂದಿನ ದಿನಾಂಕದವರೆಗೆ, 283 ಜಿಲ್ಲೆಗಳು ಇಲ್ಲಿಯವರೆಗೆ ಯಾವುದೇ ಕೊವಿಡ್ ಪ್ರಕರಣಗಳನ್ನು ವರದಿ ಮಾಡಿಲ್ಲ, 64 ಜಿಲ್ಲೆಗಳು ಕಳೆದ 7 ದಿನಗಳಿಂದ ಯಾವುದೇ ಹೊಸ ಪ್ರಕರಣವನ್ನು ವರದಿ ಮಾಡಿಲ್ಲ, 48 ಜಿಲ್ಲೆಗಳು ಕಳೆದ 14 ದಿನಗಳಿಂದ ಯಾವುದೇ ಹೊಸ ಪ್ರಕರಣ ವರದಿ ಮಾಡಿಲ್ಲ , 33 ಜಿಲ್ಲೆಗಳು ಕಳೆದ 21 ದಿನಗಳಿಂದ ಹೊಸ ಪ್ರಕರಣವನ್ನು ವರದಿ ಮಾಡಿಲ್ಲ ಮತ್ತು 18 ಜಿಲ್ಲೆಗಳು ಕಳೆದ 28 ದಿನಗಳಿಂದ ಹೊಸ ಪ್ರಕರಣವನ್ನು ವರದಿ ಮಾಡಿಲ್ಲ.ಎಂದು ಹೇಳಿದರು.

ದೇಶದಲ್ಲಿ ವೈದ್ಯಕೀಯ ಉಪಕರಣಗಳು ಮತ್ತು ಸೌಲಭ್ಯಗಳ ಲಭ್ಯತೆಯ ಸ್ಥಿತಿಯ ಕುರಿತು ಡಾ. ಹರ್ಷ್ ವರ್ಧನ್ ಮಾತನಾಡುತ್ತಾ, “ನಾವು ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ರಾಜ್ಯ ಮಟ್ಟದಲ್ಲಿ ಲಭ್ಯಗೊಳಿಸಿದ್ದೇವೆ ಮತ್ತು ಈಗ ನಾವು ಸುಮಾರು 106 ಉತ್ಪಾದನಾ ಘಟಕಗಳನ್ನು ಹೊಂದಿದ್ದೇವೆಭವಿಷ್ಯದಲ್ಲಿ, ನಮ್ಮ ದೇಶದ ಹೆಚ್ಚುತ್ತಿರುವ ಅಗತ್ಯವನ್ನು ಪೂರೈಸಲು ಇದು ಸಾಕಾಗುತ್ತದೆ. ಇದಲ್ಲದೆ ದೇಶದಲ್ಲಿ ಈಗ ಎನ್-95 ಮುಖಕವಚಗಳ 10 ತಯಾರಕರು ಇದ್ದಾರೆ" ಎಂದರು. ವೆಂಟಿಲೇಟರ್ಗಳ ಲಭ್ಯತೆಯ ಕುರಿತು ಮಾತನಾಡಿದ ಸಚಿವರು, “ಸರ್ಕಾರ ಮತ್ತು ನಮ್ಮ ವಿವಿಧ ಸಂಶೋಧನಾ ಪ್ರಯೋಗಾಲಯಗಳ ಪ್ರಯತ್ನಗಳ ಮೂಲಕ, ದೇಶೀಯ ಉತ್ಪಾದಕರಿಂದ ವೆಂಟಿಲೇಟರ್ಗಳ ಉತ್ಪಾದನೆಯೂ ಪ್ರಾರಂಭವಾಗಿದೆ ಮತ್ತು 9 ತಯಾರಕರ ಮೂಲಕ 59,000 ಕ್ಕೂ ಹೆಚ್ಚು ಘಟಕಗಳ ಖರೀದಿಗೆ ಆದೇಶಗಳನ್ನು ನೀಡಲಾಗಿದೆ.ಎಂದರು.

ಕೇಂದ್ರ ಮತ್ತು ರಾಜ್ಯಗಳಿಂದ ಲಭ್ಯವಿರುವ ವೆಂಟಿಲೇಟರ್ಗಳು, ಆಮ್ಲಜನಕ ಸರಬರಾಜು ಮತ್ತು ಐಸಿಯುಗಳ ಸಮರ್ಪಕತೆಯ ಬಗ್ಗೆ ವಿವರಿಸಿದ ಸಚಿವರು, “ಪ್ರಸ್ತುತ ಆಸ್ಪತ್ರೆಗೆ ದಾಖಲಾದ ಸಕ್ರಿಯ ರೋಗಿಗಳ ಸಂಖ್ಯೆಯನ್ನು ಹೋಲಿಸಿದಾಗ, ಕೇವಲ 2.17% ರೋಗಿಗಳನ್ನು ಮಾತ್ರ ದಾಖಲಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ  ಐಸಿಯುನಲ್ಲಿ, 1.29% ರಷ್ಟು ರೋಗಿಗಳಿಗೆ ಆಮ್ಲಜನಕದ ಬೆಂಬಲ ಬೇಕಾಗುತ್ತದೆ ಮತ್ತು ಕೇವಲ 0.36% ರಷ್ಟು ರೋಗಿಗಳು ವೆಂಟಿಲೇಟರ್ನಲ್ಲಿದ್ದಾರೆ. ನಾವು   ಯುದ್ಧಗಳನ್ನು ಗೆಲ್ಲುತ್ತಿದ್ದೇವೆ ಮತ್ತು ಅಂತಿಮವಾಗಿ ನಾವು ಕೊವಿಡ್-19 ವಿರುದ್ಧ ಯುದ್ಧವನ್ನು ಗೆಲ್ಲುತ್ತೇವೆ, ಏಕೆಂದರೆ ನಮ್ಮ ಶತ್ರು ಯಾವುದು?, ಅದರ ಸಂಖ್ಯೆ ಎಷ್ಟು? ಮತ್ತು ಸರಿಯಾದ ಸ್ಥಳ ಎಲ್ಲಿದೆ? ಎಂದು ನಮಗೆ ಸ್ಪಷ್ಟವಾಗಿ ತಿಳಿದಿದೆ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ" ಎಂದು ಸಚಿವರು ಹೇಳಿದರು.

" ಪರೀಕ್ಷಾ ಕಾಲಘಟ್ಟದಲ್ಲಿ ನಮ್ಮ ಆರೋಗ್ಯ ಯೋಧರ ಹೆಚ್ಚಿನ ಸಂತೋಷ ಮತ್ತು  ಮನೋಸ್ಥೈರ್ಯವನ್ನು ನೋಡುವುದು ಹೃದಯಸ್ಪರ್ಶಿಯಾಗಿದೆ" ಎಂದು ಸಚಿವರು ಹೇಳಿದರುಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಆಸ್ಪತ್ರೆಗಳು ಮಾಡಿರುವ ವ್ಯವಸ್ಥೆಗಳ ಬಗ್ಗೆ ತೃಪ್ತಿ ಹೊಂದಿದ್ದೇನೆ ಎಂದು ಹೇಳಿದ ಸಚಿವರು, ಎಲ್ಲಾ ಕೊರೊನ ಯೋಧರನ್ನು, ಅದರಲ್ಲೂ ಮುಂಚೂಣಿಯ ಆರೈಕೆ ನೀಡುವವರಾದ ದಾದಿಯರು, ವೈದ್ಯರು, ತಂತ್ರಜ್ಞರು ಮತ್ತು ಇತರ ಆರೋಗ್ಯ ಸಿಬ್ಬಂದಿಗಳನ್ನು ಅವರು ಕೊವಿಡ್-19 ರೋಗಿಗಳೊಂದಿಗೆ ವ್ಯವಹರಿಸುವಾಗ ತೋರಿಸಿದ ಕ್ಷಮತೆ. ಸ್ಥಿತಿಸ್ಥಾಪಕತ್ವ, ಕಠಿಣ ಪರಿಶ್ರಮ, ಸಮರ್ಪಣೆ, ಕಾಳಜಿ ಮತ್ತು ಬದ್ಧತೆಗಾಗಿ ಮನಸಾರೆ ಶ್ಲಾಘಿಸಿದರು.

***


(Release ID: 1618842) Visitor Counter : 281